Samsung Galaxy M30 ಭಾರತದಲ್ಲಿನ ಬೆಲೆ, ಇದರ ಬಿಡುಗಡೆಯ ದಿನಾಂಕ, ಸ್ಪೆಕ್ ಮತ್ತು ಫೀಚರ್ ಮಾಹಿತಿ.

Samsung Galaxy M30 ಭಾರತದಲ್ಲಿನ ಬೆಲೆ, ಇದರ ಬಿಡುಗಡೆಯ ದಿನಾಂಕ, ಸ್ಪೆಕ್ ಮತ್ತು ಫೀಚರ್ ಮಾಹಿತಿ.
HIGHLIGHTS

Samsung Galaxy M30 ಸ್ಮಾರ್ಟ್ಫೋನಲ್ಲಿ ಟ್ರಿಪಲ್ ಕ್ಯಾಮೆರಾದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿರುವ ನಿರೀಕ್ಷಿಯಿದೆ.

ಭಾರತದಲ್ಲಿ ಸ್ಯಾಮ್ಸಂಗ್ ಜನವರಿಯಲ್ಲಿ ತನ್ನ ಎರಡು ಹೊಸ ಮತ್ತು ಮೊದಲ Galaxy M ಸರಣಿಯ ಸ್ಮಾರ್ಟ್ಫೋನ್ಗಳನ್ನು ಯಶಸ್ವಿಯಾಗಿ ಪ್ರಾರಂಭದ ನಂತರ ಸ್ಯಾಮ್ಸಂಗ್ ಈ ತಿಂಗಳು ಅಂದ್ರೆ ಫೆಬ್ರವರಿಯಲ್ಲಿ ಕೇವಲ 17,000 ರೂಗಳೊಳಗೆ ಮತ್ತೋಂದು M30 ಅನ್ನು ಪ್ರಾರಂಭಿಸುವ ನಿರೀಕ್ಷೆಯನ್ನು ಸಜ್ಜಾಗೊಳಿಸುತ್ತಿದೆ. ಇದರಲ್ಲಿ ಮುಖ್ಯವಾಗಿ ಟ್ರಿಪಲ್ ಬ್ಯಾಕ್ ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ ಬರುವ ಮಾರ್ಚ್ ಮೊದಲ ವಾರದಲ್ಲಿ ಕಾಲಿಡುವ ನಿರೀಕ್ಷಿಯಿದೆ.

ಸ್ಯಾಮ್ಸಂಗ್ನ ಈ ಹೊಸ Samsung Galaxy M30 ಸ್ಮಾರ್ಟ್ಫೋನಲ್ಲಿ ಸೂಪರ್ ಅಮೋಲ್ಡ್ ಇನ್ಫಿನಿಟಿ V ಡಿಸ್ಪ್ಲೇಯನ್ನು ತರಲಿದೆ. ಇದು ಯುವ ಮಿಲೇನಿಯಲ್ಗಳಿಗೆ ಭರ್ಜರಿಯ ಪವರ್ ಪ್ಯಾಕ್ ಮಾಡಿದ ಆಫರಿಂಗ್ ಮಾಡುತ್ತದೆ. ಇದರಲ್ಲಿ ತನ್ನದೆಯಾದ Exynos 7904 ಪ್ರೊಸೆಸರನ್ನು ಹೊಂದಿದ್ದು 4GB ಯ RAM ಮತ್ತು 64GB ಯ ಇಂಟರ್ನಲ್ ಸ್ಟೋರೇಜ್ ರೂಪಾಂತರದೊಂದಿಗೆ ಬರುತ್ತದೆ.

ಇದರೊಂದಿಗೆ ಈ Samsung Galaxy M30 ಮತ್ತೊಂದು ವೇರಿಯಂಟ್ 6GB ಯ RAM ಮತ್ತು128GB ಯ ಇಂಟರ್ನಲ್ ಸ್ಟೋರೇಜ್ ರೂಪಾಂತರದೊಂದಿಗೆ ಬರುತ್ತದೆ. ಸ್ಯಾಮ್ಸಂಗ್ ಇಂಡಿಯಾ ಕಂಪನಿಯು ನಿಮಗೆ ಈಗಾಗಲೇ ತಿಳಿದಿರುವಂತೆ Galaxy M20 ಮತ್ತು Galaxy M10 ಸ್ಮಾರ್ಟ್ಫೋನ್ಗಳನ್ನು 10,990 ರೂಗಳು ಮತ್ತು 7,990 ರೂಪಾಯಿಗಳಲ್ಲಿ ಬಿಡುಗಡೆ ಮಾಡಿತ್ತು.

ಈಗ ಸ್ಯಾಮ್ಸಂಗ್ನ ಈ ಹೊಸ Samsung Galaxy M30 ಸ್ಮಾರ್ಟ್ಫೋನ್ ಕ್ಯಾಮೆರಾದ ಬಗ್ಗೆ ಹೇಳಬೇಕೇದರೆ ರೇರ್ ಕ್ಯಾಮೆರಾ 13+5+5MP ಸೆಟಪ್ ಮತ್ತು ಫ್ರಂಟಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP ಕ್ಯಾಮೆರಾವನ್ನು ಹೊಂದಿರುವುದಾಗಿ ನಿರೀಕ್ಷಿಸಬವುದು. ಅಲ್ಲದೆ ಇದರ ಹಿಂಭಾಗದಲ್ಲಿ Galaxy M20 ಯಂತೆ ಫಿಂಗರ್ಪ್ರಿಂಟ್ ಸೆನ್ಸರ್ ಮತ್ತು ಫ್ರಂಟಲ್ಲಿ ಫೇಸ್ ಅನ್ಲಾಕಿಂಗ್ ಫೀಚರ್ ನಿರೀಕ್ಷಿಸಬವುದು. ಕೊನೆಯದಾಗಿ ಮೇಲೆ ಹೇಳಿರುವಂತೆ 5000mAh ಬ್ಯಾಟರಿಯೊಂದಿಗೆ ಟೈಪ್ C ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿರಬವುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo