ಇದೀಗ ಆನ್ಲೈನ್ ಮಾರಾಟ ಮಳಿಗೆಯಾದ ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಮತ್ತು ಫ್ಯಾಬ್ ಟಿವಿ ಫೆಸ್ಟ್ (Amazon Fab Top Phones Fest) ಸೇಲ್ ಅನ್ನು ಅನ್ನು ಭಾರತದಲ್ಲಿ ಆಯೋಜಿಸಿದೆ. ಈ ಸೇಲ್ ಇದೇ ಫೆಬ್ರವರಿ 25 ರಿಂದ ಲೈವ್ ಆಗಲಿದ್ದು ಫೆಬ್ರವರಿ 28ರ ವರೆಗೆ ನಡೆಯಲಿದೆ. ಈ ಸಂದರ್ಭ ಖರೀದಿದಾರರು ಶವೋಮಿ (Xiaomi), ಸ್ಯಾಮ್‌ಸಂಗ್, ಒನ್‌ಪ್ಲಸ್ ನಂತಹ ಬ್ರ್ಯಾಂಡೆಡ್ ಸ್ಮಾರ್ಟ್‌ಫೋನ್‌ಗಳನ್ನು ಭರ್ಜರಿ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ ಮತ್ತು ಯಾವುದೇ ವೆಚ್ಚವಿಲ್ಲದ EMI, ವಿನಿಮಯ ಕೊಡುಗೆಗಳು ಮತ್ತು ಹೆಚ್ಚಿನವುಗಳಂತಹ ಡೀಲ್‌ಗಳನ್ನು ಆನಂದಿಸಬಹುದು.
ಪ್ರಮುಖವಾಗಿ ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಮತ್ತು ಫ್ಯಾಬ್ ಟಿವಿ ಫೆಸ್ಟ್ ಸೇಲ್‌ನಲ್ಲಿ ಐಕ್ಯೂ Z5, ಸ್ಯಾಮ್‌ಸಂಗ್ ಗ್ಯಾಲಕ್ಸಿ M12, ಒನ್‌ಪ್ಲಸ್ 9RT ಮತ್ತು ರಿಯಲ್‌ಮಿ ನಾರ್ಜೋ 50A ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್‌ಗಳು ರಿಯಾಯಿತಿ ಪಡೆದುಕೊಂಡಿದೆ. ಹಾಗಾದ್ರೆ ಸೇಲ್‌ನಲ್ಲಿ ಏನೆಲ್ಲಾ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ನೋಡಿ.
ಈಗಾಗಲೇ ತಿಳಿಸಸಿರುವಂತೆ ಐಕ್ಯೂ Z5 ಸ್ಮಾರ್ಟ್‌ಫೋನ್ ರಿಯಾಯಿತಿ ದರದಲ್ಲಿ ಕೇವಲ 20,990 ರೂ.ಗಳಿಗೆ ಲಭ್ಯವಾಗಲಿದೆ. ಐಕ್ಯೂ Z3 ಸ್ಮಾರ್ಟ್‌ಫೋನ್ 17,990 ರೂ. ಆರಂಭಿಕ ಬೆಲೆಯೊಂದಿಗೆ ಲಭ್ಯವಿರುತ್ತದೆ. ಈ ಎರಡೂ ಫೋನ್‌ಗಳಲ್ಲಿ 3,000 ರೂ, ಗಳ ತನಕ ರಿಯಾಯಿ ದೊರೆಯಲಿದೆ. ಇದಲ್ಲದೆ ಅಮೆಜಾನ್ ಸೇಲ್‌ನಲ್ಲಿ ರಿಯಲ್‌ಮಿ ನಾರ್ಜೊ 50A 10,999 ರೂ.ಗಳಿಗೆ ದೊರೆಯಲಿದೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್ ನಿಮಗೆ 11,499 ರೂ.ಗಳಿಗೆ ಬದಲಾಗಿ ಕೇವಲ 9,499 ರೂ.ಗಳಿಗೆ ಮಾರಾಟ ಆಗುತ್ತಿದೆ.
ಶವೋಮಿ ಎಂಐ 11 ಲೈಟ್ 5G NE ಸ್ಮಾರ್ಟ್‌ಫೋನ್ ಅನ್ನು ಆಫರ್ನಲ್ಲಿ ಇದೀಗ 26,999 ರೂ. ಗೆ ಖರೀದಿಸಬಹುದು. ಇದರ MRP ಬೆಲೆ 33,999 ರೂ. ಆಗಿದೆ. ಒನ್‌ಪ್ಲಸ್ ನಾರ್ಡ್ CE 5G ಈಗ ಕೇವಲ 24,999 ರೂ. ಗೆ ಮಾರಾಟವಾಗುತ್ತಿದೆ. ರೆಡ್ಮಿ ನೋಟ್ 10 ಪ್ರೊ ಇದನ್ನು ನೀವು ಕೇವಲ 17,499 ರೂ. ಗೆ ಖರೀದಿಸಬಹುದು. ಇನ್ನು ಈ ಸೇಲ್‌ನಲ್ಲಿ ICICI ಬ್ಯಾಂಕ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರಿಗೆ ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್ ಸರಣಿಯಲ್ಲಿ 8,000 ರೂ. ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ ಒನ್‌ಪ್ಲಸ್ 9RT ಖರೀದಿಸುವಾಗ 4,000 ರೂ. ರಿಯಾಯಿತಿ ದೊರೆಯಲಿದೆ. ಹೊಸದಾಗಿ ಬಿಡುಗಡೆ ಆದ ಒನ್‌ಪ್ಲಸ್ ನಾರ್ಡ್ CE 2 5G ಸ್ಮಾರ್ಟ್‌ಫೋನ್ ಮೇಲೆ 1,500 ರೂ. ರಿಯಾಯಿತಿ ಸಿಗಲಿದೆ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile