iQOO Z6 5G vs iQOO Z7 5G: ಫೋನ್‌ಗಳ ಟಾಪ್ 5 ಫೀಚರ್‌ ಹೋಲಿಕೆ! ಯಾವುದು ಬೆಸ್ಟ್ ನೀವೇ ಹೇಳಿ!

Ravi Rao ಇವರಿಂದ | ಪ್ರಕಟಿಸಲಾಗಿದೆ 23 Mar 2023 12:28 IST
HIGHLIGHTS
  • iQoo ತನ್ನ ಸ್ಮಾರ್ಟ್‌ಫೋನ್‌ ಗ್ರಾಹಕರ ಬೆಡಿಕೆಯ ಅನುಸಾರವಾಗಿ ವಿವಿಧ ಸೀರೀಸ್ ಮೂಲಕ ಲಾಂಚ್ ಮಾಡುತ್ತಿದೆ.

  • iQoo ಕಂಪನಿಯ ಸ್ಮಾರ್ಟ್‌ಫೋನ್‌ಗಳು ಬಜೆಟ್ ಮತ್ತು ಪ್ರೀಮಿಯಂ ಲುಕ್ ಮೂಲಕ ತನ್ನದೇಯಾದ ಗ್ರಾಹಕರನ್ನು ಹೊಂದಿದೆ

  • iQoo Z6 5G ಮತ್ತು iQoo Z7 5G ಸ್ಮಾರ್ಟ್‌ಫೋನ್ ಗಳ ಬಗ್ಗೆ ಹೇಳುವುದಾದರೆ ಇವುಗಳು ಸಾಕಷ್ಟು ಆಕರ್ಷಕ ಫೀಚರ್‌ಗಳನ್ನು ಒಳಗೊಂಡಿದೆ.

iQOO Z6 5G vs iQOO Z7 5G: ಫೋನ್‌ಗಳ ಟಾಪ್ 5 ಫೀಚರ್‌ ಹೋಲಿಕೆ! ಯಾವುದು ಬೆಸ್ಟ್ ನೀವೇ ಹೇಳಿ!
iQOO Z6 5G vs iQOO Z7 5G: ಫೋನ್‌ಗಳ ಟಾಪ್ 5 ಫೀಚರ್‌ ಹೋಲಿಕೆ! ಯಾವುದು ಬೆಸ್ಟ್ ನೀವೇ ಹೇಳಿ!

iQOO Z6 5G vs iQOO Z7 5G: ವಿವೊ ಕಂಪನಿಯ ಐಕ್ಯೂ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ತಮ್ಮದೇಯಾದ ವಿಶೇಷ ಬ್ರಾಂಡ್ ಮೂಲಕ ಉತ್ತಮ ಪ್ರಾಬಲ್ಯವನ್ನು ಸಾಧಿಸಿವೆ. ಅಲ್ಲದೆ ಬಜೆಟ್ ಮತ್ತು ಪ್ರೀಮಿಯಂ ಲುಕ್ ಮೂಲಕ ತನ್ನದೇ ಆದ ಗ್ರಾಹಕ ವಲಯವನ್ನು ಪಡೆದುಕೊಳ್ಳುವಲ್ಲಿ ಈ ಕಂಪನಿಯ ಫೋನ್ಗಳು ಯಶಸ್ವಿಯಾಗುತ್ತಿದೆ. ಅದಕ್ಕಾಗಿ ಐಕ್ಯೂ ತನ್ನ ಸ್ಮಾರ್ಟ್ಫೋನುಗಳನ್ನು ಗ್ರಾಹಕರ ಬೆಡಿಕೆಯ ಅನುಸಾರವಾಗಿ ವಿವಿಧ ಸೀರೀಸ್ ಗಳ ಮೂಲಕ ಲಾಂಚ್ ಮಾಡುತ್ತಿದೆ. Vivo ಕಂಪನಿಯ iQoo Z6 5G ಮತ್ತು iQoo Z7 5G ಸ್ಮಾರ್ಟ್‌ಫೋನ್ ಗಳ ಬಗ್ಗೆ ಹೇಳುವುದಾದರೆ ಇವುಗಳು ಸಾಕಷ್ಟು ಆಕರ್ಷಕ ಫೀಚರ್‌ಗಳನ್ನು ಒಳಗೊಂಡಿದೆ. ಈ ಎರಡು ಫೋನ್ ಗಳ ಫೀಚರ್‌ಗಳೇನು ಇವುಗಳಲ್ಲಿ ಯಾವುದು ಬೆಸ್ಟ್ ನೋಡೋಣ.

iQoo Z6 5G vs iQoo Z7 5G ಡಿಸ್ಪ್ಲೇ:

ಈ ಐಕ್ಯೂ (iQOO) ಸ್ಮಾರ್ಟ್ಫೋನ್ 6.58 ಇಂಚಿನ ಫುಲ್ HD+ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 1080x2408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಜೊತೆಗೆ 401 PPI ಡೆನ್ಸಿಟಿ ಅನ್ನು ಹೊಂದಿದೆ. iQoo Z7 5G ಸ್ಮಾರ್ಟ್ಫೋನ್ 6.38 ಇಂಚಿನ ಫುಲ್ HD+  AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಜೊತೆಗೆ 90Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಅಲ್ಲದೆ ಈ ಫೋನ್ 413 PPI ಡೆನ್ಸಿಟಿ ಅನ್ನು ಹೊಂದಿದೆ.

iQoo Z6 5G vs iQoo Z7 5G ಕ್ಯಾಮೆರಾ:

iQoo Z6 5G ಸ್ಮಾರ್ಟ್ಫೋನ್ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾಗಳ ಸೆಟ್ಅಪ್ ಅನ್ನು ಹೊಂದಿದೆ. ಇದರ ಮೊದಲನೆಯ ಕ್ಯಾಮೆರಾ 50MP ಕ್ಯಾಮೆರಾವನ್ನು ಹೊಂದಿದ್ದು ಉಳಿದೆರಡು ಕ್ಯಾಮೆರಾಗಳು 2MP ಮ್ಯಾಕ್ರೋ ಶೂಟರ್ ಮತ್ತು 2MP ಬೊಕ್ ಕ್ಯಾಮೆರಾಗಳನ್ನು ಒಳಗೊಂಡಿದೆ. ಹಾಗೆಯೇ ಸೆಲ್ಫಿ ಮತ್ತು ವಿಡಿಯೋ ಚಾಟಿಂಗ್ಗಾಗಿ ಫೋನ್ ಫ್ರಂಟ್ನಲ್ಲಿ 16MP ಕ್ಯಾಮೆರಾವನ್ನು ಹೊಂದಿದೆ. iQoo Z7 5G ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದಿದೆ. ಇದಲ್ಲದೆ 16MP ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್ ಒಳಗೊಂಡಿದೆ.

iQoo Z6 5G vs iQoo Z7 5G ಪ್ರೊಸೆಸರ್:

iQoo Z6 5G ಸ್ಮಾರ್ಟ್ಫೋನ್ 8GB LPDDR4X RAM ಜೊತೆಗೆ ಅಕ್ಟಾ ಕೋರ್ ಸ್ನ್ಯಾಪ್ಡ್ರಾಗನ್ 695 OS ಅನ್ನು ಹೊಂದಿದೆ. ಈ ಫೋನ್ ಪ್ರಮಾಣಿತವಾಗಿ 128GB UFS 2.2 ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದರ ಜೊತೆಗೆ ಮೈಕ್ರೊ SD ಕಾರ್ಡ್ ಮೂಲಕ (1TB ವರೆಗೆ) ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ. iQoo Z7 5G ಸ್ಮಾರ್ಟ್ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 ಪ್ರೊಸೆಸರ್ ಅನ್ನು ಹೊಂದಿದೆ. ಇದು 8GB ವರೆಗೆ ಮೆಮೊರಿ ಮತ್ತು 128GB ಇಂಟರ್ನಲ್ ಸ್ಟೋರೇಜ್ ಜೊತೆಗೆ ಆಂಡ್ರಾಯ್ಡ್ 13 ಆಧರಿಸಿದ FunTouchOS 13 ಸ್ಕಿನ್ ಅನ್ನು ಹೊಂದಿದೆ.

iQoo Z6 5G vs iQoo Z7 5G ಬ್ಯಾಟರಿ:

iQoo Z6 5G ಸ್ಮಾರ್ಟ್ಫೋನ್ 5000mAh ಬ್ಯಾಟರಿಗೆ ಶಕ್ತಿ ನೀಡುತ್ತದೆ ಮತ್ತು USB ಟೈಪ್-C ಕನೆಕ್ಟರ್‌ನಲ್ಲಿ 18W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.iQOO Z7 5G ಸ್ಮಾರ್ಟ್ಫೋನ್ 4500mAh ಬ್ಯಾಟರಿಗೆ ಅನ್ನು ಹೊಂದಿದೆ. ಇದು ಸಹ USB ಟೈಪ್-C ಕನೆಕ್ಟರ್‌ನಲ್ಲಿ 44W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

iQoo Z6 5G vs iQoo Z7 5G ಬೆಲೆ:

ಇವುಗಳ ಬೆಲೆಯ ಬಗ್ಗೆ ಮಾತನಾಡುವುದಾದರೆ ಈ ಸ್ಮಾರ್ಟ್ಫೋನ್ iQoo Z6 5G ಕ್ರೋಮಿಟಿಕ್ ಬ್ಲೂ ಮತ್ತು ಡೈನಮೊ ಬ್ಲ್ಯಾಕ್  ಕಲರ್ಗಳ ಆಯ್ಕೆಯಲ್ಲಿ ರೂ 14,999 ರೂಗಳ ಬೆಲೆಯಲ್ಲಿ ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ. ಅದರ ಕ್ರಮವಾಗಿ iQoo Z7 5G ಸ್ಮಾರ್ಟ್ಫೋನ್ ನಾರ್ವೆ ಬ್ಲೂ ಮತ್ತು ಪೆಸಿಫಿಕ್ ನೈಟ್ ಕಲರ್ಗಳ ಆಯ್ಕೆಯಲ್ಲಿ ರೂ 18,999 ರ ಬೆಲೆಯಲ್ಲಿ ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ.

Ravi Rao
Ravi Rao

Email Email Ravi Rao

Follow Us Facebook Logo Facebook Logo

About Me: Ravi Rao is an Indian technology journalist who has been covering consumer technology since 2016. He is a Senior Editor for Kannada at Digit.in Read More

WEB TITLE

iQoo Z6 5G vs iQoo Z7 5G: Top 5 highlite specs and price comparison

Advertisements

ಟ್ರೆಂಡಿಂಗ್ ಲೇಖನಗಳು

Advertisements

ಇತ್ತೀಚಿನ ಲೇಖನಗಳು ಎಲ್ಲವನ್ನು ವೀಕ್ಷಿಸಿ

VISUAL STORY ಎಲ್ಲವನ್ನು ವೀಕ್ಷಿಸಿ