ಕೈಗೆಟಕುವ ಬೆಲೆಗೆ Lava Agni 2 5G ಸೂಪರ್ ಬಜೆಟ್ ​ಫೋನ್! ಖರೀದಿಸುವ ಮುಂಚೆ ಈ 5 ಫೀಚರ್‌ಗಳನ್ನು ತಿಳಿಯಿರಿ

ಕೈಗೆಟಕುವ ಬೆಲೆಗೆ Lava Agni 2 5G ಸೂಪರ್ ಬಜೆಟ್ ​ಫೋನ್! ಖರೀದಿಸುವ ಮುಂಚೆ ಈ 5 ಫೀಚರ್‌ಗಳನ್ನು ತಿಳಿಯಿರಿ
HIGHLIGHTS

Lava Agni 2 5G ಬಹು ನಿರೀಕ್ಷಿತ ಮಾರಾಟವನ್ನು ಇಂದು ನಿಗದಿಪಡಿಸಲಾಗಿದೆ.

Lava Agni 2 5G ಸ್ಮಾರ್ಟ್ಫೋನ್ 24ನೇ ಮೇ 2023 ರಂದು ಬೆಳಿಗ್ಗೆ 10:00am ಸಮಯದಿಂದ ಇದರ ಮೊದಲ ಭರ್ಜರಿ ಮಾರಾಟ ಪ್ರಾರಂಭ

Lava Agni 2 5G ಕ್ರೆಡಿಟ್ / ಡೆಬಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳನ್ನು ಬಳಸಿಕೊಂಡು ಸುಮಾರು 19,999 ರೂಗಳಿಗೆ ಕಡಿಮೆ ಬೆಲೆಯಲ್ಲಿ ಪಡೆಯಬಹುದು.

ಭಾರತದಲ್ಲಿ ಲಾವಾ ಅಗ್ನಿ ೨ ಸ್ಮಾರ್ಟ್ಫೋನ್ (Lava Agni 2 5G) ಬಹು ನಿರೀಕ್ಷಿತ ಮಾರಾಟವನ್ನು ನಿಗದಿಪಡಿಸಲಾಗಿದೆ. ಇದು ಖರೀದಿಗೆ ಅದರ ಮೊದಲ ಲಭ್ಯತೆಯನ್ನು ಗುರುತಿಸುತ್ತದೆ. ಅಮೆಜಾನ್ ಸ್ಮಾರ್ಟ್ಫೋನ್ ಮಾರಾಟ ಮಾಡಲು ವಿಶೇಷ ವೇದಿಕೆಯಾಗಿದೆ. ಇಂದು 24ನೇ ಮೇ 2023 ರಂದು ಬೆಳಿಗ್ಗೆ 10:00am ಸಮಯದಿಂದ ಇದರ ಮೊದಲ ಭರ್ಜರಿ ಮಾರಾಟ ಪ್ರಾರಂಭವಾಗಲಿದೆ. ಈ ಲೇಖಾನದಲ್ಲಿ Lava Agni 2 5G ಫೋನಿನ ವಿಶೇಷಣಗಳು ಮತ್ತು ಬೆಲೆಗಳ ಅವಲೋಕನವನ್ನು ತಿಳಿಯಿರಿ. ಅಲ್ಲದೆ ಜೊತೆಗೆ ನಿರೀಕ್ಷಿತ ಖರೀದಿದಾರರಿಗೆ ಕಾಯುತ್ತಿರುವ ಆಕರ್ಷಕ ಕೊಡುಗೆಗಳನ್ನು ಸಹ ಈ ಲೇಖಾನದಲ್ಲಿ ಪಡೆಯಬಹುದು. 

Lava Agni 2 5G ಬೆಲೆ ಮತ್ತು ಆಫರ್‌ಗಳು

Lava Agni 2 5G ಸ್ಮಾರ್ಟ್ಫೋನಿನ ಮಾರಾಟದ ಬೆಲೆ 21,999 ರೂಗಳಾಗಿವೆ ಆದರೆ ಗ್ರಾಹಕರು ಅಮೆಜಾನ್ ಮೂಲಕ ಪ್ರಮುಖ ಕ್ರೆಡಿಟ್ / ಡೆಬಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳನ್ನು ಬಳಸಿಕೊಂಡು ಸುಮಾರು 19,999 ರೂಗಳಿಗೆ ಕಡಿಮೆ ಬೆಲೆಯಲ್ಲಿ ಪಡೆಯಬಹುದು. ಅಂದ್ರೆ Lava Agni 2 5G ಪರಿಣಾಮವಾಗಿ ನೀವು ರೂ 2,000 ರಷ್ಟು ರಿಯಾಯಿತಿಯನ್ನು ಪಡೆಯುವಿರಿ. ಈ ಸ್ಮಾರ್ಟ್ಫೋನ್ ಅಮೆಜಾನ್ ಮೂಲಕ ಪ್ರತ್ಯೇಕವಾಗಿ ಲಭ್ಯವಿರುತ್ತದೆ. Lava Agni 2 5G ಸ್ಮಾರ್ಟ್ಫೋನ್ ಸದ್ಯಕ್ಕೆ ಕೇವಲ ಗ್ಲಾಸ್ ವಿರಿಡಿಯನ್ ಎಂಬ ಒಂದೇ ಒಂದು ಬಣ್ಣದಲ್ಲಿ ಬರುತ್ತದೆ.

Lava Agni 2 5G ವಿಶೇಷಣಗಳು

Lava Agni 2 5G ಸ್ಮಾರ್ಟ್ಫೋನ್ 6.78 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದ್ದು ಅದು 2220 x 1080 ಪಿಕ್ಸೆಲ್‌ಗಳ FHD+ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು ಅಂಡರ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ನೀಡುತ್ತದೆ. ಸ್ಮಾರ್ಟ್ಫೋನ್ HDR, HDR10 ಮತ್ತು HDR10+ ಗೆ ಬೆಂಬಲದೊಂದಿಗೆ ಬರುತ್ತದೆ. Lava Agni 2 5G ಮ್ಯಾಟ್ ಫಿನಿಶ್ನೊಂದಿಗೆ ಗಾಜಿನ ಹಿಂಭಾಗವನ್ನು ಹೊಂದಿದೆ. ಸ್ಕ್ರೀನ್ ಶಾಟ್ ಕ್ಸೆನ್ಸೇಶನ್ ಗ್ಲಾಸ್‌ನಿಂದ ರಕ್ಷಿಸಲಾಗಿದೆ.

Lava Agni 2 5G ಸ್ಮಾರ್ಟ್ಫೋನ್ ಡೈಮೆನ್ಸಿಟಿ 7050 ಚಿಪ್ ಆನ್‌ಬೋರ್ಡ್‌ನೊಂದಿಗೆ ಭಾರತಕ್ಕೆ ಆಗಮಿಸಿದ ಮೊದಲ ಫೋನ್ ಆಗಿದೆ. ಇದು 8GB RAM, 8 GB ವರ್ಚುವಲ್ RAM, 256GB ಸ್ಟೋರೇಜ್ ಮತ್ತು ಮೈಕ್ರೊ SD ಕಾರ್ಡ್ ಬೆಂಬಲದೊಂದಿಗೆ Lava Agni 2 5G ಬಳಕೆದಾರರಿಗೆ Android 14 ಮತ್ತು Android 15 ಅಪ್ಡೇಟ್ ಒದಗಿಸುತ್ತದೆ.

Lava Agni 2 5G ಸ್ಮಾರ್ಟ್ಫೋನ್ ಕ್ಯಾಮೆರಾ ವಿಭಾಗದಲ್ಲಿ ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ + 8 ಮೆಗಾಪಿಕ್ಸೆಲ್ (ಅಲ್ಟ್ರಾ-ವೈಡ್) + 2 ಮೆಗಾಪಿಕ್ಸೆಲ್ (ಮ್ಯಾಕ್ರೋ) + 2 ಮೆಗಾಪಿಕ್ಸೆಲ್ (ಆಳ) ಕ್ವಾಡ್ ಅಂದ್ರೆ ನಾಲ್ಕು ಸೆನ್ಸರ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ಇದರೊಂದಿಗೆ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮರಾವನ್ನು ನೀಡಲಾಗಿದೆ. 

Lava Agni 2 5G ಸ್ಮಾರ್ಟ್ಫೋನ್ 66W ಫಾಸ್ಟ್ ಚಾರ್ಜಿಂಗ್‌ನೊಂದಿಗೆ 4700mAh ಬ್ಯಾಟರಿಯನ್ನು ಹೊಂದಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo