Poco M8 Power 5G ಬಿಡುಗಡೆಗೆ ಇನ್ನು ಕೆಲವೇ ದಿನಗಳ ಬಾಕಿ! 8,000mAh ಬ್ಯಾಟರಿ ಖಚಿತ

HIGHLIGHTS

ಆಗಸ್ಟ್ 4 ರಂದು ಭಾರತದಲ್ಲಿ ಪೊಕೊ M8 ಪವರ್ ಲಾಂಚ್

ಪೊಕೊದ ಈ ಸ್ಮಾರ್ಟ್‌ಫೋನ್‌ AMOLED ಡಿಸ್‌ಪ್ಲೇ ಪಡೆದಿರಲಿದೆ

ಪೊಕೊ M8 ಪವರ್ ಫೋನ್‌ 8,000mAh ಬ್ಯಾಟರಿ ಬೆಂಬಲ ಹೊಂದಿರಲಿದೆ

Poco M8 Power 5G ಬಿಡುಗಡೆಗೆ ಇನ್ನು ಕೆಲವೇ ದಿನಗಳ ಬಾಕಿ! 8,000mAh ಬ್ಯಾಟರಿ ಖಚಿತ

ಪೊಕೊ ಮೊಬೈಲ್‌ ಕಂಪನಿಯು ಹೊಸದಾಗಿ Poco M8 Power 5G ಮೊಬೈಲ್‌ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗುತ್ತಿದೆ. ಪೊಕೊ ಸಂಸ್ಥೆಯು ತನ್ನ ನೂತನ ಪೊಕೊ M8 ಪವರ್ 5G ಮೊಬೈಲ್‌ ಅನ್ನು ಅದೇ ಆಗಷ್ಟ್‌ 4 ರಂದು ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಮೊಬೈಲ್‌ ಲಾಂಚ್‌ ಕುರಿತಾಗಿ ಈಗಾಗಲೇ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಸೈಟ್ ಲೈವ್ ಮಾಡಲಾಗಿದೆ. ಹಾಗೆಯೇ ಪೊಕೊ M8 ಪವರ್ ಮೊಬೈಲ್‌ 8,000mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿರುವುದು ಬಹುತೇಕ ಪಕ್ಕಾ ಆಗಿದೆ. ಹಾಗೆಯೇ ಈ ಫೋನ್‌ ಸ್ನಾಪ್‌ಡ್ರಾಗನ್ 4 Gen 4 SoC ಪ್ರೊಸೆಸರ್‌ನಲ್ಲಿ ಕೆಲಸ ಮಾಡುವ ಸಾಧ್ಯತೆಗಳು ಇವೆ. ಆರೆಂಜ್‌ ಕಲರ್‌ ಅನ್ನು ಒಳಗೊಂಡಂತೆ ಕಾಣುವ ಈ ಫೋನ್‌ AMOLED ಡಿಸ್‌ಪ್ಲೇ ಪಡೆದಿರುವ ನಿರೀಕ್ಷೆಗಳು ಇವೆ. ಹಾಗಾದರೇ ಪೊಕೊ M8 ಪವರ್ 5G ಮೊಬೈಲ್‌ನ ಇತರೆ ನಿರೀಕ್ಷಿತ ಲಾಂಚ್‌ ಹಾಗೂ ಫೀಚರ್ಸ್‌ಗಳ ಕುರಿತು ಮುಂದೆ ತಿಳಿಯೋಣ ಬನ್ನಿರಿ.

Digit.in Survey
✅ Thank you for completing the survey!

Also Read : 50MP ಕ್ಯಾಮೆರಾ ಇರುವ Oppo F33 5G ಮೊಬೈಲ್‌ ಬೆಲೆಯಲ್ಲಿ ಬೊಂಬಾಟ್‌ ಇಳಿಕೆ!

Poco M8 Power 5G ಲಾಂಚ್‌ಗೆ ಡೇಟ್‌ ಫಿಕ್ಸ್‌

ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ಕೊಡಲಿರುವ ಪೊಕೊ M8 ಪವರ್ ಸ್ಮಾರ್ಟ್‌ಫೋನ್‌ನ ನಿರೀಕ್ಷಿತ ಫೀಚರ್ಸ್‌ ಗ್ರಾಹಕರ ಕುತೂಹಲ ಹೆಚ್ಚಿಸಿವೆ. ಈ ಫೋನ್‌ ಇದೇ ಆಗಷ್ಟ್‌ 4 ರಂದು ಮಧ್ಯಾಹ್ನ 12 ಗಂಟೆಗೆ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಈ ಮೊಬೈಲ್‌ ಲಾಂಚ್‌ ಕುರಿತಾಗಿ ಈಗಾಗಲೇ ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಸೈಟ್ ಲೈವ್ ಮಾಡಲಾಗಿದೆ. ಇನ್ನು ಇದು ಬಜೆಟ್‌ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ಇಡುವ ನಿರೀಕ್ಷೆಗಳು. ಇದು ಆರೇಂಜ್‌ ಕಲರ್‌ ಆಯ್ಕೆಯಲ್ಲಿ ಬರಲಿದೆ.

POCO M8 Power 5G India Launch Confirmed

ಪೊಕೊ M8 ಪವರ್ ಮೊಬೈಲ್‌ ಫೀಚರ್ಸ್‌

ಮುಂಬರುವ ಹೊಸ ಪೊಕೊ M8 ಪವರ್ ಮೊಬೈಲ್ AMOLED ಪ್ಯಾನಲ್ ಹೊಂದಿರಲಿದೆ. ಹಾಗೆಯೇ ಈ ಫೋನ್‌ 7 ಇಂಚಿನ AMOLED ಡಿಸ್‌ಪ್ಲೇ ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದ್ದು, ಅಲ್ಲದೇ 1,800 nits ಬ್ರೈಟ್ನೆಸ್‌ ಪಡೆದಿರಲಿದೆ. ಇದರ ಇನ್ನು ಡಿಸ್‌ಪ್ಲೇ 1,080 x 2,396 ಪಿಕ್ಸೆಲ್‌ ರೆಸಲ್ಯೂಶನ ಜೊತೆಗೆ ಡಿಸ್‌ಪ್ಲೇಯು 120Hz ರಿಫ್ರೆಶ್‌ ರೇಟ್‌ ಹೊಂದಿರಲಿದೆ ಎಂದು ಹೇಳಲಾಗಿದೆ. ಈ ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 4 Gen 4 SoC ಚಿಪ್‌ಸೆಟ್ ಪ್ರೊಸೆಸರ್ ಪವರ್‌ ಇರಬಹುದು. ಇದಕ್ಕೆ ಪೂರಕವಾಗಿ 8GB RAM + 256GB ವೇರಿಯಂಟ್‌ ಇರುವ ಸಾಧ್ಯತೆ ಇದೆ.

ಹಾಗೆಯೇ ಪೊಕೊ M8 ಪವರ್ ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿರುವ ನಿರೀಕ್ಷೆಗಳು ಇವೆ. ಇನ್ನು ಇದರ ಬ್ಯಾಟರಿ ವಿಭಾಗವೂ ಈ ಫೋನ್‌ನ ಪ್ರಮುಖ ಆಕರ್ಷಣೆಯಾಗಿದ್ದು, 8,000mAh ಸಾಮರ್ಥ್ಯದ ಬೃಹತ್ ಬ್ಯಾಟರಿ ನೀಡಲಾಗಬಹುದು ಎಂಬ ಮಾಹಿತಿ ಹೊರಬಿದ್ದಿದೆ. ಈ ಬ್ಯಾಟರಿ ದೀರ್ಘಕಾಲದ ಬಳಕೆಯನ್ನು ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಲಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile