ನಾಳೆ Vivo T5 Lite ಮೊಬೈಲ್‌ ಮಾರಾಟ ಪ್ರಾರಂಭ; ಬೆಲೆ ಹಾಗೂ ಫೀಚರ್ಸ್‌ ನೋಡಿ

HIGHLIGHTS

ನಾಳೆಯಿಂದ ವಿವೋ T5 ಲೈಟ್‌ ಫೋನ್‌ ಮಾರಾಟ ಪ್ರಾರಂಭ

ಈ ಹೊಸ ಫೋನ್‌ ಟ್ವಿಲೈಟ್ ಶ್ಯಾಡೋ ಮತ್ತು ವೇವ್ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯ

ವಿವೋ T5 ಲೈಟ್‌ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ ಹೊಂದಿದೆ

ನಾಳೆ Vivo T5 Lite ಮೊಬೈಲ್‌ ಮಾರಾಟ ಪ್ರಾರಂಭ; ಬೆಲೆ ಹಾಗೂ ಫೀಚರ್ಸ್‌ ನೋಡಿ

ವಿವೋ ಕಂಪನಿಯ ಹೊಸ Vivo T5 Lite ಮೊಬೈಲ್ ಆಕರ್ಷಕ ಫೀಚರ್ಸ್‌ ಮೂಲಕ ಈಗಾಗಲೇ ಮಾರುಕಟ್ಟೆಯ ಗಮನ ಸೆಳೆದಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್‌ ನಾಳೆ (ಜುಲೈ 22 ರಿಂದ) ಭಾರತೀಯ ಮಾರುಕಟ್ಟೆಯಲ್ಲಿ ಸೇಲ್‌ ಪ್ರಾರಂಭ ಮಾಡಲಿದೆ. ಈ ನೂತನ ಮೊಬೈಲ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ ಪ್ರೊಸೆಸರ್‌ ಒಳಗೊಂಡಿರುವ ಜೊತೆಗೆ 6,500mAh ಸಾಮರ್ಥ್ಯದ ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ. ಅಲ್ಲದೇ ಈ ಮೊಬೈಲ್‌ನ ಡಿಸ್‌ಪ್ಲೇಯು 120Hz ವರೆಗೆ ರಿಫ್ರೆಶ್ ರೇಟ್‌ ಪಡೆದಿದೆ. ಅಲ್ಲದೇ ಈ ಮೊಬೈಲ್‌ ಟ್ವಿಲೈಟ್ ಶ್ಯಾಡೋ ಮತ್ತು ವೇವ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಹಾಗಾದರೇ ವಿವೋ T5 ಲೈಟ್‌ ಮೊಬೈಲ್‌ನ ಸೇಲ್‌, ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : 6,300mAh ಬ್ಯಾಟರಿ ಇರುವ Realme P4 Lite ಮೊಬೈಲ್‌ ಈಗ ಇನ್ನಷ್ಟು ಕಡಿಮೆ ಬೆಲೆಯಲ್ಲಿ ಲಭ್ಯ!

ನಾಳೆ Vivo T5 Lite ಮಾರಾಟ ಪ್ರಾರಂಭ

ಭಾರತೀಯ ಮಾರುಕಟ್ಟೆಯಲ್ಲಿ ವಿವೋ ಕಂಪನಿಯ ವಿವೋ T5 ಲೈಟ್‌ 5G ಮೊಬೈಲ್‌ ನಾಳೆ (ಜುಲೈ 22 ರಿಂದ) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಮೂಲಕ ಖರೀದಿಗೆ ಲಭ್ಯವಾಗಲಿದೆ. ಈ ಮೊಬೈಲ್‌ನ 4GB + 128GB ಸ್ಟೋರೇಜ್‌ ವೇರಿಯಂಟ್‌ 19,999 ರೂ.ಗಳ ಬೆಲೆಯನ್ನು ಹೊಂದಿದೆ. ಹಾಗೆಯೇ 6GB + 128GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 21,999 ರೂ.ಗಳು ಆಗಿದೆ. ಇನ್ನು 6GB + 256GB ಸ್ಟೋರೇಜ್‌ ವೇರಿಯಂಟ್‌ ದರವು 24,999 ರೂ.ಗಳು ಆಗಿದೆ. ಈ ಫೋನ್‌ ಟ್ವಿಲೈಟ್ ಶ್ಯಾಡೋ ಮತ್ತು ವೇವ್ ಬ್ಲೂ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇರಲಿದೆ. ಈ ಫೋನ್‌ ಫ್ಲಿಪ್‌ಕಾರ್ಟ್, ವಿವೋ ಆನ್‌ಲೈನ್‌ ಸ್ಟೋರ್‌ ಸೇರಿದಂತೆ ಪ್ರಮುಖ ರಿಟೇಲ್‌ ಸ್ಟೋರ್‌ ಮೂಲಕ ಸೇಲ್‌ಗೆ ಬರಲಿದೆ.

Vivo T5 Lite Officially Goes on Sale Tomorrow july 22

ವಿವೋ T5 ಲೈಟ್‌ 5G ಮೊಬೈಲ್‌ ಫೀಚರ್ಸ್‌

ವಿವೋ T5 ಲೈಟ್‌ 5G ಮೊಬೈಲ್‌ 6.74 ಇಂಚಿನ HD+ LCD ಪ್ಯಾನೆಲ್ ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್‌ 120Hz ರಿಫ್ರೆಶ್ ರೇಟ್‌ ಜೊತೆಗೆ 1,200 nits ವರೆಗಿನ ಗರಿಷ್ಠ ಬ್ರೈಟ್ನೆಸ್‌ ಅನ್ನು ಪಡೆದಿದೆ. ಹಾಗೆಯೇ ಈ ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಸರಣಿಯ ಚಿಪ್‌ಸೆಟ್ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದೆ. ಇದಕ್ಕೆ ಪೂರಕವಾಗಿ 4GB + 128GB, 6GB + 128GB ಹಾಗೂ 6GB + 256GB ವೇರಿಯಂಟ್‌ ಆಯ್ಕೆ ಒಳಗೊಂಡಿದೆ. ಹಾಗೆಯೇ ಇದು ಇತ್ತೀಚಿನ ಆಂಡ್ರಾಯ್ಡ್‌ 16 ಆಧಾರಿತ OriginOS 6 ಓಎಸ್ ನೊಂದಿಗೆ ಕಾರ್ಯನಿರ್ವಹಿಸಲಿದೆ.

ಹಾಗೆಯೇ ವಿವೋ T5 ಲೈಟ್‌ 5G ಮೊಬೈಲ್‌ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಇದರ ಮೊದಲ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದ್ದು, ಸೆಕೆಂಡರಿ ಕ್ಯಾಮೆರಾವು ಬೇಸಿಕ್‌ ಸೆನ್ಸಾರ್ ಸೌಲಭ್ಯ ಪಡೆದಿದೆ. ಇದರ ಜೊತೆಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ಒದಗಿಸಲಾಗಿದೆ. ಅಲ್ಲದೇ ಇದು 6,500mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಜೊತೆಗೆ 44W ವೈರ್ಡ್ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಒಳಗೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile