ಸೂಪರ್ ಸ್ಟಾರ್ ರಜನಿಕಾಂತ್ ಅವರ 169ನೇ ಚಿತ್ರಕ್ಕೆ ‘ಜೈಲರ್’ (Jailer) ಎಂದು ಹೆಸರಿಡಲಾಗಿದೆ. ಈ ಬಹು ನಿರೀಕ್ಷಿತ ಯೋಜನೆಯನ್ನು ಆರ್ಥಿಕವಾಗಿ ನಿರ್ವಹಿಸುತ್ತಿರುವ ಸನ್ ಪಿಕ್ಚರ್ಸ್ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಪರಿಕಲ್ಪನೆಯ ಪೋಸ್ಟರ್‌ನೊಂದಿಗೆ ತನ್ನ ಶೀರ್ಷಿಕೆಯನ್ನು ಪ್ರಕಟಿಸಿದೆ. ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡಲಿದ್ದು ‘ಜೈಲರ್’ (Jailer) ಎಂದು ಟೈಟಲ್ ಇಡಲಾಗಿದೆ. ನಿರ್ಮಾಣ ಸಂಸ್ಥೆ ‘ಸನ್ ಪಿಕ್ಚರ್ಸ್’ ಮೂಲಕ ಈ ಸುದ್ದಿ ಅಧಿಕೃತವಾಗಿ ಹೊರಬಿದ್ದಿದೆ.
Survey
✅ Thank you for completing the survey!
‘ಜೈಲರ್’ (Jailer) ಸಿನಿಮಾದ ಟೈಟಲ್ ಪೋಸ್ಟರ್
‘ಜೈಲರ್’ (Jailer) ಸಿನಿಮಾದ ಟೈಟಲ್ ಪೋಸ್ಟರ್ ಕೌತುಕ ಮೂಡಿಸುವಂತಿದೆ. ಘಟಾನುಘಟಿ ಕಲಾವಿದರು ಮತ್ತು ತಂತ್ರಜ್ಞರು ಈ ಸಿನಿಮಾಗಾಗಿ ಒಂದಾಗುತ್ತಿರುವುದರಿಂದ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ದೊಡ್ಡ ಬಜೆಟ್ನಲ್ಲಿ ಈ ಚಿತ್ರ ಮೂಡಿಬರಲಿದೆ. ಈಗ ಟೈಟಲ್ ಪೋಸ್ಟರ್ ಕಂಡು ರಜನಿಕಾಂತ್ ಫ್ಯಾನ್ಸ್ ವಾವ್ ಎನ್ನುತ್ತಿದ್ದಾರೆ. ರಜನಿಕಾಂತ್ ಜೊತೆ ಶಿವರಾಜ್ಕುಮಾರ್ ನಟಿಸುವ ಬಗ್ಗೆ ಹಲವು ದಿನಗಳ ಹಿಂದೆಯೇ ಸುದ್ದಿ ಕೇಳಿಬಂದಿತ್ತು.
ಶಿವಣ್ಣ ಕೂಡ ಖಚಿತ ಪಡಿಸಿ ‘ರಜನಿಕಾಂತ್ ಜತೆ ನಟಿಸುವುದು ನಿಜಕ್ಕೂ ಉತ್ತಮ ಅವಕಾಶ. ಈ ‘ಜೈಲರ್’ (Jailer) ಚಿತ್ರದಲ್ಲಿ ಅವರ ಜತೆ ತೆರೆ ಹಂಚಿಕೊಳ್ಳುತ್ತಿರುವುದು ಖುಷಿ ನೀಡಿದೆ. ಅವರು ನನ್ನನ್ನು ಬಾಲ್ಯದಿಂದಲೂ ನೋಡಿದ್ದಾರೆ. ಅವರ ಜತೆ ನನಗೆ ವಿಶೇಷ ಬಾಂಧವ್ಯ ಇದೆ. ಸಿನಿಮಾದಲ್ಲಿ ಪಾತ್ರ ಹೇಗೇ ಇರಲಿ ಈ ಪ್ರಾಜೆಕ್ಟ್ನ ಭಾಗವಾಗಲು ನನಗೆ ಖುಷಿ ಇದೆ. ಬೆಳ್ಳಿ ಪರದೆಮೇಲೆ ರಜನಿಕಾಂತ್ ಮತ್ತು ನನ್ನನ್ನು ಒಟ್ಟಿಗೆ ನೋಡಿ ಫ್ಯಾನ್ಸ್ ಖುಷಿಪಡುತ್ತಾರೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ’ ಎಂದು ಶಿವರಾಜ್ಕುಮಾರ್ ಹೇಳಿದ್ದರು.
‘ಜೈಲರ್’ (Jailer) ಸಿನಿಮಾ ಸಖತ್ ಮಾಸ್ ಆಗಿ ಮೂಡಿಬರಲಿದೆ ಎಂಬುದಕ್ಕೆ ಈ ಪೋಸ್ಟರ್ ಸುಳಿವು ನೀಡುತ್ತಿದೆ. ರಕ್ತಸಿಕ್ತವಾಗಿರುವ ಮಚ್ಚನ್ನು ನೇತು ಹಾಕಲಾಗಿರುವ ಡೆಡ್ಲಿ ಪೋಸ್ಟರ್ ಇದಾಗಿದ್ದು ಅಭಿಮಾನಿಗಳ ವಲಯದಲ್ಲಿ ಸಖತ್ ವೈರಲ್ ಆಗುತ್ತಿದೆ. ಶೀಘ್ರದಲ್ಲೇ ಈ ‘ಜೈಲರ್’ (Jailer) ಸಿನಿಮಾಗೆ ಶೂಟಿಂಗ್ ಆರಂಭ ಆಗಲಿದೆ. ನಾಯಕಿಯಾಗಿ ಯಾರು ನಟಿಸಲಿದ್ದಾರೆ? ಬೇರೆ ಕಲಾವಿದರು ಯಾರೆಲ್ಲ ಇರಲಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile