ಜಿಯೋ OTT Pass ಲಾಂಚ್! 200ರೂ.ಗಳ ಯೋಜನೆಯಲ್ಲಿ ಬೊಂಬಾಟ್‌ ಪ್ರಯೋಜನ

HIGHLIGHTS

ಜಿಯೋ ಕಂಪನಿಯಿಂದ ಹೊಸದಾಗಿ OTT Pass ಪಾಸ್ ಪ್ಲಾನ್‌ ಬಿಡುಗಡೆ

ಜಿಯೋದ ಈ ರೀಚಾರ್ಜ್‌ ಪ್ಲಾನ್‌ನಲ್ಲಿ 30GB ಹೈ ಸ್ಪೀಡ್ ಡೇಟಾ ಲಭ್ಯ

ಈ ಪ್ಲಾನ್ ಮೈ ಜಿಯೋ ಆಪ್‌, ರಿಟೇಲ್ ಸ್ಟೋರ್‌ ಮೂಲಕ ರೀಚಾರ್ಜ್ ಮಾಡಿಸಬಹುದು

ಜಿಯೋ OTT Pass ಲಾಂಚ್! 200ರೂ.ಗಳ ಯೋಜನೆಯಲ್ಲಿ ಬೊಂಬಾಟ್‌ ಪ್ರಯೋಜನ

ದೇಶೀಯ ಟೆಲಿಕಾಂ ವಲಯದಲ್ಲಿ ಲೀಡಿಂಗ್ ಕಂಪನಿ ಎಂದೇ ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ ಇದೀಗ ಹೊಸದಾಗಿ ಜಿಯೋ OTT Pass ಯೋಜನೆಯನ್ನು ಬಿಡುಗಡೆ ಮಾಡಿದೆ. ಜಿಯೋ ಕಂಪನಿಯ ಈ ಹೊಸ ಯೋಜನೆಯು ಆಲ್-ಇನ್-ಒನ್ ಮನರಂಜನೆ ಮತ್ತು ಕನೆಕ್ಷನ್‌ ಪೂರಕವಾಗಿದೆ. ಈ ಯೋಜನೆಯು ಅಲ್ಪಾವಧಿ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದರೂ, ಜನಪ್ರಿಯ ಓಟಿಟಿ ಚಂದಾದಾರಿಕೆಯ ಸೌಲಭ್ಯ, ಮೊಬೈಲ್‌ ಡೇಟಾ ಹಾಗೂ ಲೈವ್ ಟೆಲಿವಿಷನ್ ಆಯ್ಕೆಗಳನ್ನು ಪಡೆದುಕೊಂಡಿದೆ. ಅಂದಹಾಗೆ ಈ ಯೋಜನೆಯ ಸೇವೆಗಳು ತಿಂಗಳಿಗೆ ಸುಮಾರು 1,500 ರೂ. ಮೌಲ್ಯದ್ದಾಗಿವೆ ಎಂದು ಕಂಪನಿ ಹೇಳಿಕೊಂಡಿದೆ. ಹಾಗಾದರೇ ಜಿಯೋ ಟೆಲಿಕಾಂನ ಹೊಸ ಜಿಯೋ ಓಟಿಟಿ ಪಾಸ್‌ ಯೋಜನೆಯ ಪ್ರಯೋಜನಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Motorola Edge 60 Pro ಮೊಬೈಲ್‌ ಖರೀದಿ ಮಾಡಲು ಇದುವೇ ಬೆಸ್ಟ್‌ ಟೈಮ್‌! 6,000mAh ಬ್ಯಾಟರಿ

ಜಿಯೋ OTT Pass ಪ್ರಯೋಜನಗಳು

ಜಿಯೋ ಕಂಪನಿಯು ನೂತನವಾಗಿ ಜಿಯೋ OTT Pass ಯೋಜನೆಯನ್ನು ಲಾಂಚ್ ಮಾಡಿದೆ. ಈ ಯೋಜನೆಯ ಬೆಲೆ 200 ರೂ.ಗಳು ಆಗಿದೆ. ಇನ್ನು ಈ ಪ್ಲಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಈ ಯೋಜನೆಯಲ್ಲಿ 28 ದಿನಗಳ ಮಾನ್ಯತೆಗೆ OTT ಪ್ರಯೋಜನಗಳು, ಲೈವ್ ಟೆಲಿವಿಷನ್ ಮತ್ತು ಮೊಬೈಲ್ ಡೇಟಾ ದೊರೆಯುತ್ತದೆ. ಈ ಯೋಜನೆಯಲ್ಲಿ ಬಳಕೆದಾರರು 15 ಪ್ರೀಮಿಯಂ OTT ಪ್ಲಾಟ್‌ಫಾರ್ಮ್‌ಗಳಿಗೆ ಆಕ್ಸಸ್‌, 1,000 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು, 30GB ಹೈ ಸ್ಪೀಡ್ ಡೇಟಾ ಸೌಲಭ್ಯ ದೊರೆಯುತ್ತದೆ.

Jio OTT Pass

ಓಟಿಟಿ ಪಾಸ್‌ ರೀಚಾರ್ಜ್ ಮಾಹಿತಿ

ಜಿಯೋ ಟೆಲಿಕಾಂ ಕಂಪನಿಯ ಹೊಸ ಜಿಯೋ ಓಟಿಟಿ ಪಾಸ್‌ ಯೋನೆಯ ರೀಚಾರ್ಜ್‌ ಬೆಲೆ 200 ರೂ.ಗಳು ಆಗಿದೆ. ಅಂದಹಾಗೆ ಈ ಯೋಜನೆಯು 28 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಈ ಪ್ಲಾನ್‌ ಈಗ ಭಾರತದ ಎಲ್ಲಾ ಟೆಲಿಕಾಂ ವಲಯಗಳಲ್ಲಿ MyJio ಆಪ್‌, Jio.com, ರಿಟೇಲ್‌ ಸ್ಟೋರ್‌ಗಳು ಮತ್ತು ಥರ್ಡ್‌ ಪಾರ್ಟಿ ರೀಚಾರ್ಜ್ ಪ್ಲಾಟ್‌ಫಾರ್ಮ್‌ಗಳ ಮೂಲಕ ರೀಚಾರ್ಜ್‌ಗೆ ಲಭ್ಯವಿರುತ್ತದೆ.

OTT ತಾಣಗಳ ಮಾಹಿತಿ

ಜಿಯೋ ಓಟಿಟಿ ಪಾಸ್ ಯೋಜನೆಯು ಸುಮಾರು 15 ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆ ಸೌಲಭ್ಯವನ್ನು ಒಳಗೊಂಡಿದೆ. ಬಳಕೆದಾರರು JioHotstar ಮೊಬೈಲ್ + ಹಾಲಿವುಡ್ ಮತ್ತು ಪ್ರೈಮ್ ವಿಡಿಯೋ ಮೊಬೈಲ್ ಆಕ್ಸಸ್‌ ಪ್ರವೇಶವನ್ನು ಪಡೆಯುತ್ತಾರೆ. ಅಲ್ಲದೇ ಬಳಕೆದಾರರು ಜಿಯೋ ಟಿವಿ ಮೂಲಕ ಇನ್ನೂ 12 ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ವೀಕ್ಷಿಣೆ ಮಾಡಬಹುದಾಗಿದೆ. ಆ ಪೈಕಿ ಸೋನಿ ಲೈವ್‌, ಜೀ5, ಲಯನ್ಸ್‌ಗೇಟ್ ಪ್ಲೇ, ಡಿಸ್ಕವರಿ+, ಸನ್ NXT, ಫ್ಯಾನ್‌ಕೋಡ್, Kanccha Lannka, Planet Marathi, Chaupal, Hoichoi, TimesPlay ಮತ್ತು ತರಂಗ್ ಪ್ಲಸ್ ಸಹ ಸೇರಿವೆ. ಅಲ್ಲದೇ ವಿಶೇಷ ಅಂದ್ರೆ ಇದು YouTube ಪ್ರೀಮಿಯಂ ಚಂದಾದಾರಿಕೆ ಸಹ ಪಡೆದುಕೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile