6,300mAh ಬ್ಯಾಟರಿ ಇರುವ Realme P4 Lite ಮೊಬೈಲ್‌ ಈಗ ಇನ್ನಷ್ಟು ಕಡಿಮೆ ಬೆಲೆಯಲ್ಲಿ ಲಭ್ಯ!

HIGHLIGHTS

ರಿಯಲ್‌ಮಿ P4 ಲೈಟ್‌ ಸ್ಮಾರ್ಟ್‌ಫೋನ್‌ ಆಕರ್ಷಕ ಆಫರ್‌ನಲ್ಲಿ ಲಭ್ಯ

ಈ ಮೊಬೈಲ್‌ 6,300mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಅನ್ನು ಪಡೆದಿದೆ

ರಿಯಲ್‌ಮಿಯ ಈ ಫೋನ್‌ UNISOC T7250 ಚಿಪ್‌ಸೆಟ್‌ ಪ್ರೊಸೆಸರ್‌ ಹೊಂದಿದೆ

6,300mAh ಬ್ಯಾಟರಿ ಇರುವ Realme P4 Lite ಮೊಬೈಲ್‌ ಈಗ ಇನ್ನಷ್ಟು ಕಡಿಮೆ ಬೆಲೆಯಲ್ಲಿ ಲಭ್ಯ!

ರಿಯಲ್‌ಮಿ ಕಂಪನಿಯ Realme P4 Lite ಮೊಬೈಲ್‌ ಕಡಿಮೆ ಪ್ರೈಸ್‌ ಹಾಗೂ ಅಧಿಕ ಬ್ಯಾಟರಿ ಆಯ್ಕೆಯ ಮೂಲಕ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಪ್ರಸ್ತುತ ಈ ಮೊಬೈಲ್‌ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಆಕರ್ಷಕ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳು ಹಾಗೂ ಎಕ್ಸ್‌ಚೇಂಜ್ ಆಫರ್‌ ಮೂಲಕ ಈ ಮೊಬೈಲ್‌ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್‌ ಸಹ ಪಡೆಯಲು ಅವಕಾಶ ಇದೆ. ಸಂಸ್ಥೆಯ ಈ ಮೊಬೈಲ್‌ ಆಕ್ಟಾ ಕೋರ್ UNISOC T7250 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ಫೋನ್‌ 6,300mAh ಬ್ಯಾಟರಿ ಸಪೋರ್ಟ್ ಸಹ ಪಡೆದಿದೆ. ಅಲ್ಲದೇ ಈ ಫೋನ್‌ ಸೀ ಬ್ಲೂ, ಓಸಿಡೀಯನ್ ಬ್ಲ್ಯಾಕ್‌ ಹಾಗೂ ಬೀಚ್ ಗೋಲ್ಡ್‌ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ರಿಯಲ್‌ಮಿ P4 ಲೈಟ್‌ ಸ್ಮಾರ್ಟ್‌ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಸಖತ್ ಸ್ಟೈಲಿಶ್‌ ಲುಕ್‌ ಇರುವ Oppo K14x 5G ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!

Realme P4 Lite ಮೊಬೈಲ್‌ಗೆ ಬಿಗ್ ಆಫರ್‌

ಅಗ್ಗದ ಬೆಲೆಯ ಹಾಗೂ ಬಿಗ್‌ ಬ್ಯಾಟರಿ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ರಿಯಲ್‌ಮಿ P4 ಲೈಟ್‌ ಸ್ಮಾರ್ಟ್‌ಫೋನ್‌ ಸದ್ಯ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಸಖತ್ ರಿಯಾಯಿತಿ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ 4GB RAM + 64GB ಸ್ಟೋರೇಜ್ ವೇರಿಯಂಟ್‌ ಬೆಲೆ 24,999 ರೂ.ಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್‌ 12,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಇನ್ನು ಈ ಮೊಬೈಲ್‌ ಸೀ ಬ್ಲೂ, ಓಸಿಡೀಯನ್ ಬ್ಲ್ಯಾಕ್‌ ಹಾಗೂ ಬೀಚ್ ಗೋಲ್ಡ್‌ ಕಲರ್‌ ಆಯ್ಕೆಯಲ್ಲಿ ಖರೀದಿ ಲಭ್ಯವಿದೆ.

Realme P4 Lite 4g

ರಿಯಲ್‌ಮಿ P4 ಲೈಟ್‌ ಫೋನಿನ ಫೀಚರ್ಸ್‌ ಮಾಹಿತಿ

ರಿಯಲ್‌ಮಿ P4 ಲೈಟ್‌ ಸ್ಮಾರ್ಟ್‌ಫೋನ್‌ 144Hz ರಿಫ್ರೆಶ್ ರೇಟ್‌ ಸೌಲಭ್ಯ ಒಳಗೊಂಡ 6.74 ಇಂಚಿನ HD+ ಡಿಸ್‌ಪ್ಲೇ ಅನ್ನು ಪಡೆದಿದೆ. ಇದರ ಸ್ಕ್ರೀನ್‌ 720 x 1600 ಪಿಕ್ಸೆಲ್‌ಗಳು ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಇದು 563 nits ಬ್ರೈಟ್ನೆಸ್‌ ಸಪೋರ್ಟ್‌ ಜೊತೆಗೆ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಅನ್ನು ಪಡೆದಿದೆ. ಅಂದಹಾಗೆ ಈ ಫೋನ್‌ ಆಕ್ಟಾ ಕೋರ್ UNISOC T7250 ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು ಇದರೊಂದಿಗೆ 4GB RAM + 64GB ಹಾಗೂ 4GB + 128GB ಆನ್‌ಬೋರ್ಡ್ ಸ್ಟೋರೇಜ್‌ ಆಯ್ಕೆ ಪಡೆದಿದೆ.

ಹಾಗೆಯೇ ರಿಯಲ್‌ಮಿ P4 ಲೈಟ್‌ ಸ್ಮಾರ್ಟ್‌ಫೋನ್‌ 6,300mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರುವ ಜೊತೆಗೆ 15W VOOC ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ. ಹಾಗೆಯೇ ಹಿಂಭಾಗದಲ್ಲಿ ಈ ಫೋನ್‌ 13MP ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಅಲ್ಲದೇ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಇದಲ್ಲದೆ ಈ ಮೊಬೈಲ್‌ 7.94mm ದಪ್ಪ ಮತ್ತು 201 ಗ್ರಾಂ ತೂಕವನ್ನು ಹೊಂದಿದೆ. ಹಾಗೆಯೇ ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ರೇಟಿಂಗ್ ಸೌಲಭ್ಯ ಪಡೆದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile