Infinix Hot 50 Pro ಸ್ಮಾರ್ಟ್ಫೋನ್ MediaTek ಮತ್ತು 5000mAh ಬ್ಯಾಟರಿಯೊಂದಿಗೆ ಬಿಡುಗಡೆ!
Infinix Hot 50 Pro ಫೋನ್ 50MP ಪ್ರೈಮರಿ ಸೆನ್ಸರ್ ಮತ್ತು 2MP ಮೆಗಾಪಿಕ್ಸೆಲ್ ಸೆಕೆಂಡರಿ ಶೂಟರ್ ಅನ್ನು ಒಳಗೊಂಡಿದೆ.
ಪ್ರಸ್ತುತ Infinix Hot 50 Pro ಫೋನ್ ಬೆಲೆಯನ್ನು ಇನ್ನೂ ಅಧಿಕೃತವಾಗಿ ನೀಡಿಲ್ಲ.
Infinix Hot 50 Pro ಅನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಚೀನಾದ ಟ್ರಾನ್ಸ್‌ಷನ್ ಹೋಲ್ಡಿಂಗ್ಸ್ ಒಡೆತನದ ಬ್ರ್ಯಾಂಡ್‌ನಿಂದ ಇತ್ತೀಚಿನ 4G ಕೊಡುಗೆಯಾಗಿ ಬಿಡುಗಡೆ ಮಾಡಲಾಗಿದೆ. ಹೊಸ ಹಾಟ್ ಸರಣಿಯ ಫೋನ್ ಒಟ್ಟಾರೆಯಾಗಿ 3 ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಈ ಫೋನ್ MediaTek Helio G100 ಪ್ರೊಸೆಸರ್ ಅಡಿಯಲ್ಲಿ 8GB RAM ಮತ್ತು 256GB ವರೆಗೆ ಸ್ಟೋರೇಜ್ ಅನ್ನು ಹೊಂದಿದೆ. ಈ Infinix Hot 50 Pro ಫೋನ್ ದೊಡ್ಡ ಡಿಸ್ಪ್ಲೇಯೊಂದಿಗೆ 5000mAh ಬ್ಯಾಟಯನ್ನು ಹೊಂದಿದೆ. ಹೊಸ ಸ್ಮಾರ್ಟ್‌ಫೋನ್ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP54 ರೇಟಿಂಗ್ ಅನ್ನು ಹೊಂದಿದೆ ಮತ್ತು 50MP ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದೆ.
SurveyAlso Read: Airtel Recharge: ಕೇವಲ 200 ರೂಗಳೊಳಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾದೊಂದಿಗೆ 20 ಕ್ಕೂ ಅಧಿಕ OTT ಉಚಿತ
Infinix Hot 50 Pro ವಿಶೇಷಣಗಳು
ಡ್ಯುಯಲ್ ಸಿಮ್ (ನ್ಯಾನೊ) Infinix Hot 50 Pro ಆಂಡ್ರಾಯ್ಡ್ 14-ಆಧಾರಿತ XOS 14.5 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 6.7 ಇಂಚಿನ ಪೂರ್ಣ HD+ (1,080×2,436 ಪಿಕ್ಸೆಲ್‌ಗಳು) AMOLED IPS LTPS ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರ ಮತ್ತು 1,800nits ಗರಿಷ್ಠ ಹೊಳಪನ್ನು ಹೊಂದಿದೆ. ಡಿಸ್ಪ್ಲೇಯಲ್ಲಿ ಸೆಲ್ಫಿ ಶೂಟರ್‌ಗಾಗಿ ಪಂಚ್ ಹೋಲ್ ಕಟೌಟ್ ಹೊಂದಿದೆ. ಹ್ಯಾಂಡ್‌ಸೆಟ್ MediaTek Helio G100 ಕಾರ್ಯನಿರ್ವಹಿಸುತ್ತದೆ. ಜೊತೆಗೆ 8GB RAM ಮತ್ತು 256GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಬರುತ್ತದೆ.
The future is WOOOW! Preorder the Infinix HOT 50 Pro+ now and get to walk away with a FREE Watch 1 worth Ksh. 2,500. Don't miss out, secure yours today and get ready to level up!
— InfinixKenya (@InfinixKenya) October 15, 2024
Preorder now on https://t.co/1AHfYVB6Bx #WOOOWNewHOT #ComingSoon #InfinixHOT50Series pic.twitter.com/pd51mwmZ2o
Infinix Hot 50 Pro ಕ್ಯಾಮೆರಾ ಮಾಹಿತಿ:
ಇದರಲ್ಲಿ ಮೈಕ್ರೊ SD ಕಾರ್ಡ್ ಬಳಸಿ ಆನ್‌ಬೋರ್ಡ್ ಸ್ಟೋರೇಜ್ ಅನ್ನು 2TB ವರೆಗೆ ವಿಸ್ತರಿಸಬಹುದು ಆದರೆ ಮೆಮೊರಿಯನ್ನು ವಾಸ್ತವಿಕವಾಗಿ 16GB ವರೆಗೆ ವಿಸ್ತರಿಸಬಹುದು. Infinix Hot 50 Pro ಹಿಂದಿನ ಕ್ಯಾಮರಾ ಸೆಟಪ್ 50MP ಮೆಗಾಪಿಕ್ಸೆಲ್ Hi-5022Q ಪ್ರೈಮರಿ ಸೆನ್ಸರ್ ಮತ್ತು 2MP ಮೆಗಾಪಿಕ್ಸೆಲ್ ಸೆಕೆಂಡರಿ ಶೂಟರ್ ಅನ್ನು ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳನ್ನು 8MP ಮೆಗಾಪಿಕ್ಸೆಲ್ ಕ್ಯಾಮರಾ ಮೂಲಕ ನಿರ್ವಹಿಸಲಾಗುತ್ತದೆ. ಇದು Infinix AI ವೈಶಿಷ್ಟ್ಯಗಳನ್ನು ಸಹ ಸಂಯೋಜಿಸಿದೆ.
Infinix Hot 50 Pro ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.4, NFC, FM ರೇಡಿಯೋ, 3.5mm ಆಡಿಯೋ ಜ್ಯಾಕ್, OTG, USB ಟೈಪ್-ಸಿ ಪೋರ್ಟ್ ಹೊಂದಿದೆ. ಇದು ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿದೆ. ಮತ್ತು IP54-ರೇಟೆಡ್ ಬಿಲ್ಡ್ ಅನ್ನು ಹೊಂದಿದೆ. ಫೋನ್ DTS ಸೌಂಡ್ ಮತ್ತು ಹೈ-ರೆಸ್ ಆಡಿಯೊಗೆ ಬೆಂಬಲದೊಂದಿಗೆ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ. Infinix Hot 50 Pro 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile