Union Budget Mobile App: ಈ ಬಾರಿಯ ಕೇಂದ್ರ ಬಜೆಟ್ ಮೊಬೈಲ್ ಅಪ್ಲಿಕೇಶನ್ ಮೂಲಕ ಲಭ್ಯ

HIGHLIGHTS

ಕೇಂದ್ರ ಬಜೆಟ್ 2021-22 ಅನ್ನು 1ನೇ ಫೆಬ್ರವರಿ 2021 ರಂದು ಮಂಡಿಸಲಾಗುವುದು.

ಬಳಕೆದಾರರು NIC e-gov ಮೊಬೈಲ್ ಅಪ್ಲಿಕೇಶನ್‌ಗಳಿಂದಲೂ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು.

ಈ Union Budget Mobile App ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಓದುವ ಸೌಲಭ್ಯವನ್ನು ಒದಗಿಸುತ್ತದೆ.

Union Budget Mobile App: ಈ ಬಾರಿಯ ಕೇಂದ್ರ ಬಜೆಟ್ ಮೊಬೈಲ್ ಅಪ್ಲಿಕೇಶನ್ ಮೂಲಕ ಲಭ್ಯ

ಭಾರತಲ್ಲಿ ಕೇಂದ್ರ ಮತ್ತು ಹಣಕಾಸು ಸಚಿವ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಕಳೆದ ತಿಂಗಳು 23ನೇ ಜನವರಿ 2021 ರಂದು ನಡೆದ ಹಲ್ವಾ ಸಮಾರಂಭದಲ್ಲಿ ಸಂಸತ್ತಿನ ಸದಸ್ಯರು  ಮತ್ತು ಸಾರ್ವಜನಿಕರಿಂದ ಬಜೆಟ್ ದಾಖಲೆಗಳ ತೊಂದರೆಯಿಲ್ಲದ ಪ್ರವೇಶಕ್ಕಾಗಿ ಕೇಂದ್ರ ಬಜೆಟ್ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದರು. ಇದು ಸರಳವಾದ ಡಿಜಿಟಲ್ ಅನುಕೂಲತೆಯನ್ನು ಬಳಸಿ ಈ ಬಾರಿಯ ಕೇಂದ್ರ ಬಜೆಟ್ ಮೊಬೈಲ್ ಅಪ್ಲಿಕೇಶನ್ ಮೂಲಕ ನೀಡಲಿದ್ದಾರೆ.

Digit.in Survey
✅ Thank you for completing the survey!

ಕಳೆದ 2019 ವರ್ಷದಿಂದ ನಡೆಯುತ್ತಿರುವ COVID-19 ಕಾರಣ ಯಾವುದೇ ಪ್ರೋಟೋಕಾಲ್ ನಂತರ ಸ್ವಯಂಪ್ರೇರಿತ ಬಜೆಟ್ ದಾಖಲೆಗಳನ್ನು ಮುದ್ರಿಸಲಾಗಿಲ್ಲ. ಈ ದಾಖಲೆಗಳು ಸಾರ್ವಜನಿಕರಿಗೆ ಲಭ್ಯವಿರುತ್ತವೆ. ಅಭೂತಪೂರ್ವ ಉಪಕ್ರಮವಾಗಿ ಕೇಂದ್ರ ಬಜೆಟ್ 2021-22 ಅನ್ನು ಮೊದಲ ಬಾರಿಗೆ ಕಾಗದರಹಿತ ರೂಪದಲ್ಲಿ ವಿತರಿಸಲಾಗುವುದು. ಕೇಂದ್ರ ಬಜೆಟ್ 2021-22 ಅನ್ನು 1ನೇ ಫೆಬ್ರವರಿ 2021 ರಂದು ಮಂಡಿಸಲಾಗುವುದು ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಏನೇನಿದೆ?

ಸಂವಿಧಾನವು ರೂಪಿಸಿರುವ ವಾರ್ಷಿಕ ಹಣಕಾಸು ಹೇಳಿಕೆಗಳು (ಸಾಮಾನ್ಯವಾಗಿ ಬಜೆಟ್ ಎಂದು ಕರೆಯಲ್ಪಡುವ) ಧನಸಹಾಯಕ್ಕಾಗಿ ಬೇಡಿಕೆಗಳು ಹಣಕಾಸು ಮಸೂದೆ ಸೇರಿದಂತೆ ಈ ಮೊಬೈಲ್ ಅಪ್ಲಿಕೇಶನ್‌ನಲ್ಲಿ 14 ಕೇಂದ್ರ ಬಜೆಟ್ ದಾಖಲೆಗಳಿಗೆ ನೀವು ಪ್ರವೇಶವನ್ನು ಹೊಂದಿರುತ್ತೀರಿ. ಇವೆಲ್ಲವನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಓದುವ ಸೌಲಭ್ಯವನ್ನು ಒದಗಿಸುತ್ತದೆ. ಅಲ್ಲದೆ ದಾಖಲೆಗಳನ್ನು ಓದುವುದು ಮತ್ತು ಅರ್ಥಮಾಡಿಕೊಳ್ಳಲು ವಿಷಯಗಳ ಪಟ್ಟಿ ಮತ್ತು ಬಾಹ್ಯ ಲಿಂಕ್‌ಗಳು ಮುಂತಾದ ವೈಶಿಷ್ಟ್ಯಗಳಿವೆ. ನಿಮ್ಮ ಅನುಕೂಲಕ್ಕಾಗಿ ನೀವು ಬೇಕಿದ್ದರೆ ದಾಖಲೆಗಳನ್ನು ಸಹ ಪ್ರಿಂಟ್ – ಮುದ್ರಿಸಿಕೊಳ್ಳಬುವುದು.

* ಬಳಕೆದಾರರು ಸಕ್ರಿಯ ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವ ಮೊಬೈಲ್‌ಗಳನ್ನು ಖಚಿತಪಡಿಸಿಕೊಳ್ಳಿ. 

* ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಪ್ಲೇ ಸ್ಟೋರ್‌ಗೆ ಭೇಟಿ ನೀಡಿ. 

* ಸರ್ಚ್ ಅಲ್ಲಿ Union Budget ಕೇಂದ್ರ ಬಜೆಟ್ ಮೊಬೈಲ್ ಅಪ್ಲಿಕೇಶನ್ಗಾಗಿ ಹುಡುಕಿ. 

* ಇದು NIC eGov Mobile App ಅವರಿಂದ ತಯಾರಿಸಲಾಗಿದ್ದು ಕೇವಲ 13MB ಆಗಿರುತ್ತದೆ.  

* ನಂತರ Install ಮೇಲೆ ಕ್ಲಿಕ್ ಮಾಡಿ ಬಳಸಲು ಶುರು ಮಾಡಿ ಅಷ್ಟೇ ಸರಳ.   

* ಬಳಕೆದಾರರು ಇದನ್ನು ನೇರವಾಗಿ NIC e-gov ಮೊಬೈಲ್ ಅಪ್ಲಿಕೇಶನ್‌ಗಳಿಂದಲೂ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು.

ಇದು ಸಂಸದರು ಮತ್ತು ಸಾರ್ವಜನಿಕರಿಂದ ಸರಳವಾದ ಡಿಜಿಟಲ್ ಅನುಕೂಲತೆಯನ್ನು ಬಳಸಿಕೊಂಡು ಬಜೆಟ್ ದಾಖಲೆಗಳಿಗೆ ತೊಂದರೆಯಿಲ್ಲದ ಪ್ರವೇಶಕ್ಕಾಗಿ ಸರ್ಕಾರ ಈ ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್’ ಅನ್ನು ಪ್ರಾರಂಭಿಸಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಸ್ಮಾರ್ಟ್‌ಫೋನ್‌ಗಳಿಗೆ ಅಪ್ಲಿಕೇಶನ್ ಲಭ್ಯವಿದೆ. ಅಲ್ಲಿ ಸಂಸತ್ತಿನೊಳಗೆ ಪ್ರಸ್ತುತಪಡಿಸಲಾದ ಎಲ್ಲಾ ದಾಖಲೆಗಳು ಸಾರ್ವಜನಿಕರಿಗೆ ಉಚಿತವಾಗಿ ಲಭ್ಯವಿರುತ್ತವೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo