ಭಾರತದಲ್ಲಿ iPhone 13 ಮೇಲೆ ಭಾರಿ ಬೆಲೆ ಇಳಿಕೆ! ಈಗ ₹35,900 ರೂಗಳಿಗೆ ಖರೀದಿಸುವ ಸುವರ್ಣಾವಕಾಶ!

ಭಾರತದಲ್ಲಿ iPhone 13 ಮೇಲೆ ಭಾರಿ ಬೆಲೆ ಇಳಿಕೆ! ಈಗ ₹35,900 ರೂಗಳಿಗೆ ಖರೀದಿಸುವ ಸುವರ್ಣಾವಕಾಶ!
HIGHLIGHTS

iPhone ಖರೀದಿಸಲು ಯೋಚಿಸುತ್ತಿದ್ದರೆ ಆಪಲ್ ನಿಮಗೆ ಎಂದು ಊಹಿಸದ ಅತ್ಯುತ್ತಮ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ

iPhone 13 ಈಗ ಕೇವಲ ₹35,900 ರೂಗಳಿಗೆ ಖರೀದಿಸುವ ಸುವರ್ಣಾವಕಾಶವನ್ನು ಬಳಕೆದಾರರಿಗೆ ನೀಡುತ್ತಿದೆ.

ಈ ಫೋನ್ ದೇಶಾದ್ಯಂತ ಆನ್‌ಲೈನ್ ಮತ್ತು ಆಫ್‌ಲೈನ್ ಆಪಲ್ ಅಧಿಕೃತ ಅಂಗಡಿಗಳಲ್ಲಿ ₹53,900 ರೂಗಳಿಗೆ ಮಾರಾಟವಾಗುತ್ತಿದೆ.

ಭಾರತದಲ್ಲಿ ನೀವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬಳಸಿ ಸುಸ್ತಾಗಿ ಈಗ ನೀವೊಂದು ಹೊಸ iPhone ಖರೀದಿಸಲು ಯೋಚಿಸುತ್ತಿದ್ದರೆ ಆಪಲ್ ನಿಮಗೆ ಎಂದು ಊಹಿಸದ ಅತ್ಯುತ್ತಮ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ. ಭಾರತದಲ್ಲಿ iStore ಜನಪ್ರಿಯ ಮತ್ತು ಹೆಚ್ಚು ಮಾರಾಟಕ್ಕೆ ಹೆಸರಾಗಿರುವ iPhone 13 ಈಗ ಕೇವಲ ₹35,900 ರೂಗಳಿಗೆ ಖರೀದಿಸುವ ಸುವರ್ಣಾವಕಾಶವನ್ನು ಬಳಕೆದಾರರಿಗೆ ನೀಡುತ್ತಿದೆ. ಇದನ್ನು ನೀವು ಅಥವಾ ನಿಮಗೆ ತಿಳಿದವರು ಖರೀದಿಸಲು ಯೋಚಿಸುತ್ತದೆ ಈ ಮುಂದೆ ಇದರ ಸಂಪೂರ್ಣ ಮಾಹಿತಿಗಳೊಂದಿಗೆ ಇದರ ಒಂದಿಷ್ಟು ಫೀಚರ್‌ಗಳನ್ನು ಸಹ ತಿಳಿದುಕೊಳ್ಳಿ. ಅಲ್ಲದೆ ಈ ಫೋನ್ ದೇಶಾದ್ಯಂತ ಆನ್‌ಲೈನ್ ಮತ್ತು ಆಫ್‌ಲೈನ್ ಆಪಲ್ ಅಧಿಕೃತ ಅಂಗಡಿಗಳಲ್ಲಿ ₹53,900 ರೂಗಳಿಗೆ ಮಾರಾಟವಾಗುತ್ತಿದೆ.

iPhone 13 ಈಗ ಕೇವಲ ₹35,900 ರೂಗಳಿಗೆ ಖರೀದಿಸಿ:

ಭಾರತದಲ್ಲಿ iPhone 13 ಅನ್ನು ಹೇಗೆ ಇಷ್ಟು ಕಡಿಮೆ ಬೆಲೆಗೆ ಖರೀದಿಸುವುದು ಎಂದು ಈಗ ನೀವು ಆಶ್ಚರ್ಯ ಪಡುತ್ತೀದ್ದರೆ ಈ ಮುಂದೆ ತಿಳಿಯಿರಿ. ಇದಕ್ಕಾಗಿ ನೀವು iStore – India Store ಮೂಲಕ ಇದನ್ನು ಪಡೆಯಬಹುದು. ಈ ಜನಪ್ರಿಯ ಮತ್ತು ಹೆಚ್ಚು ಮಾರಾಟಕ್ಕೆ ಹೆಸರಾಗಿರುವ iPhone 13 ಈಗ ಕೇವಲ ₹35,900 ರೂಗಳಿಗೆ ಖರೀದಿಸುವ ಸುವರ್ಣಾವಕಾಶವನ್ನು ಬಳಕೆದಾರರಿಗೆ ನೀಡುತ್ತಿದೆ. ಇದರೊಂದಿಗೆ ಈ ಡೀಲ್ ಪಡೆಯಲು ಹಳೆಯ ಸ್ಮಾರ್ಟ್ಫೋನ್ ಅನ್ನು ವಿನಿಮಯ ಮಾಡಿಕೊಳ್ಳಬೇಕು. ಹೆಚ್ಚುವರಿಯಾಗಿ 5000 ರೂಗಳ ಹೆಚ್ಚುವರಿ ವಿನಿಮಯ ಬೋನಸ್ ಸಹ ಲಭ್ಯವಿದೆ. ಆದರೆ ಈ ವಿನಿಮಯದ ಬೆಲೆ ನೀವು ನೀಡುವ ಸ್ಮಾರ್ಟ್ಫೋನ್ ಬದಲಿಗೆ ಏರುಪೇರಾಗಬಹುದು ಎನ್ನುವುದನ್ನು ಗಮನದಲ್ಲಿರಲಿ.

iPhone 13 big price drop in India, Now get it for just rs 35,900 only
iPhone 13 big price drop in India, Now get it for just rs 35,900 only

ಇದರೊಂದಿಗೆ ನೀವು ನೀಡುವ ಸ್ಮಾರ್ಟ್ಫೋನ್ ಯಾವ ಕಂಡೀಷನ್ ಹೇಗಿದೆ ಎನ್ನವುದು ಅವಲಂಬಿಸಿರುತ್ತದೆ. ನಿಮ್ಮ ಸ್ಮಾರ್ಟ್ಫೋನ್ ರೂ 3000 ರಿಂದ ರೂ 10,000 ಒಳಗೆ ಬಂದ್ರೆ ಹೆಚ್ಚುವರಿಯಾಗಿ 3000 ರೂಗಳ ಬೋನಸ್ ಡಿಸ್ಕೌಂಟ್ ನೀಡಲಾಗುವುದು. ಅದೇ ನಿಮ್ಮ ಸ್ಮಾರ್ಟ್ಫೋನ್ ಸುಮಾರು 10,000 ರೂಗಳಿಂದ 15,000 ಒಳಗೆ ಬಂದ್ರೆ ಹೆಚ್ಚುವರಿಯಾಗಿ 5000 ರೂಗಳ ಬೋನಸ್ ಡಿಸ್ಕೌಂಟ್ ನೀಡಲಾಗುವುದು. ಒಂದು ವೇಳೆ ನಿಮ್ಮ ಸ್ಮಾರ್ಟ್ಫೋನ್ 15,000 ರೂಗಳಿಗಿಂತ ಅಧಿಕವಾಗಿದ್ದರೆ 8000 ರೂಗಳ ಡಿಸ್ಕೌಂಟ್ ಪಡೆಯಬಹುದು. ಒಂದು ವೇಳೆ ನಿಮ್ಮ ಸ್ಮಾರ್ಟ್ಫೋನ್ ಒಳ್ಳೆ ಕಂಡೀಷನ್ ಹೊಂದಿದ್ದರೆ ಉತ್ತಮ ವಿನಿಮಯದೊಂದಿಗೆ ಸ್ಟೋರ್‌ಗಳಲ್ಲಿ ನಿಮಗೆ iPhone 13 ಮೇಲೆ ಭಾರಿ ಬೆಲೆ ಇಳಿಕೆ ಮಾಡಿದ್ದೂ ಸುಮಾರು ₹35,900 ರೂಗಳಿಗೆ ಖರೀದಿಸುವ ಸುವರ್ಣಾವಕಾಶವನ್ನು ನೀಡುತ್ತಿದೆ.

iPhone 13 ಫೀಚರ್ ಮತ್ತು ವಿಶೇಷಣಗಳು

ಹ್ಯಾಂಡ್‌ಸೆಟ್ 60Hz ರಿಫ್ರೆಶ್ ದರದೊಂದಿಗೆ 6.1 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿದ್ದು 1200nits ಗರಿಷ್ಠ ಹೊಳಪನ್ನು ಹೊಂದಿದೆ. ಕಂಪನಿಯ ಪ್ರಕಾರ iPhone 13 ನಲ್ಲಿನ ಡಿಸ್ಪ್ಲೇ ಡಾಲ್ಬಿ ವಿಷನ್, HLG ಮತ್ತು HDR10 ವಿಷಯವನ್ನು ಸಹ ಬೆಂಬಲಿಸುತ್ತದೆ. Apple ಎಂದಿಗೂ ಮೆಮೊರಿ ಮತ್ತು ಬ್ಯಾಟರಿ ವಿಶೇಷಣಗಳನ್ನು ಬಹಿರಂಗಪಡಿಸುವುದಿಲ್ಲ ಆದರೆ Apple ನ ಉತ್ಪನ್ನಗಳ ಬಿಡುಗಡೆಯ ನಂತರ ಟಿಯರ್‌ಡೌನ್ ವೀಡಿಯೊಗಳ ಸಮಯದಲ್ಲಿ ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳುತ್ತದೆ.

iPhone 13 big price drop in India, Now get it for just rs 35,900 only
iPhone 13 big price drop in India, Now get it for just rs 35,900 only

Also Read: Video Call Scam: ಒಂದೆರಡು ವಿಡಿಯೋ ಕಾಲ್‌ ಮಾಡಿ ಬೆಂಗಳೂರಿನ ವೈದ್ಯನ ಖಾತೆಯಿಂದ 2.7 ಲಕ್ಷ ಉಡಾಯಿಸಿದ ವಂಚಕರು!

ಫೋಟೋಗಳು ಮತ್ತು ವೀಡಿಯೊಗಳಿಗಾಗಿ 12MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು f/1.6 ಅಪರ್ಚರ್ ಮತ್ತು ಸೆನ್ಸರ್ ಶಿಫ್ಟ್ ಸ್ಥಿರೀಕರಣದೊಂದಿಗೆ ಮತ್ತು 2.4 ಅಪರ್ಚರ್ನೊಂದಿಗೆ 12MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ 12MP ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಜೊತೆಗೆ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ f/2.2 ಅಪರ್ಚರ್ನೊಂದಿಗಳೊಂದಿಗೆ ಬರುತ್ತದೆ. ಈ ಫೋನ್ 6-ಕೋರ್ A15 ಬಯೋನಿಕ್ CPU ಜೊತೆಗೆ 4GB RAM ಮತ್ತು 128GB ಸ್ಟೋರೇಜ್ ಮತ್ತು 3240mAh ಬ್ಯಾಟರಿಯನ್ನು ಹೊಂದಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo