ಸಿಗ್ನಲ್ ಪ್ರಾಬ್ಲಮ್! ನೀವಿರುವ ಜಾಗದಲ್ಲಿ ನೆಟ್​ವರ್ಕ್​ ಸಿಗುತ್ತಿಲ್ವಾ? ಈ ಕೆಲಸ ಮಾಡಿ ಸಾಕು!

ಸಿಗ್ನಲ್ ಪ್ರಾಬ್ಲಮ್! ನೀವಿರುವ ಜಾಗದಲ್ಲಿ ನೆಟ್​ವರ್ಕ್​ ಸಿಗುತ್ತಿಲ್ವಾ? ಈ ಕೆಲಸ ಮಾಡಿ ಸಾಕು!
HIGHLIGHTS

ಮೊಬೈಲ್ ಬಳಕೆದಾರರಲ್ಲಿ ಹೆಚ್ಚಿನವರು ಎದುರಿಸುತ್ತಿರುವ ಪ್ರಮುಖ ತೊಂದರೆ ಎಂದರೆ ನೆಟ್​ವರ್ಕ್.

ಯಾವುದೇ ಪ್ರದೇಶದಲ್ಲಿ ಸರಿಯಾಗಿ ಸಿಗ್ನಲ್‌ ಸಿಗುತ್ತಿಲ್ಲವಾದರೆ ನಿಮ್ಮ ಮೊಬೈಲ್ ನೆಟ್​ವರ್ಕ್ ಅನ್ನು ಹೆಚ್ಚಿಸಲು ಕೆಲವೊಂದು ಟ್ರಿಕ್​​​​ಗಳಿವೆ.

ಮೊಬೈಲ್ ಬಳಕೆದಾರರಲ್ಲಿ ಹೆಚ್ಚಿನವರು ಎದುರಿಸುತ್ತಿರುವ ಪ್ರಮುಖ ತೊಂದರೆ ಎಂದರೆ ನೆಟ್​ವರ್ಕ್. ಗುಡ್ಡಗಾಡು ಪ್ರದೇಶ, ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಸರಿಯಾದ ನೆಟ್‌ವರ್ಕ್‌ (Network Problem) ಸಿಗುವುದಿಲ್ಲ. ಈ ತೊಂದರೆ ಅನೇಕ ಜನರು ಅನುಭವಿಸುತ್ತಿದ್ದಾರೆ. ಎಲ್ಲೆಡೆ ನೆಟ್‌ವರ್ಕ್ ಸ್ಥಾಪನೆಯ ಕಾರ್ಯ ಕಷ್ಟ ಆಗಿರುವುದರಿಂದ ಟೆಲಿಕಾಂ ಕಂಪನಿಗಳ ಸೇವೆ ಎಲ್ಲೆಡೆ ತಲುಪಲು ಸಾಧ್ಯವಾಗುವುದಿಲ್ಲ. ಯಾವುದೇ ಪ್ರದೇಶದಲ್ಲಿ ಸರಿಯಾಗಿ ಸಿಗ್ನಲ್‌ ಸಿಗುತ್ತಿಲ್ಲವಾದರೆ ನಿಮ್ಮ ಮೊಬೈಲ್ ನೆಟ್​ವರ್ಕ್ ಅನ್ನು ಹೆಚ್ಚಿಸಲು ಕೆಲವೊಂದು ಟ್ರಿಕ್​​​​ಗಳಿವೆ.

ಸ್ಪೆಕ್ಟ್ರಮ್ ಬದಲಾಯಿಸಿ: 

ಟೆಲಿಕಾಂನಲ್ಲಿ 4ಜಿ, 3ಜಿ ಮತ್ತು 2ಜಿ ನೆಟ್‌ವರ್ಕ್, ಬೇರೆ ಬೇರೆ ಸ್ಪೆಕ್ಟ್ರಮ್‌ಗಳಲ್ಲಿ ಕಾರ್ಯನಿರ್ವಹಣೆ ನೀಡುತ್ತವೆ. ಇವುಗಳಲ್ಲಿ 2ಜಿ, 3ಜಿ ಸೇವೆ ಬಹುತೇಕ ಎಲ್ಲೆಡೆ ಲಭ್ಯವಿರುವುದರಿಂದ ಸ್ಮಾರ್ಟ್‌ಫೋನ್‌ನಲ್ಲಿ 2ಜಿ, 3ಜಿ ಕನೆಕ್ಟಿವಿಟಿಗೆ ಬದಲಾದರೆ ಹೆಚ್ಚು ನೆಟ್‌ವರ್ಕ್ ಸಿಗುತ್ತದೆ. ಹಾಗೆಯೇ ಬಹುತೇಕರು ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಉಪಯೋಗ ಮಾಡುತ್ತಿರುತ್ತಾರೆ. ಹಾಗಾಗಿ ಒಂದು ಕಂಪನಿ ಸಿಮ್​ನ ಸಿಗ್ನಲ್‌ ಸಿಗುತ್ತಿಲ್ಲವೆಂದಾದಲ್ಲಿ ಆ ನಂಬರ್‌ಗೆ ಬರಬೇಕಾದ ಎಲ್ಲಾ ಕರೆಗಳನ್ನು ನಿಮ್ಮದೇ ಮತ್ತೊಂದು ನಂಬರ್‌ಗೆ ಫಾರ್ವಡ್ ಮಾಡಿ ಸಮಸ್ಯೆಯಿಂದ ಮುಕ್ತವಾಗಬಹುದು.

ನೆಟ್‌ವರ್ಕ್ ರಿಸೀವರ್ ಖರೀದಿಸಿ: 

ಇದು ಪ್ರಯಾಣದ ವೇಳೆಯಲ್ಲಿ ಹೆಚ್ಚು ಉಪಯೋಗಕ್ಕೆ ಬರದಿರಬಹುದು. ಆದರೆ ಮನೆಯ ಒಳಗೆ ನೆಟ್‌ವರ್ಕ್ ಸರಿಯಾಗಿ ಸಿಗುತ್ತಿಲ್ಲ ಎಂದರೆ ನೆಟ್‌ವರ್ಕ್ ರಿಸೀವರ್ ಬಹಳಷ್ಟು ಪ್ರಯೋಜನಕಾರಿ. ಹಾಗಾಗಿ ಮನೆಯಲ್ಲಿ ಉತ್ತಮ ಸಿಗ್ನಲ್‌ ಪಡೆಯಲು ನೆಟ್‌ವರ್ಕ್ ರಿಸೀವರ್ ಖರೀದಿಸಿದರೆ ಉತ್ತಮ.

ಮೊಬೈಲ್ ಕವರ್ ಸಹ ಪ್ರಾಬ್ಲಮ್: 

ಹೌದು, ಅಚ್ಚರಿಯಾದರೂ ಇದು ಸತ್ಯ. ತಜ್ಞರ ಪ್ರಕಾರ ಮೊಬೈಲ್ ಮೇಲೆ ರಕ್ಷಣೆಗೆ ಹಾಕುವ ಕವರ್ ಸಹ ಸಿಗ್ನಲ್​ಗೆ ತೊಂದರೆ ಅಡಚಣೆ ಉಂಟುಮಾಡುತ್ತದಂತೆ. ಹಾಗಾಗಿ ನೆಟ್‌ವರ್ಕ್ ಕ್ಷಿಣವಾಗಿರುವ ಪ್ರದೇಶದಲ್ಲಿ ಮೊಬೈಲ್ ಕವರ್ ತೆಗೆದು ಒಮ್ಮೆ ಟ್ರೈ ಮಾಡಿನೋಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo