ಕೊನೆಗೂ ಬಂದೆ ಬಿಡ್ತುGoogle Pixel 4a ಸ್ಮಾರ್ಟ್ಫೋನ್: ಬೆಲೆ, ಫೀಚರ್ ಮತ್ತು ಆಫರ್‌ಗಳ ಇಲ್ಲಿದೆ

ಕೊನೆಗೂ ಬಂದೆ ಬಿಡ್ತುGoogle Pixel 4a ಸ್ಮಾರ್ಟ್ಫೋನ್: ಬೆಲೆ, ಫೀಚರ್ ಮತ್ತು ಆಫರ್‌ಗಳ ಇಲ್ಲಿದೆ
HIGHLIGHTS

Google Pixel 4a ಫೋನ್ ಅನ್ನು ಆಗಸ್ಟ್ 20 ರಿಂದ ಗೂಗಲ್ ಸ್ಟೋರ್, ಬೆಸ್ಟ್ ಬುಯ್.ಕಾಮ್, ಅಮೆಜಾನ್ ನಿಂದ ಖರೀದಿಸಬಹುದು.

ಗೂಗಲ್ ಪಿಕ್ಸೆಲ್ 4 ಎ ಸ್ಮಾರ್ಟ್‌ಫೋನ್ 5.81 ಇಂಚಿನ ಫುಲ್ HD+ OLED ಡಿಸ್ಪ್ಲೇ ಹೊಂದಿದೆ.

Google Pixel 4a ಸ್ಮಾರ್ಟ್ಫೋನ್ ಪಂಚ್ಹೋಲ್ ಡಿಸ್ಪ್ಲೇ ಮತ್ತು ಹಿಂಭಾಗದಲ್ಲಿ ಒಂದೇ ಕ್ಯಾಮೆರಾವನ್ನು ಹೊಂದಿದೆ.

Google Pixel 4a ಸ್ಮಾರ್ಟ್‌ಫೋನ್‌ನ ಬಹುನಿರೀಕ್ಷಿತ ಬಿಡುಗಡೆ ಈಗ ಮುಗಿದಿದೆ. ಫೋನ್ ಜಾಗತಿಕವಾಗಿ ಬಿಡುಗಡೆಯಾಗಿದೆ. ಆದರೆ ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಭಾರತೀಯರು ಇದೀಗ ಭಾರತದಲ್ಲಿ ಈ ಸ್ಮಾರ್ಟ್‌ಫೋನ್‌ಗಾಗಿ ಕಾಯಬೇಕಾಗುತ್ತದೆ. ಈ ವರ್ಷದ ಅಕ್ಟೋಬರ್ ವೇಳೆಗೆ ಈ ಫೋನ್ ಭಾರತದಲ್ಲಿ ಬಿಡುಗಡೆಯಾಗಲಿದೆ. ಪಂಚ್‌ಹೋಲ್ ಡಿಸ್ಪ್ಲೇ, ಮುಂಭಾಗ ಮತ್ತು ಹಿಂಭಾಗದಲ್ಲಿ ಸಿಂಗಲ್ ಕ್ಯಾಮೆರಾ, ಟೈಟಾನ್ ಎಂ ಸೆಕ್ಯುರಿಟಿ ಮಾಡ್ಯೂಲ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮುಂತಾದ ವೈಶಿಷ್ಟ್ಯಗಳೊಂದಿಗೆ ಫೋನ್ ಬರಲಿದೆ.

Google Pixel 4a ಬೆಲೆ ಮತ್ತು ಲಭ್ಯತೆ

ಈ ಗೂಗಲ್ ಪಿಕ್ಸೆಲ್ 4 ಎ 6GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 26,300 ರೂಗಳಾಗಿವೆ. ಯುಎಸ್ನಲ್ಲಿ ಪ್ರೀ-ಆರ್ಡರ್‌ಗಾಗಿ    ಫೋನ್ ಲಭ್ಯವಿದೆ. ಇದನ್ನು ಗೂಗಲ್ ಸ್ಟೋರ್ ಮತ್ತು ಗೂಗಲ್ ಫೈನೊಂದಿಗೆ ಮೊದಲೇ ಬುಕ್ ಮಾಡಲಾಗುತ್ತದೆ. ಇದೇ ಫೋನ್ ಅನ್ನು ಆಗಸ್ಟ್ 20 ರಿಂದ ಗೂಗಲ್ ಸ್ಟೋರ್, ಬೆಸ್ಟ್ ಬುಯ್.ಕಾಮ್, ಅಮೆಜಾನ್ ನಿಂದ ಖರೀದಿಸಬಹುದು. ಭಾರತದಲ್ಲಿನ Google Pixel 4a ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಫೋನ್ ಸಿಂಗಲ್ ಜೆಟ್ ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಬರಲಿದೆ. Google Pixel 4a (5G) ಸ್ಮಾರ್ಟ್‌ಫೋನ್ ಅನ್ನು 9 499 ಕ್ಕೆ ಬಿಡುಗಡೆ ಮಾಡಿದೆ ಅಂದರೆ ಸುಮಾರು 37,600 ರೂಪಾಯಿಗಳಾಗಿದ್ದು ಇದು ದೊಡ್ಡ ಡಿಸ್ಪ್ಲೇಯೊಂದಿಗೆ ಬರಲಿದೆ. ಆದರೆ Pixel 4aಯ 5G ರೂಪಾಂತರಗಳು ಸದ್ಯಕ್ಕೆ ಭಾರತದಲ್ಲಿ ಲಭ್ಯವಾಗುವುದಿಲ್ಲ.

Google Pixel 4a ಸ್ಪೆಸಿಫಿಕೇಷನ್ 

ಗೂಗಲ್ ಪಿಕ್ಸೆಲ್ 4 ಎ ಸ್ಮಾರ್ಟ್‌ಫೋನ್ 5.81 ಇಂಚಿನ ಫುಲ್ HD+ OLED ಡಿಸ್ಪ್ಲೇ ಹೊಂದಿದ್ದು ಇದು 1080/2340 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುತ್ತದೆ. ಇದಲ್ಲದೆ ಫೋನ್‌ನ ಆಕಾರ ಅನುಪಾತವು 19: 5: 9 ಮತ್ತು ಪಿಕ್ಸೆಲ್ ಸಾಂದ್ರತೆಯು 443 ಪಿಪಿ ಆಗಿರುತ್ತದೆ. ಈ ಫೋನ್‌ನ ಬೆಂಬಲ HDR+ ಡಿಸ್ಪ್ಲೇಯಯನ್ನು ಬೆಂಬಲಿಸುತ್ತದೆ. ಈ ಫೋನ್ 6GB RAM ಮತ್ತು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 730G ಸೊಕ್ನೊಂದಿಗೆ ಬರಲಿದೆ. ಕ್ಯಾಮೆರಾದ ಬಗ್ಗೆ ಮಾತನಾಡುವುದಾದರೆ Google Pixel 4a ಹಿಂಭಾಗದಲ್ಲಿ 12MP ಕ್ಯಾಮೆರಾ ಸಂವೇದಕವನ್ನು ಹೊಂದಿದ್ದು ಇದು ಅಪರ್ಚರ್ f/ 1.7 ಅನ್ನು ಹೊಂದಿದೆ ಮತ್ತು ಎಲ್ಇಡಿ ಫ್ಲ್ಯಾಷ್ ಮಾಡ್ಯೂಲ್ನೊಂದಿಗೆ ಬರಲಿದೆ.

ಈ Google Pixel 4a  ಹಿಂದಿನ ಕ್ಯಾಮೆರಾ HDR+ ವೈಶಿಷ್ಟ್ಯಗಳಾದ ಡ್ಯುಯಲ್ ಎಕ್ಸ್‌ಪೋಸರ್ ಕಂಟ್ರೋಲ್ ಮೋಡ್, ಟಾಪ್ ಶಾಟ್, ನೈಟ್ ಸೈಟ್‌ನೊಂದಿಗೆ ಬರಲಿದೆ. ಫೋನ್ ಸೆಲ್ಫಿಗಾಗಿ 8MP ಕ್ಯಾಮೆರಾ ಸೆನ್ಸಾರ್ ಅನ್ನು ಬಳಸುತ್ತದೆ. ಇದು f/ 2.0 ಅಪರ್ಚರ್ನೊಂದಿಗೆ ಬರುತ್ತದೆ. ಫೋನ್ 128GB ಸ್ಟೋರೇಜ್ ಹೊಂದಿದೆ. ಇದನ್ನು ಮೈಕ್ರೊ ಎಸ್ಡಿ ಕಾರ್ಡ್ ಸಹಾಯದಿಂದ ಹೆಚ್ಚಿಸಬಹುದು. ಗೂಗಲ್ ಪಿಕ್ಸೆಲ್ 4 ಎ ಸ್ಮಾರ್ಟ್‌ಫೋನ್ 3,140mAh ಬ್ಯಾಟರಿಯನ್ನು ಹೊಂದಿದ್ದು ಇದನ್ನು 18w ಸಹಾಯದಿಂದ ವೇಗವಾಗಿ ಚಾರ್ಜ್ ಮಾಡಬಹುದು. ಫೋನ್‌ನ ಆಯಾಮಗಳು 144 / 69.4 / 8.2 ಮಿಮೀ ಆಗಿದ್ದರೆ ತೂಕ 143 ಗ್ರಾಂ ಆಗಿರುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo