JioMart App: 10 ಲಕ್ಷಕ್ಕೂ ಅಧಿಕ ಡೌನ್​ಲೋಡ್​ ಆದ ಜಿಯೋಮಾರ್ಟ್ ಆಪ್, ಕಾರಣವೇನು ಗೊತ್ತಾ?

JioMart App: 10 ಲಕ್ಷಕ್ಕೂ ಅಧಿಕ ಡೌನ್​ಲೋಡ್​ ಆದ ಜಿಯೋಮಾರ್ಟ್ ಆಪ್, ಕಾರಣವೇನು ಗೊತ್ತಾ?
HIGHLIGHTS

ಗೂಗಲ್ ಪ್ಲೇ ಸ್ಟೋರ್ ಹಾಗೂ iOS ಆಪಲ್ ಸ್ಟೋರ್ ನಲ್ಲಿ JioMart App Download ಲಭ್ಯವಿದೆ

ಮುಂಬರುವ ವರ್ಷಗಳಲ್ಲಿ ಇನ್ನಷ್ಟು ನಗರಗಳ ಮೂಲಕ JioMart Shopping App ದೇಶದಾದ್ಯಂತ ಇರುವ ಗ್ರಾಹಕರಿಗೆ ಸೇವೆ ಸಲ್ಲಿಸುವ ಗುರಿ ಇದೆ.

ಜಿಯೋಮಾರ್ಟ್ ನಲ್ಲಿ ತಮಗೆ ಬೇಕಾದ ವಸ್ತುಗಳನ್ನು ಆಯ್ಕೆ ಮಾಡಿ ಖರೀದಿ ಮಾಡಲು JioMart app launch in india ಮಾಡಿದೆ

ರಿಲಯನ್ಸ್ ರೀಟೇಲ್ ವ್ಯವಹಾರದ ಭಾಗವಾದ ಗ್ರಾಹಕರ ದಿನಸಿ ಖರೀದಿ ಪ್ಲಾಟ್ ಫಾರ್ಮ್ ಜಿಯೋಮಾರ್ಟ್ ನಿಂದ ಜಿಯೋಮಾರ್ಟ್ ಅಪ್ಲಿಕೇಷನ್ ಈಗ ಗೂಗಲ್ ಪ್ಲೇ ಸ್ಟೋರ್ ಹಾಗೂ iOS ಆಪಲ್ ಸ್ಟೋರ್ ನಲ್ಲಿ ಲಭ್ಯವಿದೆ. ಈ ಅಪ್ಲಿಕೇಷನ್ ಶುರುವಾದ ಕೆಲವೇ ದಿನದಲ್ಲಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ 5 ಲಕ್ಷ ಡೌನ್ ಲೋಡ್ ಆಗಿದೆ. ಈಗ ಆ ಸಂಖ್ಯೆ 10 ಲಕ್ಷ ದಾಟಿದೆ. ಶಾಪಿಂಗ್ ವಿಭಾಗದಲ್ಲಿ ಡೌನ್ ಲೋಡ್ ಆದ ಟಾಪ್ 3 ಅಪ್ಲಿಕೇಷನ್ ಗಳಲ್ಲಿ ಜಿಯೋ ಮಾರ್ಟ್ ಕೂಡ ಒಂದು. ಇದೀಗ ಗ್ರಾಹಕರಿಗೆ ಜಿಯೋ ಮಾರ್ಟ್ ಎಲ್ಲ ಪ್ಲಾಟ್ ಫಾರ್ಮ್ ಗಳಲ್ಲೂ ದೊರೆತಂತಾಗಿದೆ. 

ಇದು ತುಂಬ ಸುಲಭವಾಗಿ ಕೈಗೆಟುಕುತ್ತದೆ. ಮೊಬೈಲ್ ತಲೆಮಾರಿನ ಗ್ರಾಹಕರು ಆಂಡ್ರಾಯ್ಡ್ ಹಾಗೂ iOS ಮೊಬೈಲ್ ಫೋನ್, ಟ್ಯಾಬ್ಲೆಟ್ ಮತ್ತಿತರ ಗ್ಯಾಜೆಟ್ ಗಳ ಮೂಲಕ ಸುಲಭವಾಗಿ ಜಿಯೋಮಾರ್ಟ್ ಅಪ್ಲಿಕೇಷನ್ ಬಳಸಬಹುದು.  ಅಪ್ಲಿಕೇಷನ್ ಅಂತಷ್ಟೇ ಅಲ್ಲ ಜತೆಗೆ ಪೋರ್ಟಲ್ ಕೂಡ ಬಳಸಬಹುದು. ಲಾಗಿನ್ ಐಡಿ ಬಳಸಿಕೊಂಡು ಬೇರೆ ಬೇರೆ ಡಿವೈಸ್ ಗಳ ಮೂಲಕ ಜಿಯೋಮಾರ್ಟ್ ನಲ್ಲಿ ತಮಗೆ ಬೇಕಾದ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಖರೀದಿ ಮಾಡಬಹುದು. ಲಾಗ್ ಇನ್ ಐಡಿ ಬಳಸಿ ಒಂದು ಬಾರಿ ಆಯ್ಕೆ ಮಾಡಿಕೊಂಡ ನಂತರ ಅದು ನಿಮ್ಮದೇ ಬುಟ್ಟಿಯಲ್ಲಿ (ಕಾರ್ಟ್) ಇರುತ್ತದೆ. ಈ ಹಿಂದಿನ ಆರ್ಡರ್ ಗಳು ಯಾವುವು ಅಂತಲೂ ಗೊತ್ತಾಗುತ್ತದೆ.

 Jio Mart

ದಿನದಿನಕ್ಕೂ ಹೊಸ ಉತ್ಪನ್ನ, ಹೊಸ ಅನುಭವ 

ಬೀಟಾ ಪ್ಲಾಟ್ ಫಾರ್ಮ್ ಆದ jiomart.com ಅನ್ನು ಏಕಕಾಲಕ್ಕೆ ದೇಶದ 200 ನಗರ ಹಾಗೂ ಪಟ್ಟಣಗಳಲ್ಲಿ ಮಾರ್ಚ್ ಅಂತ್ಯದ ಹೊತ್ತಿಗೆ ಆರಂಭಿಸಲಾಯಿತು. ದೇಶದ ನಾನಾ ಕಡೆ ಜಿಯೋಮಾರ್ಟ್ ಲಭ್ಯವಿದ್ದು ನಿಜವಾದ ಡಿಜಿಟಲ್ ಖರೀದಿ ಅನುಭವ ನೀಡುತ್ತದೆ. ಟಯರ್ 2 ಹಾಗೂ ಟಯರ್ 3 ಪಟ್ಟಣಗಳಲ್ಲೂ ಗ್ರಾಹಕರು ಆನ್ ಲೈನ್ ಖರೀದಿ ಹಾಗೂ ದಿನಸಿ, ಹಣ್ಣು, ತರಕಾರಿ ಹಾಗೂ ಇತರ ಅಗತ್ಯ ವಸ್ತುಗಳು ಮೊದಲ ಬಾರಿಗೆ ಮನೆಗೆ ತಲುಪುತ್ತಿರುವ ಅನುಭವ ಪಡೆಯುತ್ತಿದ್ದಾರೆ. 

ಹೊಸ ಉತ್ಪನ್ನಗಳನ್ನು, ಫೀಚರ್ ಗಳನ್ನು, ಬ್ರ್ಯಾಂಡ್ ಗಳು ಮತ್ತು ವಿವಿಧ ಬಗೆಗಳನ್ನು ಜಿಯೋಮಾರ್ಟ್ ನಿರಂತರವಾಗಿ ಸೇರ್ಪಡೆ ಮಾಡುತ್ತಲೇ ಇದೆ. ಇದು ಪ್ರತಿ ದಿನವೂ ನಡೆಯುತ್ತಿದೆ. ಪ್ರತಿ ಬಾರಿ ಖರೀದಿ ಮಾಡುವಾಗಲೂ ಸಂಪೂರ್ಣ ಹೊಸ ಅನುಭವ ನೀಡುತ್ತಿದೆ. ಗ್ರಾಹಕರು ತಮ್ಮ ಆಯ್ಕೆಯಂತೆ ಖರೀದಿಸಲು ಸಾಧ್ಯವಾಗುತ್ತಿದೆ. 

ಕನಿಷ್ಠ 5% ರಿಯಾಯಿತಿ ಭರವಸೆ

ಪರ್ಸನಲ್ ಕೇರ್ ಉತ್ಪನ್ನಗಳು, ಮನೆ ಹಾಗೂ ಅಡುಗೆ ಮನೆಯ ಅಗತ್ಯದ ಉತ್ಪನ್ನಗಳು, ಪೂಜೆಗೆ ಬೇಕಾದ ವಸ್ತುಗಳು, ಶೂ ಕೇರ್, ಮಕ್ಕಳಿಗೆ ಅಗತ್ಯ ಇರುವ ವಸ್ತುಗಳು, ಬ್ರ್ಯಾಂಡೆಡ್ ಆಹಾರ ಪದಾರ್ಥಗಳು ಹೀಗೆ ವಿಶಾಲವಾದ ಖರೀದಿ ಆಯ್ಕೆಗಳಿವೆ. ಅಗತ್ಯ ವಸ್ತುಗಳು ಎಲ್ಲದರ ಮೇಲೂ ಕನಿಷ್ಠ 5% ರಿಯಾಯಿತಿ ಭರವಸೆ ನೀಡಿದಂತೆಯೇ ನಡೆದುಕೊಳ್ಳುತ್ತಿದೆ ಹಾಗೂ ಆಕರ್ಷಕ ಬೆಲೆಗೆ ಉತ್ಪನ್ನಗಳನ್ನು ಒದಗಿಸುತ್ತಿದೆ ಜಿಯೋಮಾರ್ಟ್.

JioMart App

ಇದಲ್ಲದೆ ಜಿಯೋಮಾರ್ಟ್ ಗೆ ಪಾವತಿ ಮಾಡುವುದಕ್ಕೆ ಕೂಡ ಗ್ರಾಹಕರಿಗೆ ಅನುಕೂಲಕರ ಆಯ್ಕೆಗಳನ್ನು ನೀಡಲಾಗಿದೆ. ಈಚೆಗೆ ಸೊಡೆಕ್ಸೊ ಮೀಲ್ ಕೂಪನ್ ಕೂಡ ಸೇರಿಸಲಾಗಿದೆ. ಇನ್ನು ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್, ರೊನ್ ಲಾಯಲ್ಟಿ ಪಾಯಿಂಟ್ಸ್ ಹಾಗೂ ಕ್ಯಾಶ್ ಆನ್ ಡೆಲಿವರಿ ಮುಂತಾದವು ಈಗಾಗಲೇ ಇದ್ದವು. ಈಚೆಗೆ ಕ್ರೆಡಿಟ್ ಕಾರ್ಡ್ ಮತ್ತು ಕ್ಯಾಶ್ ಬ್ಯಾಕ್ ಆಫರ್ ಜತೆಗೆ ವ್ಯಾಲೆಟ್ ಕೂಡ ಸೇರಿಸಲಾಗಿದೆ.

ಪ್ರತಿ ನಿತ್ಯ 2.5 ಲಕ್ಷ ಆರ್ಡರ್ ಗಳು 

ದೇಶದಾದ್ಯಂತ ಪ್ರತಿ ನಿತ್ಯ 2.5 ಲಕ್ಷ ಆರ್ಡರ್ ಗಳು ಜಿಯೋಮಾರ್ಟ್ ಗೆ ಬರುತ್ತಿವೆ ಎಂದು ಈಚೆಗೆ ನಡೆದ ರಿಲಯನ್ಸ್ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಮುಕೇಶ್ ಅಂಬಾನಿ ಹೇಳಿದ್ದರು. ದಿನದಿನಕ್ಕೂ ಈ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದೆ ಎಂದು ಕೂಡ ತಿಳಿಸಿದ್ದರು. ಜಿಯೋಮಾರ್ಟ್ ಇನ್ನೂ ಹೆಚ್ಚೆಚ್ಚು ಸ್ಥಳಕ್ಕೆ ತಲುಪುವ ಗುರಿ ಇರಿಸಿಕೊಂಡಿದೆ ಹಾಗೂ ಡೆಲಿವರಿ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದರಲ್ಲಿದೆ. ಗ್ರಾಹಕರಿಗೆ ಜಿಯೋಮಾರ್ಟ್ ತುಂಬ ಅನುಕೂಲಕರ ಹಾಗೂ ಸಲೀಸಾದ ಖರೀದಿ ಅನುಭವ ನೀಡುತ್ತದೆ. ದಿನಸಿ ಪದಾರ್ಥಗಳ ಜತೆಗೆ ಎಲೆಕ್ಟ್ರಾನಿಕ್ಸ್, ಫ್ಯಾಷನ್, ಫಾರ್ಮಾಸ್ಯುಟಿಕಲ್ ಹಾಗೂ ಹೆಲ್ತ್ ಕೇರ್ ಉತ್ಪನ್ನಗಳನ್ನು ಸಹ ಮುಂಬರುವ ದಿನಗಳಲ್ಲಿ ಮಾರಾಟ ಮಾಡಲಾಗುವುದು.

ಮುಂಬರುವ ವರ್ಷಗಳಲ್ಲಿ ಇನ್ನಷ್ಟು ನಗರಗಳಲ್ಲಿ ದೇಶದಾದ್ಯಂತ ಇರುವ ಗ್ರಾಹಕರಿಗೆ ಸೇವೆ ಸಲ್ಲಿಸುವ ಗುರಿ ಇದೆ. ಇನ್ನೂ ಹಲವು ವಿಭಾಗಗಳನ್ನು ಸಹ ಆರಂಭಿಸಲಾಗುವುದು ಎಂದು ಮುಕೇಶ್ ಅಂಬಾನಿ ಅವರು ಜಿಯೋಮಾರ್ಟ್ ವಿಸ್ತರಣೆಯ ಕನಸನ್ನು ರಿಲಯನ್ಸ್ ಸಾಮಾನ್ಯ ಸಭೆಯಲ್ಲಿ ತೆರೆದಿಟ್ಟಿದ್ದರು. ರಿಲಯನ್ಸ್ ಸಾಮಾನ್ಯ ಸಭೆಯಲ್ಲಿ ಜಿಯೋಮಾರ್ಟ್ ಭವಿಷ್ಯದ ಘೋಷಣೆಗಳನ್ನು ಮಾಡಿದ ಮೇಲೆ ರಿಲಯನ್ಸ್- ಫೇಸ್ ಬುಕ್ ಸಹಭಾಗಿತ್ವದಲ್ಲಿ 2024ರ ಹೊತ್ತಿಗೆ ಆನ್ ಲೈನ್ ದಿನಸಿ ವಿಭಾಗದಲ್ಲಿ ಜಿಯೋಮಾರ್ಟ್ ಶೇಕಡಾ 50ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿರಲಿದೆ ಎಂದು ಗೋಲ್ಡ್ ಮ್ಯಾನ್ ಸ್ಯಾಚ್ಸ್ ತನ್ನ ವರದಿಯಲ್ಲಿ ತಿಳಿಸಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo