ಫೋನ್ ಕಳ್ಳತನ ಮತ್ತು ವಂಚನೆಗಳಿಗೆ ಬ್ರೇಕ್! Sanchar Saathi ಅಪ್ಲಿಕೇಶನ್‌ನ ಅಸಲಿ ಪವರ್ ಎಷ್ಟಿದೆ ತಿಳಿಯಿರಿ!

HIGHLIGHTS

ಡಿಜಿಟಲ್ ಸುರಕ್ಷತೆಯನ್ನು ಹೆಚ್ಚಿಸಲು ಸಂಚಾರ್ ಸಾಥಿ (Sanchar Saathi) ಮೊಬೈಲ್ ಅಪ್ಲಿಕೇಶನ್ ಪರಿಚಯಿಸಿದೆ.

ನಿಮ್ಮ ಮೊಬೈಲ್ ಕಳೆದುಹೋದರೆ ಅಥವಾ ಯಾರಾದರೂ ನಿಮ್ಮ ಹೆಸರಿನಲ್ಲಿ ವಂಚನೆ ಮಾಡಲು ಪ್ರಯತ್ನಿಸಿದರೆ ತಕ್ಷಣ ಸಹಾಯಕ್ಕೆ ಬರುತ್ತದೆ.

ಫೋನ್ ಕಳ್ಳತನ ಮತ್ತು ವಂಚನೆಗಳಿಗೆ ಬ್ರೇಕ್! Sanchar Saathi ಅಪ್ಲಿಕೇಶನ್‌ನ ಅಸಲಿ ಪವರ್ ಎಷ್ಟಿದೆ ತಿಳಿಯಿರಿ!

ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯು (DoT) ನಾಗರಿಕರ ಡಿಜಿಟಲ್ ಸುರಕ್ಷತೆಯನ್ನು ಹೆಚ್ಚಿಸಲು ಸಂಚಾರ್ ಸಾಥಿ (Sanchar Saathi) ಎಂಬ ಅತ್ಯಾಧುನಿಕ ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಮೊಬೈಲ್ ವಂಚನೆಗಳು ಮತ್ತು ಫೋನ್ ಕಳವು ಪ್ರಕರಣಗಳು ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಈ ಆ್ಯಪ್ ಪ್ರತಿಯೊಬ್ಬರಿಗೂ ಒಂದು ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ. ನೀವು ಹೊಸ ಫೋನ್ ಖರೀದಿಸಿದಾಗ ಅದರಲ್ಲಿ ಮೊದಲೇ ಇನ್‌ಸ್ಟಾಲ್ ಆಗಿರುವ ಈ ಆ್ಯಪ್ ನಿಮ್ಮ ಮೊಬೈಲ್ ಕಳೆದುಹೋದರೆ ಅಥವಾ ಯಾರಾದರೂ ನಿಮ್ಮ ಹೆಸರಿನಲ್ಲಿ ವಂಚನೆ ಮಾಡಲು ಪ್ರಯತ್ನಿಸಿದರೆ ತಕ್ಷಣ ಸಹಾಯಕ್ಕೆ ಬರುತ್ತದೆ.

Digit.in Survey
✅ Thank you for completing the survey!

Also Read: Upcoming Phones in 2026: ಭಾರತದಲ್ಲಿ ಮುಂಬರಲಿರುವ Samsung, Realme, Vivo ಮತ್ತು OnePlus ಸ್ಮಾರ್ಟ್ಫೋನ್‌ಗಳು!

Sanchar Saathi App ಬಳಸಿ ಫೋನ್ ಬ್ಲಾಕ್ ಮಾಡಿ:

ಸಂಚಾರ್ ಸಾಥಿ ಆ್ಯಪ್‌ನ ಅತಿ ದೊಡ್ಡ ಅನುಕೂಲವೆಂದರೆ ಕಳೆದುಹೋದ ಮೊಬೈಲ್‌ಗಳನ್ನು ಬ್ಲಾಕ್ ಮಾಡುವ ಸೌಲಭ್ಯ. ನಿಮ್ಮ ಫೋನ್ ಕಳುವಾದ ತಕ್ಷಣ ಈ ಆ್ಯಪ್ ಅಥವಾ ಇದರ ವೆಬ್ ಪೋರ್ಟಲ್ ಮೂಲಕ ನಿಮ್ಮ ಫೋನ್‌ನ IMEI ಸಂಖ್ಯೆಯನ್ನು ಬ್ಲಾಕ್ ಮಾಡಬಹುದು. ಒಮ್ಮೆ ಬ್ಲಾಕ್ ಮಾಡಿದರೆ ಆ ಫೋನ್‌ನಲ್ಲಿ ಯಾವುದೇ ಕಂಪನಿಯ ಸಿಮ್ ಕಾರ್ಡ್ ಹಾಕಿದರೂ ಅದು ಕೆಲಸ ಮಾಡುವುದಿಲ್ಲ. ಅಷ್ಟೇ ಅಲ್ಲದೆ ಯಾರಾದರೂ ಆ ಫೋನ್ ಅನ್ನು ಬಳಸಲು ಪ್ರಯತ್ನಿಸಿದರೆ ತಕ್ಷಣ ಪೊಲೀಸರಿಗೆ ಮತ್ತು ನಿಮಗೆ ಮಾಹಿತಿ ಸಿಗುತ್ತದೆ. ಇದರಿಂದ ನಿಮ್ಮ ವೈಯಕ್ತಿಕ ಡೇಟಾ ದುರುಪಯೋಗವಾಗುವುದನ್ನು ತಡೆಯಬಹುದು.

Sanchar Saathi App

ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್‌ಗಳ ಮಾಹಿತಿ ಮತ್ತು ವಂಚನೆ ತಡೆ:

ಬಹಳಷ್ಟು ಜನರಿಗೆ ತಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳಿವೆ ಎಂಬ ಮಾಹಿತಿ ಇರುವುದಿಲ್ಲ. ಸಂಚಾರ್ ಸಾಥಿ ಆ್ಯಪ್ ಮೂಲಕ ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಎಲ್ಲಾ ಮೊಬೈಲ್ ಸಂಖ್ಯೆಗಳನ್ನು ನೀವು ಪರಿಶೀಲಿಸಬಹುದು. ಒಂದು ವೇಳೆ ನಿಮಗೆ ತಿಳಿಯದಂತೆ ಯಾರಾದರೂ ನಿಮ್ಮ ಹೆಸರಿನಲ್ಲಿ ಸಿಮ್ ಪಡೆದಿದ್ದರೆ ಅದನ್ನು ನೀವು ತಕ್ಷಣವೇ ಈ ಆ್ಯಪ್ ಮೂಲಕ ರಿಪೋರ್ಟ್ ಮಾಡಿ ಬಂದ್ ಮಾಡಿಸಬಹುದು. ಇದರ ಜೊತೆಗೆ ನಿಮಗೆ ಬರುವ ಅನುಮಾನಾಸ್ಪದ ಕರೆಗಳು ಅಥವಾ ವಂಚನೆಯ ಮೆಸೇಜ್‌ಗಳನ್ನು Chakshu ಫೀಚರ್ ಮೂಲಕ ರಿಪೋರ್ಟ್ ಮಾಡುವ ಅವಕಾಶವಿದ್ದು ಇದು ನಿಮ್ಮನ್ನು ಬ್ಯಾಂಕಿಂಗ್ ವಂಚನೆಗಳಿಂದ ರಕ್ಷಿಸುತ್ತದೆ.

ಫೋನ್‌ನ ಅಸಲಿಯತ್ತನ್ನು ಪರಿಶೀಲಿಸುವ ‘Know Your Mobile’ ಸೌಲಭ್ಯ:

ನೀವು ಹೊಸದಾಗಿ ಅಥವಾ ಹಳೆಯ ಫೋನ್ ಖರೀದಿಸುವಾಗ ಅದು ಅಸಲಿಯೇ ಅಥವಾ ನಕಲಿಯೇ ಎಂಬ ಗೊಂದಲ ಇರುತ್ತದೆ. ಸಂಚಾರ್ ಸಾಥಿ ಆ್ಯಪ್‌ನಲ್ಲಿರುವ KYM (Know Your Mobile) ಫೀಚರ್ ಬಳಸಿ ಆ ಫೋನ್‌ನ IMEI ಸಂಖ್ಯೆಯನ್ನು ಪರಿಶೀಲಿಸಬಹುದು. ಆ ಫೋನ್ ಈಗಾಗಲೇ ಕಳ್ಳತನವಾಗಿದೆಯೇ ಅಥವಾ ಬ್ಲಾಕ್ ಆಗಿದೆಯೇ ಎಂಬ ಮಾಹಿತಿಯನ್ನು ಇದು ಸೆಕೆಂಡುಗಳಲ್ಲಿ ನೀಡುತ್ತದೆ. ಹೀಗೆ ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್‌ಗೆ ಸಂಬಂಧಿಸಿದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಒಂದೇ ಕಡೆ ನೀಡಿರುವುದರಿಂದ ಈ ಆ್ಯಪ್ ನಿಮ್ಮ ಡಿಜಿಟಲ್ ಜೀವನವನ್ನು ಯಾವುದೇ ಆತಂಕವಿಲ್ಲದೆ (Worry-free) ನಡೆಸಲು ಸಹಾಯ ಮಾಡುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo