LPG Gas Booking: ಈಗ WhatsApp ಮೂಲಕ ಎಲ್‍ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡುವುದು ಹೇಗೆ?

LPG Gas Booking: ಈಗ WhatsApp ಮೂಲಕ ಎಲ್‍ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡುವುದು ಹೇಗೆ?
HIGHLIGHTS

ಎಲ್‍ಪಿಜಿ ಗ್ಯಾಸ್ ಸಿಲಿಂಡರ್ WhatsApp ಮೂಲಕ ಬುಕಿಂಗ್ ಮಾಡುವ ಈ ವಿಧಾನ ತುಂಬ ಅನುಕೂಲಕರವಾಗಿದೆ

ದೇಶದಲ್ಲಿ ಪ್ರಸ್ತುತ ನಾವು IVRs (ಇಂಟಿಗ್ರೇಟೆಡ್ ವೈಸ್ ರೆಸ್ಪಾನ್ಸ್ ಸಿಸ್ಟಮ್) ಮೂಲಕ HP ಸಿಲಿಂಡರ್ಗಳನ್ನು ಕಾಯ್ದಿರಿಸುತ್ತೇವೆ

ಗ್ರಾಹಕರಿಗೆ ಉತ್ತಮ ಸೇವೆ ನೀಡಲು ದಿನದಿಂದ ದಿನಕ್ಕೆ ಬದಲಾಗುತ್ತಿರುವ ತಂತ್ರಜ್ಞಾನವನ್ನು ಬಳಸುತ್ತಿವೆ.

ಭಾರತೀಯ ಸಾರ್ವಜನಿಕ ವಲಯದ ಅತಿದೊಡ್ಡ ಅನಿಲ ಕಂಪನಿ ಇಂಡೇನ್ HP ಗ್ಯಾಸ್ ಸಿಲಿಂಡರ್ ಬುಕಿಂಗ್ ಅನ್ನು ಇನ್ನಷ್ಟು ಸುಲಭಗೊಳಿಸಿದೆ. ವಾಟ್ಸಾಪ್ ಮೂಲಕ ಸಿಲಿಂಡರ್ ಬುಕಿಂಗ್ ಸೇವೆಯನ್ನು ಪ್ರಾರಂಭಿಸಲಾಗಿದೆ. HP ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ತೈಲ ಕಂಪನಿಗಳ ರಾಜ್ಯ ಮಟ್ಟದ ಸಂಯೋಜಕರಾದ ಅರುಣ್ ಕುಮಾರ್ ಗಂಜು ಹೇಳಿದ್ದಾರೆ. ದೇಶದಲ್ಲಿ ಪ್ರಸ್ತುತ ನಾವು IVRs (ಇಂಟಿಗ್ರೇಟೆಡ್ ವೈಸ್ ರೆಸ್ಪಾನ್ಸ್ ಸಿಸ್ಟಮ್) ಮೂಲಕ HP ಸಿಲಿಂಡರ್ಗಳನ್ನು ಕಾಯ್ದಿರಿಸುತ್ತೇವೆ ಅಥವಾ SMS ಮತ್ತು ಆನ್‌ಲೈನ್ ಕಳುಹಿಸುವ ಮೂಲಕ ಬುಕಿಂಗ್ ಮಾಡಲಾಗುತ್ತದೆ. ಇದು ಮಾತ್ರವಲ್ಲದೆ ಏಜೆನ್ಸಿಗಳಿಗೆ ಹೋಗುವ ಮೂಲಕ ಅನಿಲವನ್ನು ಸಹ ಕಾಯ್ದಿರಿಸಬಹುದು.

HP ಗ್ಯಾಸ್ ಗ್ರಾಹಕರು ತಮ್ಮ ಸಿಲಿಂಡರ್ ಅನ್ನು ಬುಕ್ ಮಾಡಲು ಗ್ರಾಹಕರ ವಿವರಗಳನ್ನು ತಿಳಿದುಕೊಳ್ಳಲು ವರ್ಷಕ್ಕೆ ಬಳಸಿದ ಕೋಟಾ ಬಗ್ಗೆ ತಿಳಿಯಲು ಮತ್ತು ಬುಕ್ ಮಾಡಲು ವಾಟ್ಸಾಪ್ ಬಳಸಬಹುದು. ಈಗ ತೈಲ ಮತ್ತು ಅನಿಲ ಕಂಪನಿಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ದಿನದಿಂದ ದಿನಕ್ಕೆ ಬದಲಾಗುತ್ತಿರುವ ತಂತ್ರಜ್ಞಾನವನ್ನು ಬಳಸುತ್ತಿವೆ. ವಾಟ್ಸಾಪ್ನಲ್ಲಿ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಮೆಸೇಜ್ಗಳನ್ನು ಒದಗಿಸಲು ಹೆಚ್ಚುತ್ತಿರುವ ಅವಲಂಬನೆಯ ದೃಷ್ಟಿಯಿಂದ ಗ್ಯಾಸ್ ಬುಕಿಂಗ್ ಮಾಡುವ ಈ ವಿಧಾನ ತುಂಬಾ ಪರಿಣಾಮಕಾರಿ ಮತ್ತು ಅನುಕೂಲಕರವಾಗಿರುತ್ತದೆ ಎಂದು ನಂಬಲಾಗಿದೆ. ವಾಟ್ಸಾಪ್ ಮೂಲಕ HP ಗ್ಯಾಸ್ ಸಿಲಿಂಡರ್ ಅನ್ನು ಹೇಗೆ ಬುಕ್ ಮಾಡುವುದು ಮತ್ತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ.

>ಮೊದಲಿಗೆ HP ಗ್ಯಾಸ್ ಗ್ರಾಹಕರು ಈ WhatsApp ಸಂಖ್ಯೆಯನ್ನು ಫೋನಲ್ಲಿ ಸೇವ್ ಮಾಡಿಕೊಳ್ಳಿ.

>ಇದು HP ಗ್ಯಾಸ್ ಬುಕಿಂಗ್ ಮಾಡುವ +919222201122 ಸಂಖ್ಯೆಯಾಗಿದೆ.

>ಇದರ ನಂತರ ಈ ಸಂಖ್ಯೆಯನ್ನು WhatsApp ಅಲ್ಲಿ ಸರ್ಚ್ ಮಾಡಿ.

>HP ಗ್ಯಾಸ್ ವಾಟ್ಸಾಪ್ ಸಂಖ್ಯೆಯನ್ನು ಪಡೆದ ನಂತರ HELP ಎಂದು ಟೈಪ್ ಮಾಡಿ ಸೆಂಡ್ ಮಾಡಿ.

>ಇದರ ನಂತರ ನಿಮಗೊಂದು ಮೆಸೇಜ್ ಬರುತ್ತದೆ 'Please send any of the below keywords to get help' 

>ಈಗ ನೀವು SUBSUDY / QUOTA / LPGID / BOOK ಈ ನಾಲ್ಕು ಪದಗಳಲ್ಲಿ ಯಾವುದಾದರೊಂದನ್ನು ಪುನಃ ಕಳುಹಿಸಿರಿ.

>ಗ್ಯಾಸ್ ಬುಕಿಂಗ್ ಮಾಡಲು BOOK ಎಂದು ಟೈಪ್ ಮಾಡಿ ಮತ್ತು ಕಳುಹಿಸಿ.

>ನಿಮ್ಮ ವಿವರಗಳನ್ನು ನೀವು ಪಡೆಯುತ್ತೀರಿ ಹೆಸರು ಮತ್ತು ಗ್ರಾಹಕ ಸಂಖ್ಯೆ ಬುಕಿಂಗ್ ಅನ್ನು ಕಂಫಾರ್ಮ್ ಮಾಡಲು Y (Yes) ಎಂದು ಕಳುಹಿಸಬೇಕಾಗುತ್ತದೆ. 

ಇದರ ನಂತರ HP ಗ್ಯಾಸ್ ಗ್ರಾಹಕರು QUOTA ಅನ್ನು ಟೈಪ್ ಮಾಡಿ ಅದನ್ನು HP ಗ್ಯಾಸ್ ವಾಟ್ಸಾಪ್ ಸಂಖ್ಯೆಗೆ ಕಳುಹಿಸಬೇಕು. ಸಬ್ಸಿಡಿ ಸಿಲಿಂಡರ್‌ಗಳಿಗಾಗಿ ನಿಮ್ಮ ಕೋಟಾದಿಂದ ನೀವು 3/12 ಸಿಲಿಂಡರ್‌ಗಳ ಮೆಸೇಜ್ಗಳನ್ನು ಸ್ವೀಕರಿಸಲಾಗುತ್ತದೆ. HP ಗ್ರಾಹಕ 17 ಅಂಕೆಗಳನ್ನು ಪಡೆಯಲು HP ಐಡಿ ಟೈಪ್ HPID ಕಳುಹಿಸಿ ಅಥವಾ www.mylpg.in ಗೆ ಹೋಗಿ ವಿವರಗಳನ್ನು ನಮೂದಿಸಿ ID ಪಡೆಯಬವುದು.

1.ಇದು HP ಗ್ಯಾಸ್ QUOTA ಮಾಡುವ +917588888824 ಸಂಖ್ಯೆಯಾಗಿದೆ. 
2.ಇದರ ನಂತರ ಈ ಸಂಖ್ಯೆಯನ್ನು WhatsApp ಅಲ್ಲಿ ಸರ್ಚ್ ಮಾಡಿ. 
3.HP ಗ್ಯಾಸ್ ವಾಟ್ಸಾಪ್ ಸಂಖ್ಯೆಯನ್ನು ಪಡೆದ ನಂತರ HELP ಎಂದು ಟೈಪ್ ಮಾಡಿ ಸೆಂಡ್ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo