OnePlus N6x ಮೊಬೈಲ್ ಲಾಂಚ್‌ಗೆ ಡೇಟ್ ಫಿಕ್ಸ್! ಬಜೆಟ್ ಬೆಲೆಯಲ್ಲಿ ಎಂಟ್ರಿ ಕೊಡುವ ನಿರೀಕ್ಷೆ!
ಇದೇ ಜುಲೈ 31 ರಂದು ಒನ್‌ಪ್ಲಸ್ N6x ಮೊಬೈಲ್ ಬಿಡುಗಡೆ
ಒನ್‌ಪ್ಲಸ್ N6x ಮೊಬೈಲ್ ಬಜೆಟ್ ಪ್ರೈಸ್‌ಟ್ಯಾಗ್‌ನಲ್ಲಿ ಲಗ್ಗೆ ಇಡಲಿದೆ
ಈ ಸ್ಮಾರ್ಟ್‌ಫೋನ್ ಡೀಪ್ ಬರ್ಗಂಡಿ ರೆಡ್ ಮತ್ತು ಐಸ್ ಬ್ಲೂ ಕಲರ್‌ನಲ್ಲಿ ಬರಲಿದೆ
ಒನ್‌ಪ್ಲಸ್ ಸಂಸ್ಥೆಯು ಮತ್ತೆ ಬಜೆಟ್ ಬೆಲೆಯಲ್ಲಿ ಹೊಸದಾಗಿ OnePlus N6x ಮೊಬೈಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗುತ್ತಿದೆ. ಒನ್‌ಪ್ಲಸ್ ಸಂಸ್ಥೆಯ ನೂತನ ಒನ್‌ಪ್ಲಸ್ N6x ಮೊಬೈಲ್ ಇದೇ ಜುಲೈ 31 ರಂದು ದೇಶೀಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಮೊಬೈಲ್ ಲಾಂಚ್ ಕುರಿತಾಗಿ ಈಗಾಗಲೇ ಅಮೆಜಾನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಸೈಟ್ ಲೈವ್ ಮಾಡಲಾಗಿದೆ. ಹಾಗೆಯೇ ಒನ್‌ಪ್ಲಸ್ N6x ಮೊಬೈಲ್‌ನ ವಿನ್ಯಾಸ ಮತ್ತು ಕಲರ್ ಆಯ್ಕೆಗಳನ್ನು ಸಹ ಬಹಿರಂಗಪಡಿಸಿದೆ. ಈ ಫೋನಿನ ಟೀಸರ್‌ನಲ್ಲಿ ಮಾತ್ರೆ ಆಕಾರದ ಕ್ಯಾಮೆರಾ ಮಾಡ್ಯೂಲ್ ಮತ್ತು ನಯವಾದ ಹಿಂಭಾಗದ ಪ್ಯಾನೆಲ್ ನೋಡಲು ನಾರ್ಡ್ 5 ನಂತೆ ಕಾಣುತ್ತದೆ. ಅಲ್ಲದೇ ಬಜೆಟ್ ಬೆಲೆಯಲ್ಲಿ ಪ್ರೀಮಿಯಂ ಲುಕ್ ಅನ್ನು ಒಳಗೊಂಡಿರಲಿದೆ ಎಂದು ಸೂಚಿಸುತ್ತದೆ. ಹಾಗಾದರೇ ಒನ್‌ಪ್ಲಸ್ N6x ಮೊಬೈಲ್‌ನ ಇತರೆ ನಿರೀಕ್ಷಿತ ಲಾಂಚ್ ಹಾಗೂ ಫೀಚರ್ಸ್‌ಗಳ ಕುರಿತು ಮುಂದೆ ತಿಳಿಯೋಣ ಬನ್ನಿರಿ.
SurveyAlso Read : Samsung Galaxy Watch 9 ಬಿಡುಗಡೆ: ಹೊಸ ಸ್ನಾಪ್‌ಡ್ರಾಗನ್ ವೇರ್ ಎಲೈಟ್ ಚಿಪ್ ಸೌಲಭ್ಯ
OnePlus N6x ಬಿಡುಗಡೆಗೆ ದಿನಾಂಕ ಫಿಕ್ಸ್
ಒನ್‌ಪ್ಲಸ್ ಸಂಸ್ಥೆಯ ಮುಂಬರುವ ನೂತನ ಒನ್‌ಪ್ಲಸ್ N6x ಸ್ಮಾರ್ಟ್‌ಫೋನ್ ಬಜೆಟ್ ರೇಂಜ್‌ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಗಳು ಇವೆ. ಅಂದಹಾಗೆ ಈ ಮೊಬೈಲ್ ಇದೇ ಜೂನ್ 31 ರಂದು ಮಧ್ಯಾಹ್ನ 12 ಗಂಟೆಗೆ ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಲಾಂಚ್ ಆಗಲಿದೆ. ಈ ಮೊಬೈಲ್ ಲಾಂಚ್ ಬಳಿಕ ಅಮೆಜಾನ್ ತಾಣ ಹಾಗೂ ಕಂಪನಿಯ ಅಧಿಕೃತ ಆನ್‌ಲೈನ್ ಸ್ಟೋರ್ ಮೂಲಕ ಸೇಲ್ ಪ್ರಾರಂಭ ಮಾಡಲಿದೆ. ಭಾರತದಲ್ಲಿ ಈ ಫೋನ್ ಬರ್ಗಂಡಿ ರೆಡ್ ಮತ್ತು ಐಸ್ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗುವ ಸಾಧ್ಯತೆಗಳು ಇವೆ. ಈ ಫೋನ್ ಸುಮಾರು 20,000 ರೂ. ಗಳ ಒಳಗೆ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಗಳು ಇವೆ ಎನ್ನಲಾಗಿದೆ.

ಒನ್‌ಪ್ಲಸ್ N6 ನಿರೀಕ್ಷಿತ ಫೀಚರ್ಸ್
ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ಕೊಡಲಿರುವ ಒನ್‌ಪ್ಲಸ್ N6x ಸ್ಮಾರ್ಟ್‌ಫೋನ್‌ನ ಫೀಚರ್ಸ್ ಅನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಈ ಫೋನ್ ಕಂಪನಿಯ ಕೈಗೆಟುಕುವ ಸ್ಮಾರ್ಟ್‌ಫೋನ್ ಪೋರ್ಟ್‌ಫೋಲಿಯೊದಲ್ಲಿ ಒನ್‌ಪ್ಲಸ್ N6 ಫೋನಿಗಿಂತ ಸ್ವಲ್ಪ ಕಡಿಮೆ ಹಂತದಲ್ಲಿ ಇರುವ ನಿರೀಕ್ಷೆಯಿದೆ. ಒನ್‌ಪ್ಲಸ್ ಈ ಮೊಬೈಲ್‌ಗಾಗಿ ಎರಡು ಬಣ್ಣ ಆಯ್ಕೆಗಳನ್ನು ಸಹ ದೃಢಪಡಿಸಿದೆ. ಅವುಗಳು ಕ್ರಮವಾಗಿ ಡೀಪ್ ಬರ್ಗಂಡಿ ರೆಡ್ ಮತ್ತು ಐಸ್ ಬ್ಲೂ ವೇರಿಯಂಟ್ ಆಗಿವೆ. ಈ ಎರಡೂ ಆವೃತ್ತಿಗಳು ಕೇಂದ್ರೀಕೃತವಾಗಿ ಇರಿಸಲಾದ ಒನ್‌ಪ್ಲಸ್ ಲೋಗೋದೊಂದಿಗೆ ಸ್ವಚ್ಛ ವಿನ್ಯಾಸವನ್ನು ಉಳಿಸಿಕೊಂಡಿವೆ.
ಒನ್‌ಪ್ಲಸ್ N6x ಸ್ಮಾರ್ಟ್‌ಫೋನ್ ಈ ಹಿಂದಿನ ಮಾಡೆಲ್‌ಗಿಂತ ಸಂಪೂರ್ಣವಾಗಿ ವಿಭಿನ್ನ ವಿನ್ಯಾಸ ಅಳವಡಿಸಿಕೊಂಡಿದೆ. ಈ ಫೋನ್ ಫ್ಲಾಟ್ ಫ್ರೇಮ್ ಅನ್ನು ಫ್ಲಾಟ್ ಹಿಂಭಾಗದ ಪ್ಯಾನೆಲ್‌ನೊಂದಿಗೆ ಹೊಂದಿದೆ. ಅಲ್ಲದೇ ಲಂಬವಾಗಿ ಜೋಡಿಸಲಾದ ಪಿಲ್ ಆಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಮೇಲಿನ ಎಡ ಮೂಲೆಯಲ್ಲಿ ಇರಿಸಲಾಗಿದೆ. ಆದರೆ LED ಫ್ಲ್ಯಾಷ್ ಕ್ಯಾಮೆರಾ ಹೌಸಿಂಗ್‌ನ ಹೊರಗೆ ಇರುತ್ತದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile