Redmi Note 15 SE ಮೊಬೈಲ್ ಬೆಲೆಯಲ್ಲಿ ಸಖತ್ ಇಳಿಕೆ! ಈ ಆಫರ್ ಮಿಸ್ ಮಾಡ್ಕೋಬೇಡಿ
ರೆಡ್ಮಿ ನೋಟ್ 15 SE ಈಗ ಭಾರೀ ಆಫರ್ ಬೆಲೆಯಲ್ಲಿ ಲಭ್ಯ
ಈ ಸ್ಮಾರ್ಟ್‌ಫೋನ್ 5,800mAh ಬ್ಯಾಟರಿ ಸಪೋರ್ಟ್ ಪಡೆದುಕೊಂಡಿದೆ
ಮೈಕ್ರೊSD ಕಾರ್ಡ್ ಮೂಲಕ 1TB ವರೆಗೆ ಬಾಹ್ಯ ಮೆಮೊರಿ ವಿಸ್ತರಿಸುವ ಆಯ್ಕೆ ಹೊಂದಿದೆ
ರೆಡ್ಮಿ ಕಂಪನಿಯ ಇತ್ತೀಚಿನ Redmi Note 15 SE ಸ್ಮಾರ್ಟ್‌ಫೋನ್ ಖರೀದಿಸಲು ಇದುವೇ ಅತ್ಯುತ್ತಮ ಸಮಯ. ಹೌದು, ಪ್ರಸ್ತುತ ರೆಡ್ಮಿ ನೋಟ್ 15 SE ಮೊಬೈಲ್ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಭರ್ಜರಿ ಬೆಲೆ ಇಳಿಕೆ ಪಡೆದುಕೊಂಡಿದೆ. ಆಸಕ್ತ ಗ್ರಾಹಕರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳು ಹಾಗೂ ಎಕ್ಸ್‌ಚೇಂಜ್ ಆಫರ್ ಮೂಲಕ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಕಂಪನಿಯ ಈ ಮೊಬೈಲ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 6 Gen 3 ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಇನ್ನು ಈ ಮೊಬೈಲ್ ಕಾರ್ಬನ್ ಬ್ಲಾಕ್, ಕ್ರಿಮ್ಸನ್ ರಿಸರ್ವ್ (ರೆಡ್) ಮತ್ತು ಫ್ರಾಸ್ಟೆಡ್ ವೈಟ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ರೆಡ್ಮಿ ನೋಟ್ 15 SE ಸ್ಮಾರ್ಟ್‌ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : ಜಿಯೋ OTT Pass ಪಾಸ್ ಲಾಂಚ್! 200ರೂ.ಗಳ ಯೋಜನೆಯಲ್ಲಿ ಬೊಂಬಾಟ್ ಪ್ರಯೋಜನ
Redmi Note 15 SE ಬೆಲೆಯಲ್ಲಿ ಸಖತ್ ಇಳಿಕೆ
ಈಗಾಗಲೇ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿರುವ ರೆಡ್ಮಿ ನೋಟ್ 15 SE 5G ಮೊಬೈಲ್ ಸದ್ಯ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಭಾರೀ ರಿಯಾಯಿತಿ ಹೊಂದಿದೆ. ಈ ಸ್ಮಾರ್ಟ್‌ಫೋನ್ 6GB + 128GB ಸ್ಟೋರೇಜ್ ವೇರಿಯಂಟ್ ಬೆಲೆ 34,999 ರೂ.ಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್ 22,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್ ಕಾರ್ಬನ್ ಬ್ಲಾಕ್, ಕ್ರಿಮ್ಸನ್ ರಿಸರ್ವ್ (ರೆಡ್) ಮತ್ತು ಫ್ರಾಸ್ಟೆಡ್ ವೈಟ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ.

ರೆಡ್ಮಿ ನೋಟ್ 15 SE ಫೋನ್ ಫೀಚರ್ಸ್
ರೆಡ್ಮಿ ನೋಟ್ 15 SE ಸ್ಮಾರ್ಟ್‌ಫೋನ್ 6.77 ಇಂಚಿನ ಕರ್ವ್ಡ್ AMOLED ಡಿಸ್‌ಪ್ಲೇ ಅನ್ನು ಪಡೆದಿರುವ ಜೊತೆಗೆ ಇದರ ಸ್ಕ್ರೀನ್ 120Hz ವರೆಗೆ ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಇದರ ಡಿಸ್‌ಪ್ಲೇಯು 3,200 nits ಪೀಕ್ ಬ್ರೈಟ್ನೆಸ್ ಬೆಂಬಲಿತ 1,080×2,392 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದರ ಜೊತೆಗೆ ಈ ಮೊಬೈಲ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 6 Gen 3 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಪಡೆದುಕೊಂಡಿದೆ.
ಹಾಗೆಯೇ ರೆಡ್ಮಿ ನೋಟ್ 15 SE 5G ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿವೆ. ಇದರ ಮೊದಲ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸರ್ ಸಾಮರ್ಥ್ಯದಲ್ಲಿ ಇದೆ ಹಾಗೆಯೇ ಸೆಕೆಂಡರಿ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ರಚನೆ ಪಡೆದಿದೆ. ಇನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಈ ಮೊಬೈಲ್ 20 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್ 5,800mAh ಬ್ಯಾಟರಿ ಬ್ಯಾಕ್‌ಅಪ್ ಜೊತೆಗೆ 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಹೊಂದಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
