Redmi Note 7 ಸ್ಮಾರ್ಟ್ಫೋನಿನ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ 22 ಸತ್ಯಗಳು – 2019

Redmi Note 7 ಸ್ಮಾರ್ಟ್ಫೋನಿನ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ 22 ಸತ್ಯಗಳು – 2019
HIGHLIGHTS

ಈ ಸ್ಮಾರ್ಟ್ಫೋನ್ ಚೈನಾದಲ್ಲಿ ಈಗಾಗಲೇ ಬಿಡುಗಡೆಯಾಗಿದೆ ಈಗ ಭಾರತಕ್ಕೆ ಬರುವ ನಿರೀಕ್ಷೆಯಲ್ಲಿದೆ.

ಇಂದು ನಾವು ಭಾರತದಲ್ಲಿ ಅತಿ ಹೆಚ್ಚು ನಿರೀಕ್ಷಿತವಾದ Xiaomi ಯ ಮತ್ತೋಂದು ಅಂದ್ರೆ ಸ್ವಾತಂತ್ರವಾಗಿ ತಲೆ ಎತ್ತಿರುವ Redmi Note 7 ಸ್ಮಾರ್ಟ್ಫೋನ್ ಬಗ್ಗೆ ಮಾತನಾಡೋಣ. ಈ ಫೋನಿನ ಹೈ ಲೈಟ್ ಅಂದ್ರೆ ಇದರ 48MP ಕ್ಯಾಮೆರಾ. ಈ ಸ್ಮಾರ್ಟ್ಫೋನ್ ಚೈನಾದಲ್ಲಿ ಈಗಾಗಲೇ  ಬಿಡುಗಡೆಯಾಗಿದೆ ಈಗ ಭಾರತಕ್ಕೆ ಬರುವ ನಿರೀಕ್ಷೆಯಲ್ಲಿದೆ. ಇದರ ಅಲ್ಲಿನ ಬೆಲೆಯನ್ನು ಭಾರತಕ್ಕೆ ಹೋಲಿಸಿ ನೋಡಿದರೆ ಕೇವಲ 10,000 ರೂಗಳು ಮಾತ್ರ. ಹೌದ ಇದು ನಿಜಾನ ಅಂತೀರಾ… ಹೌದು ಸರ್ ನೀವು ಕೇಳಿದ್ದು ಸರಿನೇ. 

ಅಂಶ 1: ಈಗ ನೀವು ನೀವು ತಿಳಿದಿರುವಂತೆ Xiaomi ಕಂಪನಿ Redmi ಈಗ ಸ್ವಾವಲಂಭಿ ಬ್ರಾಂಡ್ ಎಂದು ಘೋಷಿಸಿದ ನಂತರ Redmi Note 7 ಈ ಸಬ್ ಬ್ರಾಂಡಿನ ಮೊಟ್ಟ ಮೊದಲ ಸ್ಮಾರ್ಟ್ಫೋನ್ ಆಗಿದ್ದು ಊಹಿಸಲಾಗದ ಮತ್ತು ಸಾಧ್ಯವಾಗುವ ಮಟ್ಟಿಗೆ ಹೊಸ ಹಾಗು ಹೆಚ್ಚಿನ  ಫೀಚರ್ಗಳನ್ನು ಕಡಿಮೆ ಬೆಲೆಯಲ್ಲಿ ನೀಡುತ್ತಿದೆ.

ಅಂಶ 2: ಈ ಸ್ಮಾರ್ಟ್ಫೋನಿನ ದೊಡ್ಡ ಫೀಚರ್ ಅಂದ್ರೆ 48MP ಕ್ಯಾಮೆರಾ. ಇದು 1.6μm ಮೈಕ್ರಾನ್ ಲಾರ್ಜ್ ಪಿಕ್ಸೆಲ್ನೊಂದಿಗೆ ಫೋರ್ ಇನ್ ಒನ್ ಫೀಚರೊಂದಿಗೆ ಬರುತ್ತದೆ. ಅಂದ್ರೆ ಇದರ 1X ಮತ್ತು 4X ಫೀಚರ್ ನಾಲ್ಕು ಪಿಕ್ಸೆಲ್ಗಳ ರೆಸೊಲ್ಯೂಷನ್ ಅನ್ನು ಒಂದೇ ಪಿಕ್ಸೆಲ್ಗಳ ರೆಸೊಲ್ಯೂಷನ್ ಮಾಡಿ ಆಕರ್ಷಕ ಇಮೇಜ್ಗಳನ್ನು ನೀಡುತ್ತದೆ. 

ಅಂಶ 3: ಈ ಸ್ಮಾರ್ಟ್ಫೋನಿನ 48MP ಕ್ಯಾಮೆರಾದಲ್ಲಿರುವ ಸೆನ್ಸರ್ ಈಗಾಗಲೇ ಕಳೆದ ವರ್ಷದ ಅಕ್ಟೋಬರಲ್ಲಿ ಸ್ಯಾಮ್ಸಂಗ್ ಬಿಡುಗಡೆಗೊಳಿಸಿದ ಸ್ಯಾಮ್ಸಂಗ್ ISOCELL Bright GM1 ಸೆನ್ಸರ್ ತಂತ್ರಜ್ಞಾನವನ್ನು ಅಳವಡಿಸಿದೆ. ಈ ಸೆನ್ಸರ್ Gyro ಆಧಾರಿತವಾಗಿದ್ದು ಎಲೆಕ್ಟ್ರೋ ಇಮೇಜ್ ಸ್ಟಬಿಲೈಝಷನ್ ಫೀಚರೊಂದಿಗೆ ನಿಮಗೆ ಅದ್ದೂರಿಯ ಇಮೇಜ್ಗಳನ್ನು ನೀಡುವಲ್ಲಿ ಯಶಸ್ಸನ್ನು ನೀಡುತ್ತದೆ. ಅಂದ್ರೆ ನಿಮ್ಮ ಇಮೇಜ್ಗಳು ಹೆಚ್ಚು ಶೇಕ್ ಆಗೋದಿಲ್ಲ. 

ಅಂಶ 4: ಇದರ ಹಿಂಭಾಗದಲ್ಲಿ ಡ್ಯೂಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು 48MP + 5MP ಸೆನ್ಸೋರ್ಗಳನ್ನು ಹೊಂದಿದೆ. 48MP ಇದು PDF ಫೇಸ್ ಫೋಕಸಿಂಗ್ f/1.8 ಅಪೆರ್ಚರೊಂದಿಗೆ ಬಂದ್ರೆ ಇದರ 5MP ಇದು f/2.4 ಅಪೆರ್ಚರ್ ಡೆಪ್ತ್ ಸೆನ್ಸರೊಂದಿಗೆ AI ಫೀಚರ್ ಹಾಗು ಪೋಟ್ರೇಟ್ ಮೂಡ್ ಸಪೋರ್ಟ್ ಮಾಡುತ್ತದೆ. 

ಅಂಶ 5: ಇದರ ವಿಡಿಯೋ ಬಗ್ಗೆ ಹೇಳ್ಬೇಕೆಂದರೆ ನೀವು 1080p ಮತ್ತು ಸ್ಲೋ ಮೋಷನ್ ವಿಡಿಯೋಗಳನ್ನು ರೆಕಾರ್ಡ್ ಮಾಡಬವುದು ಆದ್ರೆ ಕೇವಲ 120fps ರೆಸೊಲ್ಯೂಷನ್ ನಲ್ಲಿ ಮಾತ್ರ ಸೆರೆಹಿಡಿಯಬವುದು.

ಅಂಶ 6: ಇದರ ಫ್ರಂಟ್ ಕ್ಯಾಮೆರಾ 13MP ಫೇಸ್ ರೇಕಾಗನೈಝಷನ್ HDR ಜೋತೆಯಲ್ಲಿ ಬರುತ್ತದೆ. ಅಂದ್ರೆ ಇದರ ಸೆಲ್ಫಿ ಕ್ಯಾಮೆರಾದಲ್ಲಿ ನೀವು 1080 X 2340 ಪಿಕ್ಸೆಲ್ ರೆಸೊಲ್ಯೂಷನ್ ಸಪೋರ್ಟ್ ಮಾಡುತ್ತದೆ. ಡೇ ಲೈಟ್ ಲುಕ್ ಸರಿಯಾಗಿದೆ ಆದರೆ ಲೊ ಲೈಟಲ್ಲಿ 10,000 ರೂಗಳೊಳಗಿನ ಫೋನ್ಗಳು ನೀಡುವ ಅನುಭವವನ್ನು ಪಡೆಯುತ್ತಿರ.

ಅಂಶ 7: ಇದರ ಲುಕ್ ಬಗ್ಗೆ ಹೇಳಬೇಕೆಂದರೆ ಇದು ಚೀನಾದಲ್ಲಿ ಒಟ್ಟು ಮೂರೂ ಬಣ್ಣ ಅಂದ್ರೆ ಡ್ರೀಮ್ ಬ್ಲೂ, ಟ್ವಾಲೈಟ್ ಗೋಲ್ಡ್ ಮತ್ತು ಬ್ರೈಟ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ. ಈ ಮೂರು ಬಣ್ಣಗಳು ನಾರ್ಮಲ್ ಅಲ್ಲ ಇದೆಲ್ಲಾ ಗ್ರೇಡಿಯಂಟ್ ಆಗಿದ್ದು ಗೋರಿಲ್ಲಾ ಗ್ಲಾಸ್ ಹೊಂದಿದ್ದು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಇದರಲ್ಲಿ ನಿಮಗೆ ಇಷ್ಟವಾದ ಕಲರ್ ಬಗ್ಗೆ ಕಾಮೆಂಟ್ ಮಾಡಿ ತಿಳಿಸಿ. ಯಾವ ಬಣ್ಣದ ಕಾಮೆಂಟ್ ಜಾಸ್ತಿ ಆಗುತ್ತೋ ಆ ಸ್ಮಾರ್ಟ್ಫೋನ್ ಬಿಡುಗಡೆಯಾದಾಗ ನಿಮ್ಮ ಮುಂದೆ ಲೈವ್ ಆಗಿ ಅನ್ಬಾಕ್ಸಿಂಗ್ ಮಾಡ್ತೀನಿ.

ಅಂಶ 8: ಇದರಲ್ಲಿ ಫಿಂಗರ್ಪ್ರಿಂಟ್ ಸೆನ್ಸರ್ ಫೋನಿನ ಹಿಂಭಾಗದ ಮಧ್ಯ ಭಾಗದಲ್ಲಿದೆ. ಮತ್ತು ಇದರ ಫ್ರಂಟ್ ಕ್ಯಾಮೆರಾದಲ್ಲಿ ನಿಮಗೆ ಫೇಸ್ ಅನ್ಲಾಕ್ ಫೀಚರ್ ಸಹ ನೀಡಲಾಗಿದೆ. 

ಅಂಶ 9: ಇದರ ಡಿಸ್ಪ್ಲೇ ಬಗ್ಗೆ ಹೇಳಬೇಕೆಂದರೆ ಇದು ನಿಮಗೆ 6.3 ಇಂಚಿನ IPS LCD ನಾಚ್ ಡಿಸ್ಪ್ಲೇಯೊಂದಿಗೆ 19:9 ಅಸ್ಪೆಟ್ ರೇಷುವಿನೊಂದಿಗೆ  409ppi ಡೆನ್ಸಿಸಿಟಿಯನ್ನು ನೀಡುತ್ತದೆ. 

ಅಂಶ 10: ಇದರ ಸ್ಕ್ರೀನ್ ಪ್ರೊಟೆಕ್ಷನ್ಗಾಗಿ ಐದನೇ ಜನರೇಷನಿನ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ನೀಡಲಾಗಿದೆ. ಇದು ಫೋನಿನ ಮುಂಭಾಗ ಹಾಗು ಹಿಂಭಾಗ ಎರಡು ಕಡೆ ನೀಡಲಾಗಿದ್ದು 2.5D ಕರ್ವ್ ನೀಡಲಾಗಿದೆ.

ಅಂಶ 11: ಈ ಸ್ಮಾರ್ಟ್ಫೋನ್ ಚೀನಾದಲ್ಲಿ ಒಟ್ಟು ಮೂರು ರೀತಿಯ ವೇರಿಯಂಟ್ಗಳಲ್ಲಿ ಬಿಡುಗಡೆಯಾಗಿದೆ. ಅವೆಂದ್ರೆ 3GB+32GB, 4GB+64GB ಮತ್ತು 6GB+64GB ಸ್ಟೋರೇಜ್ಗಳು. ಇದೇ ರೀತಿಯ ವೇರಿಯಂಟ್ಗಳು ಭಾರತದಲ್ಲಿಯೂ ಬಿಡುಗಡೆಯಾಗುವುದರ ಬಗ್ಗೆ ಕಾದು ನೋಡಬೇಕಿದೆ.

ಅಂಶ 12: ಇದರಲ್ಲಿನ ಸ್ಟೋರೇಜ್ ಬಗ್ಗೆ ಮಾತನಾಡಬೇಕೆಂದರೆ ಇದರ ಮೂರು ವೇರಿಯಂಟ್ಗಳಲ್ಲಿ ಗರಿಷ್ಟ 64GB ಮೇಲೆ ಮೈಕ್ರೋ SD ಕಾರ್ಡ್ ಬಳಸಿ ಸುಮಾರು 265GB ವರೆಗೆ ಇಂಟರ್ನಲ್ ಸ್ಟೋರೇಜ್ ಅನ್ನು ವಿಸ್ತರಿಸಿಕೊಳ್ಳಬವುದು.

ಅಂಶ 13: ಇದರ ಹಾರ್ಡ್ವೇರ್ ಅಂದ್ರೆ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 660 14nm SoCಯೊಂದಿಗೆ ಬರುತ್ತದೆ. ಇದು ಫುಲ್ ಬ್ಲಾಡ್ ವರ್ಸನ್ 2.2 GHz ಸ್ಪೇಡಲ್ಲಿ ನಡೆಯುತ್ತದೆ. ಕಂಪನಿಯ ಪ್ರಕಾರ ಇದ್ರಲ್ಲಿ ಹೆವಿ ಗ್ರಾಫಿಕ್ ಗೇಮ್ಗಳನ್ನು ಅರಮಾಗಿ ಆಡಬವುದೆಂಬ ಭರವಸೆಯನ್ನು ಸಹ ಚೀನಾದಲ್ಲಿ ನೀಡಿದೆ.

ಅಂಶ 14: ಈ ಸ್ಮಾರ್ಟ್ಫೋನಲ್ಲಿ USB ಟೈಪ್ C ಪೋರ್ಟ್ ನೀಡಲಾಗಿದ್ದು ಇದು ರೆಡ್ಮಿಯ ಮೊಟ್ಟ ಮೊದಲ ಸ್ಮಾರ್ಟ್ಫೋನ್ USB ಟೈಪ್ C ಪೋರ್ಟ್ನೊಂದಿಗೆ ಬಂದಿದೆ. 

ಅಂಶ 15: ಇದರ ಬ್ಯಾಟರಿ ಬಗ್ಗೆ ಹೇಳಬೇಕೆಂದರೆ ಇದರಲ್ಲಿ 4000mAH ನೀಡಲಾಗಿದ್ದು ಇದು ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಇದರಲ್ಲಿ ಕ್ವಾಲ್ಕಾಮ್ ಕ್ವಿಕ್ ಚಾರ್ಜಿಂಗ್ ಹೊಂದಿದ್ದು 10W ಚಾರ್ಜಿಂಗ್ ಅಡಾಪ್ಟರ್ ಹೊಂದಿದೆ. ಇದರಿಂದಾಗಿ ಕೇವಲ 1 ಘಂಟೆ 43 ನಿಮಿಷಗಳಲ್ಲಿ ಈ ಫೋನ್ 100% ಬ್ಯಾಟರಿಯನ್ನು ಪೂರ್ತಿ ಮಾಡುವುದಾಗಿ ಹೇಳಲಾಗಿದೆ.

ಅಂಶ 16: ಇದರ ಬ್ಯಾಟರಿ ಯೂಸೇಜ್ ಬಗ್ಗೆ ಹೇಳಬೇಕೆಂದರೆ ಕಂಪನಿಯ ಪ್ರಕಾರ 251h ಘಂಟೆಗಳ ಕಾಲ ಸ್ಟಾಂಡ್ ಬೈ ಟೈಮ್ ನೀಡಿದರೆ 23h ಟಾಕ್ ಟೈಮ್ ಘಂಟೆಗಳ ಕಾಲ ನೀಡುತ್ತದಂತೆ. ಅಲ್ಲದೆ 13h ಘಂಟೆಗಳ ಕಾಲ ನೀವು ವಿಡಿಯೋ ಪ್ಲೇ ಪ್ಯಾಕ್ ಮಾಡಬವುದು ಮತ್ತು ಬರೋಬ್ಬರಿ 7h ಘಂಟೆಗಳ ಕಾಲ ನೀವು ಗೇಮಿಂಗ್ ಆಡಬವುದಂತೆ. 

ಅಂಶ 17:  ಈ ಸ್ಮಾರ್ಟ್ಫೋನಲ್ಲಿ ಇಂಫಾರೇಡ್ ಫೀಚರ್ ಸಹ ನೀಡಲಾಗಿದ್ದು ಇದನ್ನು ನೀವು ಒಂದು ಸಾಮಾನ್ಯ ರಿಮೋಟ್ ನಂತೆ ಬಳಸಬುವುದು. 

ಅಂಶ 18: ಈ ಫೋನ್ ವಾಟರ್ ಪ್ರೊಫ ಇಲ್ವಾ ಅಂತ ಕೇಳ್ತಿರಾ..? ಸ್ನೇಹಿತರೇ ಇದು IP ಸೆರ್ಟಿಫೈಡ್ ಹೊಂದಿಲ್ಲ. ಆದರೂ ಇದನ್ನು ಪೂರ್ಣವಾಗಿ ಸಿಲ್ಡ್ ಮಾಡಲಾಗಿದ್ದು ಇದನ್ನು ಚೀನದಲ್ಲಿ ಫ್ಲಾಶ್ ಪ್ರೂಫ್ ಎನ್ನುತ್ತಾರಂತೆ. ಸಾಮಾನ್ಯವಾಗಿ ಇದರಲ್ಲಿ ಸಣ್ಣ ಪುಟ್ಟ ನೀರಿನ ಹನಿಗಳು ಬಿದ್ದರೆ ಯಾವುದೇ ತೊಂದರೆ ಆಗುವುದಿಲ್ಲ.         

ಅಂಶ 19: ಈ ಸ್ಮಾರ್ಟ್ಫೋನ್ ಮೇಲೆ ರೆಡ್ಮಿಗೆ ಎಲ್ಲಿಲ್ಲದ ಅಪಾರ ಭರವಸೆಯಾಗಿದೆ. ಆದ್ದರಿಂದ ಎಲ್ಲಾ ಫೋನ್ಗಳಂತೆ  ಒಂದು ವರ್ಷದ ಬದಲಾಯಿಗೆ ಒಂದು ವರ್ಷ ಆರು ತಿಂಗಳ ಅಂದ್ರೆ ಖರೀದಿಸ ದಿನಾಂಕದಿನದ ಬರೋಬ್ಬರಿ ಒಂದೂವರೆ ವರ್ಷದ ವಾರಂಟಿಯನ್ನು ನೀಡುತ್ತಿದೆ.

ಅಂಶ 20: ಇದು 2G,3G, 4G VoLTE, 5G WiFi  ಸಪೋರ್ಟ್ ಮಾಡುತ್ತದೆ. ಮತ್ತು ಹೈಬ್ರಿಡ್ ಸಿಮ್ ಸ್ಲಾಟ್ ಹಾಗು 3.5mm ಆಡಿಯೋ ಜಾಕನ್ನು ಹೊಂದಿದೆ.

ಅಂಶ 21: ಇದರ ಬೆಲೆ ಚೀನಾದಲ್ಲಿ ಮೂರೂ ವೇರಿಯಂಟಲ್ಲಿ ಬಿಡುಗಡೆಯಾವೆ. ಇದರ 3GB+32GB ಚೀನದಲ್ಲಿ 999 ಯೊನ್ (ಭಾರತದಲ್ಲಿ 10,481 ರೂಗಳು), ಇದರ 4GB+64GB ಚೀನದಲ್ಲಿ1199 ಯೊನ್ (ಭಾರತದಲ್ಲಿ 12,579 ರೂಗಳು)  ಮತ್ತು ಇದರ  6GB+64GB ಚೀನದಲ್ಲಿ 1399 ಯೊನ್ (ಭಾರತದಲ್ಲಿ 14,677 ರೂಗಳಿಗೆ ಭರಬರಿಯಾಗುತ್ತದೆ.

ಅಂಶ 22: ಈ ಹೊಸ Redmi Note 7 ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗುವ ದಿನಾಂಕ ಇನ್ನು ಅಸ್ಪಷ್ಟವಾಗಿದೆ. ಆದರೆ ಇತ್ತೀಚೆಗೆ ಮನು ಜೈನ್ ಮತ್ತು ಲೀ ಯನ್ ಸೇರಿ ಟ್ವಿಟ್ ಮಾಡಿದ ಮಾಹಿತಿಯ ಪ್ರಕಾರ ಮುಂಬರಲಿರುವ ಈ ಮಾರ್ಚ ತಿಂಗಳಲ್ಲಿ ಈ ಫೋನ್ ಭಾರತದಲ್ಲಿ ಬಿಡುಗಡೆಯನ್ನು ನಿರೀಕ್ಷಿಸಬವುದು.

 

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo