ಚಿತ್ರಮಂದಿರಗಳಲ್ಲಿ ಭಾರಿ ಸದ್ದು ಮಾಡುತ್ತಿರುವ ಕನ್ನಡದ ಬ್ಲಾಕ್ ಬಸ್ಟರ್ ಎಕ್ಕ ಸಿನಿಮಾ
ಚಿತ್ರಮಂದಿರಗಳ ನಂತರ ಎಕ್ಕಾ ಸಿನಿಮಾ Sun NXT ಮೂಲಕಪ್ರಸಾರವಾಗಲು ಸಜ್ಜಾಗಿದೆ.
ಈ ಬ್ಲಾಕ್ ಬಸ್ಟರ್ 'ಎಕ್ಕಾ' ಮುಂದಿನ ವಾರ OTT ಪ್ಲಾಟ್ಫಾರ್ಮ್ನಲ್ಲಿ ವೀಕ್ಷಿಸಲು ಲಭ್ಯವಾಗಲಿದೆ.
Ekka OTT Release: ಚಿತ್ರಮಂದಿರಗಳಲ್ಲಿ ಬಹಳ ಸದ್ದು ಮಾಡಿದ ಕನ್ನಡದ ಆಕ್ಷನ್ ಸಿನಿಮಾ ಎಕ್ಕ (Ekka Movie) ಈಗ ಮನೆಯಲ್ಲೇ ಕುಳಿತು ನೋಡಲು ಸಿದ್ಧವಾಗಿದ್ದು ಇದರ ಡೇಟ್ ಅನ್ನು ಕಂಫಾರ್ಮ್ ಮಾಡಿದೆ. ನೀವು ಈ ಜಬರ್ದಸ್ತ್ ಕನ್ನಡ ಸಿನಿಮಾ (Kannada Movie) ಇನ್ನೂ ಅನೇಕ ಕಾರಣಗಳಿಂದ ವೀಕ್ಷಿಸದವರು ಅಥವಾ ಮತ್ತೊಮ್ಮೆ ನೋಡಬೇಕು ಎಂದುಕೊಂಡಿರುವ ಅಭಿಮಾನಿಗಳು, ತಮ್ಮ ಮನೆಯ ಟಿವಿ ಅಥವಾ ಮೊಬೈಲ್ನಲ್ಲಿ ಚಿತ್ರವನ್ನು ವೀಕ್ಷಿಸಬಹುದು. ನಾಯಕ ನಟನ ಜೀವನದ ಬದಲಾವಣೆ ಮತ್ತು ಬೆಂಗಳೂರಿನ ಕರಾಳ ಪ್ರಪಂಚದ ಕಥೆ ಹೊಂದಿರುವ ಈ ಸಿನಿಮಾ ಡಿಜಿಟಲ್ ಪ್ಲಾಟ್ಫಾರ್ಮ್ಗೆ ಬರುತ್ತಿದೆ ಎಲ್ಲರಿಗೂ ಖುಷಿಯನ್ನು ನೀಡಿದೆ. ಒಟ್ಟಾರೆಯಾಗಿ ಚಿತ್ರಮಂದಿರಗಳಲ್ಲಿ ಭಾರಿ ಸದ್ದು ಮಾಡಿದ ನಂತರ ಈಗ ‘ಎಕ್ಕಾ’ ಸಿನಿಮಾ Sun NXT ಡಿಜಿಟಲ್ ಪ್ರೀಮಿಯರ್ಗೆ ಇದೆ 13ನೇ ನವೆಂಬರ್ನಿಂದ ಬರಲು ಸಜ್ಜಾಗಿದೆ.
SurveyEkka ಸಿನಿಮಾ ಈ ದಿನ OTT ಪ್ಲಾಟ್ಫಾರ್ಮ್ನಲ್ಲಿ ವೀಕ್ಷಿಸಿ:
ಯುವ ರಾಜ್ ನಟನೆಯ ‘ಎಕ್ಕ’ ಸಿನಿಮಾವು ಸನ್ ಎನ್ಎಕ್ಸ್ಟಿ (Sun NXT) ಎಂಬ ಒಟಿಟಿ (OTT) ಪ್ಲಾಟ್ಫಾರ್ಮ್ನಲ್ಲಿ ಕುಮಾರ್ ಬಿಡುಗಡೆಯಾಗಲಿದೆ. ಈ ಸಿನಿಮಾವು ನವೆಂಬರ್ 13, 2025 ರಂದು ಡಿಜಿಟಲ್ ರೂಪದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹಲವು ಮೂಲಗಳು ತಿಳಿಸಿವೆ. ಚಿತ್ರವನ್ನು ಆನ್ಲೈನ್ನಲ್ಲಿ ನೋಡಲು ವೀಕ್ಷಕರು ಸನ್ ಎನ್ಎಕ್ಸ್ಟಿ ಚಂದಾದಾರಿಕೆ ಹೊಂದಿರಬೇಕು. ಬೇರೆ ಕೆಲವು ಪ್ಲಾಟ್ಫಾರ್ಮ್ಗಳಲ್ಲಿ ಬರುತ್ತದೆ ಎಂಬ ಮಾತು ಇದೆ, ಸನ್ ಎನ್ಎಕ್ಸ್ಟಿಟಿ ಹಕ್ಕನ್ನು ಹೊಂದಿದೆ.

Also Read: ಅಮೆಜಾನ್ನಲ್ಲಿ ಇಂದು 43 Inch QLED Smart TV ಸಿಕ್ಕಾಪಟ್ಟೆ ಡಿಸ್ಕೌಂಟ್ಗಳೊಂದಿಗೆ ಮಾರಾಟವಾಗುತ್ತಿದೆ!
ಎಕ್ಕ ಚಿತ್ರದ ಟ್ರೇಲರ್ ಮತ್ತು ಕಥಾವಸ್ತು:
‘ಎಕ್ಕ’ ಚಿತ್ರದ ಕಥೆ ಮುತ್ತು (ಯುವ ರಾಜ್ಕುಮಾರ್) ಎಂಬ ಒಳ್ಳೆಯ ಮನಸ್ಸಿನ ಯುವಕನ ಸುತ್ತ ಸುತ್ತುತ್ತದೆ. ಪಾರ್ವತಿಪುರ ಎಂಬ ಚಿಕ್ಕಿಂದ ಬಂದ ಮುತ್ತು, ತನ್ನ ಕುಟುಂಬದ ಮನೆಯನ್ನು ಉಳಿಸಿಕೊಳ್ಳಲು ಬೆಂಗಳೂರಿಗೆ ಬಂದು ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಾನೆ ಮಾಡುತ್ತಾನೆ. ಒಂದು ದಿನ ಗುಂಡೇಟು ತಿಂದಿದ್ದಶಾಲಿ ಗ್ಯಾಂಗ್ಸ್ಟರ್ ಮಸ್ತಾನ್ ಭಾಯಿ (ಅತುಲ್ ಕುಲಕರ್ಣಿ) ಯನ್ನು ಮುತ್ತು ಆಕಸ್ಮಿಕವಾಗಿ ರಕ್ಷಿಸುತ್ತಾನೆ.
ಈ ಒಂದು ಘಟನೆ ಮುತ್ತುವಿನ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ಮತ್ತು ನಗರದ ಭೂಗತ ಲೋಕಕ್ಕೆ ಎಳೆಯುತ್ತದೆ. ಒಬ್ಬ ಸಣ್ಣ ಹಳ್ಳಿಯ ಹುಡುಗ ಹೇಗೆ ಕ್ರೂರ ಗ್ಯಾಂಗ್ಸ್ಟರ್ ಆಗಿ ಬದಲಾಗುತ್ತಾನೆ ಮತ್ತು ಮತ್ತೆ ತನ್ನ ನೆಮ್ಮದಿಯ ಜೀವನಕ್ಕೆ ಮರಳುತ್ತಾನೆ ಹೋರಾಡುತ್ತಾನೆ ಎಂಬುದೇ ಈ ಚಿತ್ರದ ಮುಖ್ಯ ಕಥೆ. ಟ್ರೈಲರ್, ಕಥಾನಾಯಕನ ಶಾಂತ ಜೀವನ ಮತ್ತು ಹಿಂಸಾತ್ಮಕ ಚಿತ್ರದ ಭೂಗತ ಲೋಕದ ನಡುವಿನ ವ್ಯತ್ಯಾಸವನ್ನು ಚೆನ್ನಾಗಿ ತೋರಿಸುತ್ತದೆ.
ಎಕ್ಕ ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿ:
ಈ ಚಿತ್ರದಲ್ಲಿ ಯುವ ರಾಜ್ಕುಮಾರ್ ಮುತ್ತು ಪಾತ್ರದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅವರಿಗೆ ನಾಯಕಿಯರಾಗಿ ಸಂಜನಾ ಆನಂದ್ ಮತ್ತು ಸಂಪದ ಹುಲಿವಾನ ಸಾಥ್ ನೀಡಿದರು. ಅನುಭವಿ ನಟ ಅತುಲ್ ಕುಲಕರ್ಣಿ ಗ್ಯಾಂಗ್ಸ್ಟರ್ ಮಸ್ತಾನ್ ಭಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಆದಿತ್ಯ (ಎಸಿಪಿ ದುರ್ಗಾ ಪ್ರಸಾದ್), ಶ್ರುತಿ (ಮುತ್ತು ತಾಯಿ ರತ್ನ) ಮತ್ತು ಸಾಧು ಕೋಕಿಲ (ಪಿಂಟೋ) ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ. ಈ ಚಿತ್ರವನ್ನು ರೋಹಿತ್ ಪದಕಿ ಅವರು ನಿರ್ದೇಶನ ಮಾಡಿದ್ದಾರೆ. ಪಿಆರ್ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲ್ಮ್ಸ್ ಮತ್ತು ಕೆಆರ್ಜಿ ಸ್ಟುಡಿಯೋಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದೆ. “ಬ್ಯಾಂಗಲ್ ಬಂಗಾರಿ” ಜನಪ್ರಿಯ ಹಾಡು ಸೇರಿದಂತೆ ಚಿತ್ರದ ಸಂಗೀತವನ್ನು ಚರಣ್ ರಾಜ್ ಸಂಗೀತ, ಮತ್ತು ಛಾಯಾಗ್ರಹಣವನ್ನು ಸತ್ಯ ಹೆಗಡೆ ಮಾಡಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile