108MP ಕ್ಯಾಮೆರಾವುಳ್ಳ Redmi 13 5G ಬೆಲೆ ಕಡಿತ! ಹೊಸ ಬೆಲೆ ಎಷ್ಟು ಮತ್ತು ಫೀಚರ್ಗಳೇನು ತಿಳಿಯಿರಿ!
Redmi 13 5G ಬೆಲೆ ಕಡಿತ! 108MP ಕ್ಯಾಮೆರಾದೊಂದಿಗೆ 6GB RAM ಲಭ್ಯ.
ಅನೇಕ ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಪ್ಯಾಕ್ ಆಗಿರುವ Redmi 13 5G ಬೆಲೆ ಕಡಿತವಾಗಿದೆ
ಅಮೆಜಾನ್ ಮೂಲಕ ಲಿಮಿಟೆಡ್ ಸಮಯಕ್ಕೆ ಬ್ಯಾಂಕ್ ಆಫರ್ ಮತ್ತು ವಿನಿಮಯ ಆಫರ್ ಅಡಿಯಲ್ಲಿ ಖರೀದಿಸಿಕೊಳ್ಳಿ.
108MP Camera Phone Under 10K: ನಿಮಗೊಂದು ಹೊಸ ಸ್ಮಾರ್ಟ್ಫೋನ್ ಸುಮಾರು 10-12 ಸಾವಿರ ರೂಪಾಯಿಗಳಲ್ಲಿ ಸೂಪರ್, ಉತ್ತಮ ವಿನ್ಯಾಸ ಮತ್ತು ಫಾಸ್ಟ್ ಕಾರ್ಯಕ್ಷಮತೆಯನ್ನು ಹೊಂದಿರುವ ಸ್ಮಾರ್ಟ್ ಫೋನ್ ಅನ್ನು ಹುಡುಕುತ್ತಿದ್ದರೆ ನಿಮಗೆ ಒಳ್ಳೆಯ ಸುದ್ದಿ ಇದೆ. ಶಿಯೋಮಿಯ ಜನಪ್ರಿಯ ಸರಣಿಯ Redmi 13 5G ಸ್ಮಾರ್ಟ್ ಫೋನ್ ಪ್ರಸ್ತುತ ಅಮೆಜಾನ್ನಲ್ಲಿ ಭಾರಿ ರಿಯಾಯಿತಿಯೊಂದಿಗೆ ಲಭ್ಯವಿದೆ. ವಿಶೇಷವೆಂದರೆ ಈ ಫೋನ್ ಒದ್ದೆಯಾದ ಕೈಗಳಿಂದಲೂ ಸುಲಭವಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ಮಳೆ ಅಥವಾ ಬೆವರಿನಲ್ಲಿ ಒದ್ದೆಯಾದ ನಂತರವೂ ನೀವು ಅದನ್ನು ಬಳಸಲು ಸಾಧ್ಯವಾಗುತ್ತದೆ.
Survey108MP ಕ್ಯಾಮೆರಾವುಳ್ಳ Redmi 13 5G ಬೆಲೆ ಕಡಿತ!
Redmi 13 5G ಸ್ಮಾರ್ಟ್ ಫೋನ್ ಅನ್ನು 13,999 ರೂ.ಗಳಿಗೆ ಬಿಡುಗಡೆ ಮಾಡಲಾಗಿದೆ ಆದರೆ Amazon ನ ಸೀಮಿತ ಸಮಯದ ಮಾರಾಟದಲ್ಲಿ ಈ ಫೋನ್ ಅನ್ನು 11,748 ರೂ.ಗಳಿಗೆ ಪಟ್ಟಿ ಮಾಡಲಾಗಿದೆ. ಈ ಬೆಲೆ 6GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಮೂಲ ರೂಪಾಂತರಕ್ಕೆ. ಇದರ ಮೇಲೆ ಬ್ಯಾಂಕ್ ಮತ್ತು ವಿನಿಮಯ ರಿಯಾಯಿತಿಯೂ ಇದೆ. ಇದು ಫೋನ್ನ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.

ಬ್ಯಾಂಕ್ ಆಫರ್ಗಳ ಅಡಿಯಲ್ಲಿ ಖರೀದಿಸಿದಾಗ SBI ಮತ್ತು ICICI ಕ್ರೆಡಿಟ್ ಕಾರ್ಡ್ಗಳಲ್ಲಿ 750 ರೂ.ಗಳ ಹೆಚ್ಚುವರಿ ರಿಯಾಯಿತಿ ಲಭ್ಯವಿದೆ. ಇದರಿಂದಾಗಿ ಫೋನ್ ಬೆಲೆ 10,998 ರೂ.ಗಳಿಗೆ ಇಳಿಯುತ್ತದೆ. ಅಂದರೆ ನೀವು ಇದನ್ನು ಇಷ್ಟು ಬೆಲೆಗೆ ಖರೀದಿಸಲು ಸಾಧ್ಯವಾಗುತ್ತದೆ. ಇದರ ಹೊರತಾಗಿ ವಿನಿಮಯ ಕೊಡುಗೆಯ ಲಾಭವನ್ನು ಪಡೆದುಕೊಳ್ಳುವ ಮೂಲಕ ನಿಮ್ಮ ಹಳೆಯ ಫೋನ್ಗೆ ಬದಲಾಗಿ ನೀವು 8,000 ರೂ.ಗಳವರೆಗೆ ರಿಯಾಯಿತಿಯನ್ನು ಸಹ ಪಡೆಯಬಹುದು. ಅಂದರೆ ಈ ಫೋನ್ ತುಂಬಾ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ.
ಇದನ್ನೂ ಓದಿ: No UPI, Only Cash: ಬೆಂಗಳೂರಿನ ಅಂಗಡಿ ಮಾಲೀಕರ ಪರದಾಟಕ್ಕೆ ‘ಡಿಜಿಟಲ್ ಇಂಡಿಯಾ’ ಮುಳುವಾಯ್ತಾ?
Redmi 13 5G ಫೀಚರ್ಗಳೇನು ತಿಳಿಯಿರಿ!
ಈ ಫೋನ್ 120Hz ರಿಫ್ರೆಶ ರೇಟ್ ಆಯ್ಕೆಯ IPS LCD ಡಿಸ್ಪ್ಲೇ ಹೊಂದಿದ್ದು, 550 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ 6.79 ಇಂಚಿನ ಈ ಫೋನ್ 1080 x 2460 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ನೀಡುತ್ತದೆ. ಜೊತೆಗೆ ಪ್ರೊಟೆಕ್ಷನ್ ಉದ್ದೇಶಕ್ಕೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ನೀಡಲಾಗಿದೆ. ಈ ಫೋನ್ ಪ್ಲಾಟ್ಫಾರ್ಮ್ ಓಎಸ್ ಆಂಡ್ರಾಯ್ಡ್ 14 ಓಎಸ್ ಅನ್ನು ರನ್ ಮಾಡಲಿದ್ದು 2 ಪ್ರಮುಖ ಆಂಡ್ರಾಯ್ಡ್ ಅಪ್ಗ್ರೇಡ್ಗಳವರೆಗೆ ಸೌಲಭ್ಯ ಪಡೆದಿದೆ.
ಜೊತೆಗೆ ಕ್ವಾಲ್ಕಾಮ್ SM4450 ಸ್ನಾಪ್ಡ್ರಾಗನ್ 4 ಜನರೇಷನ್ 2 AE (4 nm) ಪ್ರೊಸೆಸರ್ ಹೊಂದಿದೆ. ಇದರಲ್ಲಿ 108MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ, 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಅನ್ನು ಕಾಣಬಹುದಾಗಿದೆ. ಇದರೊಂದಿಗೆ ಮುಂಭಾಗದಲ್ಲಿ 13MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕಾಣಬಹುದಾಗಿದೆ. ಈ ಫೋನ್ 5030 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು 33W ವೈರ್ಡ್ನಲ್ಲಿ ಚಾರ್ಜ್ ಆಗುತ್ತಿದೆ ಅಂದರೆ ಕೇವಲ 30 ನಿಮಿಷಗಳಲ್ಲಿ 50% ಚಾರ್ಜ್ ಅಗಲಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile