[the_ad id='493801']
[the_ad id='487675']

ದೇಶಿಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ Redmi Note 15 Pro 5G ಸರಣಿ; ಲಾಂಚ್ ಯಾವಾಗ ಇಲ್ಲಿದೆ ಮಾಹಿತಿ

HIGHLIGHTS

ಕಂಪನಿಯು Redmi Note 15 Pro ಸರಣಿಯನ್ನು ಜನವರಿ 29 ರಂದು ದೇಶಿಯ ಮಾರುಕಟ್ಟೆಗೆ ಲಾಂಚ್ ಮಾಡಲಿದೆ

Redmi Note 15 Pro ಸರಣಿಯು Snapdragon 7 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಒಳಗೊಂಡಿರಲಿದೆ

[the_ad id="923932"]
ದೇಶಿಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ Redmi Note 15 Pro 5G ಸರಣಿ; ಲಾಂಚ್ ಯಾವಾಗ ಇಲ್ಲಿದೆ ಮಾಹಿತಿ

ಜನಪ್ರಿಯ Redmi ಸಂಸ್ಥೆಯ Note ಸರಣಿಯ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಡಿಮ್ಯಾಂಡ್‌ ಪಡೆದಿವೆ. ಅದರ ಮುಂದುವರಿದ ಭಾಗವಾಗಿ Redmi Note 15 Pro ಸರಣಿಯನ್ನು ಜನವರಿ 29 ರಂದು ದೇಶಿಯ ಮಾರುಕಟ್ಟೆಗೆ ಲಾಂಚ್ ಮಾಡಲಾಗುವುದು ಎಂದು ಕಂಪನಿಯು ಘೋಷಿಸಿದೆ. ಈ ಫೋನ್‌ಗಾಗಿ ಮೈಕ್ರೋಸೈಟ್‌ ಸಹ ಈಗ ಲೈವ್ ಮಾಡಲಾಗಿದೆ. ಇನ್ನು ಈ ನೂತನ ಸರಣಿಯು Snapdragon 7 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಒಳಗೊಂಡಿರಲಿದೆ. ಹಾಗೆಯೇ ಹಿಂಭಾಗದಲ್ಲಿ 200 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇರುವ ಕುರಿತು ಟೀಸ್ ಮಾಡಲಾಗಿದೆ. ಹಾಗಾದರೇ ಈ ಫೋನಿನ ನಿರೀಕ್ಷಿತ ಫೀಚರ್ಸ್‌, ಬಿಡುಗಡೆ ಕುರಿತ ಮಾಹಿತಿ ಬಗ್ಗೆ ಮುಂದೆ ನೋಡೋಣ.

Digit.in Survey
✅ Thank you for completing the survey!

Also Read : Airtel ಬೊಂಬಾಟ್‌ ಪ್ಲಾನ್‌! ಒಂದೇ ರೀಚಾರ್ಜ್‌ನಲ್ಲಿ ಎರಡು ಲಾಭ ಪಡೆಯಲು ಈ ಯೋಜನೆ ಅತ್ಯುತ್ತಮ

Redmi Note 15 Pro 5G ಸ್ಮಾರ್ಟ್‌ಫೋನ್‌ ಯಾವಾಗ ಬಿಡುಗಡೆ ಆಗಲಿದೆ

Xiaomi ಕಂಪನಿಯ ಸಬ್‌ ಬ್ರ್ಯಾಂಡ್‌ ಆಗಿರುವ ರೆಡ್ಮಿ ಪರಿಚಯಿಸುತ್ತಿರುವ ಹೊಸ Redmi Note 15 Pro ಸರಣಿಯು ಇದೇ ಜನವರಿ 29 ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಇನ್ನು ಈ ಫೋನ್‌ Xiaomi ಇಂಡಿಯಾ ಆನ್‌ಲೈನ್ ಸ್ಟೋರ್ ಮೂಲಕ ದೇಶದಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಅಲ್ಲದೇ Redmi Note 15 Pro ಫೋನ್ ಸರಣಿಗಾಗಿ ವಿಶೇಷ ಮೈಕ್ರೋಸೈಟ್ ಅನ್ನು Live ಮಾಡಿದೆ. ಅಂದಹಾಗೆ ಈ ಸರಣಿಯ ಫೋನ್‌ಗಳನ್ನು ಬ್ರೌನ್‌, ಗೋಲ್ಡನ್ ಫ್ರೇಮ್‌ ಮತ್ತು ಗ್ರೇ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

Redmi Note 15 Pro 5G: 200MP ಕ್ಯಾಮೆರಾ ಸೆಟ್‌ಅಪ್‌

ರೆಡ್ಮಿ ಸಂಸ್ಥೆಯ ನೂತನ Redmi Note 15 Pro ಸರಣಿಯ ಪ್ರಮುಖ ಹೈಲೈಟ್ಸ್‌ಗಳಲ್ಲಿ ಕ್ಯಾಮೆರಾ ಒಂದಾಗಿದೆ. ಈ ಸರಣಿಯು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಸೌಲಭ್ಯ ಇರಲಿದೆ. ಹಾಗೆಯೇ HDR + AI ಇಮೇಜ್ ಎಂಜಿನ್ ಒಳಗೊಂಡಿರುವ 200 ಮೆಗಾಪಿಕ್ಸೆಲ್ MasterPixel ಕ್ಯಾಮೆರಾವನ್ನು ಹಿಂಭಾಗದಲ್ಲಿ ಹೊಂದುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಹಾಗೆಯೇ ಈ ಸರಣಿಯ ಫೋನ್‌ಗಳು 4K ವೀಡಿಯೊ ರೆಕಾರ್ಡ್ ಮಾಡುವ ಸಾಮರ್ಥ್ಯ ಒಳಗೊಂಡಿರಲಿವೆ ಎಂದು ಸಂಸ್ಥೆಯು ಖಚಿತಪಡಿಸಿದೆ.

Redmi Note 15 Pro 5G ಫೋನಿನ ಇತರೆ ಫೀಚರ್ಸ್ ಮಾಹಿತಿ

Redmi Note 15 Pro 5G ಸರಣಿಯ ಫೋನ್‌ಗಳು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಪಡೆದಿರುವ ಡಿಸ್‌ಪ್ಲೇ ವ್ಯವಸ್ಥೆ ಹೊಂದಿರಲಿವೆ. ಅಲ್ಲದೇ ಆ ಡಿಸ್‌ಪ್ಲೇಗಳು IP66 + IP68 + IP69 + IP69K ಧೂಳು ಮತ್ತು ನೀರಿನ ನಿರೋಧಕ ರೇಟಿಂಗ್‌ ಆಯ್ಕೆಗಳನ್ನು ಸಹ ಪಡೆದಿರಲಿವೆ. ಹಾಗೆಯೇ ಈ ಸರಣಿಯ Redmi Note 15 Pro ಮಾಡೆಲ್‌ ಫೋನ್‌ 6500mAh ಸಿಲಿಕಾನ್ ಕಾರ್ಬನ್ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿರಲಿದೆ. ಇದಕ್ಕೆ ಪೂರಕವಾಗಿ ಈ ಸರಣಿಯು 100W ಹೈಪರ್‌ಚಾರ್ಜ್ ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 22.5W ವೈರ್ಡ್ ರಿವರ್ಸ್ ಚಾರ್ಜಿಂಗ್ ಬೆಂಬಲವನ್ನು ಸಹ ಪಡೆದಿರುತ್ತದೆ.

Redmi Note 15 Pro 5G ಸರಣಿಯನ್ನು ಕ್ವಾಲ್ಕಾಮ್‌ನ Snapdragon 7 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಜೊತೆಗೆ ಎಂಟ್ರಿ ಕೊಡಲಿದ್ದು ಇದನ್ನು 4nm ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ. ಹಾಗೆಯೇ ಈ ಸರಣಿಯು 12GB RAM ಆಯ್ಕೆ ಪಡೆದಿರಲಿದೆ ಎಂದು ಹೇಳಲಾಗಿದೆ. ಹೀಟ್ ನಿಯಂತ್ರಿಸಲು ಫೋನ್‌ಗಳು ಐಸ್‌ಲೂಪ್ ಕೂಲಿಂಗ್ ಸಿಸ್ಟಮ್‌ ಸೌಲಭ್ಯ ಪಡೆದಿರಲಿವೆ ಎನ್ನಲಾಗಿದೆ.

Manthesh B
[the_ad id="455319"]
[the_ad id="455285"]
Digit.in
Logo
Digit.in
Logo