Realme 6i ಸ್ಮಾರ್ಟ್ಫೋನ್ 48MP ಕ್ವಾಡ್ ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ ಪ್ರಾರಂಭಿಸಿದೆ

Realme 6i ಸ್ಮಾರ್ಟ್ಫೋನ್ 48MP ಕ್ವಾಡ್ ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ ಪ್ರಾರಂಭಿಸಿದೆ
HIGHLIGHTS

Realme 6i ಒಂದು 48MP ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಸಹ ಹೊಂದಿದೆ

ಈಗ ರಿಯಲ್ಮೆ ತನ್ನ ಮತ್ತೊಂದು ಹೊಸ ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಿದೆ. ಈ Realme 6i ಸ್ಮಾರ್ಟ್ಫೋನ್ ಮ್ಯಾನ್ಮಾರ್‌ನಲ್ಲಿ ನಡೆದ ರಿಯಲ್ಮೆ ಸರಣಿಯ ಮೂರನೇ ಸದಸ್ಯನಾಗಿ ಅನಾವರಣಗೊಳಿಸಿದೆ. ಪ್ರಾರಂಭಿಸಲಾಯಿತು. ಇದರ ಹಿಂಭಾಗದಲ್ಲಿ ಮೂರು ಸೆನ್ಸರ್ಗಳನ್ನು ನೀಡಿದ್ದು ಅದರಲ್ಲಿ ಒಂದು 48MP ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಸಹ ಹೊಂದಿದೆ. ಈ ಸ್ಮಾರ್ಟ್ಫೋನ್ ಅನ್ನು ಬರ್ಮೀಸ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದ್ದು ಈ ಸ್ಮಾರ್ಟ್ಫೋನ್ ಭಾರತಕ್ಕೆ ಯಾವಾಗ ಬರುತ್ತೇ ಮತ್ತು ಯಾವ ಯಾವ ವೆರಿಯಂಟ್ಗಳಲ್ಲಿ ಬರುತ್ತೇ ಮತ್ತು ಯಾವ ಬೆಲೆಯಲ್ಲಿ ಬರುತ್ತದೆ ಅನ್ನುವುದರ ಬಗ್ಗೆ ಯಾವುದೇ ಮಾಹಿತಿಗಳನ್ನು ಕಂಪನಿ ನೀಡಿಲ್ಲ.

Realme 6i ಸ್ಪೆಸಿಫಿಕೇಷನ್ 

ಇದು 6.5 ಇಂಚಿನ HD+ ಮಿನಿಡ್ರಾಪ್ ಡಿಸ್ಪ್ಲೇಯನ್ನು ಹೊಂದಿದ್ದು ಮೇಲ್ಭಾಗದಲ್ಲಿ ನಾಚ್ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ನಿಂದ ರಕ್ಷಿಸಲ್ಪಟ್ಟಿದೆ. 3GB ಮತ್ತು 4GB ಯ RAM ಆಯ್ಕೆಗಳೊಂದಿಗೆ ಜೋಡಿಯಾಗಿರುವ ಈ ಸ್ಮಾರ್ಟ್‌ಫೋನ್ ಅನ್ನು ಆಕ್ಟಾ-ಕೋರ್ #MediaTek HelioG80 ಪ್ರೊಸೆಸರ್ ಹೊಂದಿದ್ದು ಈ ಫೋನ್ ಆಂಡ್ರಾಯ್ಡ್ 10 ಅನ್ನು ಚಾಲನೆ ಮಾಡುತ್ತದೆ. ಇದರ ಕ್ರಮವಾಗಿ ಫೋನ್ 64GB ಮತ್ತು 128GB ಸ್ಟೋರೇಜ್ಗಳಲ್ಲಿ ಲಭ್ಯವಿದೆ. ಅಲ್ಲದೆ ಇದು ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ ವಿಸ್ತರಿಸಬಹುದಾಗಿದೆ. ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಜೋಡಿಸಲಾದ ಫಿಂಗರ್ಪ್ರಿಂಟ್ ಸೆನ್ಸರ್ ನೀಡಲಾಗಿದೆ.

ಇದರ ಪ್ರೈಮರಿ 48MP ಮೆಗಾಪಿಕ್ಸೆಲ್ ಕ್ಯಾಮೆರಾ f/ 2.3 ಅಪರ್ಚರ್ ಜೊತೆಗೆ ಎರಡನೇಯದು 8MP ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿದ್ದು ಮೂರನೇಯದಾಗಿ 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಒಳಗೊಂಡಿದೆ. ಅಲ್ಲದೆ ಈ ಫೋನ್ 5000mAh ಬ್ಯಾಟರಿಯಿಂದ ಬೆಂಬಲಿಸಲಾಗುತ್ತದೆ. ಈ ಸ್ಮಾರ್ಟ್ಫೋನ್ 18W ಕ್ವಿಕ್ ಚಾರ್ಜ್ ತಂತ್ರಜ್ಞಾನವನ್ನು ಸಹ ಬೆಂಬಲಿಸುತ್ತದೆ. ಇದು 10W ಫಾಸ್ಟ್ ಚಾರ್ಜಿಂಗ್ಗಿಂತ ಶೇಕಡಾ 37% ರಷ್ಟು ವೇಗವಾಗಿರುತ್ತದೆ. ಈ Realme 6i ಯಲ್ಲಿ ಕಂಪನಿಯು 30 ದಿನಗಳ ಸ್ಟ್ಯಾಂಡ್‌ಬೈ ಪಡೆಯುತ್ತಿದೆ. ಫೋನ್‌ನಲ್ಲಿ USB ಟೈಪ್ ಸಿ ಪೋರ್ಟ್ ನೀಡಲಾಗಿದೆ. 

Realme 6i ಬೆಲೆ

ಈ ಸ್ಮಾರ್ಟ್ಫೋನ್ ಮ್ಯಾನ್ಮಾರ್‌ನಲ್ಲಿ 3GB ಯ RAM ಮತ್ತು 64GB ಸ್ಟೋರೇಜ್ ಹೊಂದಿರುವ ಬೇಸ್ ರೂಪಾಂತರಕ್ಕೆ KS 2,49,900 (ಭಾರತದಲ್ಲಿ 13,000 ರೂಗಳು) ಗೆ ನಿಗದಿಪಡಿಸಲಾಗಿದೆ. ಇದರ ಟಾಪ್ ರೂಪಾಂತರ 4GB RAM ಮತ್ತು 128GB ಸ್ಟೋರೇಜ್ ಹೊಂದಿರುವ ರೂಪಾಂತರಕ್ಕೆ KS 299,900 (ಭಾರತದಲ್ಲಿ 15,800 ರೂಗಳು). Realme 6i ಗ್ರೀನ್ ಟೀ ಮತ್ತು ವೈಟ್ ಮಿಲ್ಕ್ ಬಣ್ಣಗಳಲ್ಲಿ ಬರುತ್ತದೆ. ರಿಯಲ್ಮೆ 6i ಯ ಮೊದಲ ಮಾರಾಟ ಮಾರ್ಚ್ 29 ರಂದು ಮ್ಯಾನ್ಮಾರ್‌ನಲ್ಲಿ ಪ್ರಾರಂಭವಾಗುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo