ಭಾರತದಲ್ಲಿ Dell ಕಂಪನಿಯಿಂದ ಹೊಸ ಲ್ಯಾಪ್‌ಟಾಪ್‌ಗಳ ಬಿಡುಗಡೆ! ಬೆಲೆ ಹಾಗೂ ಫೀಚರ್ಸ್ ನೋಡಿ

ಭಾರತದಲ್ಲಿ Dell ಕಂಪನಿಯಿಂದ ಹೊಸ ಲ್ಯಾಪ್‌ಟಾಪ್‌ಗಳ ಬಿಡುಗಡೆ! ಬೆಲೆ ಹಾಗೂ ಫೀಚರ್ಸ್ ನೋಡಿ

Dell ಕಂಪನಿಯು ಭಾರತದಲ್ಲಿ ತನ್ನ ಹೊಸ ಪ್ರೀಮಿಯಂ ಲ್ಯಾಪ್‌ಟಾಪ್‌ಗಳ ಸರಣಿಯನ್ನು ಪರಿಚಯಿಸಿದೆ. ಕಂಪನಿಯು ಡೆಲ್‌ XPS 13, ಡೆಲ್‌ 14S ಮತ್ತು ಡೆಲ್‌ 16S ಮಾದರಿಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಹೊಸ ಲ್ಯಾಪ್‌ಟಾಪ್‌ಗಳು ಅತ್ಯಾಧುನಿಕ AI ಪ್ರೊಸೆಸರ್‌ಗಳು, ಶಕ್ತಿಶಾಲಿ ಕಾರ್ಯಕ್ಷಮತೆ ಮತ್ತು ಪ್ರೀಮಿಯಂ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಕಾಲಿಟ್ಟಿವೆ. ಡೆಲ್‌ XPS 13 ಡಿವೈಸ್ Intel Core Series 3 ಅಥವಾ Intel Core Ultra Series 3 ಪ್ರೊಸೆಸರ್‌ಗಳೊಂದಿಗೆ ಆಯ್ಕೆ ಮಾಡಿಕೊಳ್ಳಬಹುದು. ಹಾಗೆಯೇ ಡೆಲ್‌ 14S ಮತ್ತು ಡೆಲ್‌ 16S ಲ್ಯಾಪ್‌ಟಾಪ್‌ಗಳು Intel Core Ultra Series 3 ಅಥವಾ AMD Ryzen AI 400 Series ಪ್ರೊಸೆಸರ್‌ಗಳ ಆಯ್ಕೆಯೊಂದಿಗೆ ಲಭ್ಯವಿವೆ. ಹಾಗಾದರೆ ಡೆಲ್‌ XPS 13, ಡೆಲ್‌ 14S ಮತ್ತು ಡೆಲ್‌ 16S ಲ್ಯಾಪ್‌ಟಾಪ್‌ಗಳ ಫೀಚರ್ಸ್‌ ಹಾಗೂ ಬೆಲೆಯ ಬಗ್ಗೆ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Poco M8 Power 5G ಬಿಡುಗಡೆಗೆ ಇನ್ನು ಕೆಲವೇ ದಿನಗಳ ಬಾಕಿ! 8,000mAh ಬ್ಯಾಟರಿ ಖಚಿತ

ಹೊಸ Dell ಲ್ಯಾಪ್‌ಟಾಪ್‌ಗಳ ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಡೆಲ್‌ XPS 13 ಲ್ಯಾಪ್‌ಟಾಪ್‌ನ ಆರಂಭಿಕ ಬೆಲೆ 79,990 ರೂ.ಗಳು ಆಗಿದೆ. ಇದು ಸ್ಕೈ ಮತ್ತು ಸ್ಟ್ರೋಮ್‌ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. ಇದೇ ರೀತಿ ಡೆಲ್ 14S ಲ್ಯಾಪ್‌ಟಾಪ್‌ನ ಆರಂಭಿಕ ಬೆಲೆ 1,19,990 ರೂ.ಗಳು ಆಗಿದೆ. ಇನ್ನು ಡೆಲ್‌ 16S ಮಾದರಿಯ ಬೆಲೆ 2,29,990 ರೂ.ಗಳಿಂದ ಆರಂಭವಾಗುತ್ತದೆ. ಈ ಎರಡೂ ಲ್ಯಾಪ್‌ಟಾಪ್‌ಗಳು Celestial Blue ಮತ್ತು Frost Blue ಬಣ್ಣಗಳಲ್ಲಿ ಲಭ್ಯವಿರುತ್ತವೆ. ಇನ್ನು Intel Core ಪ್ರೊಸೆಸರ್ ಹೊಂದಿರುವ Alienware 15 ಗೇಮಿಂಗ್ ಲ್ಯಾಪ್‌ಟಾಪ್‌ನ ಆರಂಭಿಕ ಬೆಲೆ 1,28,990 ರೂ.ಗಳು ಆಗಿದ್ದು, ಇದು Nova Black ಬಣ್ಣದಲ್ಲಿ ಖರೀದಿಗೆ ಲಭ್ಯವಾಗಲಿದೆ. ಹೊಸ ಲ್ಯಾಪ್‌ಟಾಪ್‌ಗಳು ಡೆಲ್‌ ವೆಬ್‌ಸೈಟ್‌ ಹಾಗೂ ಸ್ಟೋರ್‌ ಮೂಲಕ ಖರೀದಿಗೆ ಲಭ್ಯವಾಗಲಿವೆ.

Dell XPS 13 Dell 14S and Dell 16S Debut in India Check Price and Features

ಡೆಲ್ XPS 13 ಫೀಚರ್ಸ್‌

ಹೊಸ ಡೆಲ್ XPS 13 ಲ್ಯಾಪ್‌ಟಾಪ್ 13.4 ಇಂಚಿನ 2.5K LCD InfinityEdge ಟಚ್ ಡಿಸ್ಪ್ಲೇ ನೀಡಲಾಗಿದ್ದು, 100% DCI-P3 ಕಲರ್ ಕವರೇಜ್ ಅನ್ನು ಬೆಂಬಲಿಸುತ್ತದೆ. ಜೊತೆಗೆ 30Hz ರಿಂದ 120Hz ವರೆಗೆ ಬದಲಾಗುವ (Variable) ರಿಫ್ರೆಶ್ ರೇಟ್ ಇರುವುದರಿಂದ ಸ್ಕ್ರೋಲಿಂಗ್, ವಿಡಿಯೋ ವೀಕ್ಷಣೆ ಮತ್ತು ಇತರ ಕಾರ್ಯಗಳು ಹೆಚ್ಚು ಸ್ಮೂತ್ ಆಗಿರುತ್ತವೆ. ಡಿಸ್ಪ್ಲೇ ಗರಿಷ್ಠ 500 ನಿಟ್ಸ್ ಬ್ರೈಟ್‌ನೆಸ್ ಅನ್ನು ನೀಡುತ್ತದೆ. ಎರಡು USB 3.2 Gen 2 Type-C ಪೋರ್ಟ್‌ಗಳು ಅಥವಾ ಎರಡು ಥಂಡರ್‌ಬೋಲ್ಟ್‌ 4 USB Type-C ಪೋರ್ಟ್‌ಗಳು ಲಭ್ಯವಿರುತ್ತವೆ. Dolby Atmos ತಂತ್ರಜ್ಞಾನ ಹೊಂದಿರುವ ಕ್ವಾಡ್ ಸ್ಪೀಕರ್ ವ್ಯವಸ್ಥೆ ನೀಡಲಾಗಿದೆ.

ಡೆಲ್ 14S ಮತ್ತು ಡೆಲ್ 16S ಫೀಚರ್ಸ್‌

ಹೊಸ ಡೆಲ್ 14S ಮತ್ತು ಡೆಲ್ 16S ಲ್ಯಾಪ್‌ಟಾಪ್‌ಗಳು ಅತ್ಯಾಧುನಿಕ AI ಸಾಮರ್ಥ್ಯಗಳೊಂದಿಗೆ ಬಿಡುಗಡೆಯಾಗಿವೆ. ಡೆಲ್ 14S ಲ್ಯಾಪ್‌ಟಾಪ್ 14 ಇಂಚಿನ ಫುಲ್‌ HD+ OLED ನಾನ್-ಟಚ್ ಡಿಸ್ಪ್ಲೇ ಹೊಂದಿದೆ. ಹಾಗೆಯೇ ಡೆಲ್ 16S ಮಾದರಿಯಲ್ಲಿ 16 ಇಂಚಿನ 2.8K OLED ಟಚ್ ಡಿಸ್‌ಪ್ಲೇ ಪಡೆದುಕೊಂಡಿದೆ. ಈ ಎರಡೂ ಲ್ಯಾಪ್‌ಟಾಪ್‌ಗಳು 120Hz ವರೆಗೆ ರಿಫ್ರೆಶ್ ರೇಟ್, 400 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲವನ್ನು ಹೊಂದಿವೆ.

ಇದರೊಂದಿಗೆ Dolby Vision ತಂತ್ರಜ್ಞಾನವೂ ಲಭ್ಯ. ಈ ಎರಡೂ ಮಾಡೆಲ್‌ನಲ್ಲಿ USB Type-C ಪೋರ್ಟ್, ಎರಡು USB 3.2 Gen 1 Type-A ಪೋರ್ಟ್‌ಗಳು, HDMI 2.1 ಪೋರ್ಟ್ ಹಾಗೂ ಯೂನಿವರ್ಸಲ್ ಹೆಡ್‌ಸೆಟ್ ಜ್ಯಾಕ್ ನೀಡಲಾಗಿದೆ. ಈ ಎರಡೂ ಲ್ಯಾಪ್‌ಟಾಪ್‌ಗಳು 70Wh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 65W USB Type-C ಚಾರ್ಜರ್ ಮೂಲಕ ವೇಗವಾಗಿ ಚಾರ್ಜ್ ಮಾಡಬಹುದು.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile