ಭಾರತದಲ್ಲಿ ಮುಂದಿನ ತಿಂಗಳು ಅತಿ ಕಡಿಮೆ ಬೆಲೆಯ iPhone ಬಿಡುಗಡೆಯಾಗಲಿದೆ

ಭಾರತದಲ್ಲಿ ಮುಂದಿನ ತಿಂಗಳು ಅತಿ ಕಡಿಮೆ ಬೆಲೆಯ iPhone ಬಿಡುಗಡೆಯಾಗಲಿದೆ
HIGHLIGHTS

ಕಂಪನಿಯ ಮೊದಲ ಸ್ಮಾರ್ಟ್ಫೋನ್ ಈ ವಿಭಾಗದಲ್ಲಿ ಅದು ಜನಸಾಮನ್ಯರ ಕೈಗೆಟುಕುವ ಬೆಲೆಯ ಹೊಸ ಐಫೋನ್ ಆಗಿದೆ.

ದೇಶ ಮತ್ತು ವಿಶ್ವದ ಪ್ರೀಮಿಯಂ ಸ್ಮಾರ್ಟ್‌ಫೋನ್ ತಯಾರಕರಾದ ಆಪಲ್‌ ಕಂಪನಿಯ ಹೊಸ iPhone SE 2 ಫೋನ್ ಬಗ್ಗೆ ಹಲವು ಸೋರಿಕೆಗಳು ಬಹಿರಂಗಗೊಂಡಿವೆ. ಏಕೆಂದರೆ ಇದು ಮುಖ್ಯವಾಗಿ ಕಂಪನಿಯ ಮೊದಲ ಸ್ಮಾರ್ಟ್ಫೋನ್ ಈ ವಿಭಾಗದಲ್ಲಿ ಅದು ಜನಸಾಮನ್ಯರ ಕೈಗೆಟುಕುವ ಬೆಲೆಯ ಹೊಸ ಐಫೋನ್ ಆಗಿದೆ. ಈವರೆಗೆ ಕೆಲವು ವರದಿಗಳಲ್ಲಿ ಪ್ರಕಾರ ಈ ಐಫೋನ್ ಅನ್ನು iPhone 9 ಎಂದು ಸಹ ಹೆಸರಿಸಬಹುದು ಎಂದು ಹೇಳಲಾಗುತ್ತಿದ್ದು ಈ ಹೊಸ ಐಫೋನ್ ಸುಮಾರು 4.7 ಇಂಚಿನ LCD ಡಿಸ್ಪ್ಲೇಯನ್ನು ಟಚ್ ಐಡಿಯೊಂದಿಗೆ ಹೋಮ್ ಬಟನ್ ಮತ್ತು ಅತ್ಯಂತ ತೆಳುವಾದ ಬೆಜೆಲ್ಗಳನ್ನು ಸಹ ಹೊಂದಿರುವ ನಿರೀಕ್ಷೆಯಿದೆ.

ಇದರ ಕ್ರಮವಾಗಿ ಇದು 3.5mm ಹೆಡ್‌ಫೋನ್ ಜಾಕ್ ಹೊಂದಲು ಸಾಧ್ಯವಿಲ್ಲ. ಅಲ್ಲದೆ ಕೆಲ ವರದಿಗಳ ಪ್ರಕಾರ ಇದರಲ್ಲಿ A13 ಬಯೋನಿಕ್ ಚಿಪ್ ಅನ್ನು ನೀಡಲಾಗುವುದೆಂದು ಕೇಳಿ ಬರುತ್ತಿದೆ. ಇದು ಕಂಪನಿಯ ಇತ್ತೀಚಿನ ಐಫೋನ್ 11 ಸರಣಿಯಲ್ಲಿ ಕಂಡುಬಂದಿದೆ. ಇದು ಕಂಪನಿಯ ಇತ್ತೀಚಿನ iOS 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಅತಿ ಕಡಿಮೆ ಬೆಲೆ ಅಂದ್ರೆ ನಿಮ್ಮ ಪ್ರಕಾರ ಇದರ ಬೆಲೆ ಎಷ್ಟು ಇರಬಹುದು. ಸದ್ಯಕ್ಕೆ ಈ ಐಫೋನ್ ಬೆಲೆ $399 ಆಗಿರಬಹುದು ಅಂದರೆ ಭಾರತದ ರೂಗಳಲ್ಲಿ ಸುಮಾರು 28,000 ರೂಪಾಯಿಗಳು.

ಕಂಪನಿಯಿಂದ ಈ ಫೋನ್‌ನ ಬೆಲೆಯ ಬಗ್ಗೆ ಮತ್ತು ಇದರ ಸ್ಪೆಸಿಫಿಕೇಷನ್ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಹಿರಂಗಗೊಂಡಿಲ್ಲ. ಫೋನ್ ಬಿಡುಗಡೆಯ ಬಗ್ಗೆ ಕಂಪನಿಯು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ ಆದರೆ ಈವರೆಗಿನ ವರದಿಗಳ ಪ್ರಕಾರ ಕಂಪನಿ ಮುಂದಿನ ಮಾರ್ಚ್‌ನಲ್ಲಿ ಈ ಫೋನ್ ಅನ್ನು ಬಿಡುಗಡೆ ಮಾಡಬಹುದೆಂದು ನಂಬಲಾಗಿದೆ. ಐಫೋನ್ 8 ಹಾಗೆ ಕಾಣಿಸಬಹುದು ವಿನ್ಯಾಸದ ದೃಷ್ಟಿಯಿಂದ iPhone SE 2 ಐಫೋನ್ 8 ರಂತೆ ಕಾಣುತ್ತದೆ.

ಇದನ್ನು 4.7 ಇಂಚಿನ ಸ್ಕ್ರೀನ್ ಗಾತ್ರ ಹೊಂದಿರುವ ಐಫೋನ್ ಗ್ಲಾಸ್ ಬ್ಯಾಕ್ ಕವರ್ ಬಳಕೆದಾರರು ಪಡೆಯುತ್ತರೆಂದು ಆಪಲ್ ವಿಶ್ಲೇಷಕ ಮಿಂಗ್ ಚಿ ಕುವೊ ಈಗಾಗಲೇ ಹೇಳಿದ್ದಾರೆ.  iPhone SE 2 ಅನ್ನು 5.4 ಇಂಚಿನ ಸ್ಕ್ರೀನ್ ಗಾತ್ರಕ್ಕೆ ಇಳಿಸಬಹುದು ಎಂದು ಈಗ ತಿಳಿದುಬಂದಿದೆ.  ಮತ್ತು ಅಂತಹ ಪರಿಸ್ಥಿತಿಯಲ್ಲಿ ಐಫೋನ್ ಗಾತ್ರವನ್ನು ಹಿಂದಿನ ಐಫೋನ್ 7 ರಂತೆ ಕಾಣಬಹುದು. ಏಕೆಂದರೆ ಆಪಲ್ ಸಾಧನದ ಮೇಲ್ಭಾಗ ಮತ್ತು ಕೆಳಭಾಗದಲ್ಲಿರುವ ದಪ್ಪ ಬ್ಯಾಡ್ಜ್‌ಗಳನ್ನು ತೆಗೆದುಹಾಕಬಹುದು ಮತ್ತು ದೊಡ್ಡ ಡಿಸ್ಪ್ಲೇ ಅನ್ನು ಐಫೋನ್‌ನಲ್ಲಿ ಕಾಣಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo