ದೈತ್ಯ iQOO 15 ಬೆಲೆಯಲ್ಲಿ ಭರ್ಜರಿ ಇಳಿಕೆ! ಟ್ರಿಪಲ್‌ 50MP ಕ್ಯಾಮೆರಾ, ಬಿಗ್‌ ಬ್ಯಾಟರಿ ಸಪೋರ್ಟ್‌

HIGHLIGHTS

ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್‌ನಲ್ಲಿ iQOO 15 ಭರ್ಜರಿ ಡಿಸ್ಕೌಂಟ್‌ ಪಡೆದಿದೆ

iQOO 15 ಫೋನ್‌ Snapdragon 8 Elite Gen 5 ಪ್ರೊಸೆಸರ್‌ ಅನ್ನು ಪಡೆದಿದೆ

iQOO 15 ಮೊಬೈಲ್‌ 100W ಫ್ಲ್ಯಾಶ್ ಚಾರ್ಜ್‌ ಚಾರ್ಜಿಂಗ್‌ ಸೌಲಭ್ಯ ಪಡೆದುಕೊಂಡಿದೆ

ದೈತ್ಯ iQOO 15 ಬೆಲೆಯಲ್ಲಿ ಭರ್ಜರಿ ಇಳಿಕೆ! ಟ್ರಿಪಲ್‌ 50MP ಕ್ಯಾಮೆರಾ, ಬಿಗ್‌ ಬ್ಯಾಟರಿ ಸಪೋರ್ಟ್‌

iQOO ಸಂಸ್ಥೆಯು ಮಾರುಕಟ್ಟೆಗೆ ಹೊಸದಾಗಿ iQOO 15R ಫೋನ್‌ ಪರಿಚಯಿಸಿ ಗ್ರಾಹಕರ ಗಮನ ಸೆಳೆಯುತ್ತಿದೆ. ಆದರೆ ಐಕ್ಯೂ ಸಂಸ್ಥೆಯ iQOO 15 ಮೊಬೈಲ್‌ ಈಗ Flipkart ವೆಬ್‌ಸೈಟ್‌ ನಲ್ಲಿ ಭರ್ಜರಿ ಬೆಲೆ ಇಳಿಕೆಯಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ ಸಹ ಪಡೆಯಲು ಅವಕಾಶ ಇದೆ. ಐಕ್ಯೂ ಕಂಪನಿಯ ಈ ಮೊಬೈಲ್‌ Snapdragon 8 Elite Gen 5 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದ್ದು ಇದರೊಂದಿಗೆ 7000mAh ಬ್ಯಾಟರಿ ಸಪೋರ್ಟ್‌ ಅನ್ನು ಒಳಗೊಂಡಿದೆ. ಅಂದಹಾಗೆ ಈ ಫೋನ್‌ ಅಲ್ಫಾ ಮತ್ತು ಲೆಜೆಂಡ್‌ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಹಾಗಾದರೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ iQOO 15 ಮೊಬೈಲ್‌ಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ನಾಳೆ Infinix NOTE Edge 5G ಸೇಲ್‌ ಪ್ರಾರಂಭ! ಬೆಲೆ ಹಾಗೂ ಫೀಚರ್ಸ್‌ ಮಾಹಿತಿ ಇಲ್ಲಿದೆ

iQOO 15 ಮೊಬೈಲ್‌ಗೆ ಭಾರೀ ರಿಯಾಯಿತಿ

ಈಗಾಗಲೇ ಮೊಬೈಲ್‌ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ iQOO 15 ಸ್ಮಾರ್ಟ್‌ಫೋನ್‌ ಪ್ರಸ್ತುತ Flipkart ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಅತ್ಯುತ್ತಮ ಡಿಸ್ಕೌಂಟ್‌ ಪಡೆದಿದೆ. ಈ ಮೊಬೈಲ್‌ 12GB RAM + 256GB ವೇರಿಯಂಟ್‌ ಬೆಲೆ 76,999 ರೂಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಫೋನ್‌ 72,998 ರೂಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಗ್ರಾಹಕರು ICICI ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸಿದರೆ ಹೆಚ್ಚುವರಿಯಾಗಿ 4000 ರೂಗಳ ಇನ್‌ಸ್ಟಂಟ್‌ ರಿಯಾಯಿತಿ ಪಡೆಯಬಹುದಾಗಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್‌ ಅಲ್ಫಾ ಮತ್ತು ಲೆಜೆಂಡ್‌ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ.

iQOO 15

iQOO 15 ಮೊಬೈಲ್‌ನ ಪ್ರಮುಖ ಫೀಚರ್ಸ್‌ ಹೀಗಿವೆ

iQOO 15 ಮೊಬೈಲ್‌ ಡಿಸ್‌ಪ್ಲೇಯು 6.85 ಇಂಚಿನ 2K M14 LTPO OLED ಡಿಸ್‌ಪ್ಲೇ ಹೊಂದಿದೆ. ಹಾಗೆಯೇ 144Hz ರಿಫ್ರೆಶ್‌ ರೇಟ್‌ ಹೊಂದಿದ್ದು ಜೊತೆಗೆ 2600 nits ಬ್ರೈಟ್ನೆಸ್‌ ಸಪೋರ್ಟ್‌ ಪಡೆದಿದೆ. ಇನ್ನು ಈ ಮೊಬೈಲ್‌ Snapdragon 8 Elite Gen 5 ಚಿಪ್‌ಸೆಟ್‌ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ 12GB RAM + 256GB ಹಾಗೂ 16GB RAM + 512GB ಸ್ಟೋರೇಜ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

ಹಾಗೆಯೇ iQOO 15 ಮೊಬೈಲ್‌ ಹಿಂಭಾಗದಲ್ಲಿ ಟ್ರಿಪಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಅನ್ನು ಒಳಗೊಂಡಿದೆ. ಇನ್ನು ಸೆಕೆಂಡರಿ ಕ್ಯಾಮೆರಾ 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಹಾಗೂ ತೃತೀಯ ಕ್ಯಾಮೆರಾ ಸಹ 50MP ಸೆನ್ಸಾರ್‌ ಬಲ ಪಡೆದಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಮೊಬೈಲ್‌ 32MP ಸೆನ್ಸಾರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇನ್ನು ಈ ಫೋನ್‌ 7000mAh ಬ್ಯಾಟರಿ ಜೊತೆಗೆ 100W ಫ್ಲ್ಯಾಶ್ ಚಾರ್ಜ್‌ ಚಾರ್ಜಿಂಗ್‌ ಸಪೋರ್ಟ್‌ ಪಡೆದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo