ವಿಶ್ವದಾದ್ಯಂತ ಅನೇಕರು ಸ್ಮಾರ್ಟ್ಫೋನ್ಗಳನ್ನು ಬಳಸುತ್ತಾರೆ. ಎಳೆಯ ಮಕ್ಕಳಿಂದ ಹಿಡಿದು ಬಿಳಿ ಕೂದಲಿನ ಅಜ್ಜ-ಅಜ್ಜಿಯ ಕೈಯಲ್ಲೂ ಸ್ಮಾರ್ಟ್ಫೋನ್ ಇದೆ. ಹಲವಾರು ಕಂಪನಿಗಳಿಂದು ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗಳನ್ನು ಉತ್ಪಾದಿಸುತ್ತಿವೆ. ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ಗಳು ದೊರಕುತ್ತಿವೆ. ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ವಿವಿಧ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡುವಂತೆ ಅಭಿವೃದ್ಧಿ ಪಡಿಸಲಾಗಿದೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ ದೊರಕದ ಆ್ಯಪ್ಗಳನ್ನು ಇತರ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಬಹುದಾಗಿದೆ.
Survey
✅ Thank you for completing the survey!
ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಹ್ಯಾಕರ್ಸ್ ಉಪಟಳವು ಹೆಚ್ಚಾಗಿದೆ. ಸ್ಮಾರ್ಟ್ಫೋನ್ಗಳಲ್ಲಿ ಅಳವಡಿಸಿಕೊಂಡಿರುವ ಕೆಲವು ಭದ್ರತೆ ಇಲ್ಲದಿರುವ ಆ್ಯಪ್ಗಳ ಮೂಲಕ ಹ್ಯಾಕರ್ಸ್ಗಳು ಕೈಯಾಡಿಸುತ್ತಾರೆ. ಬಳಕೆದಾರರ ಖಾಸಗಿ ಮಾಹಿತಿ ಎಗರಿಸುತ್ತಾರೆ. ಬಳಕೆದಾರನಿಗೆ ತಿಳಿಯದೆ ಕೈಚಳ ತೋರಿಸುತ್ತಾರೆ.
ಫೋನ್ಗಳಿಗೆ ವೈರಸ್ ಅಥವಾ ಹ್ಯಾಕ್ ಆದರೆ ಪತ್ತೆ ಹಚ್ಚುವುದು ಹೇಗೆ?
ಸ್ಮಾರ್ಟ್ಫೋನ್ಗಳಿಗೆ ಆ್ಯಪ್ ಇನ್ಸ್ಟಾಲ್ ಮಾಡುವ ಮೊದಲು ಅವುಗಳು ಅಧಿಕೃತ ಆ್ಯಪ್ಗಳೇ ಎಂದು ಪರಿಶೀಲಿಸಿ. ಕೆಲವು ಆ್ಯಪ್ಗಳು ಮಾಲ್ವೇರ್ಗಳನ್ನು ಹೊಂದಿರುತ್ತದೆ. ಹಾಗಾಗಿ ಡೌನ್ಲೋಡ್ ಮಾಡುವ ಮುನ್ನ ಎಚ್ಚರದಿಂದಿರಿ. ಇನ್ನು ಕೆಲಮೊಮ್ಮೆ ನಿಮಗೆ ಅರಿವಿಲ್ಲದೆಯೇ ನಿಮ್ಮ ಫೋನಿನೊಳಕ್ಕೆ ಅಪರಿಚಿತ ಆ್ಯಪ್ಗಳು ಇನ್ಸ್ಟಾಲ್ ಆಗಿರಬಹುದು. ಕೆಲವೊಮ್ಮೆ ಸ್ಮಾರ್ಟ್ಫೋನ್ನಲ್ಲಿ ಇದ್ದಕ್ಕಿಂದಂತೆಯೇ ಜಾಹೀರಾತು ಕಾಣಿಸಿಕೊಳ್ಳುತ್ತದೆ.
ಯಾವುದೇ ಭಾಷೆಯ, ನಿಮಗೆ ಸಂಬಂಧವಿಲ್ಲದ ಜಾಹೀರಾತುಗಳ ಕಾಣಿಸಿಕೊಳ್ಳುತ್ತದೆ. ಇನ್ಸ್ಟಾಲ್ ಮಾಡಿರುವ ಆ್ಯಪ್ ಐಕಾನ್ಗಳು ಮರೆಯಾಗಬಹುದು. ಅಥವಾ ಡೌನ್ಲೋಡ್ ಮಾಡಿದ ಆ್ಯಪ್ ಹೋಮ್ ಸ್ಟ್ರೀನ್ನಲ್ಲಿ ಕಾಣಿಸದೇ ಇರಬಹುದು. ಅಪರಿಚಿತ ಸಂಖ್ಯೆಯಿಂದ ಸಂದೇಶ, ಕರೆ ಬಂದಿರಬಹುದು. ಕೆಲವೊಮ್ಮೆ ಸಂದೇಶದ ಮೇಲೆ ಕ್ಲಿಕ್ ಮಾಡುವ ಮುನ್ನ ಎಚ್ಚರವಹಿಸಿ. ಇನ್ನು ಕೆಲವೊಮ್ಮೆ ಇಂಟರ್ನೆಟ್ ಕರೆ ಸ್ಬೀಕರಿಸುವ ಮುನ್ನ ಕೊಂಚ ಆಲೋಚಿಸಿ. ಸ್ಮಾರ್ಟರ್ಫೋನ್ ಬ್ಯಾಟರಿ ಇದ್ದಕ್ಕಿಂದ್ದಂತೆಯೇ ಖಾಲಿಯಾಗುವಿಕೆ.
ಚಾರ್ಜ್ ಪೂರ್ಣವಾಗಿದ್ದ ಸ್ಮಾರ್ಟ್ಫೋನ್ ಬ್ಯಾಟರಿ ಏಕಾ ಏಕಿ ಖಾಲಿಯಾಗಬಹುದು. ಇದು ಸ್ಮಾರ್ಟ್ಫೋನ್ ಬಳಕೆಯಾಗುತ್ತಿದೆ ಎಂಬ ಸೂಚನೆಯಾಗಿದೆ. ಸ್ಮಾರ್ಟ್ಫೋನ್ ಕಾರ್ಯಚರಣೆ ನಿಧಾನಗತಿಯಾಗುವ ಸಾಧ್ಯತೆಯೂ ಹೆಚ್ಚಿದೆ. ಕೆಲವೊಮ್ಮೆ ರ್ಯಾಮ್ನಿಂದ ಕಾರ್ಯ ನಿಧಾನವಾಗಬಹುದು. ಕೆಲವೊಮ್ಮೆ ಬಳಸುತ್ತಿರುವಾಗಲೇ ಹ್ಯಾಂಗ್ ಆಗುವುದು ಕಂಡುಬಂದರೆ ಸ್ಟೊರೇಜ್, ಮೆಮೊರಿ, ಬ್ಯಾಟರಿ ಪರಿಶೀಲಿಸುವುದು ಒಳಿತು.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile