Wrong UPI transaction: ತಪ್ಪಾದ ಯುಪಿಐ ಖಾತೆಗೆ ಹಣ ಹೋದರೆ ಮತ್ತೆ ಪಡೆಯಲು ಈ ವಿಧಾನವನ್ನು ಅನುಸರಿಸಿ ಸಾಕು!

Wrong UPI transaction: ತಪ್ಪಾದ ಯುಪಿಐ ಖಾತೆಗೆ ಹಣ ಹೋದರೆ ಮತ್ತೆ ಪಡೆಯಲು ಈ ವಿಧಾನವನ್ನು ಅನುಸರಿಸಿ ಸಾಕು!
HIGHLIGHTS

ತಪ್ಪಾದ ಯುಪಿಐ (UPI) ಖಾತೆಗೆ ಹಣ ಹೋದರೆ ಮತ್ತೆ ಅದನ್ನು ಪಡೆಯಲು ಈ ವಿಧಾನವನ್ನು ಅನುಸರಿಸಬಹುದು!

ಅಪ್ಪಿತಪ್ಪಿ Wrong UPI Transaction ಆದ್ರೆ ಪುನಃ ನಿಮಗೆ ಹಣ ಹೇಗೆ ವಾಪಾಸ್ ಆಗುತ್ತದೆ?

ಮೊದಲು NPCI UPI ಸಹಾಯವಾಣಿ ಸಂಖ್ಯೆ 18001201740 ಕರೆ ಮಾಡಿ ದೂರು ಸಲ್ಲಿಸಬೇಕು.

How to get money back from a Wrong UPI Transaction: ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಡಿಜಿಟಲ್ ಪಾವತಿ ಗಣನೀಯವಾಗಿ ಹೆಚ್ಚುತ್ತಿರುವುದನ್ನು ನೀವು ಕಾಣಬಹುದು. ಸಣ್ಣ ಬೀಡ ಅಂಗಡಿಯಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗೆ ಈ ಆನ್ಲೈನ್ ಪೇಮೆಂಟ್ ನಡೆಯುತ್ತಿದೆ. ಜನರು ಈಗ ತಮ್ಮ ಜೇಬಿನಲ್ಲಿ ಹಣವನ್ನು ಇಟ್ಟುಕೊಳ್ಳುವ ಬದಲು ಯುಪಿಐ (UPI) ಮೂಲಕ ವಹಿವಾಟು ನಡೆಸುತ್ತಿದ್ದಾರೆ. ಈ UPI ಪಾವತಿಗಾಗಿ ಪ್ರಸ್ತುತ ಭಾರತದಲ್ಲಿ Gpay, Paytm, PhonePe ಮತ್ತು ಬ್ಯಾಂಕ್ ಆಧಾರಿತ ಮೊಬೈಲ್ ಅಪ್ಲಿಕೇಶನ್‌ಗಳಿವೆ.

Also Read: Airtel ಬಳಕೆದಾರರಿಗೆ ಮಾಸಿಕ ಯೋಜನೆಗಳಲ್ಲಿ ಸೂಪರ್ ಡೂಪರ್ ಪ್ಲಾನ್! ಪ್ರಯೋಜನ ನೋಡಿದ್ರೆ ಹೌದೌದು ಅಂತೀರಾ!

ಈ ಅಪ್ಲಿಕೇಶನ್‌ಗಳ ಮೂಲಕ ಜನರು ಆನ್‌ಲೈನ್ ಪಾವತಿಗಳನ್ನು ಮಾಡುತ್ತಾರೆ. ಕೆಲವೊಮ್ಮೆ ಆನ್‌ಲೈನ್ ಪಾವತಿಯಲ್ಲಿ ದೋಷಗಳು ಸಂಭವಿಸುತ್ತವೆ. ಅನೇಕ ಬಾರಿ ಯುಪಿಐ ಪಾವತಿಯನ್ನು ತಪ್ಪಾಗಿ ತಪ್ಪು ಖಾತೆ ಅಥವಾ ತಪ್ಪು ಸಂಖ್ಯೆಗೆ ಮಾಡಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಹಣವು ತಪ್ಪಾಗಿ ಬೇರೆಯವರಿಗೆ ಹೋದರೆ ಗಾಬರಿಯಾಗಬೇಡಿ. ಯಾಕೆಂದರೆ ಅಪ್ಪಿತಪ್ಪಿ ಯಾರದೋ ತಪ್ಪಾದ ಯುಪಿಐ ಖಾತೆಗೆ ಹಣ ಹೋದರೆ ಮತ್ತೆ ಅದನ್ನು ಪಡೆಯಲು ಈ ವಿಧಾನವನ್ನು ಅನುಸರಿಸಬಹುದು!

How to get money back from a Wrong UPI Transaction
How to get money back from a Wrong UPI Transaction

ಅಪ್ಪಿತಪ್ಪಿ Wrong UPI Transaction ಆದ್ರೆ ಏನಾಗುತ್ತೆ?

ಆನ್‌ಲೈನ್ ಪಾವತಿ ಮಾಡುವಾಗ ಅವಸರದಲ್ಲಿ ಏನೋ ತಪ್ಪಾಗಿದೆ ಮತ್ತು ಹಣವನ್ನು ಬೇರೆಯವರ ಖಾತೆಗೆ ವರ್ಗಾಯಿಸುವುದು ಅನೇಕ ಬಾರಿ ಜನರೊಂದಿಗೆ ಸಂಭವಿಸುತ್ತದೆ. ಮೊಬೈಲ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸುವುದರಿಂದ ಇದು ಹಲವಾರು ಬಾರಿ ಸಂಭವಿಸುತ್ತದೆ. ವಹಿವಾಟಿನಲ್ಲೂ ತಪ್ಪುಗಳು ಬೆಳಕಿಗೆ ಬರುತ್ತಿವೆ. ಆತುರದಲ್ಲಿ UPI ಪಾವತಿಯು ತಪ್ಪು ಸಂಖ್ಯೆಗೆ ಹೋಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಹೊಸ ಮಾರ್ಗಸೂಚಿಗಳ ಅನುಗುಣವಾಗಿ ನಿಮ್ಮ ಹಣವನ್ನು ಹಿಂತಿರುಗಿ ಪಡೆಯಬಹುದು.

ಈ ಸಹಾಯವಾಣಿ ಸಂಖ್ಯೆಯ ಮೂಲಕ ದೂರು ನೀಡಿ:

ಮೊದಲಿಗೆ ಇದರ ಬಗ್ಗೆ ನಿಮಗೊಂದಿಷ್ಟು ಮಾಹಿತಿ ಇರಲಿ ಯಾಕೆಂದರೆ ಎಂದಾದರೂ ನೀವು ಅಥವಾ ನಿಮಗೆ ತಿಳಿದವರು ಅಥಾವ ನಿಮ್ಮ ಮನೆಯಲ್ಲೇ ಯಾರಾದರೂ ಈ ಆನ್‌ಲೈನ್ ಪಾವತಿಯನ್ನು ತಪ್ಪಾಗಿ ಮಾಡಿರುವುದನ್ನು ಕೇಳಿರಬಹುದು ಅದರ ಪರಿಣಾಮ ಈ ಮಾಹಿತಿ ತಿಳಿಯದೆ ಆ ಹಣವನ್ನು ಹಾಗೆ ಬಿಟ್ಟಿರುವುವವರು ಇದ್ದಾರೆ. ಈ ರೀತಿ ತಪ್ಪಾದ ಸಂಖ್ಯೆಯಲ್ಲಿ ಆತುರದಿಂದ ಯುಪಿಐ ಪಾವತಿ ಮಾಡಿದರೆ ಭಯಪಡುವ ಅಗತ್ಯವಿಲ್ಲ. ಯಾಕೆಂದರೆ ನಿಮ್ಮ ಹಣವನ್ನು ನೀವು ಮರಳಿ ಪಡೆಯಲು ಸರಳ ಮತ್ತು ಸುಲಭ ಮಾರ್ಗಗಳಿವೆ. ಇದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಯನ್ನು ಹೊರಡಿಸಿದೆ. ಇದಕ್ಕಾಗಿ ಮೊದಲು NPCI UPI ಸಹಾಯವಾಣಿ ಸಂಖ್ಯೆ 18001201740 ಕರೆ ಮಾಡಿ ದೂರು ಸಲ್ಲಿಸಬೇಕು.

How to get money back from a Wrong UPI Transaction
How to get money back from a Wrong UPI Transaction

ಈ ಫಾರ್ಮ್ ಭರ್ತಿ ಮಾಡಲು ನಿಮ್ಮ ಬ್ಯಾಂಕ್‌ಗೆ ಹೋಗಬೇಕು:

ಸಹಾಯವಾಣಿ ಸಂಖ್ಯೆಯಲ್ಲಿ ದೂರನ್ನು ನೋಂದಾಯಿಸಿದ ನಂತರ ನೀವು ಖಾತೆಗೆ ಸಂಬಂಧಿಸಿದ ಬ್ಯಾಂಕ್‌ಗೆ ಹೋಗಿ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಈ ದೂರನ್ನು ಪಾವತಿಸಿದ ಮೂರು ದಿನಗಳಲ್ಲಿ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ. ಬ್ಯಾಂಕ್ ನಿಮಗೆ ಸಹಾಯ ಮಾಡಲು ನಿರಾಕರಿಸಿದರೆ ನೀವು ನೇರವಾಗಿ bankingombudsman.rbi.org.in ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಲ್ಲಿ ನಿಮ್ಮ ಈ ದೂರನ್ನು ನೀಡಬಹುದು. ಇದರ ನಂತರ ನಿಮ್ಮ ಎಲ್ಲಾ ಮಾಹಿತಿಗಳು ಸರಿಯಾಗಿದ್ದರೆ ನಿಮಗೆ ಸುಮಾರು 48 ಗಂಟೆಗಳ ಒಳಗೆ ನಿಮ್ಮ ಹಣವನ್ನು ಮರಳಿ ಪಡೆಯಲು ಹೆಚ್ಚು ನಿರೀಕ್ಷೆಗಳಿರುತ್ತವೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo