Samsung Galaxy M36 5G: ಸ್ಯಾಮ್‌ಸಂಗ್‌ನಿಂದ ಕೈಗೆಟಕುವ ಬೆಲೆಗೆ ಪವರ್ಫುಲ್ 5G ಫೋನ್ ಬಿಡುಗಡೆಯಾಗಿದೆ!
Samsung Galaxy M36 5G ಸ್ಮಾರ್ಟ್ಫೋನ್ ಇಂದು ಅಧಿಕೃತವಾಗಿ ಬಿಡುಗಡೆಯಾಗಿದೆ.
Samsung Galaxy M36 5G ಸ್ಮಾರ್ಟ್ಫೋನ್ ಬ್ಯಾಂಕ್ ಆಫರ್ ಜೊತೆಗೆ ₹16,499 ರೂಗಳಿಗೆ ಪರಿಚಯಿಸಿದೆ.
Samsung Galaxy M36 5G ಸ್ಮಾರ್ಟ್ಫೋನ್ 50MP OIS ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ ಬರುತ್ತದೆ.
ಸ್ಯಾಮ್‌ಸಂಗ್‌ನಿಂದ ಕೈಗೆಟಕುವ ಬೆಲೆಗೆ ಪವರ್ಫುಲ್ 5G ಫೋನ್ ಬಿಡುಗಡೆಗೊಳಿಸಿದೆ. ಭಾರತದಲ್ಲಿ ಕಂಪನಿ ಇಂದು ಅಧಿಕೃತವಾಗಿ ಹೊಸ Samsung Galaxy M36 5G ಸ್ಮಾರ್ಟ್ಫೋನ್ ಅನ್ನು ಲೇಟೆಸ್ಟ್ ಮತ್ತು ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಪರಿಚಯಿಸಿದೆ. Samsung Galaxy M36 5G ವಿಶೇಷಣತೆಗಳನ್ನು ನೋಡುವುದಾದರೆ 50MP OIS ಕ್ಯಾಮೆರಾದಿಂದ ಬ್ಯಾಕ್ ಮತ್ತು ಫ್ರಂಟ್ ಎರಡು ಕಡೆಯಿಂದ 4K ವಿಡಿಯೋ ರೆಕಾರ್ಡಿಂಗ್ ಮಾಡಬಹುದು.
Surveyಅಲ್ಲದೆ ಈ Samsung Galaxy M36 5G ಸ್ಮಾರ್ಟ್ಫೋನ್ ಲೇಟೆಸ್ಟ್ ಮತ್ತು ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಬಿಡುಗಡೆಯಾಗಿದ್ದು ಬ್ಯಾಂಕ್ ಆಫರ್ ಜೊತೆಗೆ ₹16,499 ರೂಗಳಿಗೆ ಪರಿಚಯಿಸಿದೆ. ಈ ಸ್ಮಾರ್ಟ್ಫೋನ್ ಸಂಪೂರ್ಣ ಫೀಚರ್ ಮತ್ತು ಆಫರ್ ಬೆಲೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪಡೆಯಿರಿ.
ಭಾರತದಲ್ಲಿ Samsung Galaxy M36 5G ಬೆಲೆ:
Samsung Galaxy M36 5G ಸ್ಮಾರ್ಟ್ಫೋನ್ MRP ರೂ. 22,999 ರೂಗಳಗಿವೆ ಆದರೆ ರಿಯಾಯಿತಿಯ ನಂತರ ಇದರ ಆರಂಭಿಕ 6GB RAM + 128GB ಸ್ಟೋರೇಜ್ ರೂಪಾಂತರವು ಕೇವಲ ರೂ. 16,499 ರೂಗಳಿಗೆ ಲಭ್ಯವಿರುತ್ತದೆ. ಇದರ ಹೊರತಾಗಿ ಈ ಫೋನ್ 8GB RAM ಮತ್ತು 256GB ಅಂತರ್ನಿರ್ಮಿತ ಸ್ಟೋರೇಜ್ ಆಯ್ಕೆಯಲ್ಲಿಯೂ ಲಭ್ಯವಿದೆ.
ಈ ಸ್ಮಾರ್ಟ್‌ಫೋನ್ ಆರೆಂಜ್ ಹೇಸ್, ಸೆರೆನ್ ಗ್ರೀನ್ ಮತ್ತು ವೆಲ್ವೆಟ್ ಬ್ಲ್ಯಾಕ್‌ನಂತಹ ಬಣ್ಣಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ನ ಮಾರಾಟ 12ನೇ ಜುಲೈ 2025 ರಿಂದ ಸ್ಯಾಮ್‌ಸಂಗ್‌ನ ಅಧಿಕೃತ ಸೈಟ್ ಮತ್ತು ಇ-ಕಾಮರ್ಸ್ ಸೈಟ್ ಅಮೆಜಾನ್‌ನಲ್ಲಿ ಮಾರಾಟ ಪ್ರಾರಂಭವಾಗಲಿದೆ.

Samsung Galaxy M36 5G ಫೀಚರ್ ಮತ್ತು ವಿಶೇಷಣತೆಗಳೇನು?
Samsung Galaxy M36 5G ಸ್ಮಾರ್ಟ್ಫೋನ್ 6.7-ಇಂಚಿನ ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದ್ದು ಇದು ಪೂರ್ಣ HD + ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿದೆ. ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ + ರಕ್ಷಣೆಯೊಂದಿಗೆ ಸಜ್ಜುಗೊಂಡಿದೆ. ಈ ಫೋನ್ ಆಕ್ಟಾ ಕೋರ್ ಎಕ್ಸಿನೋಸ್ 1380 ಪ್ರೊಸೆಸರ್ ಅನ್ನು ಆರ್ಮ್ ಮಾಲಿ G68 GPU ಹೊಂದಿದೆ.
Also Read: Exclusive: ಟೆಲಿಗ್ರಾಮ್‌ನಲ್ಲಿ ಭಾರತೀಯರ ವೈಯಕ್ತಿಕ ಡೇಟಾ ಕೇವಲ ₹99 ರೂಗಳಿಗೆ ಮಾರಾಟವಾಗುತ್ತಿದೆ!
ಇದು 6GB RAM / 8GB RAM ಮತ್ತು 128GB / 256GB ಸ್ಟೋರೇಜ್ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ಒನ್ UI 7 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ವೇಪರ್ ಕೂಲಿಂಗ್ ಚೇಂಬರ್ ಅನ್ನು ಸಹ ಹೊಂದಿದೆ. ಕಂಪನಿಯು 6 ವರ್ಷಗಳವರೆಗೆ OS ನವೀಕರಣಗಳು ಮತ್ತು ಸೆಕ್ಯೂರಿಟಿ ಅಪ್ಡೇಟ್ ನೀಡುತ್ತದೆ.
Samsung Galaxy M36 5G ಸ್ಮಾರ್ಟ್ಫೋನ್ ಹಿಂಭಾಗವು OIS ಬೆಂಬಲದೊಂದಿಗೆ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ, 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಅದೇ ಸಮಯದಲ್ಲಿ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 13MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ.
ಎರಡೂ ಕ್ಯಾಮೆರಾಗಳು 4K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತವೆ. AI ಆಟೋ ಮೋಡ್ ಕಡಿಮೆ ಬೆಳಕಿನಲ್ಲಿ ವೀಡಿಯೊ ಗುಣಮಟ್ಟವನ್ನು ಸುಧಾರಿಸುತ್ತದೆ. Samsung Galaxy M36 5G ಸ್ಮಾರ್ಟ್ಫೋನ್ 5,000mAh ಬ್ಯಾಟರಿಯನ್ನು ಹೊಂದಿದ್ದು ಅದು 25W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile