SIM Card: ಮೊಬೈಲ್ ಸಿಮ್‌ಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಭಾರಿ ಬದಲಾವಣೆ, ಈ ಹೊಸ ನಿಯಮಗಳನ್ನು ತಿಳಿದುಕೊಳ್ಳುವುದು ಮುಖ್ಯ

SIM Card: ಮೊಬೈಲ್ ಸಿಮ್‌ಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಭಾರಿ ಬದಲಾವಣೆ, ಈ ಹೊಸ ನಿಯಮಗಳನ್ನು ತಿಳಿದುಕೊಳ್ಳುವುದು ಮುಖ್ಯ
HIGHLIGHTS

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಮೊಬೈಲ್ ಮತ್ತು ಸಿಮ್ ಕಾರ್ಡ್ - SIM Card ಕುಟುಂಬದ ಸದಸ್ಯರಾಗಿ ಕಾಣುವುದು ಅನಿವಾರ್ಯ

ಮೊಬೈಲ್ ಸಂಖ್ಯೆಗಳು ಅಥವಾ ದೂರವಾಣಿ SIM Card ಸಂಪರ್ಕಗಳಿಗೆ ಸಂಬಂಧಿಸಿದ ಕೆಲವು ಹೊಸ ನಿಯಮಗಳಲ್ಲಿ ಭಾರಿ ಬದಲಾವಣೆಗಳನ್ನು ಮಾಡಿದೆ.

ಇದರ್ಥ ಈಗ ಸಿಮ್ ಕಾರ್ಡ್ ಖರೀದಿಸಲು ಅಥವಾ ಪೋರ್ಟ್ ಮಾಡಲು KYC ಗಾಗಿ ನೀವು ಯಾವುದೇ ರೀತಿಯ ಕಾಗದ ಅಥವಾ ನಮೂನೆಯನ್ನು ಸಲ್ಲಿಸಬೇಕಾಗಿಲ್ಲ

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಮೊಬೈಲ್ ಮತ್ತು ಸಿಮ್ ಕಾರ್ಡ್ – SIM Card ಕುಟುಂಬದ ಸದಸ್ಯರಾಗಿ ಕಾಣುವುದು ಅನಿವಾರ್ಯವಾಗಿದ್ದು ಹೆಚ್ಚು ಅಗತ್ಯವು ಆಗಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಸಹಾಯದಿಂದ ಅನೇಕ ಕೆಲಸಗಳನ್ನು ಮಾಡಲಾಗುತ್ತದೆ. ಭಾರತ ಸರ್ಕಾರ ಮೊಬೈಲ್ ಸಂಖ್ಯೆಗಳು ಅಥವಾ ದೂರವಾಣಿ SIM Card ಸಂಪರ್ಕಗಳಿಗೆ ಸಂಬಂಧಿಸಿದ ಕೆಲವು ಹೊಸ ನಿಯಮಗಳಲ್ಲಿ ಭಾರಿ ಬದಲಾವಣೆಗಳನ್ನು ಮಾಡಿದೆ. ಈಗ ಯಾವುದೇ ಹೊಸ ಮೊಬೈಲ್ ಸಂಖ್ಯೆಯನ್ನು ಪಡೆಯಲು ನೀವು KYC (Know Your Customer) ಅನ್ನು ಸಂಪೂರ್ಣವಾಗಿ ಡಿಜಿಟಲ್ ಆಗಿದೆ. ಇದರ್ಥ ಈಗ ಸಿಮ್ ಕಾರ್ಡ್ ಖರೀದಿಸಲು ಅಥವಾ ಪೋರ್ಟ್ ಮಾಡಲು KYC ಗಾಗಿ ನೀವು ಯಾವುದೇ ರೀತಿಯ ಕಾಗದ ಅಥವಾ ನಮೂನೆಯನ್ನು ಸಲ್ಲಿಸಬೇಕಾಗಿಲ್ಲ. ಈಗ ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಸಿಮ್ ಪೋರ್ಟ್‌ಗಾಗಿ ಯಾವುದೇ ಫಾರ್ಮ್ ಅನ್ನು ಭರ್ತಿ ಮಾಡುವ ಅಗತ್ಯಗಳಿಲ್ಲ.

ಕೇವಲ 1 ರೂ ಮಾತ್ರ ಶುಲ್ಕ

ಮೊಬೈಲ್‌ಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸುವ ಮೂಲಕ ಸರ್ಕಾರ ಸ್ವಯಂ (Self KYC) ಕೆವೈಸಿಗೆ ಅವಕಾಶ ನೀಡಿದೆ ಇದು ಆಪ್ ಆಧಾರಿತವಾಗಿದೆ. ನಿಮ್ಮ ಈ E-KYCಗಾಗಿ ನೀವು ಕೇವಲ 1 ರೂಗಳನ್ನು ಮಾತ್ರ ಶುಲ್ಕ ವಿಧಿಸಬೇಕಾಗುತ್ತದೆ. ಆದರೆ ಗಮನದಲ್ಲಿಡಿ ಪ್ರಿಪೇಯ್ಡ್ ಯಿಂದ ಅಥವಾ ಪೋಸ್ಟ್‌ಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಯಿಂದ ಪ್ರಿಪೇಯ್ಡ್ ಪರಿವರ್ತಿಸಲು ಹೊಸ KYC ಅಗತ್ಯವಿಲ್ಲ. ಈ SIM Card ಮಾಹಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಅನುಮೋದಿಸಲಾಗಿದೆ.

SIM Card ಖರೀದಿಗೆ ಯಾವುದೇ ಕಾಗದ ದಾಖಲೆಗಳ ಅಗತ್ಯವಿಲ್ಲ

ಮಾಹಿತಿಯ ಪ್ರಕಾರ ಗ್ರಾಹಕರು ಕೆವೈಸಿಗಾಗಿ ಯಾವುದೇ ರೀತಿಯ ದಾಖಲೆ ಅಥವಾ ನಮೂನೆಯನ್ನು ಸಲ್ಲಿಸಬೇಕಾಗಿಲ್ಲ. ಪೋಸ್ಟ್‌ಪೇಯ್ಡ್ ಸಿಮ್ ಅನ್ನು ಪ್ರಿಪೇಯ್ಡ್‌ಗೆ ಪರಿವರ್ತಿಸುವಂತಹ ಕೆಲಸಕ್ಕಾಗಿ ಯಾವುದೇ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗಿಲ್ಲ ಮತ್ತು ಇದಕ್ಕಾಗಿ ಡಿಜಿಟಲ್ KYC ಕೂಡ ಇರುತ್ತದೆ. ಈಗ ಗ್ರಾಹಕರಿಗೆ ಹೊಸ ಮೊಬೈಲ್ ಸಂಖ್ಯೆ ಅಥವಾ ದೂರವಾಣಿ ಸಂಪರ್ಕ ಪಡೆಯಲು KYC ಸಂಪೂರ್ಣ ಡಿಜಿಟಲ್ ಆಗಿರುತ್ತದೆ. ಗ್ರಾಹಕರು ತಮ್ಮ ಪ್ರಿಪೇಯ್ಡ್ ಸಂಖ್ಯೆಯನ್ನು ಪೋಸ್ಟ್‌ಪೇಯ್ಡ್‌ಗೆ ಅಥವಾ ಪೋಸ್ಟ್‌ಪೇಯ್ಡ್ ಅನ್ನು ಪ್ರಿಪೇಯ್ಡ್‌ಗೆ ಬದಲಾಯಿಸಿದರೆ ಅವರು ಪ್ರತಿ ಬಾರಿಯೂ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಆದರೆ ಈಗ KYC ಒಮ್ಮೆ ಮಾತ್ರ ಮಾಡಬೇಕಾಗುತ್ತದೆ.

.

ಸ್ವಯಂ KYC ಅನ್ನು ಹೀಗೆ ಮಾಡಬಹುದು?

ಕಂಪನಿಗಳು ಗ್ರಾಹಕರನ್ನು ಕೆವೈಸಿಗಾಗಿ ದಾಖಲೆಗಳನ್ನು ಕೇಳುತ್ತವೆ. ಆನ್‌ಲೈನ್‌ನಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ಗ್ರಾಹಕರು KYC ಮಾಡಿದರೆ ಅದನ್ನು ಸ್ವಯಂ KYC ಎಂದು ಕರೆಯಲಾಗುತ್ತದೆ. ಇದನ್ನು ವೆಬ್‌ಸೈಟ್ ಅಥವಾ ಆಪ್‌ನಿಂದಲೂ ಮಾಡಬಹುದು. KYC ಗಾಗಿ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಕೆಲವು ದಾಖಲೆಗಳನ್ನು ಕೇಳುತ್ತವೆ. ಇದಕ್ಕಾಗಿ ಗ್ರಾಹಕರು ಟೆಲಿಕಾಂ ಏಜೆನ್ಸಿಗಳು ಅಥವಾ ಫ್ರಾಂಚೈಸಿಗಳಿಗೆ ಹೋಗುವುದು ಅನಿವಾರ್ಯವಾಗಿತ್ತು ಆದರೆ ಈಗ ನೀವು ಮನೆಯಲ್ಲಿಯೇ ಕುಳಿತು ಈ ರೀತಿಯ  ಸ್ವಯಂ KYC ಮಾಡಬಹುದು. ಇದಕ್ಕಾಗಿ ನೀವು ಬಳಸುತ್ತಿರುವ ಟೆಲಿಕಾಂ ಕಂಪನಿಯ ಅಪ್ಲಿಕೇಶನ್ ಅಥವಾ ಅಧಿಕೃತ ವೆಬ್‌ಸೈಟ್ ಆಪ್‌ನಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡಬವುದಾಗಿದೆ. 

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo