Google Pixel 9 ಅಲ್ಟ್ರಾಸಾನಿಕ್ ಫಿಂಗರ್ಪ್ರಿಂಟ್ ಮತ್ತು ಭರ್ಜರಿ ಕ್ಯಾಮೆರಾಗಳೊಂದಿಗೆ ಬಿಡುಗಡೆಯಾಗಿದೆ
ಭಾರತದಲ್ಲಿ ಬಹು ನಿರೀಕ್ಷಿತ Google Pixel 9 Series ಇಂದು ಜಾಗತಿಕವಾಗಿ ಬಿಡುಗಡೆಯಾಗಿದೆ
ಗೂಗಲ್ ಪಿಕ್ಸೆಲ್ ಸ್ಮಾರ್ಟ್ಫೋನ್ಗಳ ಜೊತೆಗೆ ಈವೆಂಟ್ನಲ್ಲಿ Pixel Watch 3 ಮತ್ತು Pixel Buds 2 ಅನ್ನು ಸಹ ಬಿಡುಗಡೆಗೊಳಿಸಿದೆ.
Google Tensor G4 ಚಿಪ್ ಸೆಟ್ ಮತ್ತು Titan M2 ಭದ್ರತಾ ಪ್ರೊಸೆಸರ್ನೊಂದಿಗೆ ಒದಗಿಸಿದೆ.
ಭಾರತದಲ್ಲಿ ಬಹು ನಿರೀಕ್ಷಿತ Google Pixel 9 Series ಇಂದು ಜಾಗತಿಕವಾಗಿ ಪ್ರಾರಂಭಿಸಲಿರುವುದರಿಂದ Google Phone ಅಭಿಮಾನಿಗಳ ಕಾಯುವಿಕೆ ಅಂತಿಮವಾಗಿ ಇಂದು ಕೊನೆಗೊಂಡಿದೆ. ಹೌದು ಈ ವರ್ಷದ ಮೇಡ್ ಬೈ ಗೂಗಲ್‌ನ ಅತಿದೊಡ್ಡ ಈವೆಂಟ್ ಇಂದು ಅಂದರೆ 13ನೇ ಆಗಸ್ಟ್ 2024 ರಂದು ನಡೆದಿದೆ. ಕಂಪನಿಯ ಮುಂದಿನ ಪೀಳಿಗೆಯ ಗೂಗಲ್ ಪಿಕ್ಸೆಲ್ ಸ್ಮಾರ್ಟ್ಫೋನ್ಗಳ ಜೊತೆಗೆ ಈವೆಂಟ್ನಲ್ಲಿ Pixel Watch 3 ಮತ್ತು Pixel Buds 2 ಅನ್ನು ಸಹ ಬಿಡುಗಡೆಗೊಳಿಸಿದೆ. ಅದರೊಂದಿಗೆ ಗೂಗಲ್ ಇಂದು ತನ್ನ ಮಡಿಸಬಹುದಾದ ಫೋನ್ ಅನ್ನು ಸಹ ಅನಾವರಣಗೊಳಿಸಲಿದೆ. ಆದ್ದರಿಂದ Google Pixel 9 ಸರಣಿಯ ಬಿಡುಗಡೆಯ ವಿವರಗಳನ್ನು ಈ ಕೆಳಗೆ ಪಡೆಯಬಹುದು.
Google Pixel 9 ವೈಶಿಷ್ಟ್ಯಗಳು
Google Pixel 9 ಸ್ಮಾರ್ಟ್ಫೋನ್ 6.3 ಇಂಚಿನ ಆಕ್ಟುವಾ ಸ್ಕ್ರೀನ್ ಜೊತೆಗೆ 1080 x 2424 ರೆಸಲ್ಯೂಶನ್ ಅನ್ನು ಸುಮಾರು 120Hz ರಿಫ್ರೆಶ್ ರೇಟ್ನೊಂದಿಗೆ ಬರೋಬ್ಬರಿ ಗರಿಷ್ಠ 2700 ನಿಟ್ಸ್ ಪೀಕ್ ಬ್ರೈಟ್ನೆಸ್ ಜೊತೆಗೆ ಹೊಂದಿದೆ. ಫೋನ್ ಸ್ಕ್ರಿನ್ ಪ್ರಬಲವಾದ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಗಾಜಿನ ರಕ್ಷಣೆಯನ್ನು ಹೊಂದಿದೆ. Google ಈ ಫೋನ್ ಅನ್ನು Google Tensor G4 ಚಿಪ್ ಸೆಟ್ ಮತ್ತು Titan M2 ಭದ್ರತಾ ಪ್ರೊಸೆಸರ್ನೊಂದಿಗೆ ಒದಗಿಸಿದೆ. ಫೋನ್ 12GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಈ ಸ್ಮಾರ್ಟ್ಫೋನ್ 79,999 ರುಗಳಿಂದ ಶುರುವಾಗುತ್ತದೆ. ಆಯ್ಕೆಗಳೊಂದಿಗೆ ಬರುತ್ತದೆ.
ಗೂಗಲ್ ಪಿಕ್ಸೆಲ್ 9 ವೈಶಿಷ್ಟ್ಯಗಳು
Google Pixel 9 ಸ್ಮಾರ್ಟ್ಫೋನ್ ಹಿಂದೆ ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಇದು 50MP ಆಕ್ಟಾ PD ವೈಡ್ ಸೆನ್ಸರ್ ಮತ್ತು ಕೊನೆಯಲ್ಲಿ 48MP ಕ್ವಾಡ್ PD ಅಲ್ಟ್ರಾ ವೈಡ್ ಕ್ಯಾಮೆರಾಗಳನ್ನು ಹೊಂದಿದೆ. ಈ ಫೋನ್ನ ಮುಂಭಾಗದಲ್ಲಿ 10.5MP ಸೆಲ್ಫಿ ಕ್ಯಾಮೆರಾ ಕೂಡ ಇದೆ. ಫೋನ್ 8x ಸೂಪರ್ ರೆಸಲ್ಯೂಶನ್ ಜೂಮ್, ಮ್ಯಾಜಿಕ್ ಎಡಿಟರ್, ಮ್ಯಾಜಿಕ್ ಎಡಿಟರ್ ಮತ್ತು ಫೋಟೋ ಅನ್ಬ್ಲರ್ನಂತಹ ಹಲವಾರು ಸೂಪರ್ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿದೆ. ಕ್ಯಾಮೆರಾದೊಂದಿಗೆ 24/30/60 FPS ನಲ್ಲಿ 4K ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು ಎಂದು Google ಹೇಳುತ್ತದೆ. ಇದರ ಹೊರತಾಗಿ ನೀವು 10-ಬಿಟ್ HDR ವೀಡಿಯೊ, ಸಿನಿ ಮೆಟಿಕ್ ಬ್ಲರ್, ಸಿನಿ ಮೆಟಿಕ್ ಪೇನ್ 4K ಟೈಮ್ ಲ್ಯಾಪ್ಸ್ ವೀಡಿಯೊಗಳನ್ನು ಸಹ ಶೂಟ್ ಮಾಡಬಹುದು.
Also Rend: ದಿನಕ್ಕೆ 2GB ಡೇಟಾ ಮತ್ತು ಅನ್ಲಿಮಿಟೆಡ್ ಕರೆ ನೀಡುವ Reliance Jio ಅತ್ಯುತ್ತಮ ರಿಚಾರ್ಜ್ ಯೋಜನೆಗಳು!
ಫೋನ್ ಧೂಳು ಮತ್ತು ನೀರಿನ ನಿರೋಧಕ IP68 ರೇಟಿಂಗ್ನೊಂದಿಗೆ ಬರುತ್ತದೆ. ಫೋನ್ 45W ವೇಗದ ಚಾರ್ಜ್ ಬೆಂಬಲದೊಂದಿಗೆ 4700 mAh ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ಸ್ಪೆಟಿಯಲ್ ಆಡಿಯೋ, ನಾಯ್ಸ್ ಸಸ್ಪೆನ್ಷನ್, ಸ್ಯಾಟಲೈಟ್ SOS, ಎಮರ್ಜೆನ್ಸಿ SOS ಮತ್ತು ಕಾರ್ ಕ್ರ್ಯಾಶ್ ಡಿಟೆಕ್ಷನ್ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಹೆಚ್ಚುವರಿಯಾಗಿ ಸ್ಮಾರ್ಟ್ಫೋನ್ಗಳಿಗಾಗಿ ಆಂಡ್ರಾಯ್ಡ್ 15 ಅನ್ನು ಸಹ ಪ್ರಾರಂಭಿಸಲಾಗುತ್ತದೆ. ಅದರೊಂದಿಗೆ Google ನ ಸೇವೆಗಳು ಮತ್ತು ಅಪ್ಲಿಕೇಶನ್ಗಳು ಸಹ ಅನೇಕ ನವೀಕರಣಗಳನ್ನು ಪಡೆಯಬಹುದು. ನಿರ್ದಿಷ್ಟವಾಗಿ ಕಂಪನಿಯು ಈ ಈವೆಂಟ್ನಲ್ಲಿ AI ಸಂಬಂಧಿಸಿದ ಹಲವಾರು ಪ್ರಕಟಣೆಗಳನ್ನು ಮಾಡುವ ಸಾಧ್ಯತೆಯಿದೆ.
Ravi Rao
Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile