Install App Install App

ಎಚ್ಚರ! ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಈ ನಾಲ್ಕು ಮಾತುಗಳನ್ನು ತಿಳಿದಿರಿ!

ಇವರಿಂದ Ravi Rao | ಪ್ರಕಟಿಸಲಾಗಿದೆ 07 Dec 2021
HIGHLIGHTS
  • ನಿಮ್ಮ ಲ್ಯಾಪ್ಟಾಪ್, ಕಂಪ್ಯೂಟರ್ ಮತ್ತು ಮೊಬೈಲ್ ಅನ್ನು ಸರಿಯಾಗಿ ಅಪ್ಡೇಟ್ ಮಾಡುತ್ತಿರಿ

  • ನಿಮ್ಮ ಲ್ಯಾಪ್ಟಾಪ್, ಕಂಪ್ಯೂಟರ್ ಮತ್ತು ಮೊಬೈಲ್ ಅಲ್ಲಿ ಒಂದೇ ಮಾದರಿಯ ಪಾಸ್ವರ್ಡ್ ಬಳಸಬೇಡಿ

  • ನಿಮ್ಮ ಲ್ಯಾಪ್ಟಾಪ್ ಮತ್ತು ಮೊಬೈಲ್ ಅಲ್ಲಿ ಸಿಕ್ಕ ಸಿಕ್ಕ ಕಡೆ ಉಚಿತ Wi-Fi ಅನ್ನು ಬಳಸುವುದನ್ನು ನಿಲ್ಲಿಸಿ

ಎಚ್ಚರ! ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಈ ನಾಲ್ಕು ಮಾತುಗಳನ್ನು ತಿಳಿದಿರಿ!
ಎಚ್ಚರ! ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಈ ನಾಲ್ಕು ಮಾತುಗಳನ್ನು ತಿಳಿದಿರಿ!

ಪ್ರತಿ ವರ್ಷ ಸಾಮಾನ್ಯವಾಗಿ ಲಕ್ಷಾಂತರ ಆಂಡ್ರಾಯ್ಡ್ (Android) ಗ್ರಾಹಕರು ಸೈಬರ್ (Cyber Crime) ಅಪರಾಧಕ್ಕೆ ತುತ್ತಾಗುತ್ತಿರುವ ಕಾರಣದಿಂದಾಗಿ ಪ್ರತಿಯೋರ್ವ ಸ್ಮಾರ್ಟ್‌ಫೋನ್ (smartphone) ಬಳಕೆದಾರರು ಆನ್‌ಲೈನ್ (Online) ನಲ್ಲಿ ತಮ್ಮ ಗುರುತು ಮತ್ತು ಡೇಟಾವನ್ನು ಸುರಕ್ಷಿತಯ ಬಗ್ಗೆ ಎಚ್ಚರಿಕೆಯಿಂದ ಫೋನ್ ಬಳಸುವುದು ಅನಿವಾರ್ಯತೆಯು ಎದುರಾಗಿದೆ. ಅನೇಕ ಬೆದರಿಕೆಗಳನ್ನು ತಪ್ಪಿಸಲು ನೀವು ನಮೂದಿಸುವ ವೆಬ್‌ಸೈಟ್‌ಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್ ಯಾವುದೇ ಸಾಧನಗಳಲ್ಲಿಯೇ ಆಗಲಿ ಇಂಟರ್‌ನೆಟ್ ಬಳಸುವಾಗ ಆನ್‌ಲೈನ್ ಬೆದರಿಕೆಗಳ ವಿರುದ್ಧ ರಕ್ಷಿಸಿಕೊಳ್ಳಲು ಹಾಗೂ ತಮ್ಮ ಸುರಕ್ಷತೆಯನ್ನು ಸ್ವಯಂ ಆಗಿ ನಿರ್ವಹಣೆ ಮಾಡಬೇಕಿದೆ. 

ಕಂಪ್ಯೂಟರ್ ಮತ್ತು ಮೊಬೈಲ್ ಅಪ್ಡೇಟ್ ಮಾಡುತ್ತಿರಿ!

ಯಾವಾಗಲೂ ನಿಮ್ಮ ಕಂಪ್ಯೂಟರ್ ಮತ್ತು ಮೊಬೈಲ್ ಸಾಧನಗಳನ್ನು ನವೀಕೃತವಾಗಿರಿಸಿ. ಅಂದರೆ ಇತ್ತೀಚಿನ ಭದ್ರತಾ ಸಾಫ್ಟ್‌ವೇರ್, ವೆಬ್ ಬ್ರೌಸರ್ ಮತ್ತು ಆಪರೇಟಿಂಗ್ ಸಿಸ್ಟಮ್ ಅನ್ನು ಅಪ್‌ಡೇಟ್ ಮಾಡಿ. ಇದು ವೈರಸ್‌ಗಳು, ಮಾಲ್‌ವೇರ್ ಮತ್ತು ಇತರ ಆನ್‌ಲೈನ್ ಬೆದರಿಕೆಗಳ ವಿರುದ್ಧ ಉತ್ತಮ ರಕ್ಷಣೆಯಾಗಿದೆ. ಸ್ವಯಂಚಾಲಿತ ಅಪ್‌ಡೇಟ್‌ಗಳನ್ನು ಆನ್ ಮಾಡಿ ಇದರಿಂದ ಅವು ಲಭ್ಯವಾದಂತೆ ನೀವು ಹೊಸ ಪರಿಹಾರಗಳನ್ನು ಸ್ವೀಕರಿಸುತ್ತೀರಿ. ನಿಮ್ಮ ಸ್ಮಾರ್ಟ್‌ಫೋನ್ ಕೇಳುವ ಅಪ್‌ಡೇಟ್‌ಗಳನ್ನು ನಿಯಮಿತವಾಗಿ ಮಾಡುವುದರಿಂದ ಸೈಬರ್ ಕ್ರಮಿನಲ್‌ಗಳು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಹ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ.

ಒಂದೇ ಪಾಸ್‌ವರ್ಡ್ ಬಳಸದಿರಿ! 

ಆನ್‌ಲೈನ್‌ನಲ್ಲಿ ಹ್ಯಾಕರ್‌ಗಳು ನಿಮ್ಮ ಡೇಟಾ ಕದಿಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಲ್ಟಿ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳಿಗೆ ನೀವು ಒಂದೇ ಪಾಸ್‌ವರ್ಡ್ ಅನ್ನು ಎಂದಿಗೂ ಬಳಸಬಾರದು. ಹಾಗೂ ಪಾಸ್‌ವರ್ಡ್ ಆಯ್ಕೆಮಾಡುವಾಗ ನೀವು ಯಾವಾಗಲೂ ವಿಶೇಷ ಅಕ್ಷರಗಳನ್ನು ಬಳಸಬೇಕು. ಮಲ್ಟಿ ಪಾಸ್‌ವರ್ಡ್‌ಗಳನ್ನು ನಿರ್ವಹಿಸುವುದು ನಿಮಗೆ ಕಷ್ಟವಾಗಿದ್ದರೆ ಪಾಸ್‌ವರ್ಡ್ ಮ್ಯಾನೇಜರ್‌ ಅನ್ನು ಹೊಂದುವುದು ಉತ್ತಮವಾಗಿದೆ. ಬಲವಾದ ಪಾಸ್ವರ್ಡ್ಗಳು ಕನಿಷ್ಠ ಎಂಟು ಅಕ್ಷರಗಳ ಉದ್ದವನ್ನು ಹೊಂದಿರಬೇಕು ವಿಶೇಷ ಅಕ್ಷರಗಳನ್ನು ಹೊಂದಿರಬೇಕು ಮತ್ತು ದೊಡ್ಡ ಮತ್ತು ಸಣ್ಣ ಅಕ್ಷರಗಳು ಆ ಪಾಸ್‌ವರ್ಡ್‌ನಲ್ಲಿರಬೇಕು.

ಉಚಿತ Wi-Fi ಅನ್ನು ಬಳಸುವುದನ್ನು ನಿಲ್ಲಿಸಿ! 

ಫ್ರೀ ವೈಫೈ ಇಂಟರ್‌ನೆಟ್‌ ಸಿಕ್ಕರೆ ಸಾಕು ಸಿಕ್ಕ ಸಿಕ್ಕೆಲ್ಲಾ ವೆಬ್‌ಸೈಟ್‌ಗಳನ್ನು ಸರ್ಚ್ ಮಾಡುವ ಅಭ್ಯಾಸವಿದ್ದರೆ ಬಿಡಿ. ನೀವು ಉಚಿತ ಇಂಟರ್ನೆಟ್‌ಗೆ ಪ್ರವೇಶವನ್ನು ಪಡೆಯುತ್ತಿದ್ದರೆಎಚ್ಚರಿಕೆ ವಹಿಸುವುದು ಅತ್ಯಗತ್ಯ. ಉಚಿತ Wi-Fi ಅನ್ನು ಬಳಸುವುದರಿಂದ ನಿಮ್ಮ ಗೌಪ್ಯತೆ ಮತ್ತು ಡೇಟಾ ಸುರಕ್ಷತೆಗೆ ತೊಂದರೆ. ಈ ಸಾರ್ವಜನಿಕ ನೆಟ್‌ವರ್ಕ್‌ಗಳಲ್ಲಿ ಹ್ಯಾಕರ್‌ಗಳು ತಮ್ಮ ಕಣ್ಣುಗಳನ್ನು ಇಟ್ಟಿರುವುದನ್ನು ನೀವು ನೋಡಬಹುದು. ನಿಮ್ಮ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ನೀವು ಸಾಕಷ್ಟು ಸೂಕ್ಷ್ಮ ಮಾಹಿತಿಯನ್ನು ಹೊಂದಿರುವುದರಿಂದ ನಿಮ್ಮ ಡಿವೈಸ್‌ ಅನ್ನು ಉಚಿತ ವೈ-ಫೈ ಪಾಯಿಂಟ್‌ಗಳಿಗೆ ಸಂಪರ್ಕಿಸುವುದನ್ನು ತಪ್ಪಿಸಬೇಕು. ಫ್ರೀ ವೈಫೈ ಉಪಯೋಗಿಸುವ ಸ್ಥಳದ ಬಗ್ಗೆಯೂ ಎಚ್ಚರಿಕೆವಹಿಸಬೇಕು.

ಸುರಕ್ಷಿತ ವೆಬ್‌ಸೈಟ್ URL ಖಚಿತಪಡಿಸಿಕೊಳ್ಳಿ! 

ಸುರಕ್ಷಿತವಾಗಿ ಶಾಪಿಂಗ್ ಮಾಡಿ. ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವ ಮೊದಲು ಆ ವೆಬ್‌ಸೈಟ್ ಸುರಕ್ಷಿತ ತಂತ್ರಜ್ಞಾನವನ್ನು ಬಳಸುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ಸರ್ಚ್ ಪುಟದಲ್ಲಿರುವಾಗ ವೆಬ್ ವಿಳಾಸವು https ನೊಂದಿಗೆ ಪ್ರಾರಂಭವಿಬೇಕು ಎಂಬುದನ್ನು ಪರಿಶೀಲಿಸಿ ಇದರ ಬದಲಿಗೆ http ಮಾತ್ರ ಇದ್ದರೆ ಕ್ಲಿಕ್ ಮಾಡುವ ಮುನ್ನ ಯೋಚಿಸಿ ಪರಿಶೀಲಿಸಿಕೊಳ್ಳಿ. ಅಲ್ಲದೆ ಆ ವೆಬ್ ಪುಟದಲ್ಲಿ ಸಣ್ಣ ಲಾಕ್ ಪ್ಯಾಡ್‌ಲಾಕ್ ಚಿಹ್ನೆ ಕಾಣಿಸಿಕೊಂಡಿದೆಯೇ ಎಂದು ನೋಡಲು ಪರಿಶೀಲಿಸಿ. ಸೈಟ್‌ನ ಗೌಪ್ಯತೆ ನೀತಿಗಳನ್ನು ಓದಿ. ದೀರ್ಘ ಮತ್ತು ಸಂಕೀರ್ಣವಾಗಿದ್ದರೂ ಸೈಟ್ ಸಂಗ್ರಹಿಸುವ ವೈಯಕ್ತಿಕ ಮಾಹಿತಿಯನ್ನು ಹೇಗೆ ರಕ್ಷಿಸುತ್ತದೆ ಎಂಬುದನ್ನು ಗೌಪ್ಯತೆ ನೀತಿಗಳು ನಿಮಗೆ ತಿಳಿಸುತ್ತವೆ. ಏಕೆಂದರೆ ಇವುಗಳು ಹಣದ ವ್ಯವಹಾರವನ್ನು ನಡೆಸುತ್ತವೆ ಎಂಬುದನ್ನು ತಿಳಿದಿರಿ.

WEB TITLE

If you are a smartphone user then know 4 ways to stay safe online

Tags
  • scam
  • smartphone tips
  • stay safe online
  • ways to stay safe online
  • smartphone
  • safe online
  • top 4 ways
  • password
  • news details
  • mobile safty
  • cyber stay safe
  • smartphone user
  • hacking
  • Fraud
  • fake website
Install App Install App
Advertisements

ಟ್ರೆಂಡಿಂಗ್ ಲೇಖನಗಳು

Advertisements

LATEST ARTICLES ಎಲ್ಲವನ್ನು ವೀಕ್ಷಿಸಿ

Advertisements
DMCA.com Protection Status