Motorola Signature ಬಿಡುಗಡೆಗೂ ಮುಂಚೆ ಡಿಸೈನ್ ರಿವೀಲ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

HIGHLIGHTS

ಭಾರತದಲ್ಲಿ ಮೊಟೊರೊಲಾ ಸಿಗ್ನೇಚರ್ ಸರಣಿಯನ್ನು (Motorola Signature Series) ಮಾರುಕಟ್ಟೆಗೆ ತರುತ್ತಿದೆ.

ಮೊಟೊರೊಲಾ ಸಿಗ್ನೇಚರ್ ಸರಣಿಯನ್ನು 7ನೇ ಜನವರಿ 2026 ರಂದು ಅಧಿಕೃತವಾಗಿ ಬಿಡುಗಡೆಯಾಗಲು ಸಜ್ಜಾಗಿದೆ.

ಅತ್ಯಂತ ಸುಂದರವಾಗಿ ಐಷಾರಾಮಿರಾಗಿ ಕೆಲಸದಲ್ಲಿ ಅತಿ ವೇಗವಾಗಿರುವ ಅತ್ಯಾಧುನಿಕ ಮೊಬೈಲ್ ತಂತ್ರಜ್ಞಾನದೊಂದಿಗೆ ಬರಲಿದೆ.

Motorola Signature ಬಿಡುಗಡೆಗೂ ಮುಂಚೆ ಡಿಸೈನ್ ರಿವೀಲ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

ಮೊಟೊರೊಲಾ ಕಂಪನಿಯು ತನ್ನ ಪ್ರೀಮಿಯಂ ಗುರುತನ್ನು ಮರು ವ್ಯಾಖ್ಯಾನಿಸಲು ಸಜ್ಜಾಗಿದ್ದು ಭಾರತದಲ್ಲಿ ಶೀಘ್ರದಲ್ಲೇ ಮೊಟೊರೊಲಾ ಸಿಗ್ನೇಚರ್ ಸರಣಿಯನ್ನು (Motorola Signature Series) ಮಾರುಕಟ್ಟೆಗೆ ತರುತ್ತಿದೆ. ಈ ಹೊಸ ಫೋನ್ 7ನೇ ಜನವರಿ 2026 ರಂದು ಅಧಿಕೃತವಾಗಿ ಬಿಡುಗಡೆಯಾಗಲು ಸಜ್ಜಾಗಿದೆ. ಮೊಟೊರೊಲಾ ಸಾಮಾನ್ಯವಾಗಿ ಮಧ್ಯಮ ಕ್ರಮಾಂಕದ ಫೋನ್‌ಗಳಿಗೆ ಹೆಸರಾಗಿದ್ದರೂ ಈಗ ಈ ‘ಸಿಗ್ನೇಚರ್’ ಸರಣಿಯ ಮೂಲಕ ವಿಶ್ವದ ದುಬಾರಿ ಫೋನ್ಗಳಿಗೆ ಪೈಪೋಟಿ ನೀಡಲು ಫೋನ್ ಮುಂದಾಗಿದೆ. ಇದು ನೋಡಲು ಅತ್ಯಂತ ಸುಂದರವಾಗಿ ಐಷಾರಾಮಿರಾಗಿ ಕೆಲಸದಲ್ಲಿ ಅತಿ ವೇಗವಾಗಿರುವ ಉನ್ನತವಾದ ಅತ್ಯಾಧುನಿಕ ಮೊಬೈಲ್ ತಂತ್ರಜ್ಞಾನ ಕಾರ್ಯಕ್ಷಮತೆಯೊಂದಿಗೆ ಬರಲಿದೆ.

Digit.in Survey
✅ Thank you for completing the survey!

Also Read: Ration Card: ನಿಮಗೊಂದು ಹೊಸ ರೇಷನ್ ಕಾರ್ಡ್ ಬೇಕಿದ್ದರೆ ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಈ ರೀತಿ ಅರ್ಜಿ ಸಲ್ಲಿಸಿ!

Motorola Signature Series ವಿನ್ಯಾಸ:

ಮೊಟೊರೊಲಾ ಸಿಗ್ನೇಚರ್ ಫೋನ್ ವಿನ್ಯಾಸವು ಕೈಗೆ ಹಿಡಿಯಲು ಹಿತವೆನಿಸುವ ಮತ್ತು ದೀರ್ಘಕಾಲ ಬಾಳಿಕೆ ಬರುವ ಶೈಲಿಯನ್ನು ಹೊಂದಿದೆ. ಸಾಮಾನ್ಯ ಗ್ಲಾಸ್ ಫೋನ್ ಭಿನ್ನವಾಗಿ ಈ ಫೋನಿನ ಹಿಂಭಾಗದಲ್ಲಿ ಫ್ಯಾಬ್ರಿಕ್ ಸ್ಟೈಲ್ ಫಿನಿಶ್ ನೀಡಲಾಗುತ್ತಿದೆ. ಇದು ಫೋನ್‌ಗೆ ಒಂದು ರಾಜಗಾಂಭೀರ್ಯದ ಲುಕ್ ನೀಡುವುದಲ್ಲದೆ ಕೈಯಿಂದ ಜಾರದಂತೆ ಉತ್ತಮ ಗ್ರಿಪ್ ನೀಡಲಾಗಿದೆ. ಇಷ್ಟೊಂದು ಪ್ರೀಮಿಯಂ ಫೀಚರ್ಸ್ ಇದ್ದರೂ ಈ ಫೋನ್ ಕೇವಲ 6.99mm ನಷ್ಟು ಸ್ಲಿಮ್ ಕೇವಲ 186 ಗ್ರಾಂ ತೂಕವಿದೆ. ಇದು ಏರ್‌ಕ್ರಾಫ್ಟ್ ಗ್ರೇಡ್ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ. ಆದರೆ ನೀರು ಮತ್ತು ಧೂಳಿನಿಂದ ರಕ್ಷಣೆ ಪಡೆಯಲು IP68 ಮತ್ತು IP69 ರೇಟಿಂಗ್ ಹೊಂದಿದೆ. ವಿಶೇಷವೆಂದರೆ ಇದರಲ್ಲಿ ಎಐ (AI) ಕೆಲಸಗಳು ಅಥವಾ ಕ್ಯಾಮೆರಾಗಾಗಿ ಪ್ರತ್ಯೇಕವಾದ ಬಟನ್ ಎಡಭಾಗದಲ್ಲಿ ನೀಡಲಾಗಿದೆ.

Motorola Signature Series

ಮೊಟೊರೊಲಾ ಸಿಗ್ನೇಚರ್ ನಿರೀಕ್ಷಿತ ಸ್ಪೆಕ್ಸ್ ಮತ್ತು ಫೀಚರ್ಗಳು:

ಈ ಫೋನ್ ಒಳಗಿನಿಂದಲೂ ಅಷ್ಟೇ ಶಕ್ತಿಯುತವಾಗಿದೆ ಇದು ಅತ್ಯಂತ ವೇಗದ Snapdragon 8 Gen 5 ಪ್ರೊಸೆಸರ್ ಅನ್ನು ಬಳಸಲಾಗಿದೆ. ಇದರ ಡಿಸ್‌ಪ್ಲೇ 6.8-ಇಂಚಿನ ಎಕ್ಸ್‌ಟ್ರೀಮ್ ಅಮೊಲೆಡ್ ಆಗಿದ್ದು ವಿಡಿಯೋ ನೋಡಲು ಅದ್ಭುತವಾದ ಅನುಭವವನ್ನು ನೀಡಿದೆ. ಇದು 165Hz ರಿಫ್ರೆಶ್ ರೇಟ್ ಮತ್ತು ಅತ್ಯಧಿಕ ಬ್ರೈಟ್‌ನೆಸ್ ಹೊಂದಿದೆ. ಕ್ಯಾಮೆರಾ ವಿಚಾರಕ್ಕೆ ಬಂದರೆ ಹಿಂಭಾಗದಲ್ಲಿ ಮೂರು 50MP ಕ್ಯಾಮೆರಾಗಳಿದ್ದು ಇದು ಅತ್ಯುತ್ತಮ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿಯಬಲ್ಲದು. ಮತ್ತೊಂದು ವಿಶೇಷವೆಂದರೆ ಸ್ಯಾಮ್‌ಸಂಗ್ ಅಲ್ಟ್ರಾ ಫೋನ್‌ಗಳಂತೆಯೇ ಇದರಲ್ಲೂ ಸ್ಟೈಲಸ್ ಪೆನ್ ಸಪೋರ್ಟ್ ಇರಲಿದೆ. ಈ ಫೋನ್ ಪವರ್ ನೀಡಲಿದ್ದು 5200mAh ಫೋನ್ ಬ್ಯಾಟರಿಯೊಂದಿಗೆ 90W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Motorola Signature Series ನಿರೀಕ್ಷಿತ ಬೆಲೆ ಮತ್ತು ಲಭ್ಯತೆ:

ಮೊಟೊರೊಲಾ ಇನ್ನೂ ಅಧಿಕೃತ ಬೆಲೆಯನ್ನು ಪ್ರಕಟಿಸಿಲ್ಲ ಮಾರುಕಟ್ಟೆ ಪ್ರಕಾರ ಇದು ಐಫೋನ್ 17 ಮತ್ತು ಸ್ಯಾಮ್‌ಸಂಗ್ S25 ಸರಣಿಗೆ ನೇರವಾಗಿದೆ ಪೈಪೋಟಿ ನೀಡಲಿದೆ. ಭಾರತದಲ್ಲಿ ಇದರ ಆರಂಭಿಕ ಬೆಲೆ ಅಂದಾಜು ₹75,000 ರಿಂದ ₹85,000 ಇರಬಹುದು ಎಂದು ಅಂದಾಜಿಸಲಾಗಿದೆ. ಈ ಫೋನ್ ಭಾರತದಲ್ಲಿ 7ನೇ ಜನವರಿ 2025 ರಂದು ಲಾಂಚ್ ಆಗಲಿದೆ ನಂತರ ಜಾಗತಿಕ ಮಾರುಕಟ್ಟೆಗೆ ಬರಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮೊಟೊರೊಲಾ ಈ ಫೋನ್‌ಗೆ 7 ವರ್ಷಗಳ ಕಾಲ ಸಾಫ್ಟ್‌ವೇರ್ ಅಪ್‌ಡೇಟ್ಸ್ ನೀಡುವುದಾಗಿ ಭರವಸೆ ನೀಡಿದೆ ಫೋನ್ ಹಲವು ವರ್ಷಗಳ ಕಾಲ ಹೊಸದಾಗಿ ಇರಲಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo