ಈ ಅಪಾಯಕಾರಿ ಮೊಬೈಲ್ ಅಪ್ಲಿಕೇಶನ್‌ಗಳು ನಿಮ್ಮ ಫೋನಿನಲ್ಲಿದ್ದರೆ ಇಂದೇ ಡಿಲೀಟ್ ಮಾಡಿ!

ಈ ಅಪಾಯಕಾರಿ ಮೊಬೈಲ್ ಅಪ್ಲಿಕೇಶನ್‌ಗಳು ನಿಮ್ಮ ಫೋನಿನಲ್ಲಿದ್ದರೆ ಇಂದೇ ಡಿಲೀಟ್ ಮಾಡಿ!
HIGHLIGHTS

ಸ್ಮಾರ್ಟ್‌ಫೋನ್‌ ಮತ್ತು ಅಪ್ಲಿಕೇಶನ್ (Mobile App) ಎಲ್ಲರ ಜೀವನದ ಪ್ರಮುಖ ಭಾಗವಾಗಿದೆ.

ಈ ಯಾವುದೇ ಅಪ್ಲಿಕೇಶನ್‌ಗಳನ್ನು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಥಾಪಿಸಿದ ಬಳಕೆದಾರರು ತಕ್ಷಣವೇ ಅವುಗಳನ್ನು ತೆಗೆದುಹಾಕಬೇಕು

ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ (Mobile App) ಎಲ್ಲರ ಜೀವನದ ಪ್ರಮುಖ ಭಾಗವಾಗಿದೆ. ಫೋನ್‌ನಲ್ಲಿರುವ ಅಪ್ಲಿಕೇಶನ್‌ಗಳು ಸಹ ಅಗತ್ಯ. ಪ್ರತಿ ಕಾರ್ಯಕ್ಕೂ ವಿಭಿನ್ನ ಅಪ್ಲಿಕೇಶನ್‌ಗಳಿವೆ. ಇದೀಗ ಅಂಥದ್ದೊಂದು ವರದಿ ಹೊರಬಿದ್ದಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಸೈಬರ್ ಭದ್ರತಾ ಕಂಪನಿ ಟ್ರೆಂಡ್ ಮೈಕ್ರೋ ಇತ್ತೀಚಿನ ವರದಿಯು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (Google Play Store) 200 ಕ್ಕೂ ಹೆಚ್ಚು ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಫೇಸ್‌ಸ್ಟೀಲರ್ ಎಂಬ ಅಪಾಯಕಾರಿ ಸ್ಪೈವೇರ್ ಅನ್ನು ಹೊಂದಿದೆ. 

ಅಪಾಯಕಾರಿ ಮೊಬೈಲ್ ಅಪ್ಲಿಕೇಶನ್‌ಗಳು

ಬಳಕೆದಾರರ ವೈಯಕ್ತಿಕ ಡೇಟಾವನ್ನು ಮಾತ್ರವಲ್ಲದೆ ಫೇಸ್‌ಬುಕ್ ಪಾಸ್‌ವರ್ಡ್‌ಗಳು ಮತ್ತು ಇತರ ಹಲವು ವಿವರಗಳನ್ನು ಕದಿಯಬಹುದು ಎಂದು ಹೇಳಲಾಗಿದೆ. ಸ್ಮಾರ್ಟ್ಫೋನ್ ಬಳಕೆದಾರರೇ ಅಪಾಯಕಾರಿ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳ ಹೊಸ ಪಟ್ಟಿ ಬಿಡುಗಡೆಯಾಗಿದೆ. ಈ ಅಪ್ಲಿಕೇಶನ್‌ಗಳು ಡೇಟಾ ಮತ್ತು ಹಣ ಕದಿಯುವ ತಂತ್ರಗಳಲ್ಲಿ ತೊಡಗಿದ್ದು ವಿವಿಧ ಭದ್ರತಾ ಸಂಶೋಧಕರಿಂದ ಕಣ್ಣಾರೆ ಕಂಡು ಕೈಯಾರೆ  ಸಿಕ್ಕಿಬಿದ್ದಿವೆ.

ಈ ಅಪ್ಲಿಕೇಶನ್‌ಗಳಲ್ಲಿ ಹೆಚ್ಚಿನವುಗಳನ್ನು ಈಗಾಗಲೇ ಅಧಿಕೃತ ಗೂಗಲ್ ಪ್ಲೇ ಸ್ಟೋರ್‌ನಿಂದ (Google Play Store) ತೆಗೆದುಹಾಕಲಾಗಿದ್ದರೂ ಬಳಕೆದಾರರು ಇನ್ನೂ ತಮ್ಮ ಫೋನ್‌ಗಳಿಂದ ಅವುಗಳನ್ನು ತೆಗೆದುಹಾಕಬೇಕಾಗುತ್ತದೆ. ಈ ಕೆಲವು ಅಪ್ಲಿಕೇಶನ್‌ಗಳು ಈಗಾಗಲೇ ಜಾಗತಿಕವಾಗಿ 50,000 ಕ್ಕೂ ಹೆಚ್ಚು ಡೌನ್‌ಲೋಡ್‌ ಆಗಿದ್ದು 4.8 ಸ್ಟಾರ್ ಬಳಕೆದಾರರ ರೇಟಿಂಗ್ ಅನ್ನು ಹೊಂದಿವೆ. ಆದ್ದರಿಂದ ಒಂದು ವೇಳೆ ಈ ಅಪ್ಲಿಕೇಶನ್‌ಗಳು ನಿಮ್ಮ ಫೋನಲ್ಲಿದ್ದರೆ ತಕ್ಷಣ ಡಿಲೀಟ್ ಮಾಡಿ. 

ಅಪಾಯಕಾರಿ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು:

1. Document Manager
2. Coin track Loan – Online loan
3. Cool Caller Screen
4. PSD Auth Protector
5. RGB Emoji Keyboard
6. Camera Translator Pro
7. Fast PDF Scanner
8. Air Balloon Wallpaper
9. Colorful Messenger
10. Thug Photo Editor
11. Anime Wallpaper
12. Peace SMS
13. Happy Photo Collage
14. Pellet Messages
15. Smart Keyboard
16. 4K Wallpapers
17. Original Messenger
18. Fildo Music
19. CLEANit.
20. Super Clean – Master of Cleaner

ಫೋನ್‌ನಲ್ಲಿ ಈ  ಅಪ್ಲಿಕೇಶನ್‌ಗಳಿದ್ದರೆ ಕೂಡಲೇ ಡಿಲೀಟ್ ಮಾಡಿ:

ಈ ಎಲ್ಲಾ ಅಪ್ಲಿಕೇಶನ್‌ಗಳು ಸಾವಿರಾರು ಸ್ಥಾಪನೆಗಳನ್ನು ಹೊಂದಿವೆ. ವರದಿಯ ಪ್ರಕಾರ ಗೂಗಲ್ ಸ್ಪೈವೇರ್ ಅನ್ನು ಗಮನಿಸಿದೆ. ಮತ್ತು ಸೋಂಕಿತ ಅಪ್ಲಿಕೇಶನ್‌ಗಳನ್ನು ಫೇಸ್‌ಸ್ಟಿಲ್ಲರ್‌ನಿಂದ ತಕ್ಷಣವೇ ತೆಗೆದುಹಾಕಿದೆ. ಆದಾಗ್ಯೂ ಈ ಯಾವುದೇ ಅಪ್ಲಿಕೇಶನ್‌ಗಳನ್ನು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಥಾಪಿಸಿದ ಬಳಕೆದಾರರು ತಕ್ಷಣವೇ ಅವುಗಳನ್ನು ತೆಗೆದುಹಾಕಬೇಕು ಅಂದರೆ ಅನ್ ಇನ್ಸ್ಟಾಲ್ ಮಾಡಬೇಕು. ಇದರಿಂದ ಮುಂದಾಗಬಹುದಾದ ಅಪಾಯದಿಂದ ಪಾರಾಗಬಹುದು ಎನ್ನಲಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo