ಜುಲೈ 1 ರಿಂದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್​ಗಳಿಗೆ ಹೊಸ ನಿಯಮ ಅನ್ವಯ; ಇಲ್ಲಿದೆ ಪೂರ್ತಿ ಮಾಹಿತಿ

ಜುಲೈ 1 ರಿಂದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್​ಗಳಿಗೆ ಹೊಸ ನಿಯಮ ಅನ್ವಯ; ಇಲ್ಲಿದೆ ಪೂರ್ತಿ ಮಾಹಿತಿ
HIGHLIGHTS

1 ಜುಲೈ 2022ರಿಂದ ಆನ್‌ಲೈನ್ ವ್ಯಾಪಾರಿಗಳು ಗ್ರಾಹಕರ ಕಾರ್ಡ್ ಡೇಟಾವನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ.

RBI ದೇಶೀಯ ಆನ್‌ಲೈನ್ ಖರೀದಿಗಳಿಗೆ ಕಾರ್ಡ್-ಆನ್-ಫೈಲ್ ಟೋಕನ್‌ಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡಿದೆ.

RBI ಮಾರ್ಗಸೂಚಿಗಳು ಮೂಲ ಕಾರ್ಡ್ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಿದ ಡಿಜಿಟಲ್ ಟೋಕನ್‌ನೊಂದಿಗೆ ಬದಲಾಯಿಸುವುದನ್ನು ಕಡ್ಡಾಯಗೊಳಿಸುತ್ತವೆ.

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರಿಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ ಬರಲಿದ್ದು 1 ಜುಲೈ 2022ರಿಂದ ಆನ್‌ಲೈನ್ ವ್ಯಾಪಾರಿಗಳು ಗ್ರಾಹಕರ ಕಾರ್ಡ್ ಡೇಟಾವನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಳೆದ ವರ್ಷ ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಟೋಕನೈಸೇಷನ್ ನಿಯಮಗಳನ್ನು ಹೊರಡಿಸಿತ್ತು. ನಿಯಮಗಳ ಅಡಿಯಲ್ಲಿ ವ್ಯಾಪಾರಿಗಳು ತಮ್ಮ ಸರ್ವರ್‌ಗಳಲ್ಲಿ ಗ್ರಾಹಕರ ಕಾರ್ಡ್ ಡೇಟಾವನ್ನು ಸಂಗ್ರಹಿಸುವುದನ್ನು ನಿರ್ಬಂಧಿಸಲಾಗಿದೆ.

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್​ಗಳಿಗೆ ಹೊಸ ನಿಯಮ

ಈ ಕಾರ್ಡ್ ಟೋಕನೈಸೇಷನ್ ನಿಯಮಗಳು ಈಗ 1 ಜುಲೈ 2022 ರಿಂದ ಜಾರಿಗೆ ಬರಲಿವೆ. RBI ದೇಶೀಯ ಆನ್‌ಲೈನ್ ಖರೀದಿಗಳಿಗೆ ಕಾರ್ಡ್-ಆನ್-ಫೈಲ್ ಟೋಕನ್‌ಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡಿದೆ. ದೇಶದಾದ್ಯಂತ ಕಾರ್ಡ್ ಟೋಕನ್‌ಗಳನ್ನು ಅಳವಡಿಸಿಕೊಳ್ಳುವ ಗಡುವನ್ನು 1 ಜನವರಿ 2022 ರಿಂದ 1 ಜುಲೈ 2022 ರವರೆಗೆ ಆರು ತಿಂಗಳವರೆಗೆ ವಿಸ್ತರಿಸಲಾಗಿದೆ. ಗ್ರಾಹಕರು ಸುರಕ್ಷಿತ ವಹಿವಾಟುಗಳನ್ನು ಮಾಡಲು ಸಹಾಯ ಮಾಡಲು ಎನ್‌ಕ್ರಿಪ್ಟ್ ಮಾಡಿದ “ಟೋಕನ್” ಆಗಿ ಸಂಗ್ರಹಿಸಲಾಗುತ್ತದೆ.

ಈ ಟೋಕನ್‌ಗಳು ಗ್ರಾಹಕರ ವಿವರಗಳನ್ನು ಬಹಿರಂಗಪಡಿಸದೆ ಪಾವತಿ ಮಾಡಲು ಅನುಮತಿಸುತ್ತದೆ. ಆರ್‌ಬಿಐ ಮಾರ್ಗಸೂಚಿಗಳು ಮೂಲ ಕಾರ್ಡ್ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಿದ ಡಿಜಿಟಲ್ ಟೋಕನ್‌ನೊಂದಿಗೆ ಬದಲಾಯಿಸುವುದನ್ನು ಕಡ್ಡಾಯಗೊಳಿಸುತ್ತವೆ. ಆದ್ದರಿಂದ 1 ಜುಲೈ 2022ರಿಂದ ವ್ಯಾಪಾರಿಗಳು ತಮ್ಮ ದಾಖಲೆಗಳಿಂದ ಗ್ರಾಹಕರ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಡೇಟಾವನ್ನು ಅಳಿಸಬೇಕಾಗುತ್ತದೆ. ಕಾರ್ಡ್ ಟೋಕನೈಸೇಷನ್ ವ್ಯವಸ್ಥೆ ಕಡ್ಡಾಯವಲ್ಲ.

ಟೋಕನೈಸೇಷನ್ ವ್ಯವಸ್ಥೆ ಸಂಪೂರ್ಣ ಉಚಿತ!

ಗ್ರಾಹಕರು ತಮ್ಮ ಕಾರ್ಡ್‌ನ ಟೋಕನೈಸೇಷನ್‌ಗೆ ಒಪ್ಪಿಗೆ ನೀಡದಿದ್ದರೆ ಗ್ರಾಹಕರು ಆನ್‌ಲೈನ್ ಪಾವತಿ ಮಾಡುವಾಗ ಪ್ರತಿ ಬಾರಿ ಕಾರ್ಡ್ ಪರಿಶೀಲನೆ ಮೌಲ್ಯ ಅಥವಾ CVV ಅನ್ನು ನಮೂದಿಸುವ ಬದಲು ಹೆಸರು, ಕಾರ್ಡ್ ಸಂಖ್ಯೆ ಮತ್ತು ಕಾರ್ಡ್ ಮಾನ್ಯತೆಯಂತಹ ಎಲ್ಲ ಕಾರ್ಡ್ ವಿವರಗಳನ್ನು ನಮೂದಿಸಬೇಕಾಗುತ್ತದೆ. ಅದೇ ಸಮಯದಲ್ಲಿ ಗ್ರಾಹಕರು ಕಾರ್ಡ್ ಟೋಕನೈಸೇಷನ್‌ಗೆ ಸಮ್ಮತಿಸಿದರೆ ಕಾರ್ಡ್​ದಾರರು ವಹಿವಾಟು ಮಾಡುವಾಗ CVV ಅಥವಾ ಒಂದು ಬಾರಿ ಪಾಸ್‌ವರ್ಡ್ (OTP) ವಿವರಗಳನ್ನು ಮಾತ್ರ ನಮೂದಿಸಬೇಕಾಗುತ್ತದೆ. ಟೋಕನೈಸೇಷನ್ ವ್ಯವಸ್ಥೆಯು ಸಂಪೂರ್ಣವಾಗಿ ಉಚಿತವಾಗಿದೆ.

ಇದು ಒಬ್ಬರ ಕಾರ್ಡ್‌ನ ಡೇಟಾವನ್ನು ಸುರಕ್ಷಿತವಾಗಿರಿಸುವಾಗ ಸುಗಮ ಪಾವತಿ ಅನುಭವವನ್ನು ಒದಗಿಸುತ್ತದೆ. ಅಲ್ಲದೆ ಟೋಕನೈಸೇಷನ್ ದೇಶೀಯ ಆನ್‌ಲೈನ್ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ. ಆರ್​ಬಿಐ ಪ್ರಕಾರ ಟೋಕನೈಸೇಷನ್ ವಿನಂತಿಯ ನೋಂದಣಿಯನ್ನು ಅಡಿಷನಲ್ ಫ್ಯಾಕ್ಟರ್ ಅಥೆಂಟಿಕೇಷನ್ (AFA) ಮೂಲಕ ಸ್ಪಷ್ಟ ಗ್ರಾಹಕ ಒಪ್ಪಿಗೆಯೊಂದಿಗೆ ಮಾತ್ರ ಮಾಡಲಾಗುತ್ತದೆ ಮತ್ತು ಚೆಕ್ ಬಾಕ್ಸ್, ರೇಡಿಯೋ ಬಟನ್ ಇತ್ಯಾದಿಗಳ ಬಲವಂತದ ಅಥವಾ ಡೀಫಾಲ್ಟ್ ಅಥವಾ ಸ್ವಯಂಚಾಲಿತ ಆಯ್ಕೆಯ ಮೂಲಕ ಅಲ್ಲ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo