ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ Samsung Galaxy A36 ಬೆಲೆಯಲ್ಲಿ ಈಗ ಭಾರೀ ಇಳಿಕೆ!
ಸ್ಯಾಮ್‌ಸಂಗ್ ಗ್ಯಾಲಕ್ಸಿ A36 ಮೊಬೈಲ್ ಭರ್ಜರಿ ಡಿಸ್ಕೌಂಟ್‌ನಲ್ಲಿ ಲಭ್ಯ
ಈ ಮೊಬೈಲ್ 5,000mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಅನ್ನು ಪಡೆದಿದೆ
ಸ್ಯಾಮ್‌ಸಂಗ್‌ನ ಈ ಫೋನ್ ಸ್ನಾಪ್‌ಡ್ರಾಗನ್ 6 ಜೆನ್ 3 ಪ್ರೊಸೆಸರ್ ಹೊಂದಿದೆ
ಸ್ಯಾಮ್‌ಸಂಗ್ ಮೊಬೈಲ್ ಕಂಪನಿಯ Samsung Galaxy A36 ಮೊಬೈಲ್ ವೇಗದ ಪ್ರೊಸೆಸರ್ ಆಯ್ಕೆಯ ಮೂಲಕ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಪ್ರಸ್ತುತ ಈ ಮೊಬೈಲ್ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಬಿಗ್ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳು ಹಾಗೂ ಎಕ್ಸ್‌ಚೇಂಜ್ ಆಫರ್ ಮೂಲಕ ಈ ಮೊಬೈಲ್ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಸಂಸ್ಥೆಯ ಈ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 3 ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ಫೋನ್ 5,000mAh ಬ್ಯಾಟರಿ ಸಪೋರ್ಟ್ ಸಹ ಪಡೆದಿದೆ. ಅಲ್ಲದೇ ಈ ಫೋನ್ ಲ್ಯಾವೆಂಡರ್, ಬ್ಲ್ಯಾಕ್, ವೈಟ್, ಡಾರ್ಕ್ ಬ್ಲೂ ಹಾಗೂ ಡಾರ್ಕ್ ಗ್ರೀನ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A36 ಸ್ಮಾರ್ಟ್‌ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : OnePlus N6x ಮೊಬೈಲ್ ಲಾಂಚ್‌ಗೆ ಡೇಟ್ ಫಿಕ್ಸ್! ಬಜೆಟ್ ಬೆಲೆಯಲ್ಲಿ ಎಂಟ್ರಿ ಕೊಡುವ ನಿರೀಕ್ಷೆ!
Samsung Galaxy A36 ಬೆಲೆಯಲ್ಲಿ ಸಖತ್ ಇಳಿಕೆ
ಮೀಡ್‌ರೇಂಜ್ ಬೆಲೆಯ ಹಾಗೂ ಆಕರ್ಷಕ ಫೀಚರ್ಸ್ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ A36 ಸ್ಮಾರ್ಟ್‌ಫೋನ್ ಸದ್ಯ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಬೊಂಬಾಟ್ ರಿಯಾಯಿತಿ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ 8GB + 128GB ಸ್ಟೋರೇಜ್ ವೇರಿಯಂಟ್ ಬೆಲೆ 35,999 ರೂ.ಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್ 31,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಇನ್ನು ಈ ಮೊಬೈಲ್ ಲ್ಯಾವೆಂಡರ್, ಬ್ಲ್ಯಾಕ್, ವೈಟ್, ಡಾರ್ಕ್ ಬ್ಲೂ ಹಾಗೂ ಡಾರ್ಕ್ ಗ್ರೀನ್ ಕಲರ್ ಆಯ್ಕೆಯಲ್ಲಿ ಖರೀದಿ ಲಭ್ಯವಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A36 ಫೋನಿನ ಫೀಚರ್ಸ್
ಸ್ಯಾಮ್‌ಸಂಗ್ ಗ್ಯಾಲಕ್ಸಿ A36 ಸ್ಮಾರ್ಟ್‌ಫೋನ್ 6.7 ಇಂಚಿನ ಸೂಪರ್ AMOLED ಡಿಸ್‌ಪ್ಲೇಯ ಹೊಂದಿದ್ದು, ಇದು 2340 x 1080 ಪಿಕ್ಸೆಲ್ ರೆಸಲ್ಯೂಶನ್ ಸಪೋರ್ಟ್ ಪಡೆದಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್ ಸೌಲಭ್ಯದ ಪಡೆದುಕೊಂಡಿದೆ. ಹಾಗೆಯೇ ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 3 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಈ ಫೋನ್ IP67 ರೇಟಿಂಗ್ ಸೌಲಭ್ಯ ಬೆಂಬಲಿಸುತ್ತದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A36 ಸ್ಮಾರ್ಟ್‌ಫೋನ್ ಹಿಂಬದಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದಿದೆ. ಇನ್ನು ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 8MP ಮತ್ತು 5MP ಸೆನ್ಸಾರ್ ಸೌಲಭ್ಯದಲ್ಲಿ ಇದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ್ 12MP ಕ್ಯಾಮೆರಾ ರಚನೆ ಒಳಗೊಂಡಿದೆ. ಹಾಗೆಯೇ ಈ ಫೋನ್ 5,000mAh ಬ್ಯಾಟರಿ ಸೌಲಭ್ಯ ಹೊಂದಿದೆ. ಇದಕ್ಕೆ ಪೂರಕವಾಗಿ 45W ಸೂಪರ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile