Nothing Phone 2a: ಡಿಸೈನ್ ಅಧಿಕೃತ ಡಿಸೈನ್ ಬಿಡುಗಡೆ! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

Nothing Phone 2a: ಡಿಸೈನ್ ಅಧಿಕೃತ ಡಿಸೈನ್ ಬಿಡುಗಡೆ! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
HIGHLIGHTS

Nothing Phone 2a ಸ್ಮಾರ್ಟ್ಫೋನ್ 5ನೇ ಮಾರ್ಚ್ 2024 ರಂದು ಬಿಡುಗಡೆಗೊಳಿಸಲು ಸಜ್ಜಾಗಿದೆ.

Nothing ಬಿಡುಗಡೆಗೂ ಮುಂಚೆಯೇ ಕಂಪನಿ ಇದರ ಪ್ರೊಸೆಸರ್, ಸ್ಟೋರೇಜ್, ಕ್ಯಾಮೆರಾ, ಬ್ಯಾಟರಿ ಮತ್ತು ಬಣ್ಣ ಖಚಿತಪಡಿಸಿದೆ.

Nothing Phone 2a ಕ್ಯಾಮರಾ ಮಾಡ್ಯೂಲ್ ನಥಿಂಗ್ ಸಿಗ್ನೇಚರ್ ಗ್ಲಿಫ್ ಇಂಟರ್‌ಫೇಸ್‌ನ ಭಾಗವಾಗಿರುವ LED ಮಾಡ್ಯೂಲ್‌ಗಳಿಂದ ಆವೃತವಾಗಿದೆ.

ಮೊದಲ ಬಾರಿಗೆ ಪಾರದರ್ಶಕ ಫೋನ್‌ಗಳನ್ನು ಪರಿಚಯಿಸಿದ ನಥಿಂಗ್ (Nothing) ಸ್ಮಾರ್ಟ್ಫೋನ್ ಬ್ರಾಂಡ್ ಈಗ ತನ್ನ ಮತ್ತೊಂದು ಹೊಸ Nothing Phone 2a ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಅಲ್ಲದೆ ಬಿಡುಗಡೆಗೂ ಮುಂಚೆಯೇ ಕಂಪನಿ ಇದರ ಪ್ರೊಸೆಸರ್, ಸ್ಟೋರೇಜ್, ಕ್ಯಾಮೆರಾ, ಬ್ಯಾಟರಿ ಮತ್ತು ಬೆಲೆ, ಬಣ್ಣ ಆಯ್ಕೆಯೊಂದಿಗೆ ಉತ್ತಮ ಬ್ಯಾಕ್ ಪ್ಯಾನಲ್‌ನಂತಹ ವಿವರಗಳನ್ನು ಖಚಿತಪಡಿಸಿದೆ. ಈಗ ಕಂಪನಿ ತನ್ನ ಮುಂಬರಲಿರುವ Nothing Phone 2a ಸ್ಮಾರ್ಟ್ಫೋನ್ ಮಾದರಿಯ ಬ್ಯಾಕ್ ಪ್ಯಾನಲ್‌ ಈಗಾಗಲೇ ಬಿಡುಗಡೆಯಾಗಿರುವ ತಮ್ಮ ನಥಿಂಗ್ ಫೋನ್‌ಗಳಿಗೆ ಹೋಲಿಸಿದರೆ ಈ ಹೊಸ ಫೋನ್ ಅದೇ ಮರುವಿನ್ಯಾಸಗೊಳಿಸಲಾದ ಬ್ಯಾಕ್ ಪ್ಯಾನೆಲ್‌ನೊಂದಿಗೆ ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಯಲ್ಲಿ ಕಂಡುಬರುತ್ತದೆ.

Also Read: Phone Lost or Stolen: ಅಕಸ್ಮಾತ್ ನಿಮ್ಮ ಫೋನ್ ಕಳೆದೋದ್ರೆ / ಕಳ್ಳತನವಾದರೆ ಮೊದಲು ಈ ಕೆಲಸ ಮಾಡಿ!

Nothing Phone 2a ನಿರೀಕ್ಷಿತ ಡಿಸೈನಿಂಗ್

ನಥಿಂಗ್ ಸ್ಮಾರ್ಟ್ಫೋನ್ ಟ್ವಿಟ್ಟರ್‌ನಲ್ಲಿ ಪೋಸ್ಟ್‌ನಲ್ಲಿ ನಥಿಂಗ್ ಹಂಚಿಕೊಂಡಿರುವ ವೀಡಿಯೊದಲ್ಲಿ Nothing Phone 2a ಸ್ಮಾರ್ಟ್ಫೋನ್ ನಿಮಗೆ ಬಿಳಿ ಮತ್ತು ಕಪ್ಪು ಬಣ್ಣದ ಆಯ್ಕೆಯಲ್ಲಿ ಕಂಡುಬರುತ್ತದೆ. ನಥಿಂಗ್ ಇತರ ಹ್ಯಾಂಡ್‌ಸೆಟ್‌ಗಳಂತೆ ಈ ಮುಂಬರುವ ಮಾದರಿಯು ಪಾರದರ್ಶಕ ಬ್ಯಾಕ್ ಪ್ಯಾನಲ್ (Transparent Back Panal) ವಿನ್ಯಾಸವನ್ನು ಹೊಂದಿದೆ. ಈ ಫೋನ್‌ ಡ್ಯುಯಲ್ ಬ್ಯಾಕ್ ಕ್ಯಾಮೆರಾ ಸೆಟಪ್ ಹೊಂದಿದ್ದು ಮೇಲಿನ ಮಧ್ಯಭಾಗದಲ್ಲಿರುವ ಮಾತ್ರೆ ಆಕಾರದ ಕ್ಯಾಮೆರಾ ಮಾಡ್ಯೂಲ್‌ ಅನ್ನು ಈ ಬಾರಿ ಅಡ್ಡಲಾಗಿ ಇರಿಸಲಾಗಿದೆ. ಈ Nothing Phone 2a ಕ್ಯಾಮರಾ ಮಾಡ್ಯೂಲ್ ನಥಿಂಗ್ ಸಿಗ್ನೇಚರ್ ಗ್ಲಿಫ್ ಇಂಟರ್‌ಫೇಸ್‌ನ ಭಾಗವಾಗಿರುವ LED ಮಾಡ್ಯೂಲ್‌ಗಳಿಂದ ಆವೃತವಾಗಿದೆ.

ನಥಿಂಗ್ Phone 2a ನಿರೀಕ್ಷಿತ ವಿಶೇಷಣ ಮತ್ತು ಬೆಲೆಗಳು

ಕೆಲವೇ ದಿನಗಳಲ್ಲಿ ಬಿಡುಗಡೆಗೆ ಸಜ್ಜಾಗಿರುವ ಈ Nothing Phone 2a ಸ್ಮಾರ್ಟ್ಫೋನ್ ಬಿಡುಗಡೆಯ ದಿನಾಂಕವನ್ನು ಈಗಾಗಲೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಘೋಷಿಸಿದ್ದು ಮುಂದಿನ ತಿಂಗಳು ಅಂದ್ರೆ 5ನೇ ಮಾರ್ಚ್ 2024 ರಂದು ಬಿಡುಗಡೆಯಾಗಲಿದೆ. ಫೋನ್ ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಇದರ ಬೆಲೆಯನ್ನು ಸುಮರು 30,000 ರೂಗಳೊಳಗೆ ನಿರೀಕ್ಷಿಸಬಹುದು. ಫೋನ್ 12GB RAM ಮತ್ತು ಹೆಚ್ಚುವರಿ 8GB ವರ್ಚುವಲ್ RAM ನೊಂದಿಗೆ ಜೋಡಿಯಾಗುವ ನಿರೀಕ್ಷೆಗಳಿವೆ.

ಏಕೆಂದರೆ ಫೋನ್ ಆಂಡ್ರಾಯ್ಡ್ 14 ಆಧಾರಿತ NothingOS 2.5 ನೊಂದಿಗೆ ಬರುತ್ತದೆ. ಅಲ್ಲದೆ ಫೋನ್ ದೊಡ್ಡದಾದ 6.7 ಇಂಚಿನ 120Hz ಪೂರ್ಣ HD+ OLED ಡಿಸ್ಪ್ಲೇಯೊಂದಿಗೆ 50MP ಹಿಂಬದಿಯ ಪ್ರೈಮರಿ ಡುಯಲ್ ಕ್ಯಾಮೆರಾ ಸೆಟಪ್ನೊಂದಿಗೆ ಇದರ ಮುಂಭಾಗದಲ್ಲಿ 32MP ಮುಂಭಾಗದ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಗಳಿವೆ. ಈ ಮುಂಭಾರಲಿರುವ Nothing Phone 2a ಅಲ್ಲದೆ ಫೋನ್ 5000mAh ಬ್ಯಾಟರಿಯನ್ನು 67W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ ನಿರೀಕ್ಷೆಗಳಿವೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo