ನಾಳೆ Infinix NOTE Edge 5G ಸೇಲ್‌ ಪ್ರಾರಂಭ! ಬೆಲೆ ಹಾಗೂ ಫೀಚರ್ಸ್‌ ಮಾಹಿತಿ ಇಲ್ಲಿದೆ

HIGHLIGHTS

ಫ್ಲಿಪ್‌ಕಾರ್ಟ್‌ನಲ್ಲಿ ನಾಳೆ Infinix NOTE Edge 5G ಮೊಬೈಲ್‌ ಖರೀದಿಗೆ ಲಭ್ಯ

Infinix ಕಂಪನಿಯ ಈ ಫೋನ್‌ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ

Infinix NOTE Edge 5G ಫೋನ್‌ ಮೂರು ಆಕರ್ಷಕ ಕಲರ್‌ ಆಯ್ಕೆಗಳನ್ನು ಹೊಂದಿದೆ

ನಾಳೆ Infinix NOTE Edge 5G ಸೇಲ್‌ ಪ್ರಾರಂಭ! ಬೆಲೆ ಹಾಗೂ ಫೀಚರ್ಸ್‌ ಮಾಹಿತಿ ಇಲ್ಲಿದೆ

ಇನ್ಫಿನಿಕ್ಸ್‌ ಮೊಬೈಲ್ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ Infinix NOTE Edge 5G ಮೊಬೈಲ್‌ ಈಗಾಗಲೇ ಗ್ರಾಹಕರಿಗೆ ಆಕರ್ಷಕ ಎನಿಸಿದೆ. ಇನ್ನು ಈ ಮೊಬೈಲ್‌ನ ಮೊದಲ ಸೇಲ್‌ ನಾಳೆ (ಫೆಬ್ರವರಿ 25 ರಿಂದ) ಪ್ರಾರಂಭವಾಗಲಿದೆ. ಈ ಮೊಬೈಲ್‌ MediaTek Dimensity 7100 ಪ್ರೊಸೆಸರ್‌ ಸಾಮರ್ಥ್ಯ ಅನ್ನು ಪಡೆದಿರುವ ಜೊತೆಗೆ ಬರೋಬ್ಬರಿ 6,500mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಇನ್ಫಿನಿಕ್ಸ್‌ ನೋಟ್‌ ಎಡ್ಜ್ 5G ಸ್ಮಾರ್ಟ್‌ಫೋನ್ ಮೂರು ಆಕರ್ಷಕ ಕಲರ್‌ ಆಯ್ಕೆಗಳನ್ನು ಒಳಗೊಂಡಿದೆ. ಇನ್ನುಳಿದಂತೆ Infinix NOTE Edge 5G ಮೊಬೈಲ್‌ನ ಬೆಲೆ, ಲಭ್ಯತೆ ಹಾಗೂ ಫೀಚರ್ಸ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಇಂದಿನಿಂದ Realme P4 Lite ಮೊಬೈಲ್‌ ಖರೀದಿಗೆ ಲಭ್ಯ! ಕಡಿಮೆ ಬೆಲೆಯಲ್ಲಿ ಆಕರ್ಷಕ ಫೋನ್‌

Infinix NOTE Edge 5G ಮೊಬೈಲ್‌ ಮಾರಾಟ ಮಾಹಿತಿ

Infinix ಸಂಸ್ಥೆಯ Infinix NOTE Edge 5G ಮೊಬೈಲ್‌ ನಾಳೆ (ಫೆ 25 ರಿಂದ) ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ನ ಮೂಲಕ ಮಧ್ಯಾಹ್ನ 12 ಗಂಟೆಗೆ ಮಾರಾಟ ಪ್ರಾರಂಭಿಸಲಿದೆ. 6GB + 128GB ವೇರಿಯಂಟ್‌ ಪ್ರೈಸ್‌ 21,999 ರೂಗಳು ಆಗಿದೆ. ಅದೇ ರೀತಿ 8GB + 128GB ವೇರಿಯಂಟ್‌ ಬೆಲೆಯು 23,999 ರೂಗಳು ಆಗಿದ್ದು ಹಾಗೆಯೇ 8GB + 256GB ವೇರಿಯಂಟ್‌ 25,999 ರೂಗಳ ಬೆಲೆಯಲ್ಲಿ ಲಭ್ಯ. ಇನ್ನು ಈ ಮೊಬೈಲ್‌ ಸಿಲ್ಕ್ ಫೈಬರ್, ಸ್ಟೆಲ್ಲರ್ ಬ್ಲೂ ಮತ್ತು ಲೂನಾರ್ ಟೈಟಾನಿಯಂ ಕಲರ್‌ ಆಯ್ಕೆಯನ್ನು ಒಳಗೊಂಡಿದೆ. ಇದೇ ಫೆಬ್ರವರಿ 25 ರಿಂದ ಫ್ಲಿಪ್‌ಕಾರ್ಟ್ ಮತ್ತು ಇನ್ಫಿನಿಕ್ಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ. ಗ್ರಾಹಕರು ಆರಂಭಿಕ ಪರಿಚಯಾತ್ಮಕ ಕೊಡುಗೆಯಾಗಿ ICICI ಮತ್ತು SBI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ ಇನ್‌ಸ್ಟಂಟ್‌ 2,000 ರೂ.ಗಳ ರಿಯಾಯಿತಿ ಪಡೆಯಬಹುದು.

Infinix NOTE Edge

Infinix NOTE Edge 5G ಫೀಚರ್ಸ್‌ ಹೀಗಿವೆ ನೋಡಿ

ಇನ್ಫಿನಿಕ್ಸ್‌ ನೋಟ್‌ ಎಡ್ಜ್ 5G ಮೊಬೈಲ್‌ 120Hz ರಿಫ್ರೆಶ್ ರೇಟ್‌ ಸೌಲಭ್ಯದ ಜೊತೆಗೆ 6.78 ಇಂಚಿನ 1.5K 3D ಕರ್ವ್ಡ AMOLED ಡಿಸ್‌ಪ್ಲೇ ಅನ್ನು ಪಡೆದಿದೆ. ಅಲ್ಲದೇ ಈ ಮೊಬೈಲ್‌ ಸ್ಕ್ರೀನ್‌ 4,500 ನಿಟ್ಸ್ ಬ್ರೈಟ್ನೆಸ್‌ ಸಪೋರ್ಟ್‌ ಪಡೆದಿದ್ದು ಇದರೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಒಳಗೊಂಡಿದೆ. ಹಾಗೆಯೇ ಈ ನೂತನ ಮೊಬೈಲ್‌ MediaTek Dimensity 7100 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 16 ಆಧಾರಿತ XOS 16 ಸಾಫ್ಟ್‌ವೇರ್ ಸಪೋರ್ಟ್‌ ಪಡೆದುಕೊಂಡಿದೆ. ಹಾಗೆಯೇ 128GB ಹಾಗೂ 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

ಹಾಗೆಯೇ Infinix NOTE Edge 5G ಸ್ಮಾರ್ಟ್‌ಫೋನ್‌ 45W ವೈರ್ಡ್ ಫಾಸ್ಟ್‌ ಚಾರ್ಜಿಂಗ್ ಬೆಂಬಲದ ಜೊತೆಗೆ 6,500mAh ಸಾಮರ್ಥ್ಯದ ಬ್ಯಾಟರಿ ಸಪೋರ್ಟ್‌ ಒಳಗೊಂಡಿದೆ. ಹಿಂಭಾಗದಲ್ಲಿ ಡ್ಯುಯಲ್ ಹಿಂಬದಿಯ ಕ್ಯಾಮೆರಾ ರಚನೆ ಪಡೆದಿದ್ದು ಇದರ ಮುಖ್ಯ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಅದೇ ರೀತಿ ಸೆಲ್ಫಿಗಳು ಹಾಗೂ ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಪಡೆದುಕೊಂಡಿದೆ. ಇದರೊಂದಿಗೆ ಈ ಮೊಬೈಲ್‌ JBL ಬೆಂಬಲಿತ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳ ಸೌಲಭ್ಯ ಸಹ ಪಡೆದುಕೊಂಡಿದೆ. ಅಲ್ಲದೇ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಪಡೆದುಕೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo