Realme 13 Series ಭಾರತದಲ್ಲಿ ಬಿಡುಗಡೆಗೆ ಡೇಟ್ ಫಿಕ್ಸ್! ನಿರೀಕ್ಷಿತ ಬೆಲೆ ಮತ್ತು ಫೀಚರ್‌ಗಳೇನು ತಿಳಿಯಿರಿ
Realme 13 Series ಸ್ಮಾರ್ಟ್‌ಫೋನ್‌ಗಳನ್ನು 29ನೇ ಆಗಸ್ಟ್ 2024 ರಂದು ಭಾರತೀಯ ಮಾರುಕಟ್ಟೆಗೆ ಬರುವುದು ಖಚಿತಪಡಿಸಿದೆ.
Realme 13 Series ಒಟ್ಟಾರೆಯಾಗಿ ಎರಡು ವೇರಿಯೆಂಟ್ಗಳಲ್ಲಿ Realme 13 ಮತ್ತು Realme 13 Plus ಸ್ಮಾರ್ಟ್‌ಫೋನ್‌ಗಳ ಪರಿಚಯ.
Dimencity 7300 ಚಿಪ್‌ಸೆಟ್ ಪ್ರೊಸೆಸರ್‌ನೊಂದಿಗೆ ಉತ್ತಮ ಡಿಸ್ಪ್ಲೇ ಮತ್ತು ದೊಡ್ಡ ಬ್ಯಾಟರಿಯೊಂದಿಗೆ ಬರುವ ಸಾಧ್ಯತೆಗಳಿವೆ.
ಭಾರತದಲ್ಲಿ ರಿಯಲ್‌ಮಿ (Realme) ತನ್ನ ಮುಂಬರಲಿರುವ Realme 13 Series ಸ್ಮಾರ್ಟ್‌ಫೋನ್‌ಗಳನ್ನು 29ನೇ ಆಗಸ್ಟ್ 2024 ರಂದು ಭಾರತೀಯ ಮಾರುಕಟ್ಟೆಗೆ ಬರುವುದು ಖಚಿತಪಡಿಸಿದೆ. ಕಂಪನಿ ಈ ಸ್ಮಾರ್ಟ್‌ಫೋನ್‌ಗಳನ್ನು ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ ಸರಣಿಯಲ್ಲಿ Realme 13 ಮತ್ತು Realme 13 Plus ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸಲಿದ್ದು Dimencity 7300 ಚಿಪ್‌ಸೆಟ್ ಪ್ರೊಸೆಸರ್‌ನೊಂದಿಗೆ ಉತ್ತಮ ಡಿಸ್ಪ್ಲೇ ಮತ್ತು ದೊಡ್ಡ ಬ್ಯಾಟರಿಯೊಂದಿಗೆ ಪರಿಚಯವಾಗಲು ನಿರೀಕ್ಷಿಸಲಾಗಿದೆ. ಬಿಡುಗಡೆಗೂ ಮುಂಚೆ ಹಲವಾರು ಫೀಚರ್ ಮತ್ತು ವಿಶೇಷಣಗಳನ್ನು ಬಹಿರಂಗಪಡಿಸಿದೆ. ಅದರ ಬಣ್ಣಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ತಿಳಿಯಬಹುದು.
SurveyRealme 13 Series ಸ್ಮಾರ್ಟ್‌ಫೋನ್‌ಗಳು
Realme 13 ಸರಣಿಯು MediaTek 7300 ಎನರ್ಜಿ ಪ್ರೊಸೆಸರ್‌ನಿಂದ ಚಾಲಿತವಾಗಿದೆ ಎಂದು ದೃಢಪಡಿಸಲಾಗಿದೆ. ಇದು ಕಳೆದ ತಿಂಗಳು ಬಿಡುಗಡೆಯಾದ OPPO RENO 12 PRO ಕಂಡುಬರುವ ಅದೇ ಚಿಪ್‌ಸೆಟ್ ಆಗಿದೆ. ಪ್ರೊಸೆಸರ್ ತನ್ನ ಹಿಂದಿನದಕ್ಕಿಂತ 30% ಪ್ರತಿಶತದಷ್ಟು ಪವರ್ ದಕ್ಷತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಈ ಸ್ಮಾರ್ಟ್ಫೋನ್ 7,50,000ಕ್ಕಿಂತ ಅಧಿಕ Antutu ಸ್ಕೋರ್ ಅನ್ನು ಪಡೆದಿರುವ ಬಗ್ಗೆ ಕಂಪನಿ ಪೋಸ್ಟ್ ಮಾಡಿದೆ. ಈ ಫೋನ್ಗಳು ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಫ್ಲ್ಯಾಷ್‌ಗೆ ಅವಕಾಶ ಕಲ್ಪಿಸುವ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿರುತ್ತದೆ.
Realme 13 Series ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳೇನು?
ಭಾರತದಲ್ಲಿ ಮುಂಬರಲಿರುವ ರಿಯಲ್‌ಮಿ (Realme) ತನ್ನ Realme 13 Series ಸ್ಮಾರ್ಟ್‌ಫೋನ್‌ಗಳ ನಬಗ್ಗೆ ಒಂದಿಷ್ಟು ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳೇನು ಎನ್ನುವುದನ್ನು ನೋಡುವುದಾದರೆ ಈ ಸ್ಮಾರ್ಟ್ಫೋನ್ಗಳು MediaTek 7300 ಪ್ರೊಸೆಸರ್‌ನಿಂದ ಚಾಲಿತವಾಗಲಿರುವುದು ದೃಢಪಡಿಸಲಾಗಿದ್ದು ಇದರಲ್ಲಿ ಸುಮಾರು 5000mAh ಬ್ಯಾಟರಿಯೊಂದಿಗೆ 80W ಫಾಸ್ಟ್ ಚಾರ್ಜಿಂಗ್ ಅನ್ನು ಸಹ ತರುವುದಾಗಿ ನಿರೀಕ್ಷಿಸಲಾಗಿದೆ. ಈ ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾದೊಂದಿಗೆ ಬರಲಿದ್ದು ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32MP ಹೊಂದಿರುವುದಾಗಿ ನಿರೀಕ್ಷಿಸಲಾಗಿದೆ.
Are you ready for a speed revolution? The #realme13Series5G is coming to blow your mind with its Segment D7300E processor, capable of achieving an astonishing Antutu score of 750K.
— realme (@realmeIndia) August 20, 2024
Stay tuned for the launch!
Know more: https://t.co/Q9GsYfxqut #UnmatchedSpeed pic.twitter.com/9ee1ocs5VK
ಈ ಸ್ಮಾರ್ಟ್ಫೋನ್ ಅನ್ನು ಮುಖ್ಯವಾಗಿ ಕ್ಯಾಮೆರಾ ವಿಭಾಗದಲ್ಲಿ ಹೆಚ್ಚು ಗಮನ ಹರಿಸಿದ್ದು 3X ಆಪ್ಟಿಕಲ್ ಜೂಮ್ ಮತ್ತು ಬರೋಬ್ಬರಿ 120X ಡಿಜಿಟಲ್ ಜೂಮ್ ಜೊತೆಗೆ ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಅಥವಾ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ ಬರುವುದಾಗಿ ನಿರೀಕ್ಷಿಸಲಾಗಿದೆ. ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ವೇರಿಯೆಂಟ್ ಮೂಲಕ ಬಿಡುಗಡೆಯಾಗಲಿದ್ದು 6GB ಮತ್ತು 8GB RAM ಜೊತೆಗೆ 128GB ಮತ್ತು 256GB ಸ್ಟೋರೇಜ್ ಆಧಾರದ ಮೇಲೆ ಬಿಡುಗಡೆಯಾಗುವ ನಿರೀಕ್ಷೆಯಾಗಲಿದೆ. ಅಲ್ಲದೆ ಸ್ಮಾರ್ಟ್ಫೋನ್ ನಿಮಗೆ Ultrasonic fingerprint ಸೆನ್ಸರ್ ಜೊತೆಗೆ ವಾಟರ್ ಮತ್ತು ಡಸ್ಟ್ ಪ್ರೂಫ್‌ಗಾಗಿ IP68 ಬರುವುದನ್ನು ಖಚಿತಪಡಿಸಿದೆ.
Also Read: Jio’s Rs 199 Plan: ಅನಿಯಮಿತ ಕರೆ ಮತ್ತು ದಿನಕ್ಕೆ 1.5GB ಡೇಟಾ ನೀಡುವ ಅತಿ ಕಡಿಮೆ ಬೆಲೆಯ ಬೆಸ್ಟ್ ಜಿಯೋ ಪ್ಲಾನ್!
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile