Vivo V70 FE ಬಿಡುಗಡೆಗೆ ದಿನಗಣನೆ ಶುರು! ನಿರೀಕ್ಷಿತ ಫೀಚರ್ಸ್ ಹಾಗೂ ಬೆಲೆ ನೋಡಿ
ವಿವೋ V70 FE ಮೊಬೈಲ್ 120Hz ರಿಫ್ರೆಶ್ ರೇಟ್ ಸೌಲಭ್ಯವನ್ನು ಹೊಂದಿರಲಿದೆ
ವಿವೋ V70 FE ಫೋನ್ 90W ಫಾಸ್ಟ್ ಚಾರ್ಜಿಂಗ್ ಪಡೆದುಕೊಂಡಿರಲಿದೆ
ವಿವೋದ ಈ ಹೊಸ ಫೋನ್ ಗ್ರೀನ್ ಹಾಗೂ ಪಿಂಕ್ ಬಣ್ಣಗಳ ಆಯ್ಕೆ ಪಡೆದಿರಲಿದೆ
ಜನಪ್ರಿಯ ವಿವೋ ಮೊಬೈಲ್ ಕಂಪನಿಯ ಕೆಲವು ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿವೆ. ಇದರ ಮುಂದುವರಿದ ಭಾಗವಾಗಿ ಇದೀಗ ವಿವೋ ಕಂಪನಿಯು ಹೊಸದಾಗಿ Vivo V70 FE ಅನ್ನು ದೇಶಿಯ ಮಾರುಕಟ್ಟೆಗೆ ಲಾಂಚ್ ಮಾಡಲು ಸಜ್ಜಾಗಿದೆ. ಅಂದಹಾಗೆ ಸಂಸ್ಥೆಯು ವಿವೋ V70 FE ಫೋನ್ ಅನ್ನು ಏಪ್ರಿಲ್ ಆರಂಭದಲ್ಲಿಯೇ ಪರಿಚಯಿಸಿದೆ. ಈ ಫೋನ್ ಲಾಂಚ್ ಬಗ್ಗೆ ಫ್ಲಿಪ್‌ಕಾರ್ಟ್ ತಾಣದಲ್ಲಿ ಮೈಕ್ರೋಸೈಟ್ ಈಗ ಲೈವ್ ಆಗಿದ್ದು ಕೆಲವು ಫೀಚರ್ಸ್‌ಗಳನ್ನು ತಿಳಿಸುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್ ದೇಶದಲ್ಲಿ ಗ್ರೀನ್ ಹಾಗೂ ಪಿಂಕ್ ಕಲರ್ ಆಯ್ಕೆಗಳಲ್ಲಿ ಮಾರಾಟ ಆಗಲಿದೆ ಎನ್ನಲಾಗಿದೆ. ಹಾಗೆಯೇ ಈ ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿರಲಿದೆ. ಹಾಗಾದರೆ ವಿವೋ V70 FE ಮೊಬೈಲ್‌ನ ಲಾಂಚ್ ಡೇಟ್, ಇತರೆ ನಿರೀಕ್ಷಿತ ಫೀಚರ್ಸ್‌ಗಳ ಕುರಿತು ಮುಂದೆ ತಿಳಿಯೋಣ ಬನ್ನಿರಿ.
SurveyAlso Read : Jio 999 ರೂ.ಗಳ ಪ್ಲಾನ್: ಇದು ಬಜೆಟ್ ಬೆಲೆಯಲ್ಲಿ ಬೊಂಬಾಟ್ ಯೋಜನೆ
Vivo V70 FE ಬಿಡುಗಡೆಗೆ ದಿನಗಣನೆ
ವಿವೋ ಕಂಪನಿಯ ಮುಂಬರುವ ಹೊಸ ವಿವೋ V70 FE ಫೋನ್ ಗ್ರಾಹಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಈ ಮೊಬೈಲ್ ಇದೇ ಏಪ್ರಿಲ್ 2 ರಂದು ಮಧ್ಯಾಹ್ನ 12 ಗಂಟೆಗೆ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡುವುದು ಪಕ್ಕಾ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಲಾಂಚ್‌ಗಾಗಿ ಮೀಸಲಾದ ಮೈಕ್ರೋಸೈಟ್ ಈಗ ಫ್ಲಿಪ್‌ಕಾರ್ಟ್ ತಾಣದಲ್ಲಿ ಲೈವ್ ಆಗಿದೆ. ಹಾಗೆಯೇ ಭಾರತದಲ್ಲಿ ಈ ಫೋನ್ ಗ್ರೀನ್ ಹಾಗೂ ಪಿಂಕ್ ಕಲರ್ ಆಯ್ಕೆಗಳೊಂದಿಗೆ ಲಗ್ಗೆ ಇಡುವ ನಿರೀಕ್ಷೆಗಳಿವೆ. ಇದು 8GB RAM ಮತ್ತು 256GB ಸ್ಟೋರೇಜ್ ಆಯ್ಕೆ ಒಳಗೊಂಡಿರುವ ಸಾಧ್ಯತೆಗಳು ಇವೆ. ಇನ್ನು ಈ ಫೋನ್ ಆರಂಭಿಕ ಫ್ಲ್ಯಾಗ್‌ಶಿಫ್ ಮಾದರಿಯ ಪ್ರೈಸ್‌ಟ್ಯಾಗ್ ಪಡೆದಿರಲಿದೆ.

ವಿವೋ V70 FE ನಿರೀಕ್ಷಿತ ಫೀಚರ್ಸ್
ಮುಂಬರುವ ಹೊಸ ವಿವೋ V70 FE ಸ್ಮಾರ್ಟ್‌ಫೋನ್ 6.83 ಇಂಚಿನ 1.5K Q10+ AMOLED ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಹಾಗೆಯೇ ಇದರ ಸ್ಕ್ರೀನ್ 120Hz ವರೆಗೆ ರಿಫ್ರೆಶ್ ರೇಟ್ ಪಡೆದಿರಲಿದ್ದು ಜೊತೆಗೆ 1,900 nits ವರೆಗೆ ಗರಿಷ್ಠ ಬ್ರೈಟ್ನೆಸ್ ಸಪೋರ್ಟ್ ಪಡೆದಿರಲಿದೆ ಎನ್ನಲಾಗಿದೆ. ಹಾಗೆಯೇ ಇದರ ಸ್ಕ್ರೀನ್ 1,260×2,800 ಪಿಕ್ಸೆಲ್‌ರೆಸಲ್ಯೂಶನ್ ಬೆಂಬಲ ಹೊಂದಿರಲಿದೆ. ಅಲ್ಲದೇ ಈ ಮೊಬೈಲ್ 8GB + 128GB ಮತ್ತು 12GB + 256GB RAM ಸ್ಟೋರೇಜ್ ವೇರಿಯಂಟ್‌ಗಳ ಆಯ್ಕೆಗಳನ್ನು ಪಡೆದಿರಲಿದೆ ಎಂದು ಹೇಳಲಾಗುತ್ತದೆ.
ವಿವೋ V70 FE ಸ್ಮಾರ್ಟ್‌ಫೋನ್ ಹಿಂಬದಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿರಲಿದೆ. ಇನ್ನು ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಒಳಗೊಂಡಿರುವ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸೆನ್ಸಾರ್ ಅನ್ನು ಪಡೆದಿರಲಿದೆ ಎಂದು ಟೀಸ್ ಮಾಡಲಾಗಿದೆ. ಇನ್ನು ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7360 ಟರ್ಬೊ ಚಿಪ್‌ಸೆಟ್ ಪ್ರೊಸೆಸರ್ ಪವರ್ ಪಡೆದಿರುವ ಸಾಧ್ಯತೆಗಳು ಇವೆ. ಇದರ ಜೊತೆಗೆ 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಒಳಗೊಂಡ 7,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿರಲಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile