Realme-OPPO Merge: ರಿಯಲ್‌ಮಿ ಈಗ ಒಪ್ಪೋ ಕಂಪನಿಯಲ್ಲಿ ಸಬ್‌ಬ್ರಾಂಡ್‌ ಆಗಿ ಸೇರ್ಪಡೆಯಾಗಲಿದೆ!

HIGHLIGHTS

OPPO ಜೊತೆಗೆ ರಿಯಲ್‌ಮಿ ವಿಲೀನಗೊಂಡು ಸಬ್‌ಬ್ರಾಂಡ್‌ ಆಗಿ ಸೇರ್ಪಡೆಯಾಗಲಿದೆ.

Realme GT Neo 8 ನಂತಹ ಹೊಸ ಮಾದರಿಗಳನ್ನು ಮಾರುಕಟ್ಟೆಗೆ ತರುವುದನ್ನು ಮುಂದುವರಿಸಲಿದೆ.

ಮಾತೃ ಸಂಸ್ಥೆಯಾದ BBK Electronics ಮೊಬೈಲ್ ಮಾರುಕಟ್ಟೆಯಲ್ಲಿನ ತೀವ್ರ ಸ್ಪರ್ಧೆಯನ್ನು ಎದುರಿಸಲು ಈ ನಿರ್ಧಾರ ಕೈಗೊಂಡಿದೆ.

Realme-OPPO Merge: ರಿಯಲ್‌ಮಿ ಈಗ ಒಪ್ಪೋ ಕಂಪನಿಯಲ್ಲಿ ಸಬ್‌ಬ್ರಾಂಡ್‌ ಆಗಿ ಸೇರ್ಪಡೆಯಾಗಲಿದೆ!

Realme-OPPO Merge: ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಯಾದ ರಿಯಲ್‌ಮಿ ಬುಧವಾರದಂದು 7ನೇ ಜನವರಿ 2026 ಚೀನಾದ ಮತ್ತೊಂದು ಪ್ರಮುಖ ಎಲೆಕ್ಟ್ರಾನಿಕ್ಸ್ ಕಂಪನಿಯಾದ Oppo ಜೊತೆಗೆ ವಿಲೀನಗೊಂಡು ಅದರ ಒಂದು ಸಬ್-ಬ್ರ್ಯಾಂಡ್ (Sub-brand) ಆಗಿ ಕಾರ್ಯನಿರ್ವಹಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ಈ ಎರಡೂ ಕಂಪನಿಗಳ ಮಾತೃ ಸಂಸ್ಥೆಯಾದ BBK Electronics ಮೊಬೈಲ್ ಮಾರುಕಟ್ಟೆಯಲ್ಲಿನ ತೀವ್ರ ಸ್ಪರ್ಧೆಯನ್ನು ಎದುರಿಸಲು ಈ ನಿರ್ಧಾರ ಕೈಗೊಂಡಿದೆ. ಮೊದಲು 2018 ರಲ್ಲಿ ಒಪ್ಪೋದಿಂದಲೇ ಬೇರ್ಪಟ್ಟು ಸ್ವತಂತ್ರ ಕಂಪನಿಯಾಗಿ ಹೊರಹೊಮ್ಮಿದ್ದ ರಿಯಲ್‌ಮಿ ಈಗ ಮತ್ತೆ ಒಪ್ಪೋ ಕುಟುಂಬಕ್ಕೆ ಮರಳಿದಂತಾಗಿದೆ.

Digit.in Survey
✅ Thank you for completing the survey!

ಈ ಬದಲಾವಣೆಯ ಹೊರತಾಗಿಯೂ ರಿಯಲ್‌ಮಿ ತನ್ನ ಮುಂಬರುವ ಫೋನ್‌ಗಳಾದ Realme GT Neo 8 ನಂತಹ ಹೊಸ ಮಾದರಿಗಳನ್ನು ಮಾರುಕಟ್ಟೆಗೆ ತರುವುದನ್ನು ಮುಂದುವರಿಸಲಿದೆ. ಮುಖ್ಯವಾಗಿ ಯುವಜನತೆಯನ್ನು ಮತ್ತು ಬಜೆಟ್ ದರದ ಫೋನ್‌ಗಳನ್ನು ಇಷ್ಟಪಡುವ ಗ್ರಾಹಕರನ್ನು ರಿಯಲ್‌ಮಿ ಎಂದಿನಂತೆ ಗಮನದಲ್ಲಿರಿಸಿಕೊಳ್ಳಲಿದೆ.

Also Read: BSNL ₹1 Offer: ಬಿಎಸ್ಎನ್ಎಲ್ ಸೇರಲು ಬಯಸುವ ಹೊಸ ಗ್ರಾಹಕರಿಗೆ ಮಾತ್ರ ಈ ಲಿಮಿಟೆಡ್ ಟೈಮ್ ಆಫರ್ ಲಭ್ಯ!

Realme-OPPO Merge: ಕಾರ್ಯತಂತ್ರದ ಏಕೀಕರಣ:

ಈ ವಿಲೀನದ ಹಿಂದಿನ ಮುಖ್ಯ ಉದ್ದೇಶವೆಂದರೆ ಕಂಪನಿಯ ಕೆಲಸದ ದಕ್ಷತೆಯನ್ನು ಹೆಚ್ಚಿಸುವುದು ಮತ್ತು ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡುವುದು. Realme ಮತ್ತು OnePlus ಎರಡನ್ನೂ ಒಪ್ಪೋ ಅಡಿಯಲ್ಲಿ ತರುವ ಮೂಲಕ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಮಾರುಕಟ್ಟೆ ತಂತ್ರಗಳಿಗಾಗಿ ವ್ಯಯವಾಗುವ ಹಣವನ್ನು ಉಳಿಸಲು BBK ಎಲೆಕ್ಟ್ರಾನಿಕ್ಸ್ ಯೋಜಿಸಿದೆ. ಇದರಿಂದ ರಿಯಲ್‌ಮಿಗೆ ಒಪ್ಪೋದ ದೊಡ್ಡ ಉತ್ಪಾದನಾ ಘಟಕಗಳು ಮತ್ತು ಸುಧಾರಿತ ತಂತ್ರಜ್ಞಾನದ ಲಾಭ ಸಿಗಲಿದೆ. ಪ್ರಸ್ತುತ ಮೊಬೈಲ್ ಚಿಪ್‌ಗಳು ಮತ್ತು ಡಿಸ್‌ಪ್ಲೇ ಪ್ಯಾನೆಲ್‌ಗಳ ಬೆಲೆ ಏರಿಕೆಯಾಗುತ್ತಿರುವುದರಿಂದ ಈ ಒಕ್ಕೂಟವು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Realme-OPPO Merge

ಹಂಚಿಕೆಯ ಸೌಲಭ್ಯಗಳ ಮೂಲಕ ಗ್ರಾಹಕರಿಗೆ ಉತ್ತಮ ಅನುಭವ:

ಈ ಹೊಸ ವ್ಯವಸ್ಥೆಯಲ್ಲಿ ಒಪ್ಪೋ ಮುಖ್ಯ ಬ್ರ್ಯಾಂಡ್ ಆಗಿ ಕಾರ್ಯನಿರ್ವಹಿಸಿದರೆ ರಿಯಲ್‌ಮಿ ಕಡಿಮೆ ಬೆಲೆಯ ಫೋನ್‌ಗಳ ಮೇಲೆ ಮತ್ತು ಒನ್‌ಪ್ಲಸ್ ಪ್ರೀಮಿಯಂ ಫೋನ್‌ಗಳ ಮೇಲೆ ಗಮನಹರಿಸಲಿವೆ. ಈ ವಿಲೀನದಿಂದ ಗ್ರಾಹಕರಿಗೆ ಸಿಗುವ ಪ್ರಮುಖ ಲಾಭವೆಂದರೆ ಸರ್ವಿಸ್ ಸೆಂಟರ್‌ಗಳ ಸುಲಭ ಲಭ್ಯತೆ. ರಿಯಲ್‌ಮಿ ಗ್ರಾಹಕರು ಇನ್ಮುಂದೆ ಒಪ್ಪೋದ ಬೃಹತ್ ಸರ್ವಿಸ್ ನೆಟ್‌ವರ್ಕ್ ಬಳಸಿಕೊಳ್ಳಬಹುದು ಇದರಿಂದ ಫೋನ್ ರಿಪೇರಿ ಮತ್ತು ತಾಂತ್ರಿಕ ಸಹಾಯ ಸುಲಭವಾಗಲಿದೆ.

ಸಾಫ್ಟ್‌ವೇರ್ ವಿಚಾರಕ್ಕೆ ಬಂದರೆ ಒಪ್ಪೋದ ColorOS ತಂತ್ರಜ್ಞಾನದ ಆಧಾರದ ಮೇಲೆ ರಿಯಲ್‌ಮಿ ಫೋನ್‌ಗಳು ಇನ್ನಷ್ಟು ಉತ್ತಮ ಅಪ್‌ಡೇಟ್‌ಗಳನ್ನು ಪಡೆಯಲಿವೆ. ಇದು ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡದಿದ್ದರೂ ಫೋನ್‌ಗಳ ಗುಣಮಟ್ಟ, ಸಾಫ್ಟ್‌ವೇರ್ ಸ್ಥಿರತೆ ಮತ್ತು ಕಡಿಮೆ ಬೆಲೆಯಲ್ಲಿ ಉತ್ತಮ ಫೋನ್‌ಗಳು ಸಿಗುವಂತೆ ಮಾಡುತ್ತದೆ. ಒಟ್ಟಾರೆಯಾಗಿ ಈ ಬದಲಾವಣೆಯು ಕಂಪನಿಯ ಬೆಳವಣಿಗೆಗೆ ಮತ್ತು ಗ್ರಾಹಕರ ತಾಂತ್ರಿಕ ಅನುಭವವನ್ನು ಸುಧಾರಿಸಲು ಪೂರಕವಾಗಲಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo