ಇಂದು ಮಾರುಕಟ್ಟೆಗೆ ಬರಲಿದೆ Lava Bold N2 Pro 4G ಮೊಬೈಲ್‌! ನಿರೀಕ್ಷಿತ ಫೀಚರ್ಸ್‌ ಹೀಗಿವೆ

HIGHLIGHTS

ಲಾವಾ ಸಂಸ್ಥೆಯ ಈ ಮೊಬೈಲ್‌ 120Hz ರಿಫ್ರೆಶ್ ರೇಟ್‌ ಸೌಲಭ್ಯವನ್ನು ಹೊಂದಿರಲಿದೆ

ಲಾವಾ ಕಂಪನಿಯ ಈ ಫೋನ್‌ Unisoc T7250 ಚಿಪ್‌ಸೆಟ್‌ ಪ್ರೊಸೆಸರ್‌ ಪಡೆದಿರಲಿದೆ

ಈ ಮೊಬೈಲ್‌ ಅರೋರಾ ಗೋಲ್ಡ್ ಮತ್ತು ಎಕ್ಲಿಪ್ಸ್ ಗ್ರೇ ಬಣ್ಣಗಳ ಆಯ್ಕೆಗಳಲ್ಲಿ ಬರಲಿದೆ

ಇಂದು ಮಾರುಕಟ್ಟೆಗೆ ಬರಲಿದೆ Lava Bold N2 Pro 4G ಮೊಬೈಲ್‌! ನಿರೀಕ್ಷಿತ ಫೀಚರ್ಸ್‌ ಹೀಗಿವೆ

ಲಾವಾ ಕಂಪನಿಯ Lava Bold N2 Pro 4G ಸ್ಮಾರ್ಟ್‌ಫೋನ್‌ ಇಂದು (ಮಾರ್ಚ್ 31 ರಂದು) ದೇಶಿಯ ಮೊಬೈಲ್‌ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಎಂಟ್ರಿ ಕೊಡಲಿದೆ. ಈ ಲಾಂಚ್ ಬಿಡುಗಡೆ ಕುರಿತಾಗಿ ಈಗಾಗಲೇ ಫ್ಲಿಪ್‌ಕಾರ್ಟ್‌ ವೆಬ್‌ಸೈಟ್‌ನಲ್ಲಿ ಮೈಕ್ರೋಸೈಟ್ ಈಗ ಲೈವ್ ಇದೆ. ಮಾರುಕಟ್ಟೆಗೆ ಬರಲು ಸಜ್ಜಾಗಿರುವ ಈ ಮೊಬೈಲ್‌ ಹಿಂಬದಿಯಲ್ಲಿ ಟ್ರಿಪಲ್‌ 50MP ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಹಾಗೆಯೇ ಈ ಮೊಬೈಲ್‌ Unisoc T7250 ಚಿಪ್‌ಸೆಟ್‌ ಪ್ರೊಸೆಸರ್‌ ಒಳಗೊಂಡಿರಲಿದೆ. ಇನ್ನು ಈ ಫೋನ್‌ 5,000mAh ಬ್ಯಾಟರಿ ಸಾಮರ್ಥ್ಯದಲ್ಲಿ ಬರಲಿದೆ ಎನ್ನಲಾಗಿದೆ. ಹಾಗಾದರೆ ಮುಂಬರುವ ಲಾವಾ ಬೋಲ್ಡ್‌ N2 ಪ್ರೊ 4G ಮೊಬೈಲ್‌ನ ಬಿಡುಗಡೆ ದಿನಾಂಕ, ನಿರೀಕ್ಷಿತ ಫೀಚರ್ಸ್‌ಗಳ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Vivo V70 FE ಬಿಡುಗಡೆಗೆ ದಿನಗಣನೆ ಶುರು! ನಿರೀಕ್ಷಿತ ಫೀಚರ್ಸ್‌ ಹಾಗೂ ಬೆಲೆ ನೋಡಿ

Lava Bold N2 Pro 4G ಮೊಬೈಲ್‌ ಇಂದು ಬಿಡುಗಡೆ

ಲಾವಾ ಬೋಲ್ಡ್‌ N2 ಪ್ರೊ 4G ಸ್ಮಾರ್ಟ್‌ಫೋನ್‌ ಇಂದು (ಮಾರ್ಚ್ 31 ರಂದು) ಮಧ್ಯಾಹ್ನ 12 ಗಂಟೆಗೆ ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಫ್ಲಿಪ್‌ಕಾರ್ಟ್‌ ಇ ಕಾಮರ್ಸ್ ತಾಣದಲ್ಲಿ ಹೊಸ ಲಾವಾ ಬೋಲ್ಡ್‌ N2 ಪ್ರೊ 4G ಫೋನ್‌ ಮಾರಾಟ ಪ್ರಾರಂಭ ಮಾಡಲಿದೆ. ಇನ್ನು ಈ ಮೊಬೈಲ್‌ ಅರೋರಾ ಗೋಲ್ಡ್ ಮತ್ತು ಎಕ್ಲಿಪ್ಸ್ ಗ್ರೇ ಕಲರ್‌ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಮೊಬೈಲ್‌ಗಾಗಿ ಮೀಸಲಾದ ಮೈಕ್ರೋಸೈಟ್ ಈಗ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ನಲ್ಲಿ ಲೈವ್ ಆಗಿದೆ. ಹಾಗೆಯೇ ಲಾವಾ ಬೋಲ್ಡ್‌ N2 ಪ್ರೊ 4G ಮೊಬೈಲ್‌ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಆನ್‌ಲೈನ್‌ನಲ್ಲಿ ಖರೀದಿಸಲು ಪ್ರತ್ಯೇಕವಾಗಿ ಲಭ್ಯವಿರುತ್ತದೆ ಎನ್ನಲಾಗಿದೆ.

Lava Bold N2 Pro 4G

ಲಾವಾ ಬೋಲ್ಡ್‌ N2 ಪ್ರೊ 4G ನಿರೀಕ್ಷಿತ ಫೀಚರ್ಸ್‌

ಲಾವಾ ಬೋಲ್ಡ್‌ N2 ಪ್ರೊ 4G ಮೊಬೈಲ್‌ 6.67 ಇಂಚಿನ HD+ LCD ಡಿಸ್‌ಪ್ಲೇ ಪಡೆದಿರಲಿದೆ. ಹಾಗೆಯೇ ಇದರ ಸ್ಕ್ರೀನ್‌ 120Hz ರಿಫ್ರೆಶ್ ರೇಟ್‌ ಸೌಲಭ್ಯ ಒಳಗೊಂಡಿರಲಿದೆ. ಹಾಗೆಯೇ ಈ ಫೋನ್‌ ಆಂಡ್ರಾಯ್ಡ್ 15 ಓಎಸ್‌ ಸಪೋರ್ಟ್‌ ಜೊತೆಗೆ ಯುನಿಸಾಕ್ T7250 ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ 4GB RAM + 64GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ. ಅಲ್ಲದೇ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ ಈ ಸ್ಮಾರ್ಟ್‌ಫೋನ್ IP54 ರೇಟಿಂಗ್ ಆಯ್ಕೆಯನ್ನು ಕೂಡಾ ಹೊಂದಿರಲಿದೆ.

ಹಾಗೆಯೇ ಲಾವಾ ಬೋಲ್ಡ್‌ N2 ಪ್ರೊ 4G ಮೊಬೈಲ್‌ ಹಿಂಭಾಗದಲ್ಲಿ ಟ್ರಿಪಲ್‌ ಕ್ಯಾಮೆರಾ ಒಳಗೊಂಡಿರಲಿದೆ. ಇನ್ನು ಇದರ ಮೂರು ಕ್ಯಾಮೆರಾಗಳು AI ಬೆಂಬಲಿತ 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರುವುದು ಬಹುತೇಕ ಖಚಿತ ಎನ್ನಲಾಗಿದೆ. ಇನ್ನು ಈ ಫೋನ್‌ 5,000 mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರಲಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo