WhatsApp Update: ವಾಟ್ಸಾಪ್ ಶೀಘ್ರದಲ್ಲೇ ದೊಡ್ಡ ಅನಿಮೇಟೆಡ್ ಹಾರ್ಟ್ ಎಮೋಜಿಯನ್ನು ತರಲಿದೆ!

WhatsApp Update: ವಾಟ್ಸಾಪ್ ಶೀಘ್ರದಲ್ಲೇ ದೊಡ್ಡ ಅನಿಮೇಟೆಡ್ ಹಾರ್ಟ್ ಎಮೋಜಿಯನ್ನು ತರಲಿದೆ!
HIGHLIGHTS

ಮೆಟಾ ಒಡೆತನದ WhatsApp ಪ್ಲಾಟ್‌ಫಾರ್ಮ್ ಹೊಸ ಎಮೋಜಿ ಅಪ್ಡೇಟ್ ಹೊರತರಲು ಯೋಜಿಸುತ್ತಿದೆ

ಬಳಕೆದಾರರು ಚಾಟ್‌ಗಳ ಮೂಲಕ ದೊಡ್ಡ ಅನಿಮೇಟೆಡ್ ಹಾರ್ಟ್ ಎಮೋಜಿಗಳನ್ನು ಬಳಸಲು ಸಾಧ್ಯವಾಗುತ್ತದೆ

WhatsApp ಶೀಘ್ರದಲ್ಲೇ ದೊಡ್ಡ ಹಾರ್ಟ್ ಆನಿಮೇಟೆಡ್ ಎಮೋಜಿ ವೈಶಿಷ್ಟ್ಯವನ್ನು ಪರಿಚಯಿಸಲು ಸಿದ್ಧವಾಗಿದೆ.

ವಾಟ್ಸಾಪ್ (WhatsApp) ಎಮೋಜಿ ಪ್ರಿಯರಿಗೆ ಸಿಹಿ ಸುದ್ದಿ. ಮೆಟಾ ಒಡೆತನದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಹೊಸ ಎಮೋಜಿ (Emoji) ಅಪ್ಡೇಟ್ ಹೊರತರಲು ಯೋಜಿಸುತ್ತಿದೆ. ಬಳಕೆದಾರರು ಚಾಟ್‌ಗಳ ಮೂಲಕ ದೊಡ್ಡ ಅನಿಮೇಟೆಡ್ ಹಾರ್ಟ್ ಎಮೋಜಿಗಳನ್ನು ಬಳಸಲು ಸಾಧ್ಯವಾಗುತ್ತದೆ. WhatsApp ನ ದೊಡ್ಡ ಹಾರ್ಟ್ ಆನಿಮೇಟೆಡ್ ಎಮೋಜಿ ವೈಶಿಷ್ಟ್ಯವು ಇನ್ನೂ ಅಭಿವೃದ್ಧಿ ಹಂತದಲ್ಲಿದೆ ಮತ್ತು WhatsApp ಬಳಕೆದಾರರಿಗೆ ಶೀಘ್ರದಲ್ಲೇ ಲಭ್ಯವಿರಬಹುದು.

WhatsApp ದೊಡ್ಡ ಹಾರ್ಟ್ ಎಮೋಜಿ ಅಪ್ಡೇಟ್:

ವರದಿಗಳ ಪ್ರಕಾರ WhatsApp ಶೀಘ್ರದಲ್ಲೇ ದೊಡ್ಡ ಹಾರ್ಟ್ ಆನಿಮೇಟೆಡ್ ಎಮೋಜಿ ವೈಶಿಷ್ಟ್ಯವನ್ನು ಪರಿಚಯಿಸಲು ಸಿದ್ಧವಾಗಿದೆ. ಆದಾಗ್ಯೂ WhatsApp ಹಾರ್ಟ್ ಎಮೋಜಿ ಅಪ್ಡೇಟ್ ನಿಖರವಾದ ಬಿಡುಗಡೆ ದಿನಾಂಕವನ್ನು ಇನ್ನೂ ದೃಢೀಕರಿಸಲಾಗಿಲ್ಲ. ಈ ಹಿಂದೆ ಐಒಎಸ್ ಬೀಟಾ ಪರೀಕ್ಷಕರಿಗೆ WhatsApp ದೊಡ್ಡ ಹಾರ್ಟ್ ಆನಿಮೇಟೆಡ್ ಎಮೋಜಿ ವೈಶಿಷ್ಟ್ಯವು ಲಭ್ಯವಿತ್ತು.

ಅಜ್ಞಾತ ಕಾರಣಗಳಿಂದಾಗಿ ಈ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಲಾಗಿದೆ. ಮತ್ತು ಈಗ WhatsApp ದೊಡ್ಡ ಹಾರ್ಟ್ ಆನಿಮೇಟೆಡ್ ಎಮೋಜಿ ವೈಶಿಷ್ಟ್ಯವು WhatsApp android ಗೆ ಶೀಘ್ರದಲ್ಲೇ ಲಭ್ಯವಿರುತ್ತದೆ. WhatsApp ನ ಎಮೋಜಿ ವೈಶಿಷ್ಟ್ಯದ ಅಪ್ಡೇಟ್ ಹಿಂದಿನ ಮುಖ್ಯ ಉದ್ದೇಶವೆಂದರೆ ಬಳಕೆದಾರರ ಅನುಭವವನ್ನು ಹೆಚ್ಚಿಸುವುದು ಮತ್ತು ಬಳಕೆದಾರರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವುದು.

ಹಾರ್ಟ್ ಎಮೋಜಿ ಅಪ್ಡೇಟ್ ಇದು ಹೇಗೆ ವಿಭಿನ್ನವಾಗಿದೆ:

WhatsApp ಚಾಟ್‌ಗಳ ಮೂಲಕ ಬಳಕೆದಾರರು ಬಳಸುವ ಎಮೋಜಿಗಳ ವ್ಯಾಪಕ ಸಂಗ್ರಹವನ್ನು ಹೊಂದಿದೆ. ಪ್ರಸ್ತುತ WhatsApp ನಲ್ಲಿ ಲಭ್ಯವಿರುವ ಹಾರ್ಟ್ ಎಮೋಜಿಗಳ ಸಂಖ್ಯೆ ಒಂಬತ್ತು. ಈ ಒಂಬತ್ತುಹಾರ್ಟ್ ಎಮೋಜಿಗಳು ಕೆಂಪು, ನೀಲಿ, ಹಸಿರು, ಹಳದಿ ಮತ್ತು ಮುಂತಾದ ವಿವಿಧ ಬಣ್ಣಗಳನ್ನು ಹೊಂದಿವೆ. ಕೆಂಪು ಹಾರ್ಟ್ ಎಮೋಜಿಗಳು ಮಾತ್ರ ಅನಿಮೇಟೆಡ್ ಪರಿಣಾಮವನ್ನು ಹೊಂದಿವೆ.

ಚಾಟ್‌ಗಳ ಮೂಲಕ ಕಳುಹಿಸಿದಾಗ ಜನರು ಬಡಿಯುತ್ತಿರುವ ದೊಡ್ಡ ಹಾರ್ಟ್ ನೋಡಬಹುದು. ಹೊಸ ಅಪ್‌ಡೇಟ್‌ನಲ್ಲಿ ಇತರ ಬಣ್ಣದ ಹಾರ್ಟ್ ಎಮೋಜಿಗಳಿಗೆ ಅದೇ ಅನಿಮೇಷನ್ ಪರಿಣಾಮವನ್ನು ಸೇರಿಸಲು WhatsApp ಯೋಜಿಸಿದೆ. ಇತರ ಬಣ್ಣದ ಹಾರ್ಟ್ ಎಮೋಜಿಗಳು ಚಾಟ್‌ಗಳ ಮೂಲಕ ಹಂಚಿಕೊಂಡಾಗ ಅನಿಮೇಟೆಡ್ ಎಫೆಕ್ಟ್‌ನೊಂದಿಗೆ ದೊಡ್ಡದಾಗಿ ಕಾಣಿಸುತ್ತವೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo