Phone Lost or Stolen: ಅಕಸ್ಮಾತ್ ನಿಮ್ಮ ಫೋನ್ ಕಳೆದೋದ್ರೆ / ಕಳ್ಳತನವಾದರೆ ಮೊದಲು ಈ ಕೆಲಸ ಮಾಡಿ!

Phone Lost or Stolen: ಅಕಸ್ಮಾತ್ ನಿಮ್ಮ ಫೋನ್ ಕಳೆದೋದ್ರೆ / ಕಳ್ಳತನವಾದರೆ ಮೊದಲು ಈ ಕೆಲಸ ಮಾಡಿ!
HIGHLIGHTS

ಸಾಮಾನ್ಯವಾಗಿ ಹೊರಗಿನ ದುನಿಯಾದಲ್ಲಿ ಹೊರಡುವವರೊಂದಿಗೆ ಸ್ಮಾರ್ಟ್ಫೋನ್ ಕಳ್ಳತನ (Phone Stolen) ಹೆಚ್ಚಾಗಿದೆ.

ಜನರು ಮನೆ, ಆಫೀಸ್ ಅಥವಾ ತಮಗೆ ಅರಿವಿಲ್ಲದೆ ಫೋನ್‌ಗಳನ್ನು ಅಲ್ಲಿಲ್ಲಿ ಇಟ್ಟು ಮರೆತೋಗೋದು ಸಹಜವಾಗಿದೆ.

ನಿಮ್ಮ ಫೋನ್ ಕಳೆದೋದ್ರೆ / ಕಳ್ಳತನವಾದರೆ (Phone Lost or Stolen) ಹೆಚ್ಚು ಸಮಯ ವ್ಯರ್ಥ ಮಾಡದೇ ತಕ್ಷಣ ಈ 5 ಕೆಲಸಗಳನ್ನು ಮಾಡಿ.

ಇಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ ನಮ್ಮ ದೈನಂದಿನ ಜೀವನದ ಒಂದು ಪ್ರಮುಖ ಭಾಗವಾಗಿದೆ. ಸಾಮಾನ್ಯವಾಗಿ ಹೊರಗಿನ ದುನಿಯಾದಲ್ಲಿ ಹೊರಡುವವರೊಂದಿಗೆ ಸ್ಮಾರ್ಟ್ಫೋನ್ ಕಳ್ಳತನ ಹೆಚ್ಚಾಗಿದೆ. ಅಲ್ಲದೆ ಜನರು ಮನೆ, ಆಫೀಸ್ ಅಥವಾ ತಮಗೆ ಅರಿವಿಲ್ಲದೆ ಫೋನ್‌ಗಳನ್ನು ಅಲ್ಲಿಲ್ಲಿ ಇಟ್ಟು ಮರೆತೋಗೋದು ಸಹಜವಾಗಿದೆ. ಆದರೆ ಈ ಎರಡು Phone Lost or Stolen ಸನ್ನಿವೇಶದಲ್ಲಿ ಜನರು ಹೆಚ್ಚು ಎದರಿ ಮುಂದೇನು ಮಾಡಬೇಕು ಅಂಥ ಯೋಚಿಸಲು ಸಾಧ್ಯವಾಗದ ಸಂದರ್ಭಗಳಿಗೆ ಸಿಕ್ಕಿಕೊಳ್ಳುದು ನಮ್ಮ ಮೊದಲ ಹಂತವಾಗಿರುತ್ತದೆ. ಆದರೆ ಅದಕ್ಕೆ ಕಾರಣ ಬಳಕೆದಾರರ ಪರ್ಸನಲ್ ಡೇಟಾ ಮತ್ತು ಸ್ಮಾರ್ಟ್ಫೋನ್ ಆಗಿದೆ. ನಿಮ್ಮ ಸ್ಮಾರ್ಟ್ಫೋನ್ ಕಳೆದುಹೋದರೆ ಅಥವಾ ಕಳ್ಳತನವಾದರೆ (Phone Lost or Stolen) ಹೆಚ್ಚು ಸಮಯ ವ್ಯರ್ಥ ಮಾಡದೇ ತಕ್ಷಣ ಈ 5 ಕೆಲಸಗಳನ್ನು ಮಾಡಿ.

Also Read: 64MP ಸೋನಿ ಸೆನ್ಸರ್ ಮತ್ತು ಕರ್ವ್ ಡಿಸ್ಪ್ಲೇಯೊಂದಿಗೆ Lava Blaze Curve 5G ಬಿಡುಗಡೆ ಸಿದ್ದವಾಗಿದೆ!

Phone Lost or Stolen ನಿಮ್ಮ ಸಿಮ್ ಅನ್ನು ತಕ್ಷಣವೇ ನಿರ್ಬಂಧಿಸಿ:

ನಿಮ್ಮ ಫೋನ್ ಕಳೆದೋದ್ರೆ / ಕಳ್ಳತನವಾದರೆ ನಿಮ್ಮ ಸಿಮ್ ಅನ್ನು ನಿರ್ಬಂಧಿಸುವುದು ಮೊದಲನೆಯ ಹೆಜ್ಜೆಯಾಗಿರುತ್ತದೆ. ಇದಕ್ಕಾಗಿ ನೀವು ನಿಮ್ಮ ಟೆಲಿಕಾಂ ಆಪರೇಟರ್‌ಗೆ ಕಸ್ಟಮರ್ ಕರೆಗೆ ನಿಮ್ಮ ಆ ಸಿಮ್ ಕಾರ್ಡ್ ಯಾರ ಹೆಸರಿನಲ್ಲಿದಿಯೋ ಅವರ ಮಾಹಿತಿಗಳೊಂದಿಗೆ ನಿರ್ಬಂಧಿಸಬಹುದು. ಅಲ್ಲದೆ ನೀವು ಸಂಖ್ಯೆಯ ಹೊರಹೋಗುವ ಸೇವೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ವಿನಂತಿಯನ್ನು ಸಲ್ಲಿಸಬೇಕು. ನಿಮ್ಮ ಕಳೆದುಹೋದ ಫೋನ್ ತಪ್ಪಾದ ಕೈಗೆ ಬಿದ್ದರೆ ಅವನು ಅದನ್ನು ಕೆಲವು ತಪ್ಪು ಉದ್ದೇಶಕ್ಕಾಗಿ ಬಳಸಿ ಕರೆಗಳನ್ನು ಮಾಡಬಹುದು ಮತ್ತು ನೀವು ತೊಂದರೆಗೆ ಸಿಲುಕಬಹುದು.

ನಿಮ್ಮ IMEI ಸಂಖ್ಯೆಯನ್ನು ನಿರ್ಬಂಧಿಸಿ:

ಇದರ ನಂತರ ನೀವು ಮಾಡಬೇಕಾದ ಎರಡನೆಯ ವಿಷಯವೆಂದರೆ ನಿಮ್ಮ ಮೊಬೈಲ್‌ನ IMEI ಅನ್ನು ನಿರ್ಬಂಧಿಸುವುದು. ಮತ್ತೊಂದು ಸಿಮ್ ಅನ್ನು ಸೇರಿಸುವ ಮೂಲಕವೂ ಯಾರಾದರೂ ನಿಮ್ಮ ಫೋನ್ ಅನ್ನು ಬಳಸಬಹುದು. ಪ್ರತಿ ಸ್ಮಾರ್ಟ್‌ಫೋನ್‌ಗೆ ವಿಶಿಷ್ಟವಾದ ಪಿಡಿಎಫ್ ಸಂಖ್ಯೆ ಇದೆ. ಅಂತಹ ಪರಿಸ್ಥಿತಿಯಲ್ಲಿ ನೀವು https://www.ceir.gov.in/Request/CeirUserBlockRequestDirect.jsp ಹೋಗುವ ಮೂಲಕ ನಿಮ್ಮ ಫೋನ್‌ನ IMEI ಸಂಖ್ಯೆಯನ್ನು ನಿರ್ಬಂಧಿಸಬಹುದು. ನಿಮ್ಮ ಮೊಬೈಲ್‌ನ IMEI ಸಂಖ್ಯೆ ನೀವು ಖರೀದಿಸಿದ ಸ್ಮಾರ್ಟ್ಫೋನ್ ಬಾಕ್ಸ್ ಮತ್ತು ಬಿಲ್ ಮೇಲೆ ನೀಡಲಾಗಿರುತ್ತದೆ. ಅಲ್ಲದೆ ಪ್ರಸ್ತುತ ನಿಮ್ಮ ಮೊಬೈಲ್‌ನ IMEI ನಂಬರ್ ತಿಳಿಯಲು ಫೋನ್‌ನಲ್ಲಿ ನೀವು *#06# ಡಯಿಲ್ ಮಾಡಿ ಒಂದೆಡೆ ಬರೆದಿಟ್ಟುಕೊಳ್ಳಿರಿ.

ಕೂಡಲೇ ಪೊಲೀಸರಿಗೆ ದೂರು ನೀಡಿ:

ನಿಮ್ಮ ಫೋನ್ ಕಳೆದೋದ್ರೆ / ಕಳ್ಳತನವಾದರೆ SIM ಮತ್ತು IMEI ಸಂಖ್ಯೆಯನ್ನು ನಿರ್ಬಂಧಿಸಿದ ನಂತರ ಪೊಲೀಸ್ ಠಾಣೆಗೆ ಹೋಗಿ ಮತ್ತು ನಿಮ್ಮ ಫೋನ್ ನಷ್ಟ ಅಥವಾ ಕಳ್ಳತನದ ಬಗ್ಗೆ ವರದಿಯನ್ನು ಸಲ್ಲಿಸಬಹುದು. ಇದಕ್ಕೂ ಮೊದಲು ನೀವು ಫೋನ್ ಸಂಭದಿಸಿದ ಎಲ್ಲ ಮಾಹಿತಿಯನ್ನು FIR ಪೂರ್ಣಗೊಳಿಸಲು ನೀಡಬೇಕಾಗುತ್ತದೆ. ಪೊಲೀಸ್ ಠಾಣೆಗೆ ಹೋಗುವ ಮೊದಲು ಸ್ಮಾರ್ಟ್ಫೋನ್ ಬಾಕ್ಸ್ ಮತ್ತು ಬಿಲ್ ಜೊತೆಗೆ ನಿಮ್ಮ ಆಧಾರ್ ಮತ್ತು ಪಾನ್ ಕಾರ್ಡ್ ನಿಮ್ಮೊಂದಿಗಿರಿಸುವುದು ಉತ್ತಮ. ಈ ಕೆಲಸ ತುಂಬ ಮುಖ್ಯ ಏಕೆಂದರೆ ನಿಮ್ಮ ಫೋನ್ ಕದ್ದ ನಂತರ ಫೋನ್ ದುರ್ಬಳಕೆಯಾಗುವ ಅಪಾಯವಿರುತ್ತದೆ ಆದ್ದರಿಂದ ಅಂತಹ ಪರಿಸ್ಥಿತಿಯಲ್ಲಿ ಇದನ್ನು ಮೊದಲು ಮಾಡಬೇಕು.

ಫೈಂಡ್ ಮೈ ಫೋನ್ ಫೀಚರ್ ಬಳಸಿ:

ನಿಮ್ಮ ಆಂಡ್ರಾಯ್ಡ್ ಫೋನ್‌ಗಳಲ್ಲಿ ಇಂಟರ್ನಲ್ ಫೈಂಡ್ ಮೈ ಮೊಬೈಲ್ ಸೇವೆಯ ಫೀಚರ್ ಸಹಾಯದಿಂದ ಬಳಕೆದಾರರು ತಮ್ಮ ಕಳೆದುಹೋದ ಫೋನ್ ಅನ್ನು ಲಿಂಕ್ ಮಾಡಿದ Google ಖಾತೆಯ ಸಹಾಯದಿಂದ ಹುಡುಕಬಹುದು. ಈ ವೈಶಿಷ್ಟ್ಯವು ಆಂಡ್ರಾಯ್ಡ್ 8 ಮತ್ತು ಅದರ ಮೇಲಿನ ಎಲ್ಲಾ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಈ ವೈಶಿಷ್ಟ್ಯವನ್ನು ಡಿಫಾಲ್ಟ್ ಆಗಿ ಸಕ್ರಿಯಗೊಳಿಸಲಾಗಿದೆ. ಇದಕ್ಕಾಗಿ ನಿಮ್ಮ ಫೋನ್ ಕಳೆದುಹೋದ / ಕಳ್ಳತನವಾದ ಫೋನ್ ಒಳಗೆ ನೀವು ಬಳಸುತ್ತಿದ್ದ ಯಾವುದೇ ಇಮೇಲ್ ಮತ್ತು ಅದರ ಪಾಸ್ವರ್ಡ್ ತಿಳಿದಿರಬೇಕು. ಇದರಿಂದ ನೀವು ಬೇರೊಂದು ಫೋನ್ ಅಥವಾ ಲ್ಯಾಪ್ಟಾಪ್ ಮೂಲಕ ಲಾಗಿನ್ ಮಾಡಿ ಟ್ರ್ಯಾಕ್ ಮಾಡಬಹುದು.

Phone Lost or Stolen ಮೊಬೈಲ್ ಡೇಟಾವನ್ನು ಡಿಲೀಟ್ ಮಾಡಿ:

ನೀವು ಲಾಗಿನ್ ಮಾಡಿದ ನಂತರ ಎಲ್ಲವನ್ನೂ ಪ್ರಯತ್ನಿಸಿದರೆ ಮತ್ತು ನಿಮ್ಮ ಫೋನ್ ಕಳ್ಳತನವಾಗಿದೆ ಎಂದು ದೃಢೀಕರಿಸಿದ ನಂತರ ಆ ಫೋನ್ ನಿಮಗೆ ಸಿಗೋದೇ ಇಲ್ಲ ಎನ್ನುವ ಸನ್ನಿವೇಶಕ್ಕೆ ನೀವು ತಲುಪಿದರೆ ಅದರಲ್ಲಿನ ನಿಮ್ಮ ಡೇಟಾವನ್ನು ಡಿಲೀಟ್ ಮಾಡಲು ಇಮೇಲ್ ಮತ್ತು ಅದರ ಪಾಸ್ವರ್ಡ್ ನೀಡಿ ಲಾಗಿನ್ ಆದರೆ ಫೈಂಡ್ ಮೈ ಡಿವೈಸ್ ಫೀಚರ್ ಬಳಸಿ ಮೊಬೈಲ್‌ನಿಂದ ನಿಮ್ಮೆಲ್ಲ ಡೇಟಾವನ್ನು ಡಿಲೀಟ್ ಮಾಡಬಹುದು.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo