ಸ್ಯಾಮ್‍ಸಂಗ್‍ನ Galaxy M36 5G ಇಂದು ಅಮೆಜಾನ್‌ನಲ್ಲಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ!
Samsung Galaxy M36 5G ಸ್ಮಾರ್ಟ್ಫೋನ್ ಇಂದು ಭಾರಿ ಬೆಲೆ ಕಡಿತದೊಂದಿಗೆ ಲಭ್ಯವಿದೆ.
Samsung Galaxy M36 5G ಸ್ಮಾರ್ಟ್ಫೋನ್ ಅಮೆಜಾನ್‌ನಲ್ಲಿ ವರ್ಷದ ಕೊನೆ ಸೇಲ್ ಅಡಿಯಲ್ಲಿ ಲಭ್ಯವಿದೆ.
Samsung Galaxy M36 5G ಸ್ಮಾರ್ಟ್ಫೋನ್ Super AMOLED ಡಿಸ್ಪ್ಲೇ ಮತ್ತು ಪ್ರೀಮಿಯಂ ಫೀಚರ್ಗಳೊಂದಿಗೆ ಲಭ್ಯ.
ಭಾರತದಲ್ಲಿ ಈಗ ಅಮೆಜಾನ್ ನಡೆಸುತ್ತಿರುವ ವರ್ಷದ ಕೊನೆಯ ಮಾರಾಟದಲ್ಲಿ ಈ Samsung Galaxy M36 5G ಫೋನ್ ಮೇಲೆ ಭಾರಿ ರಿಯಾಯಿತಿಯನ್ನು ನೀಡುತ್ತಿದೆ. ಈ ಫೋನ್ ಮೊದಲು ಬಿಡುಗಡೆಯಾದಾಗ ಇದ್ದ ಬೆಲೆಗಿಂತ ಈಗ ಸಾವಿರಾರು ರೂಪಾಯಿ ಕಡಿಮೆ ಬೆಲೆಗೆ ಲಭ್ಯವಿದೆ. ಅಮೆಜಾನ್ ಸಂಸ್ಥೆಯು ಈ ವರ್ಷದ ಮಾರಾಟ ಮುಗಿಸಿ ಮತ್ತೊಂದು ಹೊಸ ಸೇಲ್ ಶುರು ಮಾಡುವ ಮುನ್ನವೇ ಈ ಅದ್ಭುತ ಅವಕಾಶವನ್ನು ಗ್ರಾಹಕರಿಗೆ ನೀಡುತ್ತಿದೆ. ವಿಶೇಷವಾಗಿ ಈ ಹೊಸ ವರ್ಷದ ಸಂಭ್ರಮದ ಆಫರ್‌ನಲ್ಲಿ ಸ್ಯಾಮ್‍ಸಂಗ್‍ನ ತನ್ನ ಈ ಇತ್ತೀಚಿನ ಫೋನಿನ ಬೆಲೆಯನ್ನು ಗಣನೀಯವಾಗಿ ಇಳಿಸಿದೆ. ಈ ಸ್ಮಾರ್ಟ್‌ಫೋನ್ ನೋಡಲು ಬಹಳ ಸುಂದರವಾಗಿದ್ದು ಇದರ ಅಮೋಲೆಡ್ ಡಿಸ್ಪ್ಲೇ (Super AMOLED Display) ಮತ್ತು ಅತ್ಯುತ್ತಮವಾದ ಕ್ಯಾಮೆರಾವನ್ನು ನೀಡಲಾಗಿದೆ.
SurveyAlso Read: ZEBRONICS Dolby Soundbar: ಇದಕ್ಕಿಂತ ಕಡಿಮೆ ಬೆಲೆಗೆ ಮತ್ತೊಂದಿಲ್ಲ! ಜಬರ್ದಸ್ತ್ ಸೌಂಡ್ ಮತ್ತು ಪ್ರೀಮಿಯಂ ಲುಕ್!
Samsung Galaxy M36 5G ಫೋನ್ ಆಫರ್ ಬೆಲೆ ಮತ್ತು ಲಭ್ಯತೆ
ಈಗ ಈ ಫೋನ್ ಖರೀದಿಸುವವರಿಗೆ ಇನ್ನೂ ಕೆಲವು ವಿಶೇಷ ಕೊಡುಗೆಗಳು ಸಹ ಸಿಗುತ್ತಿವೆ. ಆದರೆ ನೆನಪಿರಲಿ ಈ ಆಫರ್ ಕೇವಲ ಸೀಮಿತ ಸಮಯದವರೆಗೆ ಮಾತ್ರ ಇರಲಿದೆ. Samsung Galaxy M36 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಮೂರು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು 17,499 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹18,999 ರೂಗಳಿಗೆ ಮತ್ತು ಕೊನೆಯದಾಗಿ ಇದರ 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹21,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರಿಗೆ ಉಚಿತ 500 ರೂಗಳ ಕೂಪನ್ ಡಿಸ್ಕೌಂಟ್ ನಿಡುತ್ತಿದ್ದು ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳ ಡಿಸ್ಕೌಂಟ್ ಪಡೆಯಬಹುದು.

ಈ ಮೂಲಕ Samsung Galaxy M36 5G ಸ್ಮಾರ್ಟ್ಫೋನ್ ಆರಂಭಿಕ ಮಾದರಿಯನ್ನು ಸುಮಾರು 15,499 ರೂಗಳ ವರೆಗೆ ಕಡಿಮೆ ಬೆಲೆಯಲ್ಲಿ ಖರೀದಿಗೆ ಪ್ರಯತ್ನಿಸಬಹುದು. ಅಲ್ಲದೆ Samsung Galaxy M36 5G ಸ್ಮಾರ್ಟ್ಫೋನ್ ಮೇಲೆ ಅಮೆಜಾನ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 16,600 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Samsung Galaxy M36 5G ಫೀಚರ್ ಮತ್ತು ವಿಶೇಷಣಗಳೇನು?
Samsung Galaxy M36 5G ಸ್ಮಾರ್ಟ್ಫೋನ್ 6.7 ಇಂಚಿನ ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದ್ದು ಇದು ಪೂರ್ಣ HD + ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿದೆ. ಡಿಸ್ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ + ರಕ್ಷಣೆಯೊಂದಿಗೆ ಸಜ್ಜುಗೊಂಡಿದೆ. ಸ್ಮಾರ್ಟ್ಫೋನ್ ಹಿಂಭಾಗವು OIS ಬೆಂಬಲದೊಂದಿಗೆ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ, 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಅದೇ ಸಮಯದಲ್ಲಿ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 13MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ. ಎರಡೂ ಕ್ಯಾಮೆರಾಗಳು 4K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತವೆ. AI ಆಟೋ ಮೋಡ್ ಕಡಿಮೆ ಬೆಳಕಿನಲ್ಲಿ ವೀಡಿಯೊ ಗುಣಮಟ್ಟವನ್ನು ಸುಧಾರಿಸುತ್ತದೆ.
ಈ ಫೋನ್ ಆಕ್ಟಾ ಕೋರ್ ಎಕ್ಸಿನೋಸ್ 1380 ಪ್ರೊಸೆಸರ್ ಅನ್ನು ಆರ್ಮ್ ಮಾಲಿ G68 GPU ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ಒನ್ UI 7 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ವೇಪರ್ ಕೂಲಿಂಗ್ ಚೇಂಬರ್ ಅನ್ನು ಸಹ ಹೊಂದಿದೆ. ಕಂಪನಿಯು 6 ವರ್ಷಗಳವರೆಗೆ OS ನವೀಕರಣಗಳು ಮತ್ತು ಸೆಕ್ಯೂರಿಟಿ ಅಪ್ಡೇಟ್ ನೀಡುತ್ತದೆ. Samsung Galaxy M36 5G ಸ್ಮಾರ್ಟ್ಫೋನ್ 5,000mAh ಬ್ಯಾಟರಿಯನ್ನು ಹೊಂದಿದ್ದು ಅದು 25W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile