108MP ಕ್ಯಾಮೆರಾದೊಂದಿಗೆ ಬರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು, ಇವುಗಳ ಬೆಲೆ ಮತ್ತು ಫೀಚರ್‌‌ಗಳನ್ನು ತಿಳಿಯಿರಿ

108MP ಕ್ಯಾಮೆರಾದೊಂದಿಗೆ ಬರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು, ಇವುಗಳ ಬೆಲೆ ಮತ್ತು ಫೀಚರ್‌‌ಗಳನ್ನು ತಿಳಿಯಿರಿ
HIGHLIGHTS

108MP ಕ್ಯಾಮೆರಾ ಸ್ಮಾರ್ಟ್ಫೋನ್ ತೆಗೆದುಕೊಳ್ಳಲು ಬಯಸಿದರೆ ಈ ಪಟ್ಟಿಯನ್ನು ಒಮ್ಮೆ ವಿಶ್ಲೇಷಿಸಿ.

ಬಜೆಟ್‌ನಿಂದ ಪ್ರೀಮಿಯಂ ವಿಭಾಗದವರೆಗೆ ಈ ಅತ್ಯುತ್ತಮ ಆಂಡ್ರಾಯ್ಡ್ ಮತ್ತು 108MP ಕ್ಯಾಮೆರಾ ಸ್ಮಾರ್ಟ್‌ಫೋನ್ ಖರೀದಿಸಬಹುದು

ಫೋನಿನ ಕ್ಯಾಮೆರಾ ಇತ್ತೀಚಿನ ದಿನಗಳಲ್ಲಿ ಅತಿ ಮುಖ್ಯವಾಗಿ ಹೊಂದಿರಲೇಬೇಕಾದ ವೈಶಿಷ್ಟ್ಯವಾಗಿ ಹೊರಹೊಮ್ಮಿದೆ.

ನೀವು ಮಾರುಕಟ್ಟೆಯಲ್ಲಿ ಉತ್ತಮ ಕ್ಯಾಮೆರಾ ಫೋನ್ ಪಡೆಯಲು ಗೊಂದಲದ್ದಿದ್ದರೆ ನೀವೊಂದು ಉತ್ತಮ ಕ್ಯಾಮೆರಾದೊಂದಿಗೆ ಬರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ದೊಡ್ಡ ಪಟ್ಟಿಯನ್ನು ಭಾರತೀಯ ಮಾರುಕಟ್ಟೆಯಲ್ಲಿರುವುದನ್ನು ಈ ಕೆಳಗೆ ನೋಡಬವುದು. ಫೋನಿನ ಕ್ಯಾಮೆರಾ ಇತ್ತೀಚಿನ ದಿನಗಳಲ್ಲಿ ಅತಿ ಮುಖ್ಯವಾಗಿ ಹೊಂದಿರಲೇಬೇಕಾದ ವೈಶಿಷ್ಟ್ಯವಾಗಿ ಹೊರಹೊಮ್ಮಿದೆ. ಈ ಕಂಪನಿಗಳು ಸ್ಮಾರ್ಟ್‌ಫೋನ್ ಫೋಟೋಗ್ರಫಿಗೆ ಹೊಸದಾದ ಆಯಾಮವನ್ನು ನೀಡಲು ಸಹ ಹೆಚ್ಚಾಗಿ ಶ್ರಮಿಸಿವೆ. 108MP ಕ್ಯಾಮೆರಾ ಸ್ಮಾರ್ಟ್ಫೋನ್ ತೆಗೆದುಕೊಳ್ಳಲು ಬಯಸಿದರೆ ಈ ಪಟ್ಟಿಯನ್ನು ಒಮ್ಮೆ ವಿಶ್ಲೇಷಿಸಿ. 108MP ಕ್ಯಾಮೆರಾಗಳನ್ನು ಹೊಂದಿರುವ ಅನೇಕ ಮೊಬೈಲ್ ಫೋನ್ಗಳು ಈಗಾಗಲೇ ಭಾರತೀಯ ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿವೆ. ಆದರಿಂದ 108MP ಕ್ಯಾಮೆರಾದೊಂದಿಗೆ ಬರುವ ಫೋನ್‌ಗಳನ್ನು ನಿಮ್ಮ ಬಜೆಟ್ ಅನುಗುಣವಾಗಿ ಖರೀದಿಸಬಹುದು. ಬಜೆಟ್‌ನಿಂದ ಪ್ರೀಮಿಯಂ ವಿಭಾಗದವರೆಗೆ ಈ ಅತ್ಯುತ್ತಮ ಆಂಡ್ರಾಯ್ಡ್ ಮತ್ತು 108MP ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿದುಕೊಳ್ಳೋಣ.

Xiaomi Mi 10:

ಈ ಸ್ಮಾರ್ಟ್ಫೋನ್ 108MP f/ 1.69 ಪ್ರೈಮರಿ ಲೆನ್ಸ್, 13MP f/ 2.4 ಅಲ್ಟ್ರಾ ವೈಡ್ ಆಂಗಲ್ ಲೆನ್ಸ್, 2MP f/ 2.4 ಮ್ಯಾಕೊ ಲೆನ್ಸ್ ಮತ್ತು ಇನ್ನೊಂದು 2MP f/ 2.4 ಡೆಪ್ತ್ ಲೆನ್ಸ್ ಅನ್ನು ಒದಗಿಸುತ್ತದೆ. ವೈಡ್-ಆಂಗಲ್ ಲೆನ್ಸ್ ಲ್ಯಾಂಡ್ಸ್ಕೇಪ್ ಸುಲಭವಾಗಿ ಹೊಂದಿಸಬಲ್ಲದು ಬಳಕೆದಾರರಿಗೆ ಅತ್ಯುತ್ತಮ ಫೋಟೋ-ಶೂಟ್ ಅನುಭವವನ್ನು ನೀಡುತ್ತದೆ. ಇದರ ಮುಂಭಾಗದಲ್ಲಿ ಉತ್ತಮ ಮತ್ತು ದೋಷರಹಿತ ಸೆಲ್ಫಿಗಳನ್ನು ಕ್ಲಿಕ್ ಮಾಡಲು 20MP f/ 2.3 ಲೆನ್ಸ್ ಇದೆ. ಈ ಸ್ಮಾರ್ಟ್ಫೋನಿನ ಇಂದಿನ ನೈಜ ಬೆಲೆ ಅಮೆಜಾನ್ ಇಂಡಿಯಾದ ಮೂಲಕ ಕೇವಲ 44,999 ರೂಗಳಲ್ಲಿ ಖರೀದಿಸಬವುದು.

Samsung Galaxy Note 20 Ultra 5G:

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20 ಅಲ್ಟ್ರಾ 5 ಜಿ ತನ್ನ ಮುಖ್ಯ ಕ್ಯಾಮೆರಾ ಸಂರಚನೆಗಾಗಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒದಗಿಸುತ್ತದೆ. ಇದು 79 ಡಿಗ್ರಿ ಕ್ಷೇತ್ರ ವೀಕ್ಷಣೆಯೊಂದಿಗೆ 108MP ವೈಡ್-ಆಂಗಲ್ ಕ್ಯಾಮೆರಾವನ್ನು ಹೊಂದಿದೆ. 12MP ಪೆರಿಸ್ಕೋಪ್ ಲೆನ್ಸ್ 5x ಡಿಜಿಟಲ್ ಜೂಮ್ ವರೆಗೆ ನೀಡುತ್ತದೆ ಮತ್ತು ಮತ್ತೊಂದು 12MP ಅಲ್ಟ್ರಾ ವೈಡ್-ಆಂಗಲ್ ಲೆನ್ಸ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ 10MP ಸೆಲ್ಫಿ-ಶೂಟಿಂಗ್ ಲೆನ್ಸ್ ಇದೆ. ಇದರಲ್ಲಿ ಸಿಎಮ್ಒಎಸ್ ಸಂವೇದಕವಿದೆ ಮತ್ತು ಪ್ರಭಾವಶಾಲಿ ಸೆಲ್ಫಿಗಳನ್ನು ಕ್ಲಿಕ್ ಮಾಡುವ ಸಾಮರ್ಥ್ಯ ಹೊಂದಿದೆ. ಈ ಸ್ಮಾರ್ಟ್ಫೋನಿನ ಇಂದಿನ ನೈಜ ಬೆಲೆ ಫ್ಲಿಪ್ಕಾರ್ಟ್ ಮೂಲಕ ಕೇವಲ 77,999 ರೂಗಳಲ್ಲಿ ಖರೀದಿಸಬವುದು.

Xiaomi Mi 10T Pro:

ಈ ಸ್ಮಾರ್ಟ್ಫೋನ್ ಅದರ ಹಿಂಭಾಗದಲ್ಲಿ ಅದ್ಭುತ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ ಇದರಲ್ಲಿ 108MP f/ 1.69 ಪ್ರೈಮರಿ ಲೆನ್ಸ್ 30x ಡಿಜಿಟಲ್ ಜೂಮ್, 13MP f/ 2.4 ಅಲ್ಟ್ರಾ-ವೈಡ್ ಆಂಗಲ್ ಪ್ರೈಮರಿ ಲೆನ್ಸ್ ಮತ್ತು 5MP f/ 2.4 ಮ್ಯಾಕ್ರೋ ಲೆನ್ಸ್ ಒಳಗೊಂಡಿದೆ. ಹಿಂಭಾಗದ ಕ್ಯಾಮೆರಾ ವೈಶಿಷ್ಟ್ಯಗಳಲ್ಲಿ ಎಚ್‌ಡಿಆರ್ ಮೋಡ್, ನಿರಂತರ ಶೂಟಿಂಗ್, ಆಟೋ ಫ್ಲ್ಯಾಶ್, ಟಚ್ ಟು ಫೋಕಸ್, ಫೇಸ್ ಡಿಟೆಕ್ಷನ್, ಐಎಸ್‌ಒ ಕಂಟ್ರೋಲ್ ಮತ್ತು ಎಕ್ಸ್‌ಪೋಸರ್ ಪರಿಹಾರ ಸೇರಿವೆ. ಮುಂಭಾಗದಲ್ಲಿ 20MP f/ 2.2 ಸೆಲ್ಫಿ ಶೂಟರ್ ಇದ್ದು ಸ್ಕ್ರೀನ್ ಫ್ಲ್ಯಾಷ್ ಹೊಂದಿದ್ದು ಬೆರಗುಗೊಳಿಸುತ್ತದೆ ಸ್ವಯಂ-ಪೋಟ್ರೇಟ್ ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ. ಈ ಸ್ಮಾರ್ಟ್ಫೋನಿನ ಇಂದಿನ ನೈಜ ಬೆಲೆ ಅಮೆಜಾನ್ ಇಂಡಿಯಾದ ಮೂಲಕ ಕೇವಲ 39,999 ರೂಗಳಲ್ಲಿ ಖರೀದಿಸಬವುದು.

Samsung Galaxy S20 Ultra:

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 ಅಲ್ಟ್ರಾ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದರಲ್ಲಿ 108MP ಪ್ರಾಥಮಿಕ ಕ್ಯಾಮೆರಾವನ್ನು 48MP ಟೆಲಿಫೋಟೋ ಕ್ಯಾಮೆರಾ ಮತ್ತು 12MP ವೈಡ್-ಆಂಗಲ್ ಕ್ಯಾಮೆರಾ ಬೆಂಬಲಿಸುತ್ತದೆ. ಫೋನ್‌ನ ಕ್ಯಾಮೆರಾ ವೈಶಿಷ್ಟ್ಯಗಳು 100x ಸ್ಪೇಸ್ ಜೂಮ್, 10x ಆಪ್ಟಿಕಲ್ ಜೂಮ್ ಮತ್ತು ಪ್ರೊ ಮೋಡ್ ಅನ್ನು ಒಳಗೊಂಡಿವೆ. ಇದಲ್ಲದೆ ಸಾಧನದ ಮುಂಭಾಗದ ಸೆಲ್ಫಿಗಾಗಿ 40MP ವೈಡ್-ಆಂಗಲ್ ಕ್ಯಾಮೆರಾ ಇರುತ್ತದೆ. ಈ ಸ್ಮಾರ್ಟ್ಫೋನಿನ ಇಂದಿನ ನೈಜ ಬೆಲೆ ಅಮೆಜಾನ್ ಇಂಡಿಯಾದ ಮೂಲಕ ಕೇವಲ 77,945 ರೂಗಳಲ್ಲಿ ಖರೀದಿಸಬವುದು.

Motorola Edge Plus:

ಮೊಟೊರೊಲಾ ಎಡ್ಜ್ ಪ್ಲಸ್ ಅದರ ಹಿಂಭಾಗದಲ್ಲಿ CMOS ಇಮೇಜ್ ಸೆನ್ಸಾರ್ ಹೊಂದಿದ್ದು 108MP f/ 1.8 ಪ್ರೈಮರಿ ಕ್ಯಾಮೆರಾ, 16MP f/ 2.2 ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಮತ್ತು 8MP f/ 2.4 ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿದೆ. 3x ಆಪ್ಟಿಕಲ್ ಜೂಮ್. ಸ್ಮಾರ್ಟ್ಫೋನ್ ಸ್ಕ್ರೀನ್ ಫ್ಲ್ಯಾಷ್ ಹೊಂದಿದೆ. ಇದರ ಫ್ರಂಟ್ ಅಲ್ಲಿ 25MP f/ 2.0 ಸೆಲ್ಫಿ ಶೂಟರ್ ಅನ್ನು ಹೊಂದಿದೆ. ಈ ಸ್ಮಾರ್ಟ್ಫೋನಿನ ಇಂದಿನ ನೈಜ ಬೆಲೆ ಅಮೆಜಾನ್ ಇಂಡಿಯಾದ ಮೂಲಕ ಕೇವಲ 59,999 ರೂಗಳಲ್ಲಿ ಖರೀದಿಸಬವುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo