50MP ಕ್ಯಾಮೆರಾದ Realme Narzo 50A ಮತ್ತು Realme Narzo 50i ಭಾರತದಲ್ಲಿ ಬಿಡುಗಡೆ; ಇದರ ಬೆಲೆ, ಫೀಚರ್ ಮತ್ತು ಇನ್ನಷ್ಟನ್ನು ತಿಳಿಯಿರಿ

50MP ಕ್ಯಾಮೆರಾದ Realme Narzo 50A ಮತ್ತು Realme Narzo 50i ಭಾರತದಲ್ಲಿ ಬಿಡುಗಡೆ; ಇದರ ಬೆಲೆ, ಫೀಚರ್ ಮತ್ತು ಇನ್ನಷ್ಟನ್ನು ತಿಳಿಯಿರಿ
HIGHLIGHTS

Realme Narzo 50A ಎರಡರಲ್ಲಿ ಹೆಚ್ಚು ಪ್ರೀಮಿಯಂ ಮಾದರಿ ಇದು 6000mAh ಬ್ಯಾಟರಿಯನ್ನು ಹೊಂದಿದೆ.

Realme Narzo 50A ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ.

Realme Narzo 50i ಸ್ಮಾರ್ಟ್ಫೋನ್ 7499 ರೂಗಳಲ್ಲಿ ಲಭ್ಯವಿದೆ

ಈ Realme Narzo 50A ಮತ್ತು Realme Narzo 50i ಸ್ಮಾರ್ಟ್‌ಫೋನ್‌ಗಳನ್ನು ಶುಕ್ರವಾರ ಭಾರತದಲ್ಲಿ Realme Band 2 ಫಿಟ್‌ನೆಸ್ ಬ್ಯಾಂಡ್ ಮತ್ತು Smart TV ನಿಯೋ 32 ಇಂಚಿನೊಂದಿಗೆ ಬಿಡುಗಡೆ ಮಾಡಲಾಗಿದೆ. Realme Narzo 50A ಎರಡರಲ್ಲಿ ಹೆಚ್ಚು ಪ್ರೀಮಿಯಂ ಮಾದರಿಯಾಗಿದೆ. ಇದು 6000mAh ಬ್ಯಾಟರಿಯನ್ನು ಹೊಂದಿದೆ. ಇದು ಮೀಡಿಯಾ ಹೆಲಿಯೋ G85 ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ. ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಮತ್ತೊಂದೆಡೆ ರಿಯಲ್‌ಮಿ ನಾರ್ಜೊ 50i ಸ್ಮಾರ್ಟ್‌ಫೋನ್‌ 5000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು ಯುನಿಸೋಕ್ 9863 ಪ್ರೊಸೆಸರ್ ನಿಂದ ಚಾಲಿತವಾಗಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಅಕ್ಟೋಬರ್ 7 ರಿಂದ 12AM IST (ಮಧ್ಯರಾತ್ರಿ) ಕ್ಕೆ ಮಾರಾಟವಾಗುತ್ತವೆ. Realme.com Flipkart ಮತ್ತು ಇತರ ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳಲ್ಲಿ ಮಾರಾಟವಾಗುತ್ತವೆ.

Realme Narzo 50

Realme Narzo 50 ಸೀರೀಸ್ ಬೆಲೆ

ರಿಯಲ್‌ಮಿ ನಾರ್ಜೊ 50A ಬೆಲೆ 4GB RAM + 64GB ಸ್ಟೋರೇಜ್ ರೂಪಾಂತರಕ್ಕೆ ರೂ 11,499 ಮತ್ತು 4GB RAM + 128GB ಸ್ಟೋರೇಜ್ ರೂಪಾಂತರಕ್ಕೆ ರೂ 12,499 ಆಗಿದೆ. ಸ್ಮಾರ್ಟ್ಫೋನ್ ಅನ್ನು ಎರಡು ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಆಕ್ಸಿಜನ್ ಬ್ಲೂ ಮತ್ತು ಆಕ್ಸಿಜನ್ ಗ್ರೀನ್. ರಿಯಲ್‌ಮಿ ನಾರ್ಜೊ 50i ಬೇಸ್ 2GB RAM + 32GB ಸ್ಟೋರೇಜ್ ರೂಪಾಂತರಕ್ಕೆ ರೂ 7499 ಮತ್ತು 4GB RAM + 64GB ಸ್ಟೋರೇಜ್ ರೂಪಾಂತರಕ್ಕೆ 8499 ಸ್ಮಾರ್ಟ್ಫೋನ್ ಅನ್ನು ಎರಡು ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಮಿಂಟ್ ಗ್ರೀನ್ ಮತ್ತು ಕಾರ್ಬನ್ ಬ್ಲ್ಯಾಕ್ ಸಿ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ.

Realme Narzo 50A ವಿಶೇಷತೆಗಳು

Realme Narzo 50A

ವಿಶೇಷತೆಗಳ ಪ್ರಕಾರ ರಿಯಲ್‌ಮಿ ನಾರ್ಜೊ 50A ಸ್ಮಾರ್ಟ್‌ಫೋನ್‌ 6.5 ಇಂಚಿನ ಡಿಸ್‌ಪ್ಲೇಯೊಂದಿಗೆ HD+ ರೆಸಲ್ಯೂಶನ್ ಮತ್ತು ವಾಟರ್‌ಡ್ರಾಪ್-ಶೈಲಿಯ ನಾಚ್‌ನೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹೆಲಿಯೋ G85 ಚಿಪ್‌ಸೆಟ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದನ್ನು ARM Mali-G52 GPU ಮತ್ತು 4GB RAM ಮತ್ತು 128GB ವರೆಗೆ ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. Realme Narzo 50A ನಲ್ಲಿನ ಇಂಟರ್ನಲ್ ಸ್ಟೋರೇಜ್ ಮೈಕ್ರೋ SD ಕಾರ್ಡ್ ಸ್ಲಾಟ್ ಮೂಲಕ 256GB ವರೆಗೆ ವಿಸ್ತರಿಸಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಶೂಟರ್ ಕಪ್ಪು-ಬಿಳುಪು ಪೋರ್ಟ್ರೇಟ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಇದೆ. ಮುಂದೆ Realme Narzo 50A 8 ಮೆಗಾಪಿಕ್ಸೆಲ್ ಸೆಲ್ಫಿ ಸ್ನ್ಯಾಪರ್‌ನೊಂದಿಗೆ ಬರುತ್ತದೆ.

Realme Narzo 50i ವಿಶೇಷತೆಗಳು

Realme Narzo 50i

ರಿಯಲ್ಮೆ ನಾರ್ಜೊ 50 ಐ 6.5 ಇಂಚಿನ ಡಿಸ್‌ಪ್ಲೇಯನ್ನು 89.5% ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಹೊಂದಿದೆ. ಹುಡ್ ಅಡಿಯಲ್ಲಿ ಸ್ಮಾರ್ಟ್ ಫೋನಿನಲ್ಲಿ ಯೂನಿಸಾಕ್ 9863 ಚಿಪ್ಸೆಟ್ ಇದೆ. ಇದನ್ನು 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಜೊತೆ ಜೋಡಿಸಲಾಗಿದೆ. ಇದನ್ನು ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ 256GB ವರೆಗೆ ವಿಸ್ತರಿಸಬಹುದು. ಸ್ಮಾರ್ಟ್ಫೋನ್ 8 ಮೆಗಾಪಿಕ್ಸೆಲ್ ರಿಯರ್ ಶೂಟರ್ ಮತ್ತು 5 ಮೆಗಾಪಿಕ್ಸೆಲ್ ಸೆಲ್ಫಿ ಸ್ನ್ಯಾಪರ್ ನೊಂದಿಗೆ ಬರುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo