ಹೊಸ Vivo U20 ಸ್ಮಾರ್ಟ್ಫೋನಿನ ಸಂಪೂರ್ಣ ವಿಮರ್ಶೆ

ಹೊಸ Vivo U20 ಸ್ಮಾರ್ಟ್ಫೋನಿನ ಸಂಪೂರ್ಣ ವಿಮರ್ಶೆ
HIGHLIGHTS

Vivo U20 ಅಲ್ಟ್ರಾ ವೈಡ್ ಸೆನ್ಸರ್ ನಿಜಕ್ಕೂ ಅದ್ದೂರಿಯ ಶಾಟ್ಗಳನ್ನು ನೀಡುವಲ್ಲಿ ಯಶಸ್ಸನ್ನು ಖಂಡಿದೆ

ಸ್ಪೀಡ್ ಅಥವಾ ಬಳಕೆಯ ಅನುಭವ ಹೇಳಬೇಕಂದರೆ ಈಗಾಗಲೇ ಬಿಡುಗಡೆಯಾಗಿರುವ Realme 5s ಮತ್ತು Redmi Note 8 ಫೋನ್ಗಳಿಗಿಂತ ಸ್ವಲ್ಪ ಉತ್ತಮವಾಗಿದೆ.

Vivo ಇತ್ತೀಚೆಗೆ ತನ್ನ ಮತ್ತೋಂದು ಹೊಸ ಯು ಸರಣಿಯ ಸ್ಮಾರ್ಟ್ಫೋನ್ Vivo U20 ಅನ್ನು ಬಿಡುಗಡೆಗೊಳಿಸಿದೆ. ಇದರ ಅನ್ಬಾಕ್ಸಿಂಗ್ ಮತ್ತು ಫಸ್ಟ್ ಲುಕ್ ವಿಡಿಯೋ ಈಗಾಗಲೇ ಡಿಜಿಟ್ ಕನ್ನಡ YouTube ಚಾನಲ್ಲಿದೆ ಅದನ್ನು ನೋಡ್ಕೊಂಡು ಬನ್ನಿ ಒಂದು ವೇಳೆ ನೀವೀಗಾಗಲೇ ಅದನ್ನು ನೋಡಿದ್ರೆ ಇದರ ಕ್ವಾಕ್ ರಿವ್ಯೂ ಶುರು ಮಾಡೋಣ. 

Build and Design

Vivo U20 ಇದರ ಪ್ರತಿಸ್ಪರ್ಧಿಯಾದ Realmeಯ ಸ್ಟೇಬಲ್'ಯಿಂದ ಪ್ರೇರಿತಗೊಂಡಂತೆ ಅದೇ S ರೇಖೆಯನ್ನು ಇದರಲ್ಲಿ ನೋಡಬವುದು. ಇದು ಹೆಚ್ಚಿನ ಆಧುನಿಕ ಫೋನ್‌ಗಳಂತೆ ಬ್ಯಾಕ್ ಗ್ರೇಡಿಯಂಟ್ ಪ್ಯಾನಲ್ ನೀಡಿದ್ದು ನೀಲಿ ಬಣ್ಣದಿಂದ ನೇರಳೆ ಬಣ್ಣಕ್ಕೆ ಬದಲಾಗುತ್ತದೆ. ಇದರರ್ಥ ಇದರ ಮೇಲೆ ಬೆಳಕು ಬಿದ್ದಾಗಲೆಲ್ಲಾ ಇದು ಶೈನಿಂಗ್ ಎಫೆಕ್ಟ್ ಸೃಷ್ಟಿಸುತ್ತದೆ. ಪ್ಲಾಸ್ಟಿಕ್ ಮೆಟೀರಿಯಲ್ಗಳಿಂದ ತಯಾರಿಸಲ್ಪಟ್ಟ ಈ ಬ್ಯಾಕ್ ಪ್ಯಾನಲ್ ಗ್ಲೊಸಿ ಗ್ಲಾಸ್ ಡಿಸೈನ್ ಹೊಂದಿದ್ದು ಕೆಲವೋಮ್ಮೆ ಕೈಯಿಂದ ಜಾರಬವುದು. ಇದನ್ನು ತಡೆಯಲು TPU ಕವರ್ ಬಳಸುವುದು ಅನಿವಾರ್ಯವಾಗಿದೆ.

https://spiderimg.amarujala.com/assets/images/2019/11/23/750x506/vivo-u20-review_1574509529.jpeg

Display

Vivo U20 ಸ್ಮಾರ್ಟ್ಫೋನ್ 6.53 ಇಂಚಿನ FHD+ IPS LCD ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಡಿಸ್ಪ್ಲೇ 1080 x 2340 ಪಿಕ್ಸೆಲ್ ರೆಸಲ್ಯೂಶನ್ ನೀಡಲಾಗಿದೆ. Widevine L1 Certified ಹೊಂದಿದ್ದು ಸ್ಟ್ರೀಮಿಂಗ್ ಪ್ಲಾಟ್ಫಾರಂಗಳಾದ Netflix, Amazon Prime, Hotstar, voot ಮತ್ತು Eros Now ಹ್ದ್ ಕಂಟೆಂಟ್ಗಳನ್ನು ನೋಡಬವುದು. ಈ ಫೋನ್ 90.3% ಸ್ಕ್ರೀನ್-ಟು-ಬಾಡಿ ರೇಷು ಹೊಂದಿದ್ದು ಡಿಸ್ಪ್ಲೇಯಲ್ಲಿ ವಾಟರ್ಡ್ರಾಪ್ ಅಥವಾ ಡ್ಯೂಡ್ರಾಪ್ ನಾಚನ್ನು ಸೆಲ್ಫಿಗಾಗಿ ನೀಡಲಾಗಿದೆ.

https://beebom.com/wp-content/uploads/2019/11/vivo-U20-display.jpg

Camera  

Vivo U20 ಫೋನಿನ ಹಿಂಭಾಗದಲ್ಲಿ ಟ್ರಿಪಲ್ ರೇರ್ ಅಂದ್ರೆ 16+8+2 ಮೆಗಾಪಿಕ್ಸೆಲ್ ಕ್ಯಾಮೆರಾ ಸೆಟಪ್ ನೀಡಲಾಗಿದ್ದು 16MP Sony IMX 499 f/1.8 ಅಪರ್ಚರ್ ಜೊತೆಗೆ ವೈಡ್ ಆಂಗಲ್ ಲೆನ್ಸ್ 8MP f/2.2 ಅಪರ್ಚರ್ ಜೊತೆಗೆ 120° ಅಲ್ಟ್ರಾವೈಡ್ ಆಂಗಲ್ ಮತ್ತು ಕೊನೆಯದಾಗಿ 2MP f/2.4 ಅಪರ್ಚರ್ ಜೊತೆಗೆ Super ಮ್ಯಾಕ್ರೋ ಲೆನ್ಸ್ ಸುಮಾರು 4cm ದೂರದಿಂದ ಅದ್ದೂರಿಯ ಮ್ಯಾಕ್ರೋ ಶಾಟ್ಗಳನ್ನು ಪಡೆಯಲು ಸಹಕರಿಸುತ್ತದೆ. ಇದರ ಸ್ಯಾಂಪಲ್ಗಳನ್ನೂ ಇಲ್ಲಿ ನೋಡಬವುದು ಇದು ವೈಡ್ ಆಂಗಲ್ ಶಾಟ್ ಆಗಿದ್ದು Maximum ಡೀಟೇಲ್ ಕವರ್ ಮಾಡುತ್ತದೆ ಹತ್ತಿರದಲ್ಲೇನೋ ಚನ್ನಾಗಿದೆ ಆದರೆ ದೂರದ ಯಾವುದೇ ವಸ್ತು ಅಥವಾ ಮಾಹಿತಿ ಕ್ಲಿಯರ್ ಆಗಿಲ್ಲ ಆದರೆ ಇದರ ಅಲ್ಟ್ರಾ ವೈಡ್ ಸೆನ್ಸರ್ ನಿಜಕ್ಕೂ ಅದ್ದೂರಿಯ ಶಾಟ್ಗಳನ್ನು ನೀಡುವಲ್ಲಿ ಯಶಸ್ಸನ್ನು ಖಂಡಿದೆ.

 https://beebom.com/wp-content/uploads/2019/11/vivo-U20-triple-camera-setup.jpg

ನನಗೆ ಈ ರೇಂಜಿನ ಬಜೆಟಲ್ಲಿ 120° ಅಲ್ಟ್ರಾವೈಡ್ ಆಂಗಲ್ ಸೂಪರ್ ಅನಿಸುತ್ತದೆ. ಇದರ 8MP 120° FOV Maximum ಡೀಟೇಲ್ಗಳನ್ನು ಕವರ್ ಮಾಡುತ್ತದೆ. ಇದರ ನಂತರ ಮ್ಯಾಕ್ರೋ ಲೆನ್ಸ್ ಒಂದು ರೀತಿಯಲ್ಲಿ OK ಅನ್ನಬುವುದು ಏಕೆಂದರೆ ಇದರ ಸ್ಯಾಂಪಲ್ ನೋಡಬವುದು ಈ ಬಜೆಟಲ್ಲಿ ಇಷ್ಟು ಕಡಿಮೆಯಲ್ಲ ಆದರೆ Realme ಇದೇ ಬೆಲೆಯಲ್ಲಿ ಇನ್ನು ಕ್ಲೋಸರ್ ಅಂತಂದ್ರೆ 2cm ದೂರದಿಂದ ಅದ್ದೂರಿಯ ಮ್ಯಾಕ್ರೋ ಶಾಟ್ಗಳನ್ನು ನೀಡಲು ಲಭ್ಯವಿದೆ. ಈ ಫೋನಲ್ಲಿ EIS ನೀಡಿರುವ ಕಾರಣ 1080p@30fps ರೆಸಲ್ಯೂಶನ್ ವಿಡಿಯೋಗಳು ಸ್ಮೋತ್ ಮತ್ತು Professional ಶಾಟ್ Experience ನೀಡುತ್ತದೆ. ಇದರಲ್ಲಿ ಕನಿಷ್ಠ ಮಟ್ಟದ ಸ್ಲೋ ಮೋಷನ್ ಸಹ ನೀಡಲಾಗಿದೆ. ಫ್ರಂಟ್ 16MP AI f/2.0 ಅಪರ್ಚರ್ ಅದ್ದೂರಿಯ ಸೆಲ್ಫಿ  ಜೊತೆಗೆ ಒಟ್ಟಾರೆಯಾಗಿ ಈ ಬಜೆಟಿನ ಫೋನಲ್ಲಿ ಉತ್ತಮವಾದ ಇಮೇಜ್ಗಳನ್ನು ಕ್ಲಿಕ್ ಮಾಡಬಹುದು.

Performance

Vivo U20 ಫೋನಲ್ಲಿ Qualcomm Snapdragon 675 ಚಿಪ್ ಪ್ರೊಸೆಸರ್ ನೀಡಲಾಗಿದ್ದು ಇದು Octa-core 2.0GHz ಕ್ಲಾಕ್ ಸ್ಪೀಡ್ ರನ್ ಮಾಡುತ್ತದೆ. 11 ನಾನೋಮೀಟರ್ ಟೆಕ್ನಾಲಜಿಯೊಂದಿಗೆ ನಡೆಯುವಿ ಈ ಫೋನ್ ಅಡ್ರಿನೊ 612 GPU ಮತ್ತು ಆಂಡ್ರಾಯ್ಡ್ 9.0 ಪೈ ಆಧಾರಿತ FunTouch OS ನಡೆಸುತ್ತದೆ. ಒಟ್ಟಾರೆಯಾಗಿ ಇದರ ಸ್ಪೀಡ್ ಅಥವಾ ಬಳಕೆಯ ಅನುಭವ ಹೇಳಬೇಕಂದರೆ ಈಗಾಗಲೇ ಬಿಡುಗಡೆಯಾಗಿರುವ Realme 5s ಮತ್ತು Redmi Note 8 ಫೋನ್ಗಳಿಗಿಂತ ಸ್ವಲ್ಪ ಉತ್ತಮವಾಗಿದೆ. ಏಕೆಂದರೆ ಅದರಲ್ಲಿ 665 SoC ಮತ್ತು ಇದರಲ್ಲಿ 675 SoC. ಇದರಲ್ಲಿನ ಗೇಮಿಂಗ್ ಅನುಭವ ಒಟ್ಟಾರೆಯಾಗಿ ಚನ್ನಾಗಿದೆ ಏಕೆಂದರೆ ಇದರ 675 ಮತ್ತು 6GB RAM ಸುಮಾರು ಒಂದು ಗಂಟೆಯ ಗೇಮಿಂಗ್ ನಂತರವು ಕೂಲಾಗಿ ನಡೆಯಿತು.

https://i.ibb.co/B6pztGJ/per.png

Battery & Ports

Vivo U20 ಸ್ಮಾರ್ಟ್ಫೋನ್ ದೊಡ್ಡದಾದ 5000mAh ಹೈ ಕ್ಯಾಪಾಸಿಟಿಯ ಬ್ಯಾಟರಿ ಹೊಂದಿದೆ. ಅಲ್ಲದೆ 18W ಡ್ಯೂಯಲ್ ಎಂಜಿನ್ ಫಾಸ್ಟ್ ಚಾರ್ಜ್ ಸಹ ಸಪೋರ್ಟ್ ಮಾಡುತ್ತದೆ. ಈ ಫೋನ್ ಕೇವಲ 2 ಘಂಟೆಗಳಲ್ಲಿ ಸುಮಾರು 10 ರಿಂದ 100% ಚಾರ್ಜ್ ಮಾಡುತ್ತದೆ. ಇದರಲ್ಲಿ ನನಗೆ ನಿರಾಶೆಯ ಅಂಶ ಅಂದ್ರೆ ಇದರ ಮೈಕ್ರೋ USB 2.0 ಪೋರ್ಟ್ ಇಲ್ಲಿ ಟೈಪ್ ಸಿ ಯಾಕೆ ನೀಡಿಲ್ಲ ಅಂಥ ಅರ್ಥವಾಗಿಲ್ಲ. ಅದನ್ನು ಬಿಟ್ಟು 3.5mm ಆಡಿಯೋ ಜಾಕ್ ಮತ್ತು Standard ಸ್ಲಾಟ್ ನೀಡಲಾಗಿದೆ. ಇದರಲ್ಲಿ ಎರಡು ನಾನೋ ಸಿಮ್ ಮತ್ತು ಒಂದು SD ಕಾರ್ಡ್ ಹಾಕಬವುದು.

https://i.ibb.co/LhTQNY8/bart.png

Price & Availability

ಇದರ ಬೇಸ್ ವೆರಿಯಂಟ್ 4GB RAM + 64GB UFS 2.1 ರೂಪಾಂತರ 10,990 ರೂಗಳಲ್ಲಿ ಬಂದ್ರೆ ಟಾಪ್ ವೆರಿಯಂಟ್ 6GB RAM + 64GB  UFS 2.1 ರೂಪಾಂತರ ಬೆಲೆ 11,990 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ ರೇಸಿಂಗ್ ಬ್ಲ್ಯಾಕ್ ಮತ್ತು ಬ್ಲೇಜ್ ಬ್ಲೂ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಇದರ ಮೊದಲ ಫ್ಲ್ಯಾಷ್ ಸೇಲ್ ನವೆಂಬರ್ 28 ರಂದು Amazon India ಮತ್ತು Vivo Online ಸ್ಟೋರ್ಗಳಲ್ಲಿ ದೊರೆಯಲಿದೆ.

https://beebom.com/wp-content/uploads/2019/11/vivo-U20-launched-in-India-with-Snapdragon-675-triple-cameras.jpg

ಇಮೇಜ್ ಸೋರ್ಸ್: 12, 3, 6  

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo