Lava Agni 4 ಪ್ರೀಮಿಯಂ ಫೀಚರ್ಗಳೊಂದಿಗೆ 2 ಕಲರ್ಗಳಲ್ಲಿ ಬರಲಿದೆ! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!
ಭಾರತದಲ್ಲಿ ಮುಂಬರಲಿರುವ Lava Agni 4 ಸ್ಮಾರ್ಟ್ಫೋನ್ ಡೇಟ್ ಕಂಫಾರ್ಮ್.
Lava Agni 4 ಸ್ಮಾರ್ಟ್ಫೋನ್ಇ ದೆ 20ನೇ ನವೆಂಬರ್ 2025 ರಂದು ಬಿಡುಗಡೆಯಾಗಲಿದೆ.
Lava Agni 4 ಸ್ಮಾರ್ಟ್ಫೋನ್ ಪ್ರೀಮಿಯಂ ಫೀಚರ್ಗಳೊಂದಿಗೆ 2 ಕಲರ್ಗಳಲ್ಲಿ ಬರಲಿದೆ.
ಭಾರತದಲ್ಲಿ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ Lava Agni 4 ಸ್ಮಾರ್ಟ್ಫೋನ್ ಬಿಡುಗಡೆಗೆ ಡೇಟ್ ಕಂಫಾರ್ಮ್ ಆಗಿದ್ದು ಫೋನ್ ಪ್ಲಾಸ್ಟಿಕ್ ಬದಲಿಗೆ ಅಲ್ಯೂಮಿನಿಯಂ ಫ್ರೇಮ್, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಹೊಸ ಸೈಡ್ ಬಟನ್ ರೀತಿಯ ಪ್ರೀಮಿಯಂ ಫೀಚರ್ಗಳೊಂದಿಗೆ ಪ್ಯಾಕ್ ಆಗಿದೆ. ಬಹುಶಃ ಆಪಲ್ನ ಕ್ಯಾಮೆರಾ ಕಂಟ್ರೋಲ್ ಬಟನ್ನಂತೆಯೇ ಇರುತ್ತದೆ ಎಂದು ಕಂಪನಿ ದೃಢಪಡಿಸಿದೆ. ಇದು ಮೀಡಿಯಾ ಟೆಕ್ (MediaTek) ಚಿಪ್ಸೆಟ್ ಅನ್ನು ಒಳಗೊಂಡಿರುತ್ತದೆ. ಈಗ ಮುಂಬರುವ ಹ್ಯಾಂಡ್ಸೆಟ್ನ ಬಣ್ಣ ಆಯ್ಕೆಗಳನ್ನು ದೃಢಪಡಿಸಲಾಗಿದೆ. ಸ್ಮಾರ್ಟ್ಫೋನ್ನ ಬೆಲೆ ಶ್ರೇಣಿ ಹಾಗೂ ಅದರ ಕೆಲವು ಪ್ರಮುಖ ವೈಶಿಷ್ಟ್ಯಗಳು ಸಹ ಸೋರಿಕೆಯಾಗಿವೆ.
Lava Agni 4 ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯ:
ಲಾವಾ ಕಂಪನಿ ತನ್ನ ಮುಂಬರಲಿರುವ ಈ ಸ್ಮಾಟ್ಫೋನ್ ಬಗ್ಗೆ ಈಗಾಗಲೇ ಒಂದಿಷ್ಟು ಮಾಹಿತಿಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. Lava Agni 4 ಸ್ಮಾರ್ಟ್ಫೋನ್ ಪ್ರೀಮಿಯಂ ಫೀಚರ್ಗಳೊಂದಿಗೆ 2 ಕಲರ್ಗಳಲ್ಲಿ ಬರಲಿದ್ದು ಲೂನಾರ್ ಮಿಸ್ಟ್ ಮತ್ತು ಫ್ಯಾಂಟಮ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಸ್ಮಾರ್ಟ್ಫೋನ್ ಅಲ್ಯೂಮಿನಿಯಂ ಫ್ರೇಮ್ ಅನ್ನು ಹೊಂದಿರುತ್ತದೆ ಎಂದು ಕಂಪನಿಯು ಈಗಾಗಲೇ ದೃಢಪಡಿಸಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ ಪ್ರೊಸೆಸರ್ ಅನ್ನು ಸಹ ಒಳಗೊಂಡಿರುವ ನಿರೀಕ್ಷೆಯಿದೆ.
ಟೀಸರ್ಗಳು ಬಲಭಾಗದಲ್ಲಿ ವಾಲ್ಯೂಮ್ ಮತ್ತು ಪವರ್ ಬಟನ್ಗಳನ್ನು ತೋರಿಸುತ್ತವೆ ಜೊತೆಗೆ ಮಧ್ಯದ ಫ್ರೇಮ್ನ ಕೆಳಗಿನ ಬಲಭಾಗದಲ್ಲಿ ಹೆಚ್ಚುವರಿ ಬಟನ್ ಅನ್ನು ತೋರಿಸುತ್ತವೆ ಇದು ಆಪಲ್ನ ಕ್ಯಾಮೆರಾ ಕಂಟ್ರೋಲ್ ಬಟನ್ ಅನ್ನು ನೆನಪಿಸುವ ಕ್ಯಾಮೆರಾ ಕ್ಯಾಪ್ಚರ್ ಕೀ ಎಂದು ನಂಬಲಾಗಿದೆ.
Lava Agni 4 ನಿರೀಕ್ಷಿತ ಫೀಚರ್ಗಳೇನು?
ಹೆಚ್ಚುವರಿಯಾಗಿ ಇದು ಡೈಮೆನ್ಸಿಟಿ 8350 ಚಿಪ್ಸೆಟ್ ಮತ್ತು UFS 4.0 ಸ್ಟೋರೇಜ್ನಿಂದ ಚಾಲಿತವಾಗಿದೆ ಎಂದು ವದಂತಿಗಳಿವೆ ಇದು ಸುಧಾರಿತ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ನೀಡುತ್ತದೆ. ಇತ್ತೀಚಿನ ನೆಮ್ಮೊ ಪ್ರಮಾಣೀಕರಣ ಪಟ್ಟಿಯು 7050mAh ಲಿಥಿಯಂ-ಐಯಾನ್ ಸೆಲ್ ಅನ್ನು ಸೂಚಿಸಿದಂತೆ ಫೋನ್ ದೊಡ್ಡ 7000mAh ಬ್ಯಾಟರಿಯನ್ನು ಸಹ ಒಳಗೊಂಡಿರಬಹುದು.
Lava Agni 4 ಸ್ಮಾರ್ಟ್ಫೋನ್ ವಿಶೇಷಣಗಳು (ನಿರೀಕ್ಷಿತ)
ಸ್ಮಾರ್ಟ್ಫೋನ್ 120Hz ರಿಫ್ರೆಶ್ ದರದೊಂದಿಗೆ 6.78-ಇಂಚಿನ ಪೂರ್ಣ HD+ ಡಿಸ್ಟ್ರೇಯನ್ನು ಹೊಂದಿರಬಹುದು. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಚಿಪ್ಸೆಟ್ನಿಂದ ಚಾಲಿತವಾಗಿದೆ ಮತ್ತು UFS 4.0 ಆನ್ಬೋರ್ಡ್ ಸ್ಟೋರೇಜ್ ಅನ್ನು ಬೆಂಬಲಿಸುತ್ತದೆ ಎಂದು ವರದಿಯಾಗಿದೆ. ಕ್ಯಾಮೆರಾಕ್ಕೆ ಸಂಬಂಧಿಸಿದಂತೆ ಮುಂಬರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಎರಡು 50-ಮೆಗಾಪಿಕ್ಸೆಲ್ ಸಂವೇದಕಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. IECEE ಪಟ್ಟಿಯ ಆಧಾರದ ಮೇಲೆ ಇದು 7000mAh ಗಿಂತ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಎಂದು ಹೇಳಲಾಗುತ್ತದೆ.